ವಂಡರ್ ಬಾಕ್ಸ್ವಿಂಗಡಿಸದ

ವಿದೇಶಕ್ಕೆ ಹೋಗುವವರೇ ಗಮನಿಸಿ, ನಿಮಗಿನ್ನು ವ್ಯಾಕ್ಸಿನ್ ಪಾಸ್ ಪೋರ್ಟ್ ಬೇಕಾಗಬಹುದು

ಇನ್ನು ಮುಂದೆ ವಿದೇಶಕ್ಕೆ ಹೋಗುವವರು ಕೈಯಲ್ಲಿ ವ್ಯಾಕ್ಸಿನ್ ಪಾಸ್ ಪೋರ್ಟ್ ಹಿಡಿದುಕೊಂಡು ಹೋಗುವ ದಿನಗಳು ಬರಲಿವೆ. ವ್ಯಾಕ್ಸಿನ್ ಪಾಸ್ ಪೋರ್ಟ್ ಇದ್ದರಷ್ಟೇ ವಿದೇಶಗಳು ಪ್ರವೇಶಾವಕಾಶ ನೀಡುವ ಸಾಧ್ಯತೆಗಳೂ ಇವೆ. ಆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

  • ಸಿಂಧೂ ಪ್ರದೀಪ್

ವ್ಯಾಕ್ಸಿನ್ ಪಾಸ್ ಪೋರ್ಟ್.

ಇದು ನಿಮಗೆಲ್ಲರಿಗೂ ಹೊಸತು ಎನಿಸಬಹುದು. ಆದರೆ ಇದೀಗ ಸರ್ಕಾರ ಮತ್ತು ಪ್ರವಾಸೋದ್ಯಮದಲ್ಲಿರುವವರಲ್ಲಿ ಹೊಸ ಪದ ಶಬ್ದಕೋಶವನ್ನು ಪ್ರವೇಶಿಸಿದೆ. ಆ ಪದವೇ “ಲಸಿಕೆ ಪಾಸ್ ಪೋರ್ಟ್” (ವ್ಯಾಕ್ಸಿನ್ ಪಾಸ್ ಪೋರ್ಟ್). 

ಕೊರೋನಾ ವ್ಯಾಕ್ಸಿನ್ ಹಾಕಿರುವ ಸರ್ಟಿಫಿಕೇಟ್, ಇನ್ನಿತರ ವ್ಯಾಕ್ಸಿನೇಷನ್ ಡಾಕ್ಯುಮೆಂಟ್ ಗಳ ಮಾಹಿತಿಗಳೆಲ್ಲಾ ಸೇರಿ ಆಗಿರುವ ಡಿಜಿಟಲ್ ಸರ್ಟಿಫಿಕೇಟ್ ಹೆಸರೇ ಈ ವ್ಯಾಕ್ಸಿನ್ ಪಾಸ್ ಪೋರ್ಟ್. ಈ ಪಾಸ್ ಪೋರ್ಟ್ ಇದ್ದರೆ ನೀವು ಎಲ್ಲಾ ವ್ಯಾಕ್ಸಿನ್ ತೆಗೆದುಕೊಂಡಿದ್ದೀರಿ, ನಿಮ್ಮಲ್ಲಿ ಯಾವುದೇ ವೈರಸ್ ಗಳಿಲ್ಲ, ಹಾಗಾಗಿ ಆರಾಮಾಗಿ ಯಾವ ದೇಶಕ್ಕೂ ಹೋಗಬಹುದು ಎಂಬ ಮಾತನ್ನು ಹೇಳಲಾಗುತ್ತಿದೆ.

