Moreವಿಂಗಡಿಸದ

ಶಿವರಾತ್ರಿಯಿಂದ ಹೋಳಿಯವರೆಗೆ; ಮಾರ್ಚ್ ತಿಂಗಳ ಮಹತ್ವದ ದಿನಗಳ ಕುರಿತು ಇಲ್ಲಿದೆ

2024ರ ಮಾರ್ಚ್ (March 2024) ನಲ್ಲಿ ನಾವು ಕೆಲವು ಪ್ರಮುಖ ಹಬ್ಬಗಳಾದ ಮಹಾಶಿವರಾತ್ರಿ, ಹೋಳಿ, ರಂಗ ಪಂಚಮಿ, ರಂಜಾನ್ ಆರಂಭದಂತಹ ಹಬ್ಬಗಳನ್ನು ಆಚರಿಸಲಿದ್ದೇವೆ.

ಜೊತೆಗೆ ಅಂತರಾಷ್ಟ್ರೀಯ ಮಹಿಳಾ ದಿನ, ವಿಶ್ವ ವನ್ಯಜೀವಿ ದಿನಯಂತಹ ರಾಷ್ಟ್ರೀಯ ಮಹತ್ವದ ದಿನಗಳಿಗೂ ಮಾರ್ಚ್ ಸಾಕ್ಷಿಯಾಗಲಿದೆ. ಮಾರ್ಚ್ ತಿಂಗಳು ಚಳಿಗಾಲದ ಅಂತ್ಯವನ್ನು ವಸಂತ ಕಾಲದ ಆರಂಭವನ್ನು ಸೂಚಿಸುತ್ತದೆ.

ಈ ಲೇಖನವು ಮಾರ್ಚ್ 2024 ರ ರಾಷ್ಟ್ರೀಯ (National days) ಮತ್ತು ಅಂತರಾಷ್ಟ್ರೀಯ (International days) ಮಹತ್ವದ ಕ್ಯಾಲೆಂಡರ್ ಅನ್ನು ತಿಳಿಸಿಕೊಡುವ ಜೊತೆಗೆ ಈ ರಜಾದಿನಗಳಲ್ಲಿ ನಿಮ್ಮ ಪ್ರವಾಸವನ್ನು ನೀವು ಹೇಗೆ ಯೋಜಿಸಬಹುದು ಎಂಬುದರ ಕುರಿತು ಒಳನೋಟವನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಮಾರ್ಚ್ 01, 2024: (ಶುಕ್ರವಾರ) ಶೂನ್ಯ ತಾರತಮ್ಯ ದಿನ, ವಿಶ್ವ ನಾಗರಿಕ ರಕ್ಷಣಾ ದಿನ.

ಮಾರ್ಚ್ 03, 2024: (ಭಾನುವಾರ) ವಿಶ್ವ ವನ್ಯಜೀವಿ ದಿನ, ವಿಶ್ವ ಶ್ರವಣ ದಿನ

ಮಾರ್ಚ್ 4, 2024: (ಸೋಮವಾರ) ರಾಷ್ಟ್ರೀಯ ಸುರಕ್ಷತಾ ದಿನ

ಮಾರ್ಚ್ 6, 2024: (ಬುಧವಾರ) ಮಹರ್ಷಿ ದಯಾನಂದ ಸರಸ್ವತಿ ಜಯಂತಿ

ಮಾರ್ಚ್ 8, 2024: (ಶುಕ್ರವಾರ) ಮಹಾ ಶಿವರಾತ್ರಿ, ಅಂತರಾಷ್ಟ್ರೀಯ ಮಹಿಳಾ ದಿನ

ಮಾರ್ಚ್ 11, 2024: (ಸೋಮವಾರ) ರಂಜಾನ್

ಮಾರ್ಚ್ 15 2024: (ಶುಕ್ರವಾರ) ವಿಶ್ವ ನಿದ್ರಾ ದಿನ

ಮಾರ್ಚ್ 20, 2024: (ಬುಧವಾರ) ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್

ಮಾರ್ಚ್ 21, 2024: (ಗುರುವಾರ) ವಿಶ್ವ ಅರಣ್ಯ ದಿನ.

ಮಾರ್ಚ್ 22, 2024: (ಶುಕ್ರವಾರ) ವಿಶ್ವ ಜಲ ದಿನ, ಬಿಹಾರ ದಿವಸ್

ಮಾರ್ಚ್ 23, 2024: (ಶನಿವಾರ) ವಿಶ್ವ ಹವಾಮಾನ ದಿನ

ಮಾರ್ಚ್ 24, 2024: (ಭಾನುವಾರ) ವಿಶ್ವ ಕ್ಷಯರೋಗ (ಟಿಬಿ) ದಿನ, ಹೋಲಿಕಾ ದಹನ

ಮಾರ್ಚ್ 25, 2024: (ಸೋಮವಾರ) ಹೋಳಿ

ಮಾರ್ಚ್ 27, 2024: (ಬುಧವಾರ) ವಿಶ್ವ ರಂಗಭೂಮಿ ದಿನ

ಮಾರ್ಚ್ 29, 2024: (ಶುಕ್ರವಾರ) ಗುಡ್ ಫ್ರೈಡೇ

ಮಾರ್ಚ್ 30, 2024: (ಶನಿವಾರ) ರಾಜಸ್ಥಾನ ದಿನ

ಮಾರ್ಚ್ 31, 2024: (ಭಾನುವಾರ) ಈಸ್ಟರ್

ಮಾರ್ಚ್ ತಿಂಗಳ ರಜಾದಿನಗಳ ಮತ್ತು ಮಹತ್ವ ದಿನಗಳ ಮಾಹಿತಿ ಇಲ್ಲಿದೆ. ಈ ಕ್ಯಾಲೆಂಡರ್ ಗೆ ಅನುಗುಣವಾಗಿ ನಿಮ್ಮ ಯೋಜನೆಗಳನ್ನು ರೂಪಿಸಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button