ಇವರ ದಾರಿಯೇ ಡಿಫರೆಂಟುವಿಂಗಡಿಸದಸ್ಫೂರ್ತಿ ಗಾಥೆ

ಆ್ಯಂಬುಲೆನ್ಸ್ ಚಾಲಕರಾದ ಬೈಕರ್ಸ್: ಬೆಂಗಳೂರಿನ ಸಹೋದರರ ಮಾನವೀಯ ಕಾರ್ಯ

ಇಡೀ ಜಗತ್ತು ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಎರಡನೇ ಅಲೆಯಿಂದ ತತ್ತರಿಸಿ ಹೋಗಿದೆ. ಈ ಪರಿಸ್ಥಿತಿಯ ನಡುವೆಯೂ ಅದೆಷ್ಟೋ ಜನರು ರೋಗಿಗಳ ಮತ್ತು ಅವರ ಕುಟುಂಬಸ್ಥರ ಕಣ್ಣೀರು ಒರೆಸುವುದರಲ್ಲಿ, ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುವುದರಲ್ಲಿ ನಿರತರಾಗಿದ್ದಾರೆ. ಇದುವೇ ಮಾನವೀಯತೆಯ ನಿಜವಾದ ಅರ್ಥ. ಮೂರು ತಿಂಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೂ, ಬೆಂಗಳೂರಿನ ಈ ಸಹೋದರರು ಅಗತ್ಯದಲ್ಲಿರುವವರಿಗೆ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಾ ತಮ್ಮ ನೋವನ್ನು ಮರೆಯುತ್ತಿದ್ದಾರೆ. 

  • ವರ್ಷಾ ಉಜಿರೆ

ಕೊರೋನಾ ಎರಡನೇ ಅಲೆ ನಮ್ಮ ಊಹೆಗೂ ಮೀರಿದ ಅವಾಂತರಗಳನ್ನು ಜಗತ್ತಿನೆಲ್ಲೆಡೆ ಸೃಷ್ಟಿಸಿದೆ. ಸೃಷ್ಟಿಸುತ್ತಲೇ ಇದೆ. ಅದೆಷ್ಟೋ ಕುಟುಂಬಗಳು ಅನಾಥವಾಗಿವೆ. ಇದರ ನಡುವೆಯೂ ಅದೆಷ್ಟೋ ಮಾದರಿ ವ್ಯಕ್ತಿತ್ವಗಳು ಮತ್ತೊಬ್ಬರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಂತಹ ಸಾಲಿಗೆ ಹೊಸ ಸೇರ್ಪಡೆ ಬೆಂಗಳೂರಿನ ಸಹೋದರರು ಹಾಗೂ ಖ್ಯಾತ ಬೈಕರ್ಸ್ ಮುರ್ತಾಜಾ ಜುನೈದ್ ಮತ್ತು ಮುತೀಬ್ ಜೋಹೆಬ್. 

ಈ ಸಹೋದರರು, ಭಾರತದ ಮೋಟಾರ್ ಸ್ಪೋರ್ಟ್ಸ್ ಸಮುದಾಯದಲ್ಲಿ ತಮ್ಮ ಬೈಕಿಂಗ್ ಕೌಶಲ್ಯಕ್ಕಾಗಿ ಹೆಸರು ಮಾಡಿದವರು. ಜುನೈದ್ ಮೋಟಾರ್ ಸೈಕ್ಲಿಂಗ್ ಕಾರ್ಯಗಾರ ಕ್ಷೇತ್ರದಲ್ಲಿ ನಿಪುಣರಾದರೆ, ಜೋಹೆಬ್ ಉತ್ತಮ ಬೈಕರ್. 

Murthaza Junaid Muteeb Zoheb Bikers Ambulance Drivers

ಆ್ಯಂಬುಲೆನ್ಸ್ ಡ್ರೈವಿಂಗ್ ಸೀಟಲ್ಲಿ ಬೈಕರ್ಸ್ 

ಇಷ್ಟಕ್ಕೂ ಈ ಸಹೋದರರು ಮಾಡುತ್ತಿರುವ ಮಾನವೀಯ ಕಾರ್ಯವಾದರೂ ಏನು? ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹುದು. ಇವರೀಗ ಬೈಕರ್ಸ್ ಅಲ್ಲ, ಬದಲಾಗಿ ಆಂಬುಲೆನ್ಸ್ ಚಾಲಕರು. ಹೌದು. ಕೊರೋನಾ ಕಾರಣದಿಂದಾಗಿ ನೊಂದಿರುವವರ ಮನೆಬಾಗಿಲಿಗೆ ತೆರಳಿ ಅಗತ್ಯ ಸೇವೆ ಒದಗಿಸುವ ಕೆಲಸದಲ್ಲಿ ಇವರೀಗ ನಿರತರು.

