ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಕರ್ಫ್ಯೂ ಸಡಿಲಗೊಂಡ ಬೆನ್ನಲ್ಲೇ ಹಿಮಾಚಲ ಪ್ರದೇಶಕ್ಕೆ ಹರಿದು ಬಂತು ಜನಸಾಗರ

ಭಾರತದ ಬಹುಮುಖ್ಯ ಪ್ರವಾಸ ಕೇಂದ್ರವಾದ ಹಿಮಾಚಲ ಪ್ರದೇಶ ಕೋವಿಡ್ ಕರ್ಫ್ಯೂ ಅಲ್ಲಿ ಸ್ವಲ್ಪ ಸಡಿಲಗೊಳಿಸಿದ ಕಾರಣ ರಾಜ್ಯಕ್ಕೆ ಅಸಂಖ್ಯಾತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. 

  • ಆದಿತ್ಯ ಯಲಿಗಾರ

ಹಿಮಾಚಲ ಪ್ರದೇಶ, ಇದು ಭಾರತದ ಉತ್ತರ ಭಾಗದಲ್ಲಿರುವ ಒಂದು ರಾಜ್ಯ. ಪಶ್ಚಿಮ ಹಿಮಾಲಯದಲ್ಲಿ ನೆಲೆಗೊಂಡಿರುವ ಹಿಮಾಲಯ ಪ್ರದೇಶ ಹನ್ನೊಂದು ಪರ್ವತ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಹಲವಾರು ಶಿಖರಗಳು ಮತ್ತು ಅದೆಷ್ಟೋ ನದಿಗಳ ಹರಿವಿನಿಂದ ಮನಮೋಹಕ ಭೂದೃಶ್ಯಗಳು ರೂಪಗೊಂಡಿವೆ. 

ಹಿಮಾಚಲ ಪ್ರದೇಶವು ಉತ್ತರಕ್ಕೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಕೇಂದ್ರ ಪ್ರದೇಶಗಳೊಂದಿಗೆ ಮತ್ತು ಪಶ್ಚಿಮಕ್ಕೆ ಪಂಜಾಬ್, ನೈರುತ್ಯ ದಿಕ್ಕಿನಲ್ಲಿ ಹರಿಯಾಣ, ಮತ್ತು ದಕ್ಷಿಣದಲ್ಲಿ ಉತ್ತರಖಂಡ್ ಮತ್ತು ಉತ್ತರ ಪ್ರದೇಶಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಪೂರ್ವಕ್ಕೆ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗೆ  ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಹಿಮಾಚಲ ಪ್ರದೇಶವನ್ನು ‘ದೇವ್ ಭೂಮಿ’ ಅಥವಾ ‘ದೇವತೆಗಳ ಮತ್ತು ದೇವತೆಯ ಭೂಮಿ’ ಎಂದೂ ಕರೆಯುತ್ತಾರೆ. 

ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿದ ಹಿಮಾಚಲ ಪ್ರದೇಶ ದೇಶದ ಬಹುಮುಖ್ಯ ಪ್ರವಾಸೋದ್ಯಮ ಕೇಂದ್ರವಾಗಿದೆ.ಇಲ್ಲಿನ ಪ್ರವಾಸಿ ತಾಣಗಳಾದ ಶಿಮ್ಲಾ, ಕಸೌಲಿ, ಧರ್ಮಶಾಲ, ಮನಾಲಿ, ಸ್ಪಿಟಿ ಕಣಿವೆಗಳಿಗೆ ಸಾಲು ಸಾಲು ಪ್ರವಾಸಿಗರ ದಂಡು ವರ್ಷಾನುಗಟ್ಟಲೆ ಬರುತ್ತಲೇ ಇತ್ತು. ಕೊರೋನಾ ಸಾಂಕ್ರಾಮಿಕ ಸ್ಥಿತಿಗೆ ದೇಶಾದ್ಯಂತ ಲಾಕ್ ಡೌನ್ ಜಾರಿ ಆದ ಕಾರಣ ಪ್ರವಾಸೋದ್ಯಮ ಸ್ಥಗಿತಗೊಂಡಿತ್ತು. 

ಆದರೆ ಈಗ ಕೊವಿಡ್-19 ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷೆಯ ವರದಿಗಳು ಇನ್ನು ಮುಂದೆ ರಾಜ್ಯಕ್ಕೆ ಪ್ರವೇಶಿಸುವಾಗ ಹೊಂದುವುದು ಅಗತ್ಯವಿರುವುದಿಲ್ಲ ಎಂದು ಹಿಮಾಚಲ ಪ್ರದೇಶ ಘೋಷಿಸಿದ ಕೂಡಲೇ, ರಾಜ್ಯಕ್ಕೆ ಹೋಗುವ ರಸ್ತೆಯಲ್ಲಿ ನೂರಾರು ಕಾರುಗಳು ಕಾಣಿಸಿಕೊಂಡಿದ್ದು, ಭಾರಿ ದಟ್ಟಣೆ ಉಂಟಾಗಿ ಬೆಟ್ಟಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ನೀವುಇದನ್ನುಇಷ್ಟಪಡಬಹುದು: ಲಾಕ್ಡೌನ್ ಕೆಲಸ ಮಾಡಿದೆ, ಪರಿಸರ ಬದಲಾಗಿದೆ: ಊರುಗಳು ಹೊಸತಾಗಿವೆ

