ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಇಂದು ಪುರಿಯಲ್ಲಿ ಜಗನ್ನಾಥ ಹೆರಿಟೇಜ್ ಕಾರಿಡಾರ್‌ ಯೋಜನೆ ಲೋಕಾರ್ಪಣೆ;

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಜಗನ್ನಾಥ ಹೆರಿಟೇಜ್ ಕಾರಿಡಾರ್‌ ಯೋಜನೆ ಎಂದೂ ಕರೆಯಲ್ಪಡುವ “ಶ್ರೀ ಮಂದಿರ ಪರಿಕ್ರಮ” (Shree Mandira Parikrama project) ಇಂದು ಉದ್ಘಾಟನೆಗೊಳ್ಳಲಿದ್ದು, ಇಂದಿನಿಂದ ಸಾರ್ವಜನಿಕರಿಗೆ ಪ್ರವೇಶ ಅನುಮತಿಸಲಾಗಿದೆ.

ಈ ಯೋಜನೆಯನ್ನು ಒಡಿಶಾ ಸೇತುವೆ ಮತ್ತು ನಿರ್ಮಾಣ ನಿಗಮ (OBCC) ಪೂರ್ಣಗೊಳಿಸಿದ್ದು, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಗೆ (SJTA) ಹಸ್ತಾಂತರಿಸಿದೆ.

ಶ್ರೀ ಮಂದಿರ ಪರಿಕ್ರಮ ಯೋಜನೆಯು ಪುರಿ ಜಗನ್ನಾಥ ದೇವಾಲಯದ (Lord Jagannath temple, Puri) ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುವ ಮತ್ತು ಪುರಿಯನ್ನು ವಿಶ್ವ ದರ್ಜೆಯ ಪಾರಂಪರಿಕ ನಗರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಮೂಲ ಸೌಕರ್ಯಗಳ ಯೋಜನೆಗಳಲ್ಲಿ ಒಂದಾಗಿದೆ.

ಪರಿಕ್ರಮ ಯೋಜನೆಯು (Corridor Project)ಜಗನ್ನಾಥ ದೇವಾಲಯದ ಸಂಕೀರ್ಣದ ಸುತ್ತಲೂ 800 ಕೋಟಿ ವೆಚ್ಚದ 75-ಮೀಟರ್ ಉದ್ದದ ಪಾರಂಪರಿಕ ಕಾರಿಡಾರ್ ನ್ನು ನಿರ್ಮಿಸಿದೆ. ಇದು ದೇವಾಲಯದ ಸುತ್ತಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ.

ಈ ಪರಿಕ್ರಮ ಯೋಜನೆಯನ್ನು ಇಂದು (ಜ.17) ರಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉದ್ಘಾಟಿಸಲಿದ್ದಾರೆ. ತದನಂತರ ಈ ಕಾರಿಡಾರ್ ಸಾರ್ವಜನಿಕರಿಗೆ ತೆರಯಲಿದೆ.

ಪರಿಕ್ರಮ ಯೋಜನೆಯ ಪ್ರಮುಖ ಲಕ್ಷಣಗಳ ಮಾಹಿತಿ ಇಲ್ಲಿದೆ;

ಈ ಪರಿಕ್ರಮ ಯೋಜನೆಯು ಮೇಘನಾದ ಪಚೇರಿಗೆ ಹೊಂದಿಕೊಂಡಂತೆ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಒಂಬತ್ತು ವಲಯಗಳಾಗಿ ವಿಂಗಡಿಸಲಾಗಿದೆ.

1 7-ಮೀಟರ್ ಗ್ರೀನ್ ಬಫರ್ ಝೋನ್ ಇದನ್ನು ಸಿಬ್ಬಂದಿಯ ಪ್ರವೇಶಕ್ಕಾಗಿ ಮತ್ತು ನಿರ್ವಹಣೆ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ.

2. 10-ಮೀಟರ್ ಒಳ ಪ್ರದಕ್ಷಿಣೆ: ವರ್ಷಪೂರ್ತಿ ನಡೆಯುವ ದೇವರ ಮೆರವಣಿಗೆಗಾಗಿ ಮತ್ತು ಸಾರ್ವಜನಿಕರಿಗೆ ಪ್ರದಕ್ಷಿಣೆಗಾಗಿ ನಿರ್ಮಾಣಗೊಂಡಿದೆ.