Murthaza Junaid Muteeb Zoheb Bikers Ambulance Drivers

ಮೂರು ತಿಂಗಳ ಹಿಂದೆ ತಮ್ಮ ತಾಯಿಯನ್ನು ಇವರು ಕಳೆದುಕೊಳ್ಳುತ್ತಾರೆ. ಅಲ್ಲದೇ ಜೋಹೆಬ್ ಅವರ ಬಳಿ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೇಳಿಕೊಂಡು ಸಂಪರ್ಕಿಸುವವರ ಸಂಖ್ಯೆಯೂ ಹೆಚ್ಚುತ್ತಿರುತ್ತದೆ. ಈ ಎರಡು ಕಾರಣಗಳು ಆಂಬುಲೆನ್ಸ್ ಸೇವೆಯನ್ನು ಒದಗಿಸುವ ಯೋಚನೆ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಈ ಯೋಚನೆ ಮೊದಲು ಹುಟ್ಟಿದ್ದು ಜುನೈದ್ ಅವರಿಗೆ. ನಂತರ ಸಹೋದರರಿಬ್ಬರೂ ಸೇರಿ ಈ ಕಾರ್ಯವನ್ನು ಜಾರಿಗೆ ತಂದು, ಈಗ ಸಫಲರೂ ಆಗಿದ್ದಾರೆ.

ನೀವುಇದನ್ನುಇಷ್ಟಪಡಬಹುದು: ಕೊರೋನಾ ಸೈನಿಕರಿಗೆ ಗೌರವ ಸಲ್ಲಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4000 ಕಿಮೀ ನಡೆದ ಕನ್ನಡಿಗ ಭರತ್

ರೋಗಿಗಳಿಗೆ ನೆರವಾಗುವ ಆಸೆ

ರೋಗಿಗಳು ಆಸ್ಪತ್ರೆಗೆ ಹೋಗಿ ಬರಲು ಆಟೋವನ್ನು ಅವಲಂಬಿಸಿರುವುದನ್ನು ನಾನು ಗಮನಿಸುತ್ತಿದ್ದೆ. ಇದನ್ನು ಬದಲಾಯಿಸಲು, ಅವರಿಗೆ ಸರಿಯಾದ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕೆಂದು ಮನಸ್ಸು ಮಾಡಿ ಹಲವಾರು ಎನ್.ಜಿ.ಓಗಳನ್ನು ಸಂಪರ್ಕಿಸಿದೆ. 

ಅಲ್ಲಿ ಸ್ವಯಂಸೇವಕನಾಗಿ ಸೇರಲು ಇಚ್ಛಿಸಿದೆ. ಆದರೆ ಯಾರಿಂದಲೂ ನನಗೆ ಧನಾತ್ಮಕ ಉತ್ತರ ಬರಲಿಲ್ಲ. ಬೆಂಬಲವೂ ಸಿಕ್ಕಲಿಲ್ಲ. ಹೀಗಿರುವಾಗ ಬೆಂಗಳೂರು ಮಿರರ್ ಅಲ್ಲಿ ಮರ್ಸಿ ಮಿಶನ್ ಬಗ್ಗೆ ಓದಿದೆ. 

ಅವರನ್ನು ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿದಾಗ ಅಲ್ಲಿಂದ ನನಗೆ ಬಂದ ಉತ್ತರ ಧನಾತ್ಮಕ ಮತ್ತು ತೃಪ್ತಿದಾಯಕವಾಗಿತ್ತು. ನಾಳೆಯೇ ನನ್ನನ್ನು ಭೇಟಿಯಾಗಲು ತಿಳಿಸಿದರು. ಹೀಗೆ ನಮ್ಮ ಕಾರ್ಯ ಶುರುವಾಗಿದ್ದು ಎನ್ನುತ್ತಾರೆ ಜೋಹೆಬ್. 

Murthaza Junaid Muteeb Zoheb Bikers Ambulance Drivers

ಜೋಹೆಬ್ ಮತ್ತು ಜುನೈದ್, ಮರ್ಸಿ ಮಿಶನ್ ಜೊತೆಗೆ ಎರಡು ದಿನಗಳ ನಂತರ ಕೈ ಜೋಡಿಸಿದರು. ಮತ್ತು ಇಂದಿನವರೆಗೂ ಬೆಂಗಳೂರಿನ ಜನತೆಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ನೆರವು ಒದಗಿಸಿದ್ದಾರೆ. ಈ ಮೂಲಕ ಅದೆಷ್ಟೋ ಕೊರೋನಾ ರೋಗಿ ಹಾಗೂ ಅವರ ಕುಟುಂಬಸ್ಥರ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಅವರು ಆಂಬುಲೆನ್ಸ್ ಚಾಲಕರಾಗಿ ಸೇವೆಯನ್ನು ಆರಂಭಿಸಿದ ನಂತರ ಅವರ ಕುಟುಂಬವನ್ನು ತಮ್ಮಿಂದ ದೂರ ಇಟ್ಟಿದ್ದಾರೆ. ತಾವು ಕೋವಿಡ್ ಕುರಿತ ನಿಯಮಗಳನ್ನು ಮರೆಯದೆ ಪಾಲಿಸುತ್ತಿದ್ದಾರೆ. ಮತ್ತು ತಮ್ಮ ಕುಟುಂಬವನ್ನು ಪಾಲಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. 

ಇಂತಹ ಭಯದ ವಾತಾವರಣದ ನಡುವೆಯೂ ದೇಶಕ್ಕಾಗಿ, ದೇಶದ ಜನತೆಗಾಗಿ ಮಿಡಿಯುವ ಅದೆಷ್ಟೋ ಮಾನವೀಯ ಹಾಗೂ ಮಾದರಿ ವ್ಯಕ್ತಿತ್ವಗಳ ಸಾಲಿನಲ್ಲಿ ಈ ಸಹೋದರರೂ ನಿಲ್ಲುತ್ತಾರೆ. ಇವರ ಈ ಕಾರ್ಯಕ್ಕೆ ನಮ್ಮ ಸಲಾಮ್! 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button
Translate