ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ಕೇರಳದ ಕುಮಾರಕೋಮ್‌ನಲ್ಲಿ ಜನಪ್ರಿಯವಾಗುತ್ತಿದೆ “ಹೆಲಿಕಾಪ್ಟರ್ ಪ್ರವಾಸೋದ್ಯಮ”

ಡಿಸೆಂಬರ 2023ರಲ್ಲಿ ಕೇರಳ ಪ್ರವಾಸೋದ್ಯಮವು ತನ್ನ ಸುಂದರವಾದ ಭೂದೃಶ್ಯವನ್ನು ವೈಮಾನಿಕವಾಗಿ ವೀಕ್ಷಿಸಲು ಕುಮಾರಕೋಮ್ ನಲ್ಲಿ ಹೆಲಿಕಾಪ್ಟರ್ ಪ್ರವಾಸೋದ್ಯಮ ಯೋಜನೆಯನ್ನು ಉದ್ಘಾಟಿಸಿತು.

ಇತ್ತೀಚಿನ ವರದಿಗಳ ಪ್ರಕಾರ, ಈ ಹೆಲಿ-ಪ್ರವಾಸೋದ್ಯಮ ಯೋಜನೆಯು (Heli-tourism Project) ಅತ್ಯಂತ ಯಶಸ್ವಿಯಾಗಿದೆ. ಪ್ರವಾಸಿಗರು ಹೆಲಿಕಾಪ್ಟರ್ ಪ್ರವಾಸೋದ್ಯಮದ ಮೂಲಕ ಅಲಪ್ಪುಳ ಮತ್ತು ಕುಮರಕೊಮ್‌ನ ಹಿನ್ನೀರು ಮತ್ತು ಸೊಂಪಾದ ಸಸ್ಯಗಳ ಅದ್ಭುತ ವೈಮಾನಿಕ ವೀಕ್ಷಣೆಗಳನ್ನು ಆನಂದಿಸುತ್ತಿದ್ದಾರೆ.

ಈ ಯೋಜನೆಯು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಮಾರಕೋಮ್‌ಗೆ (Kumarakom) ಸುಮಾರು 25 ನಿಮಿಷಗಳಲ್ಲಿ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತದೆ. ಈ ಹೆಲಿಕಾಪ್ಟರ್‌ಗಳಲ್ಲಿ 5 ರಿಂದ 10 ಪ್ರಯಾಣಿಕರು ಕುಳಿತುಕೊಳ್ಳಬಹುದು.

ಕೇರಳದ ರೆಸಾರ್ಟ್‌ಗಳೇ ಹೆಲಿಕಾಪ್ಟರ್ ಪ್ರವಾಸೋದ್ಯಮ (Helicopter Tourism) ಪ್ಯಾಕೇಜ್‌ಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿವೆ. ಪ್ರಸ್ತುತ, ಎರಡು ಐಷಾರಾಮಿ ರೆಸಾರ್ಟ್ ಗಳಾದ ಸೂರಿ ರೆಸಾರ್ಟ್ ಮತ್ತು ಕುಮಾರಕೋಮ್ ಲೇಕ್ ರೆಸಾರ್ಟ್, ಈಗಾಗಲೇ ಹೆಲಿಪ್ಯಾಡ್‌ಗಳೊಂದಿಗೆ ಸಜ್ಜುಗೊಂಡಿದೆ.

ಕೇರಳದ ರಾಜ್ಯ ಸರ್ಕಾರವೂ ಹೆಲಿಕಾಪ್ಟರ್ ಪ್ರವಾಸೋದ್ಯಮ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸಲಿದ್ದು, ಖಾಸಗಿ ಕಂಪನಿಯ ಸಹಯೋಗದೊಂದಿಗೆ ಪ್ರಾರಂಭಿಸಬಹುದು ಎಂದು ಅಂದಾಜಿಸಲಾಗಿದೆ.

ಕುಮಾರಕೋಮ್ ತನ್ನ ಹಿನ್ನೀರು, ಸರೋವರಗಳು ಮತ್ತು ಐತಿಹಾಸಿಕ ತಾಣಗಳಿಂದಾಗಿ ಲಕ್ಷಾಂತರ ಪ್ರವಾಸಿಗರನ್ನು ತನ್ನಲ್ಲಿಗೆ ಕೈಬೀಸಿ ಕರೆಯುತ್ತದೆ. ಈ ತಾಣವು ತೆಂಗಿನಮರಗಳಿಂದ ಸುತ್ತುವರೆದ ಕಡಲತೀರಗಳಿಗೆ, ಅನ್ವೇಷಿಸದ ಪ್ರಶಾಂತ ಕಡಲತೀರಗಳಿಗೆ ಪ್ರಸಿದ್ಧವಾಗಿದೆ.

ಕುಮಾರಕೋಮ್ ನ ಬಳಿ ಇರುವ ಕೊಟ್ಟಾಯಂ, (kottayam) ಅಲಪ್ಪುಳ (Alappuzha) ದಂತಹ ಪ್ರವಾಸಿತಾಣಗಳಿಗೆ ಬಾಡಿಗೆ ದೋಣಿಗಳ ಮೂಲಕ ಮಾತ್ರ ಪ್ರವೇಶಿಸಬಹುದು.

ಹೆಲಿಟ್ಯಾಕ್ಸಿ ಯೋಜನೆ: (Helitaxi Project)

ಜನವರಿಯ ಆರಂಭದಲ್ಲಿ ಕೇರಳ ಪ್ರವಾಸೋದ್ಯಮವು ಹೆಲಿಟ್ಯಾಕ್ಸಿ ಯೋಜನೆಯನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು.

ಆರಂಭಿಕ ಹಂತದಲ್ಲಿ, ಕೊಚ್ಚಿಯನ್ನು ಹೆಲಿ ಟೂರಿಸ್ಟ್ ಹಬ್ ಆಗಿ ಆಯ್ಕೆ ಮಾಡಲಾಗಿದ್ದು, ತಿರುವನಂತಪುರಂ, ಕೊಲ್ಲಂ , ಜಟಾಯು ರಾಕ್, ಕುಮಾರಕೋಮ್ ಮತ್ತು ಅಲಪ್ಪುಳದ ಹಿನ್ನೀರು, ಗಿರಿಧಾಮಗಳು ಮತ್ತು ಉತ್ತರ ಕಾಸರಗೋಡು ಸೇರಿದಂತೆ ಇತರ ತಾಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಕೇರಳದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ, ರಾಜ್ಯವು 2023ರಲ್ಲಿ ದೇಶದೊಳಗಿಂದ 159.69 ಲಕ್ಷ ಸಂದರ್ಶಕರನ್ನು ಸ್ವಾಗತಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button