4 ದಶಕಗಳ ಬಳಿಕ ತೆರೆಯಲಿದೆ ಪುರಿ ಜಗನ್ನಾಥನ ರತ್ನ ಭಂಡಾರ
ಪುರಾಣ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಪ್ರಸಿದ್ಧ ಕ್ಷೇತ್ರ ಪುರಿ(Puri) ಜಗನ್ನಾಥ(Jagannath). ಒಡಿಶಾದ (Odisha)ಪುರಿಯಲ್ಲಿರುವ ಈ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ.
ಕೋಟ್ಯಂತರ ಸಂಖ್ಯೆಯ ಭಕ್ತರನ್ನು ಹೊಂದಿರುವ ದೇವಾಲಯ ಜುಲೈ 14ರಂದು ಮತ್ತೊಂದು ಪವಾಡಕ್ಕೆ ಸಾಕ್ಷಿಯಾಗಲಿದೆ.ಕೆಲವು ದೇವಾಲಯಗಳ ನಿಧಿಯನ್ನು (Treasure) ಹಾವು (Snake) ಕಾಯುತ್ತಿದೆ ಎಂಬ ನಂಬಿಕೆಯಿದೆ. ಅಂತಹ ಕೆಲವು ದೇವಸ್ಥಾನಗಳಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯವೂ ಒಂದು.
ಭಗವಾನ್(Bhagavan)ಜಗನ್ನಾಥ ಮತ್ತು ಪುರಿಯಲ್ಲಿರುವ ದೇವಾಲಯದ ಇತರ ದೇವತೆಗಳ ಬೆಲೆಬಾಳುವ ವಸ್ತುಗಳನ್ನು ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ.
ನೀವು ಇದನ್ನು ಓದಬಹುದು:ಇಂದು ಪುರಿಯಲ್ಲಿ ಜಗನ್ನಾಥ ಹೆರಿಟೇಜ್ ಕಾರಿಡಾರ್ ಯೋಜನೆ ಲೋಕಾರ್ಪಣೆ;
1978ರಲ್ಲಿ ಕೊನೆ ಬಾರಿಗೆ ರತ್ನಭಂಡಾರದ(Ratna Bhandar) ಬಾಗಿಲು ತೆರೆಯಲಾಗಿತ್ತು. ಭಂಡಾರದಲ್ಲಿ 12,800 ಕ್ಕೂ ಹೆಚ್ಚು ರತ್ನಖಚಿತ ಚಿನ್ನದ ಆಭರಣ ಇದ್ದವು. ಈ ಎಲ್ಲಾ ಆಭರಣಗಳಲ್ಲೂ ಅಮೂಲ್ಯ ಹರಳುಗಳು ಇದ್ದವು ಜೊತೆಗೆ 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಇದ್ದವು.
2018ರಲ್ಲಿ ಮತ್ತೆ ಬಾಗಿಲು ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ(Archaeological Survey of India)ಇಲಾಖೆಗೆ ಸೂಚನೆ ನೀಡಲಾಗಿತ್ತು. 2018ರಲ್ಲಿ ಬಾಗಿಲು ತೆಗೆಯಲು ಮುಂದಾದಾಗ ಭಂಡಾರದ ಕೀಲಿ ಕೈ ಕಾಣೆಯಾಗಿತ್ತು.
ಮೂಲ ಕೀಲಿ ಕೈ ಹುಡುಕುವ ಬಗ್ಗೆ ಪಟ್ನಾಯಕ್(Patnaik)ಸರ್ಕಾರ ಸಮಿತಿ ರಚಿಸಿತ್ತು. ಅದರ ವರದಿಯನ್ನು ತರಿಸಿಕೊಂಡರೂ ಈವರೆಗೂ ವರದಿ ಬಹಿರಂಗವಾಗಿಲ್ಲ. ಕೊನೆಗೆ ಮುಚ್ಚಿದ ಲಕೋಟೆಯಲ್ಲಿ ಡೂಪ್ಲಿಕೇಟ್ (Duplicate)ಕೀಲಿ ಕೈ ನೀಡಿತ್ತು.
