ದೂರ ತೀರ ಯಾನವಿಂಗಡಿಸದ

ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆಗೆ ಸಿದ್ಧ; ಇಲ್ಲಿ ಕಾರಿನ ಟೋಲ್ ಕೇವಲ 250 ರೂ.

ದೇಶದ ಅತಿ ಉದ್ದದ ಸಮುದ್ರ ಸೇತುವೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ಜನವರಿ 12 ರಂದು ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 

ಈ ಸೇತುವೆ ರಾಯಗಢ ಜಿಲ್ಲೆಯ ಪನ್ವೆಲ್ ಮತ್ತು ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಮತ್ತು ಪ್ರಯಾಣದ ಸಮಯ ಸುಮಾರು ಎರಡು ಗಂಟೆಗಳಿಂದ 15 ರಿಂದ 20 ನಿಮಿಷಗಳಿಗೆ ಇಳಿಯಲಿದೆ. ಸುಮಾರು 17,800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

Mumbai Trans Harbar link

ಮಹಾರಾಷ್ಟ್ರದ (Maharashtra )ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ  ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ( Mumbai Trans Harbar link)ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. MTHL 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ ʼಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುʼ ಎಂದು ಹೆಸರನ್ನು ಇಡಲಾಗುತ್ತದೆ.

2018ರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇಲ್ಲಿಯವರೆಗೂ ಎರಡು ಡೆಡ್‌ಲೈನ್‌ಗಳನ್ನು ಈ ಕಾಮಗಾರಿ ಮಿಸ್‌ ಮಾಡಿಕೊಂಡಿದೆ. 2022ರಲ್ಲಿ ಇದರ ನಿರ್ಮಾಣ ಮುಗಿಯಬೇಕಿತ್ತಾದರೂ, ಕೋವಿಡ್‌ ಕಾರಣದಿಂದಾಗಿ ಇದು ಮುಂದೂಡಿಕೆಯಾಗಿತ್ತು.

ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ್‌  ಈ ಸೇತುವೆಯ ಟೋಲ್‌ ದರ ನಿರ್ಧಾರ ಮಾಡಲಿದೆ. ಕಾರ್‌ಗಳಿಗೆ ಈ ಸೇತುವೆಯ ಮೇಲೆ ಏಕಮುಖ ಸಂಚಾರಕ್ಕೆ 250 ರೂಪಾಯಿ ನಿಗದಿ ಮಾಡಿದೆ.

Navi Mumbai

  ಪ್ರತಿವರ್ಷ ಅಂದಾಜು 70 ಸಾವಿರ ವಾಹನಗಳು ಇದರಲ್ಲಿ ಓಡಾಡುವ ಸಾಧ್ಯತೆ ಇದ್ದು, 100 ಕಿಲೋಮೀಟರ್‌ ವೇಗದಲ್ಲಿ ಈ ಮಾರ್ಗದಲ್ಲಿ ಸಾಗಬಹುದಾಗಿದೆ. ಅದಲ್ಲದೆ, ಮಾರ್ಗದ ಪೂರ್ತಿ ಎಐ(AI) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Mumbai

ಅಟಲ್‌ ಸೇತು(Atal Setu) ಎಂದು ಕರೆಸಿಕೊಳ್ಳುವ ಈ ಸೇತುವೆಯು ನವಿ ಮುಂಬೈ (Navi Mumbai ) ತುದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4B ಯಲ್ಲಿ ಸೆವ್ರಿ, ಶಿವಾಜಿ ನಗರ, ಜಸ್ಸಿ ಮತ್ತು ಚಿರ್ಲೆಯಲ್ಲಿ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ. ಇದು ರಾಜ್ಯದ ಎರಡು ದೊಡ್ಡ ನಗರಗಳಾದ ಮುಂಬೈ (Mumbai )ಹಾಗೂ ಪುಣೆಗೆ (Pune )ಸಂಪರ್ಕಿಸುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಲಿಂಕ್‌ ಆಗಿಯೂ ಸಂಪರ್ಕ ಕಲ್ಪಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button