ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಸ್ವಾತಂತ್ರ್ಯ ದಿನದಂದು ಜೋಳದರಾಶಿ ಬೆಟ್ಟದಲ್ಲಿ ಹಾರಾಡಲಿದೆ ತಿರಂಗ ಧ್ವಜ

ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಜೋಳದರಾಶಿ ಬೆಟ್ಟದಲ್ಲಿ ತಿರಂಗ ಧ್ವಜವನ್ನು ಹಾರಿಸಲಾಗುತ್ತಿದೆ. ಜೋಳದರಾಶಿ ಬೆಟ್ಟವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಯೋಜನೆಯನ್ನೂ ಹೊಂದಿದೆ.

  • ಮಧುರಾ ಎಲ್ ಭಟ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶದ ಮೂಲೆ ಮೂಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ನಮ್ಮದೇ ರಾಜ್ಯದ ವಿಜಯನಗರವೂ ಇದಕ್ಕೆ ಹೊರತಲ್ಲ.

ವಿಜಯನಗರದಲ್ಲಿ ಈ ಬಾರಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಜಿಲ್ಲೆಯ ಪ್ರಧಾನ ಕಛೇರಿಯಾದ ಹೊಸಪೇಟೆಯಲ್ಲಿನ ಜೋಳದರಾಶಿ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ .ಈ ಧ್ವಜದ ವಿಶೇಷತೆಯೇನೆಂದರೆ, ಭಾನುವಾರ ಮತ್ತು ಸೋಮವಾರ ಹೊಸಪೇಟೆಗೆ ಭೇಟಿ ನೀಡುವ ಪ್ರವಾಸಿಗರು, ನಗರದ ಯಾವುದೇ ಮೂಲೆಯಿಂದಲೂ ಬೆಟ್ಟದ ಮೇಲಿನ ಈ ಧ್ವಜವನ್ನು ನೋಡಬಹುದಾಗಿದೆ.

75th Independence Day Tricolour Flag  Joladaraashi Hills Vijayanagara District

ಹಾಗೂ ಜೋಳದರಾಶಿ ಬೆಟ್ಟವನ್ನು ಪ್ರವಾಸೋದ್ಯಮದ ಸ್ಥಳವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ತ್ರಿವರ್ಣ ಧ್ವಜವನ್ನು ಅಲ್ಲಿ ಹಾರಿಸಲಾಗುತ್ತಿದೆ.

ಧ್ವಜದ ವಿಶೇಷತೆಗಳು :

ಈ ಧ್ವಜ ಸ್ತಂಭವು 100 ಅಡಿ ಎತ್ತರ ಹಾಗೂ 24X3O ಅಡಿ ಗಾತ್ರವನ್ನು ಹೊಂದಿದೆ. ಈ ಧ್ವಜ ಸ್ತಂಭದ ಮೇಲೆ ಆಗಸ್ಟ್ 15 ರಂದು ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದ್ದು, ಸೋಮವಾರ ಸಂಜೆ ಅದನ್ನು ಅವರೋಹಣ ಮಾಡಲಾಗುತ್ತಿದೆ. ಕಾರಣ ಬೆಟ್ಟದ ಮೇಲೆ ಗಾಳಿ ಜೋರಾಗಿ ಬೀಸುವುದರಿಂದ ಧ್ವಜ ಹಾನಿಗೊಳಗಾಗಬಹುದು ಎಂಬ ದೃಷ್ಟಿಯಿಂದ.

75th Independence Day Tricolour Flag  Joladaraashi Hills Vijayanagara District

ಈ ಧ್ವಜವನ್ನು ನಗರದ ಯಾವುದೇ ಮೂಲೆಯಿಂದ ನೋಡಬಹುದಾಗಿದ್ದು ಮತ್ತು ನಗರದ ಯಾವುದೇ ಭಾಗವನ್ನು ಈ ಬೆಟ್ಟದ ತುದಿಯಿಂದ ನೋಡಬಹುದಾಗಿದೆ. ಇದರ ಅಲಂಕಾರಗಳನ್ನು ದೀಪಗಳಿಂದ ಮಾಡಲಾಗಿದೆ, ಇದರಿಂದ ಅದು ರಾತ್ರಿಯೂ ಗೋಚರಿಸುತ್ತದೆ.

ನೀವುಇದನ್ನುಇಷ್ಟಪಡಬಹುದು: ಜಮ್ಮು ಕಾಶ್ಮೀರದಲ್ಲಿ ಹಾರಿದ 100 ಅಡಿಯ ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜ

ಪ್ರವಾಸಿ ತಾಣವಾಗಿ ಹೊಸಪೇಟೆಯ ಜೋಳದರಾಶಿ ಬೆಟ್ಟ :

ಹೊಸಪೇಟೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರಣಕ್ಕಾಗಿ ಈ ಧ್ವಜಸ್ತಂಭದ ನಿರ್ಮಾಣ ಮಾಡಲಾಗಿದ್ದು, ಈ ನಿರ್ಮಾಣ ಕೆಲಸವನ್ನು ಬಜಾಜ್ ಕಂಪನಿಗೆ ವಹಿಸಲಾಗಿತ್ತು. ಈ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಿ ಡಾಂಬರೀಕರಣ ಮಾಡಲಾಗುತ್ತಿದೆ.

75th Independence Day Tricolour Flag  Joladaraashi Hills Vijayanagara District


ರಸ್ತೆಯ ಎರಡೂ ಬದಿ ಚರಂಡಿಗಳ ನಿರ್ಮಾಣವೂ ನಡೆಯುತ್ತಿದೆ. ರಸ್ತೆಯಲ್ಲಿ ಬೀದಿ ದೀಪಗಳನ್ನು ಮತ್ತು ಸುಂದರ ಹೂದೋಟ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ಬೆಟ್ಟ ಕುಸಿಯದಂತೆ ಅಲ್ಲಲ್ಲಿ ಸ್ಲ್ಯಾಬ್ ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ 45 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ನಗರದ ಮಧ್ಯ ಭಾಗದ ರೋಟರಿ ವೃತ್ತದಲ್ಲಿ ಈಗಾಗಲೇ 100 ಅಡಿ ಎತ್ತರದ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿದೆ. ಹಾಗೂ ನಗರದ ಮುನ್ಸಿಪಾಲ್ ಮೈದಾನದಲ್ಲಿ 150 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಹೀಗೆ ನಗರದ ನಾಲ್ಕು ದಿಕ್ಕುಗಳಲ್ಲಿಯೂ ತ್ರಿವರ್ಣ ಧ್ವಜ ಸ್ತಂಭ ರಾರಾಜಿಸಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button