Moreಮ್ಯಾಜಿಕ್ ತಾಣಗಳುವಿಂಗಡಿಸದ

ಮಾ.29ರಿಂದ ತಮಿಳುನಾಡಿನ ನೀಲಗಿರಿಯಲ್ಲಿ ವಿಶೇಷ ಆಟಿಕೆ ರೈಲು ಸೇವೆ ಆರಂಭ;

ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಬೇಸಿಗೆಯ ಕಾಲದಲ್ಲಿ ತಣ್ಣನೆಯ ಅನುಭವ ಕೊಡುವ ತಾಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಹೋಗಲು ಬಯಸುತ್ತಾರೆ. ಭಾರತದಲ್ಲಿ ಬೇಸಿಗೆಯ ಕಾಲದಲ್ಲಿಯೂ ತಂಪಾಗಿರುವ ಹಲವು ತಾಣಗಳಿವೆ.

ಅವುಗಳಲ್ಲಿ ಊಟಿ, ನೀಲಗಿರಿ ತಾಣಗಳೂ ಸೇರಿವೆ. ಈಗ ತಮಿಳುನಾಡಿನ ಈ ಸ್ಥಳಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ವಿಶೇಷ ಆಟಿಕೆ ರೈಲು ಸೇವೆಯನ್ನು (Special toy train service) ಆರಂಭಿಸಲಾಗುತ್ತಿದೆ.

ತಮಿಳುನಾಡಿನ (Tamilnadu) ನೀಲಗಿರಿ ಜಿಲ್ಲೆಗೆ (Nilgiris) ಬರುವ ಪ್ರವಾಸಿಗರಿಗಾಗಿ ಮುಖ್ಯವಾಗಿ ವಿದೇಶಿಗರನ್ನು ಆಕರ್ಷಿಸಲು ಮಾರ್ಚ್ 29, 2024 ರಿಂದ ಜುಲೈ 1, 2024 ರವರೆಗೆ ಮೆಟ್ಟುಪಾಳ್ಯಂ-ಊಟಿ-ಕೂನೂರು-ಊಟಿ (Mettupalayam-Ooty-Coonoor-Ooty) ನಡುವೆ ವಿಶೇಷ ಪರ್ವತ ರೈಲು Mountain Railways India ಸೇವೆ ಆರಂಭಿಸಲಾಗುವುದು ಎಂದು ದಕ್ಷಿಣ ರೈಲ್ವೆ ಸೇಲಂ ವಿಭಾಗವು ಪ್ರಕಟಿಸಿದೆ.

ಬೇಸಿಗೆಯ ಕಾಲದಲ್ಲಿ ಅನೇಕ ಜನರು ತಂಪಾದ, ಯುನೆಸ್ಕೋ ಮಾನ್ಯತೆಯ ಪಡೆದ ಇಲ್ಲಿಯ ಮೌಂಟೇನ್ ರೈಲಿನಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ.

206 ಸೇತುವೆಗಳು ಮತ್ತು 16 ಗುಹೆಗಳಲ್ಲಿ ಹಾದು ಹೋಗುವ ಈ ಮೌಂಟೇನ್ ರೈಲಿನಲ್ಲಿ ಪ್ರಯಾಣಿಸುವುದು ಎಂದೂ ಮರೆಯಲಾಗದ ಅತ್ಯಂತ ಆಹ್ಲಾದಕರ ಅನುಭವ ನೀಡುತ್ತದೆ.

ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಬರ ಸೆಳೆಯುವ ತಮಿಳುನಾಡಿನ ಈ ತಾಣಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳು ಪ್ರವಾಸಿಗರು ಅತಿ ಹೆಚ್ಚು ಭೇಟಿ ಜನ ಭೇಟಿ ನೀಡುತ್ತಾರೆ.

ಈ ಸಂದರ್ಭದಲ್ಲಿ, ಮುಂಬರುವ ಬೇಸಿಗೆಯಲ್ಲಿ, ಮಾರ್ಚ್ 29, 2024 ರಿಂದ ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರದಂದು 4 ದಿನಗಳ ಕಾಲ ಕೂನೂರು-ಊಟಿ ನಡುವೆ ವಿಶೇಷ ಪರ್ವತ ರೈಲನ್ನು ಓಡಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ಸೇಲಂ ವಿಭಾಗ (Salem Division of Southern Railway) ತಿಳಿಸಿದೆ.

ಈ ರೈಲು ಶುಕ್ರವಾರ ಮತ್ತು ಭಾನುವಾರದಂದು ಮೆಟ್ಟುಪಾಳ್ಯಂ-ಊಟಿ ನಡುವೆ ಮತ್ತು ಶನಿವಾರ ಹಾಗೂ ಭಾನುವಾರದಂದು ಊಟಿ-ಮೆಟ್ಟುಪಾಳ್ಯಂ ವಿಶೇಷ ಪರ್ವತ ರೈಲನ್ನು ನಿರ್ವಹಿಸಲಿದೆ ಎಂದು ಪ್ರಕಟಿಸಿದೆ.

ಬೇಸಿಗೆಯಲ್ಲಿ ಆರಂಭಿಸಲಾಗುವ ಈ ಆಟಿಕೆ ರೈಲು (Toy Train) ಮಾ.29 ರಿಂದ ಆರಂಭವಾಗುತ್ತಿದ್ದು, ಈ ಬಾರಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ನೀಲಗಿರಿಗೆ ಭೇಟಿ ನೀಡಿ, ಆಟಿಕೆ ರೈಲಿನ ಅನುಭವ ಪಡೆಯುವ ನಿರೀಕ್ಷೆ ಇದೆ.

ಇದಲ್ಲದೇ, ಭಾರತ ಇತರ ಮೌಂಟೇನ್ ರೈಲುಗಳಾದ, ಕಲ್ಕಾ-ಶಿಮ್ಲಾ, ಡಾರ್ಜಿಲಿಂಗ್, ಮಾಥೆರಾನ್, ಕಂಗ್ರಾ ವ್ಯಾಲಿ ರೈಲುಗಳು ಸಹ ಈಗಾಗಲೇ ಹಸಿರು ಭೂದೃಶ್ಯಗಳ ಮನೋಹರ ನೋಟವನ್ನು ವೀಕ್ಷಿಸಲು ಪ್ರವಾಸಿಗರಿಗೆ ಆಟಿಕೆ ರೈಲುಗಳ ಸೌಕರ್ಯ ನೀಡುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button