Moreಕಾಡಿನ ಕತೆಗಳುವಿಂಗಡಿಸದ

ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗಾಗಿ ವಿಶ್ವದಾದ್ಯಂತ ಇರುವ ವನ್ಯಜೀವಿ ಅಭಯಾರಣ್ಯಗಳು:

ಪ್ರತಿವರ್ಷ ಮಾರ್ಚ್ 3ನೇ ದಿನಾಂಕದಂದು ವಿಶ್ವದಾದ್ಯಂತ ವನ್ಯಜೀವಿ ದಿನವನ್ನು (World Wildlife Day) ಆಚರಿಸಲಾಗುತ್ತದೆ.

ವನ್ಯಜೀವಿಗಳ (Wildlife) ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ವಿಶ್ವ ಸಂಸ್ಥೆ 2014ರಲ್ಲಿ ಆರಂಭಿಸಿತು.

ವನ್ಯಜೀವಿಗಳ ಮತ್ತು ಅಳಿವಿನಂಚಿನಲ್ಲಿರುವ (Endangered) ಪ್ರಾಣಿ ಪ್ರಭೇದಗಳ ಸಂರಕ್ಷಣೆಗಾಗಿ ವಿಶ್ವದಾದ್ಯಂತ ಹಲವಾರು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಜಾರಿಗೆ ಬಂದವು.

ಇದರ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವನ್ಯಜೀವಿಗಳಿಗಾಗಿ ಸ್ಥಾಪನೆಗೊಂಡ ಮೀಸಲು ಅಭಯಾರಣ್ಯಗಳು ಮತ್ತು ಉದ್ಯಾನವನಗಳು.

ಇವುಗಳ ಸ್ಥಾಪನೆಗಳ ಪರಿಣಾಮವಾಗಿ ಇಂದಿಗೂ ಹಲವಾರು ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ನೋಡಲು ನಮಗೆ ಸಾಧ್ಯವಾಗುತ್ತಿದೆ.

ವಿಶ್ವದಾದ್ಯಂತ ಇರುವ ಅಭಯಾರಣ್ಯಗಳು ಅದೆಷ್ಟೋ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿ ಆಶ್ರಯವನ್ನು ನೀಡುತ್ತಿದೆ.

ಅವುಗಳಲ್ಲಿ ಕೆಲವು ವನ್ಯಜೀವಿ ಅಭಯಾರಣ್ಯಗಳ ಕುರಿತು ಮಾಹಿತಿ ಇಲ್ಲಿದೆ.

1.ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಭಾರತ: ಭಾರತ ಉಪಖಂಡದಲ್ಲಿ ಪ್ರಮುಖ ವನ್ಯಜೀವಿ ಮೀಸಲು ಪ್ರದೇಶಗಳಲ್ಲಿ ಒಂದಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವು ವಿವಿಧ ಸಸ್ತನಿ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ.

kaziranga national park

430 ಚದರ ಕಿಮೀ ನಷ್ಟು ವ್ಯಾಪಿಸಿರುವ ಈ ಪ್ರದೇಶವು ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧವಾಗಿದೆ.

ಇದಲ್ಲದೇ ಪೂರ್ವ ಜೌಗು ಜಿಂಕೆಗಳು ಮತ್ತು ಕಾಡು ಏಷಿಯಾಟಿಕ್ ನೀರಿನ ಎಮ್ಮೆಗಳನ್ನು ಹೆಚ್ಚಾಗಿ ಹೊಂದಿದೆ.

2.ಎಲಿಫೆಂಟ್ ನೇಚರ್ ಪಾರ್ಕ್, ಥೈಲ್ಯಾಂಡ್:

ಇದನ್ನು 1990 ರಲ್ಲಿ ಸಾಂಗ್ಡುಯೆನ್ ಲೆಕ್ ಚೈಲರ್ಟ್ ಸ್ಥಾಪಿಸಿದರು. ಇದು ಆನೆಗಳ ಅಭಯಾರಣ್ಯವಾಗಿದ್ದು, ತೊಂದರೆಗೀಡಾದ ಆನೆಗಳಿಗೆ ಆಶ್ರಯ ತಾಣವಾಗಿದೆ.

Elephant nature park thailand

ಚೈಲರ್ಟ್ 1996ರಲ್ಲಿ ಆದ ತೇಗ ಮರದ ಕಡಿಯುವಿಕೆಯ ನಂತರ ಹಲವಾರು ಆನೆಗಳನ್ನು ಪ್ರವಾಸೋದ್ಯಮ ಮತ್ತು ಭಿಕ್ಷೆಗಾಗಿ ಮಾಡಲಾಯಿತು. ಆ ಸಮಯದಲ್ಲಿ ಹಲವಾರು ಆನೆಗಳನ್ನು ಇಲ್ಲಿ ಸಂರಕ್ಷಿಸಲಾಯಿತು.