ಅಂದಹಾಗೆ ಇದು ಅಮೇರಿಕಾದ ಹೊಸ ಅಧ್ಯಕ್ಷ ‘ಜೋ ಬೈಡನ್” ಅವರ ಕನಸು ಎನ್ನಲಾಗಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಡೆನ್ಮಾರ್ಕ್ ಸರ್ಕಾರ  ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಡಿಜಿಟಲ್ ಪಾಸ್‌ಪೋರ್ಟ್ ಹೊರಡಿಸುವುದಾಗಿ ತಿಳಿಸಿದೆ. ಅಲ್ಲಿಗೆ ಒಂದೊಂದೇ ದೇಶಗಳು ವ್ಯಾಕ್ಸಿನ್ ಪಾಸ್ ಪೋರ್ಟ್ ಅನ್ನು ಕಡ್ಡಾಯಗೊಳಿಸುವ ಸಾಧ್ಯತೆ ತುಂಬಾ ಇದೆ.

ಕೆಲವು ವಾರಗಳಲ್ಲಿ, ಎತಿಹಾಡ್ ಏರ್ ವೇಸ್ ಮತ್ತು ಎಮಿರೇಟ್ಸ್ ಪ್ರಯಾಣಿಕರಿಗೆ ಡಿಜಿಟಲ್ ಟ್ರಾವೆಲ್ ಪಾಸ್ ಅನ್ನು ಬಳಸಲು ಪ್ರಾರಂಭಿಸುತ್ತದೆ. ಕೋವಿಡ್ -19 ಗೆ ಲಸಿಕೆ ಹಾಕಲಾಗಿದೆ ಎಂಬ ಸೂಚಕವಾಗಿ ಆ ಪಾಸ್ ಇರುತ್ತದೆ.

Image result for mask with world map free

ನೀವು ಇದನ್ನು ಇಷ್ಟಪಡಬಹುದು: 53ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಸಂಗೀತಾ ಬಹಲ್: ಸಾಧನೆಗೆ ವಯಸ್ಸಿನ ಹಂಗಿಲ್ಲ

ಬನ್ನಿ ಡಿಜಿಟಲ್ ಲಸಿಕೆ ಪಾಸ್ ಪೋರ್ಟ್ ಗಳ ಪ್ರಸ್ತುತ ಮಾಹಿತಿಗಳನ್ನು ಒಂದೊಂದಾಗಿ ತಿಳಿಯೋಣ..

*ಲಸಿಕೆ ಪಾಸ್ ಅಥವಾ ವ್ಯಾಕ್ಸಿನ್ ಪಾಸ್ ಪೋರ್ಟ್ ಎಂದರೇನು?

ವ್ಯಾಕ್ಸಿನೇಷನ್ ಪಾಸ್ ಅಥವಾ ವ್ಯಾಕ್ಸಿನ್ ಪಾಸ್ ಪೋರ್ಟ್ ನಿಮಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲಾಗಿದೆ ಎಂದು ಸಾಬೀತುಪಡಿಸುವ ಆಧಾರವಾಗಿದೆ. ಇದರರ್ಥ ವ್ಯಾಕ್ಸಿನ್ ಪಾಸ್ ಪೋರ್ಟ್ ಹೊಂದಿರುವ ವ್ಯಕ್ತಿಗೆ ವೈರಸ್ ಇಲ್ಲ ಎಂದು. ವೈರಸ್ ಇಲ್ಲ ಎಂಬ ಐಡೆಂಟಿಟಿ ಸಿಕ್ಕರೆ ಸುಲಭವಾಗಿ ಪ್ರಯಾಣಿಸಬಹುದು. ವಿಮಾನಯಾನ ಸಂಸ್ಥೆಗಳು, ಉದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳು ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಪ್ಲಿಕೇಶನ್ ಅಥವಾ ನಿಮ್ಮ ಡಿಜಿಟಲ್ ವ್ಯಾಲೆಟ್ ನ ಒಂದು ಭಾಗವಾಗಿ ನೀವು ಇದನ್ನು ಬಳಸಬಹುದು. 