ಬರೋಬ್ಬರಿ 45 ವರ್ಷಗಳ ಬಳಿಕ ರತ್ನ ಭಂಡಾರದ ಬಾಗಿಲು ತೆರೆಯಲ್ಲಿದ್ದು, ಅಲ್ಲಿರು ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ. ಅದರ ಜೊತೆಗೆ ಅಲ್ಲಿ ವಾಸವಾಗಿರುವ ಹಾವುಗಳ (Snake)ಬಗ್ಗೆಯೂ ಅಧಿಕಾರಿಗಳಿಗೆ (Officers)ಅಷ್ಟೇ ಭಯ ಹುಟ್ಟಿಸಿದೆಯಂತೆ
ರತ್ನ ಭಂಡಾರದೊಳಗೆ ಹಾವುಗಳಿವೆ ಎಂದು ಭಯಪಡಲು ಕಾರಣವಿದೆ. ಒಂದು ದಂತಕಥೆಗಳ ನಂಬಿಕೆ, ಮತ್ತೊಂದು ಇತ್ತೀಚೆಗೆ ಜಗನ್ನಾಥ ಹೆರಿಟೇಜ್ ಕಾರಿಡಾರ್(Jagannath Heritage Corridor)ಯೋಜನೆಯಡಿ ದೇವಾಲಯಕ್ಕೆ ಬಣ್ಣ ಬಳಿದ ಸಂದರ್ಭದಲ್ಲಿ ದೇವಾಲಯದ ಸುತ್ತ ಇರುವ ಹಲವಾರು ಸಣ್ಣ, ಸಣ್ಣ ರಂಧ್ರದ ಒಳಗೆ ಹಾವುಗಳು ಹೋಗುತ್ತಿರುವುದು, ಹಾವುಗಳು ಹೊರಬರುತ್ತಿರುವುದನ್ನು ಪ್ರತ್ಯಕ್ಷವಾಗಿ ಗಮನಿಸಿದ್ದರು.
ಈ ಹಾವುಗಳು ರತ್ನ ಭಂಡಾರದೊಳಗೆ ಇರುವ ಸಾಧ್ಯತೆ ಹೆಚ್ಚು ಎಂಬುದು ದೇವಾಲಯದ (Temple)ಮಂಡಳಿಯ ಸದಸ್ಯರ, ಅಧಿಕಾರಿಗಳ ಭಯಕ್ಕೆ ಕಾರಣವಾಗಿದೆ.
ಒಂದು ಅಂದಾಜಿನ ಪ್ರಕಾರ ರತ್ನ ಭಂಡಾರದಲ್ಲಿ ಇರುವ ಅಮೂಲ್ಯ ವಜ್ರ ವೈಡೂರ್ಯ, ಚಿನ್ನಾಭರಣಗಳನ್ನು ಬಳಸಿಕೊಂಡರೆ ವಿಶ್ವದ (World) ಹಲವು ಬಡ ರಾಷ್ಟ್ರಗಳ (Poor Country) ಆರ್ಥಿಕತೆಯನ್ನು ಸುಧಾರಿಸಬಹುದಂತೆ.
ಇದೀಗ ಹೆಚ್ಚುವರಿಯಾಗಿ ಇರುವ ಕೀ ಮೂಲಕ ಬೀಗ ತೆರೆಯಲು ಪ್ರಯತ್ನಿಸುವ ಸಾಧ್ಯತೆ ಇದ್ದು, ಒಂದು ವೇಳೆ ಆ ಕೀಯಿಂದ ಬಾಗಿಲು ತೆರೆಯದಿದ್ದರೆ, ಬಾಗಿಲನ್ನು ಒಡೆದು ರತ್ನ ಭಂಡಾರದಲ್ಲಿರುವ ಚಿನ್ನಾಭರಣಗಳ ಲೆಕ್ಕಾಚಾರ ನಡೆಯಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.