ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಹಂಪಿಯ ಆಗಸದಲ್ಲಿ ಹಾರಾಡಲಿವೆ ಲೋಹದ ಹಕ್ಕಿಗಳು

ವಿಶ್ವ ವಿಖ್ಯಾತ ಹಂಪಿ ಉತ್ಸವ(Hampi Utsav) ಫೆಬ್ರವರಿ 2 ರಿಂದ 3 ದಿನಗಳ ಕಾಲ ನಡೆಯಲಿದ್ದು, ಉತ್ಸವ ಆರಂಭಕ್ಕೂ ಮುನ್ನಾ ದಿನ ಫೆ.1ರಂದು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್‌ ಯಾನ ಆರಂಭವಾಗಲಿದೆ.

ಈ ಹೆಲಿಕಾಪ್ಟರ್‌ ಯಾನ ವಿಶ್ವ ಪಾರಂಪರಿಕ ತಾಣವನ್ನು(World Heritage site)ಆಗಸದಿಂದ ಉತ್ತಮವಾಗಿ ನೋಡಲು ಅವಕಾಶ ಕಲ್ಪಿಸುತ್ತದೆ.

ಈ ಹಿಂದೆ ಹೆಲಿಕಾಪ್ಟರ್ ಯಾನವನ್ನು ಉತ್ಸವ ದಿನದಂದೇ ಆರಂಭಿಸಲಾಗುತ್ತಿತ್ತು. ಆದರೆ, ಹಲವು ಪ್ರವಾಸಿಕರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಹಿಂದಿ ದಿನವೇ ಆರಂಭಿಸಲಾಗುತ್ತಿದೆ. ಅಲ್ಲದೆ, ಹೆಲಿಕಾಪ್ಟರ್ ಯಾನದ ಅವಧಿಯನ್ನೂ ಕೂಡ 6 ನಿಮಿಷಗಳಿಂದ 8 ನಿಮಿಷಕ್ಕೆ ಹೆಚ್ಚಿಸಲಾಗಿದೆ .’

‘ಹಂಪಿ ಬೈ ಸ್ಕೈ(Hampi by Sky)ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಕಮಲಾಪುರದ ಹೋಟೆಲ್‌ ಮಯೂರ ಭುವನೇಶ್ವರಿ ಆವರಣದಿಂದ ಬೈ ಸ್ಕೈ ಹೆಲಿಕಾಪ್ಟರ್ ಯಾನ ಆರಂಭವಾಗಲಿದೆ. ಜನರನ್ನು ಏಳು ನಿಮಿಷ ಆಗಸದಲ್ಲಿ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿ ವಾಪಸ್‌ ಕರೆತರಲಾಗುವುದು..

ನೀವು ಇದನ್ನೂ ಇಷ್ಟ ಪಡಬಹುದು:ಗುಜರಾತಿನಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳಿಗೊಮ್ಮೆ ಭೇಟಿ ನೀಡಿ:

ಹಂಪಿಯ ಮಯೂರ ಭುವನೇಶ್ವರಿ ಹೋಟೆಲ್ ಆವರಣದಿಂದ ರಾಣಿ ಸ್ನಾನಗೃಹ, ಕಮಲ್‌ ಮಹಲ್‌, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ವಿಜಯ ವಿಠ್ಠಲ(Vijaya Vitala), ಕಲ್ಲಿನತೇರು, ಗಜಶಾಲೆ, ತುಂಗಭದ್ರಾ ನದಿ ತೀರ, ಎದುರು ಬಸವಣ್ಣ ಮತ್ತು ಶ್ರೀವಿರೂಪಾಕ್ಷೇಶ್ವರ ದೇವಾಲಯ.

ಶ್ರೀಕೃಷ್ಣ ದೇವಾಲಯ(Shri Krishna Temple), ಶ್ರೀವಿರೂಪಾಕ್ಷ ಬಜಾರ(Shri Virupaksha Bazar) ಸೇರಿದಂತೆ ಹಂಪಿಯ ಸ್ಮಾರಕಗಳನ್ನು ಆಗಸದಿಂದಲೇ ಕಣ್ತುಂಬಿಕೊಳ್ಳಬಹುದು ಮೂರೂ ದಿನ ಈ ವ್ಯವಸ್ಥೆ ಇರಲಿದೆ. ಹಂಪಿಯ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಹಾಗೂ ಆಸಕ್ತರಿಗೆ ಅವಕಾಶ ಲಭಿಸಲಿದೆ.

ಎಂಟು ನಿಮಿಷಗಳ ಯಾನಕ್ಕೆ 4,299 ರೂ. ಮತ್ತು ಏಳು ನಿಮಿಷಕ್ಕೆ 3,700 ರೂ. ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತವಿರಲಿದೆ. ಒಮ್ಮೆ ಪ್ರಯಾಣದಲ್ಲಿ 5-6 ಜನ ಪ್ರವಾಸಿಗರು ಕುಳಿತುಕೊಳ್ಳಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button