Moreಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಭಾರತದ ಐಷಾರಾಮಿ ರೈಲು ಈಗ ಪ್ರಿ ವೆಡ್ಡಿಂಗ್‌ ಶೂಟ್‌, ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಲಭ್ಯ;

ಇತ್ತೀಚಿನ ದಿನಗಳಲ್ಲಿ ಜನರು ಪ್ರಿ ವೆಡ್ಡಿಂಗ್‌ ಶೂಟ್‌, ಡೆಸ್ಟಿನೇಷನ್‌ ವೆಡ್ಡಿಂಗ್‌ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ತರತರದ ಉಡುಪು ಧರಿಸಿ, ತಮ್ಮ ಕನಸಿನ ಮದುವೆಯನ್ನು ತಮ್ಮಿಷ್ಟದ ಜಾಗದಲ್ಲಿ ಮಾಡಿಸಿಕೊಳ್ಳಬೇಕೆಂಬುದು ಎಲ್ಲಾ ವಧುವರರ ಆಸೆಯಾಗಿರುತ್ತದೆ.

ನೀವೂ ಕೂಡಾ ನಿಮ್ಮ ಪ್ರಿ ವೆಡ್ಡಿಂಗ್ ಫೋಟೋಶೂಟ್ (Pre wedding photo shoot) ಅಥವಾ ವಿವಾಹವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಬೇಕೆಂಬ ಆಸೆ ಇದ್ದರೆ, ಈ ಐಷಾರಾಮಿ ರೈಲು (Luxurious Train) ನಿಮ್ಮ ಉತ್ತಮ ಆಯ್ಕೆ ಆಗಲಿದೆ.

ಇತ್ತೀಚಿನ ವರದಿ ಪ್ರಕಾರ, ಅರಮನೆ ಕೋಟೆಗಳ ನಾಡು ರಾಜಸ್ಥಾನ (Rajasthan) ರಾಜ್ಯವು ಡೆಸ್ಟಿನೇಷನ್ ವೆಡ್ಡಿಂಗ್, ಪ್ರಿ ವೆಡ್ಡಿಂಗ್ ಶೂಟ್ ಅಥವಾ ಕಾರ್ಪೋರೇಟ್ ಸಭೆಗಳು ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅವಕಾಶ ನೀಡಲು ಭಾರತದ ಐಷಾರಾಮಿ ರೈಲನ್ನು ಆಯೋಜಿಸಲು ಅನುಮೋದನೆ ನೀಡಿದೆ.

ಭಾರತದ ಅತ್ಯಂತ ಐಷಾರಾಮಿ ರೈಲುಗಳಲ್ಲಿ ಒಂದಾದ ಪ್ಯಾಲೇಸ್ ಆನ್ ವೀಲ್ಸ್‌ ಅನ್ನು (Palace on Wheels) ಇಂತಹ ವಿವಿಧ ಕಾರ್ಯಕ್ರಮಗಳಿಗಾಗಿ ಬಳಸಲು ಯೋಚಿಸಲಾಗಿದೆ.

ವರದಿಗಳ ಪ್ರಕಾರ, ರಾಜಸ್ಥಾನ ಸರ್ಕಾರವು ಈ ಯೋಜನೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಇರಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಭಾಗವಾಗಿ ಆಯೋಜಿಸಲಾಗಿದೆ.

ಪ್ಯಾಲೇಸ್ ಆನ್ ವೀಲ್ಸ್‌ ರೈಲು ಅದರ ಸೌಂದರ್ಯ ಮತ್ತು ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಸದ್ಯದಲ್ಲೇ, ಡೆಸ್ಟಿನೇಶನ್ ವೆಡ್ಡಿಂಗ್‌ಗಳು(Destination wedding), ಕಾರ್ಪೊರೇಟ್ ಮೀಟಿಂಗ್‌ಗಳು (Corporate meetings) ಮತ್ತು ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅವಕಾಶ ನೀಡಲು ಬಳಸಲಾಗುತ್ತದೆ.

ವಿವಾಹ ಕಾರ್ಯಕ್ರಮಗಳಿಗೆ ಈ ರೈಲು ಅವಕಾಶ ನೀಡುವುದರಿಂದ ರಾಜಸ್ಥಾನದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವುದಲ್ಲದೇ, ರಾಜಸ್ಥಾನಿ ಕಲೆ, ಸಂಸ್ಕೃತಿ ಮತ್ತು ವಿವಾಹ ಸಂಪ್ರದಾಯಗಳ ಬಗ್ಗೆ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಗೊತ್ತು ಮಾಡಿಸುವ ಉದ್ದೇಶವನ್ನು ಹೊಂದಿದೆ.

ವಿವಾಹದ ಋತು ಆರಂಭವಾಗುವ ಸಂದರ್ಭದಲ್ಲಿ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವ ಆಲೋಚನೆಯಲ್ಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸರ್ಕಾರ ಪ್ರಾಥಮಿಕ ಅನುಮೋದನೆಯನ್ನು ನೀಡಿದೆ.

ಈ ಯೋಜನೆಯ ಆರಂಭದ ನಿಖರವಾದ ದಿನಾಂಕ ಮತ್ತು ಪ್ಯಾಕೇಜ್ ನ ಬೆಲೆಯನ್ನು ಇನ್ನೂ ನಿರ್ಧಿಸಬೇಕಿದೆ.

ಪ್ರಧಾನ ಕಾರ್ಯದರ್ಶಿ (ಪ್ರವಾಸೋದ್ಯಮ) ಗಾಯತ್ರಿ ರಾಥೋಡ್ ಪ್ರಕಾರ, ಇದಕ್ಕಾಗಿ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಈ ಯೋಜನೆಯ ಕಾರ್ಯಕ್ರಮಗಳನ್ನು ರಾಜಸ್ಥಾನ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ (RTDC) ನಿರ್ವಹಿಸುತ್ತದೆ.

ಇದು ಪ್ಯಾಲೇಸ್ ಆನ್ ವೀಲ್ಸ್ ಈವೆಂಟ್‌ಗಳಿಗೆ ಅನನ್ಯ ಮತ್ತು ಅದ್ದೂರಿ ಸೆಟ್ಟಿಂಗ್‌ಗಳನ್ನು ನೀಡುತ್ತದೆ.

ಪ್ರಸ್ತುತ ರಾಜಸ್ಥಾನದಲ್ಲಿ 120 ಕ್ಕೂ ಹೆಚ್ಚು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳು ಭವ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳಾಗಿವೆ. ದೇಶದ 75% ಪಾರಂಪರಿಕ ಆಸ್ತಿಗಳನ್ನು ಹೊಂದಿರುವ ರಾಜ್ಯ ಇದಾಗಿದೆ.

ಈ ಉಪಕ್ರಮದಿಂದ ರಾಜಸ್ಥಾನವನ್ನು ದೇಶದ ಪ್ರಮುಖ ವಿವಾಹ ತಾಣವಾಗಿ ಸ್ಥಾನ ಪಡೆಯುವುದಲ್ಲದೇ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುವ ತಾಣವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button