2016ರ ಹೊತ್ತಿಗೆ ಇಲ್ಲಿ 200 ಆನೆಗಳನ್ನು ರಕ್ಷಿಸಲಾಗಿತ್ತು. ಮತ್ತು ಥೈಲ್ಯಾಂಡ್‌ನಲ್ಲಿ ಇದೇ ರೀತಿಯ ಉದ್ಯಾನ ಸ್ಥಾಪಿಸಲು ಪ್ರೇರೇಪಣೆ ನೀಡಿತು.

3. ಚೆಂಗ್ಡು ರಿಸರ್ಚ್ ಬೇಸ್ ಆಫ್ ಜೈಂಟ್ ಪಾಂಡ ಬ್ರೀಡಿಂಗ್, ಚೀನಾ:

247 ಎಕರೆಯಷ್ಟು ವ್ಯಾಪಿಸಿರುವ ಈ ಅರಣ್ಯವು ದೈತ್ಯ ಪಾಂಡಾಗಳು ಮತ್ತು ಕೆಂಪು ಪಾಂಡಾಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಚೀನೀ ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗಾಗಿ ಸಮರ್ಪಿಸಲಾಗಿದೆ.

Chengdu research base of giant panda breeding, China

ಈ ಉದ್ಯಾನವು ಗಮನಾರ್ಹ ಪರಿಸರಕ್ಕೆ ಹೆಸರುವಾಸಿಯಾಗಿದೆ. ಎತ್ತರ ಪರ್ವತಗಳು, ಸೊಂಪಾದ ಮರಗಳು, ನದಿ ಮತ್ತು ಅನನ್ಯ ವನ್ಯಜೀವಿ ಸಂಪತ್ತಿನಿಂದಾಗಿ ಇದು ಚೀನಾದ ರಾಷ್ಟ್ರೀಯ ಸಂಪತ್ತುಗಳ ಸಂರಕ್ಷಣೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

4. ಗ್ಯಾಲಪಗೋಸ್ ರಾಷ್ಟ್ರೀಯ ಉದ್ಯಾನವನ, ಈಕ್ವೆಡಾರ್:

ಈ ಉದ್ಯಾನವನವು 1959ರಲ್ಲಿ ಸ್ಥಾಪನೆಯಾಗಿದ್ದು, ಈಕ್ವೆಡಾರ್‌ನ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ. ಹಾಗೂ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿಯೂ ಇದೆ.

Galapagos national park, Ecuador

ದೈತ್ಯ ಆಮೆಗಳು, ಸಮುದ್ರ ಇಗುವಾನಾಗಳು ಮತ್ತು ವೈವಿಧ್ಯಮಯ ಪಕ್ಷಿ ಪ್ರಭೇದಗಳ ರಕ್ಷಣೆಯಲ್ಲಿ ಈ ಉದ್ಯಾನವನ ಪ್ರಮುಖ ಪಾತ್ರ ವಹಿಸುತ್ತದೆ.

5.ಬೊನೊರೊಂಗ್ ವನ್ಯಜೀವಿ ಅಭಯಾರಣ್ಯ, ಆಸ್ಟ್ರೇಲಿಯಾ:

1981 ರಲ್ಲಿ ಸ್ಥಾಪಿಸಲಾದ ಈ ಉದ್ಯಾನವನವು ಅನೇಕ ಗಾಯಗೊಂಡ ಮತ್ತು ಅನಾಥ ಸ್ಥಳೀಯ ವನ್ಯಜೀವಿಗಳ ಪುನರ್ವಸತಿ ಮತ್ತು ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ.

Bonorong wildlife sanctuary, Australia

ಈ ಅಭಯಾರಣ್ಯವು ಅಳಿವಿನಂಚಿನಲ್ಲಿರುವ ಟ್ಯಾಸ್ಮೆನಿಯನ್ ಬೆಟಾಂಗ್, ಟ್ಯಾಸ್ಮೆನಿಯನ್ ಡೆವಿಲ್, ಈಸ್ಟರ್ನ್ ಕ್ವೊಲ್ ಮತ್ತು ಟ್ಯಾಸ್ಮೆನಿಯನ್ ಪಾಡೆಮೆಲನ್ ನಂತಹ ಜಾತಿಗಳಿಗೆ ಸುರಕ್ಷಿತ ಧಾಮವಾಗಿ ಕಾರ್ಯನಿರ್ವಹಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button