ಇದನ್ನು ಈಗ ನಡೆಯುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪಾಸ್ ಪೋರ್ಟ್ ಹೊಂದಿದ್ದರೆ ವಿವಿಧ ದೇಶಗಳಿಗೆ ವಿಭಿನ್ನ ಪತ್ರಿಕೆಗಳನ್ನು ಮತ್ತು ವಿಭಿನ್ನ ಚೆಕ್‌ಪೋಸ್ಟ್‌ಗಳಲ್ಲಿ ವಿಭಿನ್ನ ದಾಖಲೆಗಳನ್ನು ಹೊರತೆಗೆಯದೆ ಜನರು ದೇಶಗಳ ನಡುವೆ ಪ್ರಯಾಣಿಸುವುದನ್ನು ಸುಲಭಗೊಳಿಸುತ್ತದೆ ಎನ್ನವಾಗಿದೆ..

ವ್ಯಾಕ್ಸಿನ್ ಪಡೆದ ಕುರಿತ ಎಲ್ಲಾ ಮಾಹಿತಿಯನ್ನು ಫೋನಲ್ಲೇ ಇದ್ದರೆ ಗಮನಾರ್ಹ ಸಮಯವನ್ನು ಉಳಿಸಲಾಗುತ್ತದೆ ಎಂಬ ಉದ್ದೇಶ ಇದರ ಹಿಂದೆ ಇದೆ.

*ಒಬ್ಬ ವ್ಯಕ್ತಿಗೆ ಈ ಲಸಿಕೆ ಪಾಸ್ ಅಥವಾ ಪಾಸ್ ಪೋರ್ಟ್ ಏಕೆ ಬೇಕು?

ಕೆಲವು ದೇಶಗಳಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇದರಲ್ಲಿ ಲಸಿಕೆ ಹಾಕಿದ ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಫ್ಲೋರಿಡಾದ ಟ್ಯಾಂಪಾದಲ್ಲಿ ಮುಂಬರುವ ಸೂಪರ್ ಬೌಲ್ ಎಲ್ವಿ ಕಾರ್ಯಕ್ರಮವನ್ನೇ ತೆಗೆದುಕೊಳ್ಳಿ, ಅಲ್ಲಿ ಲಸಿಕೆ ಪಡೆದವರಷ್ಟೇ ಭಾಗವಹಿಸಬಹುದು.

ಹಾಗಾಗಿ ಇನ್ನು ಮುಂದೆ ವ್ಯಾಕ್ಸಿನ್ ಪಾಸ್ ಪೋರ್ಟ್ ಕಡ್ಡಾಯವಾದರೆ ನೀವು ವಿದೇಶಕ್ಕೆ ಹೋಗುವುದೇ ಆದರೆ ವ್ಯಾಕ್ಸಿನ್ ಪಾಸ್ ಪೋರ್ಟ್ ಕಡ್ಡಾಯವಾಗಿ ಬಳಸಬೇಕು.

*ಇದು ಈ ಮೊದಲು ಜಾರಿಯಲ್ಲಿತ್ತೆ?

ಕೆಲವು ದೇಶಗಳನ್ನು ಪ್ರವೇಶಿಸಲು ನಿಮಗೆ ಲಸಿಕೆ ನೀಡಲಾಗಿದೆ ಎಂದು ಸಾಬೀತುಪಡಿಸುವುದು ಹೊಸ ಪರಿಕಲ್ಪನೆಯಲ್ಲ. ದಶಕಗಳಿಂದ, ಕೆಲವು ದೇಶಗಳಿಗೆ ಪ್ರಯಾಣಿಸುವ ಜನರು ಹಳದಿ ಜ್ವರ, ರುಬೆಲ್ಲಾ ಮತ್ತು ಕಾಲರಾ ಮುಂತಾದ ಕಾಯಿಲೆಗಳಿಗೆ ಲಸಿಕೆ ನೀಡಲಾಗಿದೆ ಎಂದು ಸಾಬೀತುಪಡಿಸಬೇಕಾಗಿತ್ತು. 

ಆಗಾಗ್ಗೆ, ಲಸಿಕೆ ಹಾಕಿದ ನಂತರ, ಪ್ರಯಾಣಿಕರು ಸಹಿ ಮಾಡಿದ ಮತ್ತು ಮುದ್ರೆ ಹಾಕಿದ ‘ಹಳದಿ ಕಾರ್ಡ್’ ಅನ್ನು ಪಡೆದರು, ಇದನ್ನು ಇಂಟರ್ನ್ಯಾಷನಲ್ ಸರ್ಟಿಫಿಕೇಟ್ ಆಫ್ ವ್ಯಾಕ್ಸಿನೇಷನ್ ಅಥವಾ ರೋಗನಿರೋಧಕ ಎಂದು ಕರೆಯಲಾಗುತ್ತದೆ. 