ಹಿಮಾಚಲ ಪ್ರದೇಶದ ಪ್ರವೇಶ ಕೇಂದ್ರವಾದ ಸೋಲನ್ ಜಿಲ್ಲೆಯ ಪರ್ವಾನೂ ಬಳಿ ಭಾನುವಾರ ಕಾರುಗಳು ಮತ್ತು ಎಸ್ ಯು ವಿಗಳ ಉದ್ದದ ಸಾಲುಗಳು ಕಂಡುಬಂದವು. ಕಳೆದ 36 ಗಂಟೆಗಳಲ್ಲಿ ಶೋಗಿ ತಡೆಗೋಡೆ ಮೂಲಕ ಸುಮಾರು 5,000 ವಾಹನಗಳು ರಾಜಧಾನಿ ಶಿಮ್ಲಾಕ್ಕೆ ಪ್ರವೇಶಿಸಿದವು. 

ಇತರ ರಾಜ್ಯಗಳು ಪ್ರವಾಸಿಗರಿಗಾಗಿ ತೆರೆಯಲಾಗಿದ್ದರೂ, ಪ್ರವೇಶ ಪಡೆಯಲು ಕೋವಿಡ್ ಇ-ಪಾಸ್ ಹೊಂದುವ ಅಗತ್ಯವಿದೆ.

ಶಿಮ್ಲಾ ಪೊಲೀಸರು ಪ್ರವಾಸಿಗರಿಗೆ ಸೂಕ್ತವಾದ ಕೋವಿಡ್ ನಿಯಮಾವಳಿಗಳನ್ನ ಅನುಸರಿಸಲು, ಮುಖಗವಸುಗಳನ್ನ ಧರಿಸಲು ಮತ್ತು ಸಾಮಾಜಿಕ-ಅಂತರವನ್ನು ಕಾಪಾಡಲು ಕೇಳಿದರು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯ ಮತ್ತು ದೇಶಾದ್ಯಂತದ ಕರೋನಾ ವೈರಸ್ ಪ್ರಕರಣಗಳ ಕುಸಿತದ ಮಧ್ಯೆ, ಹಿಮಾಚಲ ಸರ್ಕಾರ ಶುಕ್ರವಾರ ಕರ್ಫ್ಯೂವನ್ನ ಸಡಿಲಗೊಳಿಸಿದೆ. ಇದರಲ್ಲಿ ಪ್ರವಾಸಿಗರಿಗೆ ನೆಗಟಿವ್ ವರದಿ ಇರದೆ, ಕೋವಿಡ್ ಪರೀಕ್ಷೆಯಿಲ್ಲದೆ ಭೇಟಿ ನೀಡಲು ಅವಕಾಶವಿದೆ. ಆದರೆ, ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಕೆಲವು ನಿರ್ಬಂಧಗಳೊಂದಿಗೆ ಕರ್ಫ್ಯೂ ಜಾರಿಯಲ್ಲಿದೆ.

ಶುಕ್ರವಾರ, ಹಿಮಾಚಲ ಪ್ರದೇಶದ ಕೋವಿಡ್ ಕರ್ಫ್ಯೂ ಅನ್ನು ಇನ್ನೂ ಹಲವಾರು ಸಡಿಲಿಕೆಗಳೊಂದಿಗೆ ವಿಸ್ತರಿಸಲಾಯಿತು, ರಾಜ್ಯದೊಳಗಿನ ಬಸ್ಸುಗಳನ್ನು ಶೇಕಡಾ 50ರಷ್ಟು ಜನಸಂದಣಿಯೊಂದಿಗೆ ಓಡಿಸಲು ಅನುಮತಿಸಲಾಗಿದೆ ಮತ್ತು ಜೂನ್ 14 ರಿಂದ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಅಂಗಡಿಗಳು ತೆರೆದಿರಬಹುದು. 

ಹಿಮಾಚಲ ಪ್ರದೇಶದಲ್ಲಿ ಭಾನುವಾರ 370 ಹೊಸ ಕೋವಿಡ್ ಪ್ರಕರಣಗಳು ಮತ್ತು 17 ಸಾವುಗಳು ದಾಖಲಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 1,98,313 ಕ್ಕೆ ಮತ್ತು ಸಾವಿನ ಸಂಖ್ಯೆ 3,368 ಕ್ಕೆ ತಲುಪಿದೆ. ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಈಗ 5,402 ಸಕ್ರಿಯ ಪ್ರಕರಣಗಳಿವೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button