3. 14-ಮೀಟರ್ ಲ್ಯಾಂಡ್‌ಸ್ಕೇಪ್ ವಲಯ – ಸ್ಥಳೀಯ ಆರ್ಬೊರಿಕಲ್ಚರ್ ಸಂಶೋಧನೆಯ ಮೂಲಕ ಇಲ್ಲಿ ಉದ್ಯಾನಗಳನ್ನು ನಿರ್ಮಿಸಿದ್ದು, ಸ್ಥಳೀಯ ಜಾತಿಯ ಮರಗಳು ಮತ್ತು ಪೊದೆಗಳನ್ನು ಇಲ್ಲಿ ನೆಡಲಾಗುತ್ತದೆ.

4. 8-ಮೀಟರ್ ಹೊರ ಪ್ರದಕ್ಷಿಣೆ – ಎರಡೂ ಬದಿಯಲ್ಲಿ ಮರಗಳನ್ನು ನೆಡಲಾಗಿರುವ ಈ ವಲಯದಲ್ಲಿ ಯಾತ್ರಿಕರಿಗೆ ಓಡಾಡಲು ಮಾರ್ಗವನ್ನು ಮಾಡಲಾಗಿದೆ.

5. 10-ಮೀಟರ್ ಸಾರ್ವಜನಿಕ ಅನುಕೂಲಕರ ವಲಯ – ಎತ್ತರವಾದ ಮರ, ಪೊದೆಗಳನ್ನು ಹೊಂದಿರುವ ಈ ವಲಯದಲ್ಲಿ ವಿಶ್ರಾಂತಿ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥ, ಮಾಹಿತಿ ಮತ್ತು ದೇಣಿಗೆ ಕಿಯೋಸ್ಕ್ಗಳು ​​ಮತ್ತು ಆಶ್ರಯ ಮಂಟಪಗಳಂತಹ ಸೌಲಭ್ಯಗಳನ್ನು ನಿರ್ಮಿಸಲಾಗಿದೆ.

6. 4.5-ಮೀಟರ್ ಸೇವಾ ಲೇನ್ : ಸೇವಾ ವಾಹನಗಳ ಪ್ರವೇಶ ಮತ್ತು ಕಾರಿಡಾರ್ ನಿರ್ವಹಣೆಗಾಗಿ ನಿರ್ಮಾಣ

7. 4.5-ಮೀಟರ್ ಅಗಲದ ಮೀಸಲಾದ ಶಟಲ್ ಕಮ್ ಎಮರ್ಜೆನ್ಸಿ ಲೇನ್ ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ನಿರ್ಮಾಣ

8. 7.5-ಮೀಟರ್ ಮಿಶ್ರ ಟ್ರಾಫಿಕ್ ಲೇನ್ – ಹೆರಿಟೇಜ್ ಕಾರಿಡಾರ್‌ನ ಸುತ್ತಲೂ ವಾಹನಗಳ ಚಲನೆಗೆ ಸಹಾಯವಾಗಲು ನಿರ್ಮಿಸಲಾಗಿದೆ.

9. 7-ಮೀಟರ್ ಅಗಲದ ನೆರಳಿನ ಕಾಲುದಾರಿ – ಯಾತ್ರಿಕರು ಸುಗಮವಾಗಿ ಚಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ತ್ಯಾಜ್ಯದ ತೊಟ್ಟಿಗಳು, ಬೀದಿ ಪೀಠೋಪಕರಣಗಳು, ನೀರಿನ ಕಾರಂಜಿ ಇತ್ಯಾದಿಗಳನ್ನು ಸಹ ಹೊಂದಿದೆ.

ಈ ಯೋಜನೆಯು ಪಾರ್ಕಿಂಗ್ ಸ್ಥಳಗಳು, ಶ್ರೀ ಸೇತುವೆ, ಯಾತ್ರಾ ಕೇಂದ್ರಗಳು, ಸಂಚಾರಕ್ಕಾಗಿ ಹೊಸ ರಸ್ತೆಗಳು, ಶೌಚಾಲಯಗಳು, ಗಡಿಯಾರ ಕೊಠಡಿಗಳು,ಪೊಲೀಸ್ ಸೇವಾ ಕೇಂದ್ರ, ಪ್ರಥಮ ಚಿಕಿತ್ಸಾ ಕೇಂದ್ರ,ಎಟಿಎಂ ಕಿಯೋಸ್ಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button