Image result for Passport

*ಲಸಿಕೆ ಪಾಸ್‌ಪೋರ್ಟ್‌ಗಳು ಡಿಜಿಟಲ್ ಆಗಿರಬೇಕೇ?

ಲಸಿಕೆ ಪಾಸ್‌ಪೋರ್ಟ್‌ಗಳು ಡಿಜಿಟಲ್ ಆಗಿರಬೇಕಾಗಿಲ್ಲ. ಆದರೆ ಅವು ಪ್ರಯಾಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈಗ “ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ ಮತ್ತು ನೂರು ಜನರಿಗೆ ಟ್ರಾವೆಲ್ ಪಾಸ್ ಇದೆ, 100 ಜನರು ಮತ್ತೊಂದು ಆರೋಗ್ಯ ಕೈಚೀಲವನ್ನು ಹೊಂದಿದ್ದಾರೆ, 50 ಮಂದಿ ಕಾಗದಗಳನ್ನು ಹೊಂದಿದ್ದಾರೆ ಮತ್ತು ಇನ್ನೂ 25 ಮಂದಿ ಕೆಲವು ರೀತಿಯ ಸರ್ಕಾರಿ ದಾಖಲೆಗಳನ್ನು ಹೊಂದಿದ್ದಾರೆ” ಇವೆಲ್ಲವನನ್ನೂ ಒಂದೊಂದಾಗಿ ಪರೀಕ್ಷಿಸುವುದು ಸಮಯ ವ್ಯರ್ಥ ಮಾಡಿದಂತೆ ಇದರಿಂದ ಈ ದಾಖಲೆಗಳ ಡಿಜಿಟಲೀಕರಣ ಮುಖ್ಯ ಎನ್ನುವುದು ತಜ್ಞರ ಅಭಿಪ್ರಾಯ.

* ಈ ಲಸಿಕೆ ಪಾಸ್‌ಪೋರ್ಟ್‌ಗಳಿಗೆ ಆಕ್ಷೇಪಣೆಗಳೇನು?

ಈ ಅಭಿವೃದ್ಧಿ ಗೂ ಸಹ ಬಹಳಷ್ಟು ಆಕ್ಷೇಪಣೆಗಳು ಹೊರಬೀಳುತ್ತಿದೆ.

1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಪಾಸ್‌ಪೋರ್ಟ್‌ಗಳು, ಜನನ ಪ್ರಮಾಣಪತ್ರಗಳು, ಚಾಲಕರ ಪರವಾನಗಿಗಳು ಅಥವಾ ರಾಷ್ಟ್ರೀಯ ಗುರುತಿನ ಚೀಟಿಗಳ ಕೊರತೆಯಿಂದಾಗಿ ತಮ್ಮ ಗುರುತನ್ನು ಸಾಬೀತುಪಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. 

ಲಸಿಕೆ ಸ್ಥಿತಿಯನ್ನು ತೋರಿಸುವ ಡಿಜಿಟಲ್ ದಾಖಲೆಗಳು ಅಸಮಾನತೆ ಮತ್ತು ಅಪಾಯವನ್ನು ಹೆಚ್ಚಿಸಬಹುದು ಮತ್ತು ಅನೇಕ ಜನರನ್ನು ಹಿಂದೇಟು ಹಾಕುವಂತೆ ಮಾಡುತ್ತದೆ ಎಂಬುದು ಅನೇಕರ ವಾದ. ಹಾಗಾಗಿ ವ್ಯಾಕ್ಸಿನ್ ಪಾಸ್ ಪೋರ್ಟ್ ಬೇಡವೇ ಬೇಡ ಎಂಬ ವಾದವೂ ಚಾಲ್ತಿಯಲ್ಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button