ವಿಂಗಡಿಸದ

ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ವಿಜಯಪುರ ಮತ್ತು ಬೆಳಗಾವಿಗೆ ವಿಶೇಷ ರೈಲು ಸಂಚಾರ:

ಸಾಲು ಸಾಲು ರಜೆಗಳಿರುವುದರಿಂದ ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುವುದು ಸಹಜ. ಈ ಹಿನ್ನೆಲೆಯಿಂದ ಉಂಟಾಗುವ ದಟ್ಟಣೆಯನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆಯು ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಿಗೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಆ ವಿಶೇಷ ರೈಲುಗಳ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.

ಉಜ್ವಲಾ ವಿ.ಯು

ಬೆಂಗಳೂರಿನಿಂದ ವಿಜಯಪುರಕ್ಕೆ ಇರುವ ವಿಶೇಷ ರೈಲಿನ ಸಂಖ್ಯೆ ಮತ್ತು ವೇಳೆ:

SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 06231/06232)

Deepavali special Train from Bengaluru to Vijayapur

SMVT ಬೆಂಗಳೂರು-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06231): ಈ ರೈಲು ನವೆಂಬರ್ 10, 2023 ರಂದು SMVT ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10:55 ಕ್ಕೆ ವಿಜಯಪುರವನ್ನು ತಲುಪುತ್ತದೆ. ಈ ವಿಶೇಷ ರೈಲು ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರ್ ,ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ,ಗದಗ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮಾರ್ಗವಾಗಿ ವಿಜಯಪುರವನ್ನು ತಲುಪುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ವಿಜಯಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ರೈಲು ನಂ.06232) ವಿಜಯಪುರದಿಂದ ನವೆಂಬರ್ 14 ರಂದು ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 09:30 ಕ್ಕೆ SMVT ಬೆಂಗಳೂರಿಗೆ ಆಗಮಿಸುತ್ತದೆ.

ಬೆಂಗಳೂರಿನಿಂದ ಬೆಳಗಾವಿಗೆ ಇರುವ ವಿಶೇಷ ರೈಲಿನ ಸಂಖ್ಯೆ ಮತ್ತು ವೇಳೆ:

SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್): – (ರೈಲು ಸಂಖ್ಯೆ. 06585/06586)

Deepavali Special train from Bengaluru to Belagavi

SMVT ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06585): ನವೆಂಬರ್ 10, 2023 ರಂದು SMVT ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಬೆಳಗಾವಿಗೆ ಆಗಮಿಸುತ್ತದೆ. ರೈಲು ತುಮಕೂರು, ಅರಸೀಕೆರೆ,ಬೀರೂರು,ದಾವಣಗೆರೆ,ಹರಿಹರ,ವೇರಿ,ಹುಬ್ಬಳ್ಳಿ ,ಧಾರವಾಡ, ಲೋಂಡಾ ಮಾರ್ಗವಾಗಿ ಬೆಳಗಾವಿಯನ್ನು ತಲುಪುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ಬೆಳಗಾವಿ-SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06586) ನವೆಂಬರ್ 14, 2023 ರಂದು ಸಂಜೆ 6:50 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ SMVT ಬೆಂಗಳೂರಿಗೆ ಆಗಮಿಸುತ್ತದೆ.

ಈ ಎರಡೂ ವಿಶೇಷ ರೈಲುಗಳು ಒಂದು AC-2 ಶ್ರೇಣಿ, ಮೂರು AC-3 ಶ್ರೇಣಿ, ಎಂಟು ಸ್ಲೀಪರ್ ವರ್ಗ, ಎರಡು ಸಾಮಾನ್ಯ ಎರಡನೇ ದರ್ಜೆ ಮತ್ತು ಎರಡು ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು/ಅಂಗವಿಕಲ ಸ್ನೇಹಿ ವಿಭಾಗಗಳು ಸೇರಿದಂತೆ ಒಟ್ಟು ಹದಿನಾರು ಕೋಚ್‌ಗಳನ್ನು ಒಳಗೊಂಡಿರುತ್ತವೆ.

ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೌಲಭ್ಯವನ್ನು ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾತ್ರವಲ್ಲದೇ, ಮೈಸೂರು, ಮಂಗಳೂರು, ಭುವನೇಶ್ವರ, ತಮಿಳುನಾಡು ಸೇರಿದಂತೆ ಕೆಲವು ಅನ್ಯ ರಾಜ್ಯಗಳಲ್ಲಿಯೂ ಈ ವಿಶೇಷ ರೈಲಿನ ಸೌಲಭ್ಯವನ್ನು ರೈಲ್ವೇ ಇಲಾಖೆ ಕಲ್ಪಿಸಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button