ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ‘ಗಿರ್ಮಿಟ್’ ರುಚಿ ನೋಡಿದ್ದೀರಾ!

‘ಗಿರ್ಮಿಟ್’, ಉತ್ತರ ಕರ್ನಾಟಕ ಮಂದಿಯ ನೆಚ್ಚಿನ ಖಾದ್ಯ. ಅದರ ಜೊತೆಗೆ ಚಹಾ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು! ಈ ಗಿರ್ಮಿಟ್ ಅನ್ನು ಮನೆಯಲ್ಲಿಯೇ ಫಟಾಫಟ್ ಅಂತ ತಯಾರಿಸಬಹುದು.
- ಮಹಾಲಕ್ಷ್ಮೀ. ಎ. ಜೆ
ಚಹಾ ಕುಡಿಯುವ ಸಮಯದಲ್ಲಿ ಎಲ್ಲರು ಕೂಡ ಏನನ್ನಾದರೂ ತಿನ್ನಲು ಬಯಸುತ್ತಾರೆ ಆದರೆ ಹೆಚ್ಚಿನವರು ಅಂಗಡಿಯಿಂದ ತಂದ ತಿಂಡಿಗಳನ್ನು ತಿನ್ನುತ್ತಾರೆ. ಮನೆಯಲ್ಲಿ ತಿಂಡಿ ಮಾಡಿ ತಿನ್ನುವವರ ಸಂಖ್ಯೆ ಕಡಿಮೆ.
ಇಂತಹ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹೊರಗೆ ಹೋಗುವ ಅವಕಾಶ ಕಡಿಮೆಯಿರುವುದರಿಂದ ಮನೆಯಲ್ಲೆ ಕೂತು ವೇಗವಾಗಿ ಸುಲಭದಲ್ಲಿ ಮಾಡುವ ಉತ್ತರ ಕನ್ನಡದ ಪ್ರಸಿದ್ಧ ಚಹಾ ತಿಂಡಿ ಅಥವ ಎಲ್ಲಾ ಅಂಗಡಿಗಳಲ್ಲಿ ಸಿಗುವಂತಹ ಗಿರ್ಮಿಟ್ ತಿನಿಸನ್ನು ಸುಲಭವಾಗಿ ಮನೆಯಲ್ಲಿ ಮಾಡಬಹುದು.

ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು:
*ಕೊಬ್ಬರಿ ಎಣ್ಣೆ ಅಥವಾ ನೀವು ಬಳಸುವ ಅಡುಗೆ ಎಣ್ಣೆ.
*ಕಾರದ ಪುಡಿ.
*ಉಪ್ಪು.
*ಈರುಳ್ಳಿ.
*ಟೊಮೆಟೊ.
*ನಿಂಬೆ ಹಣ್ಣಿನ ರಸ ಅಥವಾ ಹುಣಸೆ ಹಣ್ಣು ನೆನಸಿದ ನೀರು.
*ಮಂಡಕ್ಕಿ.
*ಕೊತ್ತಂಬರಿ ಸೊಪ್ಪು.
*ಸೇವ್ ಅಥವಾ ಮನೆಯಲ್ಲಿ ಇರುವ ಚೌ ಚೌ
ನೀವುಇದನ್ನುಇಷ್ಟಪಡಬಹುದು: ಮಳೆಗಾಲದಲ್ಲಿ ಬಾಯಿ ಚಪ್ಪರಿಸಲು ಇದನ್ನು ಟ್ರೈ ಮಾಡಿ
ಗಿರ್ಮಿಟ್ ಮಾಡುವ ವಿಧಾನ :
ಗಿರ್ಮಿಟ್ ಮಾಡಲು ಎಷ್ಟು ಜನ ಇದ್ದಾರೊ ನೋಡಿಕೊಂಡು ಸಾಮಗ್ರಿಗಳನ್ನು ಹಾಕಬೇಕು. ಮೊದಲಿಗೆ ನೀವು ತೆಗೆದುಕೊಂಡಿರುವ ಪಾತ್ರೆಗೆ ಎಣ್ಣೆ ಹಾಕಬೇಕು ನಂತರ ಕಾರದ ಪುಡಿ, ಉಪ್ಪು, ಟೊಮೆಟೊ, ಈರುಳ್ಳಿ, ನಿಂಬೆ ರಸ ಅಥವ ಹುಣಸೆ ಹಣ್ಣಿನ ರಸವನ್ನು ಹಾಕಿ ಕಲಸಿ, ಮಂಡಕ್ಕಿ ಹಾಕಿ ಮತ್ತೊಮ್ಮೆ ಕಲಸಬೇಕು.
ಮಂಡಕ್ಕಿಯನ್ನು ತಟ್ಟೆಗೆ ಹಾಕಿ, ಕೊತ್ತಂಬರಿ ಸೊಪ್ಪು ಹಾಗೂ (ಈರುಳ್ಳಿ ಬೇಕೆನ್ನಿಸಿದರೆ ಹಾಕಬಹುದು) ಸೇವ್ ಅನ್ನು ಅದರ ಮೇಲೆ ಹಾಕಿದರೆ ಚಹಾದ ಸಮಯದಲ್ಲಿ ಗರಿಗರಿಯಾದ ಗಿರ್ಮಿಟ್ ತಿನ್ನಬಹುದು.

ಹೊರಗಿನಿಂದ ಖರೀದಿಸಿ ತರುವ ತಿಂಡಿಗಳು ಆರೋಗ್ಯಕ್ಕೆ ಉತ್ತಮವಲ್ಲ. ಅದನ್ನು ಮಿತಿಯಲ್ಲಿ ತಿನ್ನಬೇಕು. ಬಾಯಿ ಚಪಲಕ್ಕಾಗಿ ಅಲ್ಲ. ಗಿರ್ಮಿಟ್ ರೀತಿಯ ತಿಂಡಿಗಳು ತಯಾರಿಸಲು ಸುಲಭ. ಮನೆಯಲ್ಲಿಯೇ ತಯಾರಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಉತ್ತಮ ಮತ್ತು ರುಚಿಯೂ ಅಚ್ಚುಕಟ್ಟಾಗಿರುತ್ತದೆ.
ಗಿರ್ಮಿಟ್ ಒಂದೇ ಉತ್ತರ ಕರ್ನಾಟಕ ಮಂದಿಯ ಪ್ರಿಯ ತಿನಿಸು ಅಲ್ಲ. ಈ ಪಟ್ಟಿಯಲ್ಲಿ ಜೋಳದ ರೊಟ್ಟಿ, ಚಟ್ನಿಪುಡಿ, ಜುನಕ ಹೀಗೆಯೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಾಧ್ಯವಾದರೆ ಇವೆಲ್ಲವನ್ನೂ ಸವಿದು ನೋಡಿ!
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