ವಿಂಗಡಿಸದವಿಸ್ಮಯ ವಿಶ್ವ

ಲಾಕ್ಡೌನ್ ಕೆಲಸ ಮಾಡಿದೆ, ಪರಿಸರ ಬದಲಾಗಿದೆ: ಊರುಗಳು ಹೊಸತಾಗಿವೆ

#ವಿಶ್ವ ಪರಿಸರ ದಿನ ವಿಶೇಷ

ಜೂನ್ 5, ನಾವೆಲ್ಲರೂ ವಿಶ್ವ ಪರಿಸರ ದಿನ ಆಚರಿಸುತ್ತೇವೆ.(world environment day 2021) ಪ್ರತೀ ಸಲ ಗಿಡ ನೆಡುತ್ತೇವೆ. ಪರಿಸರದಲ್ಲಿ ಬದಲಾವಣೆ ಆಗುತ್ತದೆ ಅಂತ ಕಾಯುತ್ತೇವೆ. ಆದರೆ ಈ ಸಲ ಲಾಕ್ ಡೌನ್ ಇದೆ. ಜನರು ಓಡಾಡುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಇಲ್ಲವೇ ಇಲ್ಲ. ಈ ಕಾರಣಕ್ಕೆ ಹಕ್ಕಿಗಳು ಆರಾಮಾಗಿ ಓಡಾಡುತ್ತಿವೆ. ತಪ್ಪಿಸಿಕೊಂಡು ಓಡಾಡುತ್ತಿದ್ದ ಕ್ರಿಮಿ ಕೀಟಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಪರಿಸರ ಚೆಂದ ಆಗಿದೆ. ಊರುಗಳು ಬದಲಾಗಿವೆ.

  • ವಿನಯ ಕುಮಾರ ಪಾಟೀಲ

ಕಳೆದ ವರ್ಷ ಇದೇ ಜೂನ್ ನಲ್ಲಿ ವಿಶ್ವವೆಲ್ಲ ಭೀಕರ ಕೊರೋನಾ ಎಂಬ ವೈರಾಣುವಿಗೆ ಸಿಲುಕಿ ಒದ್ದಾಡುತ್ತಿರುವಾಗ, ಪ್ರಕೃತಿಯು ತನ್ನಷ್ಟಕ್ಕೆ ತಾನೇ ಮಲಿನರಹಿತ ಸ್ಥಿತಿಗೆ ಬರುತ್ತಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲೆಲ್ಲ ಹರಿದಾಡಿದವು. ಅದನ್ನೆಲ್ಲ ಕಂಡು ಮನಸ್ಸಿಗೆ ಸಮಾಧಾನ, ನೆಮ್ಮದಿ ಆದದ್ದು ನಿಜ.

ಆದರೆ, ಯಾವಾಗ, ಕೊರೋನಾ ಕೇಸ್ ಗಳೆಲ್ಲ ಕಡಿಮೆಯಾದುವೋ ಆವಾಗ ಜನರೆಲ್ಲ ನಿಯಮಗಳನ್ನೆಲ್ಲ ಗಾಳಿಗೆ ತೂರಿ ವಿಶ್ವದ ತುಂಬೆಲ್ಲ ಸಂಚರಿಸಿ, ಅದೇ ಪ್ರಕೃತಿಯನ್ನು ಹಾಳುಗೆಡುವಿದ್ದೂ ಕೂಡ ಅಷ್ಟೇ ನಿಜ.

World Environment Day Nature  Covid-19 Pandemic Lockdown
ಚಿತ್ರಕೃಪೆ : ಶ್ರೀರಕ್ಷಾ ಶಂಕರ್

ಪ್ರಕೃತಿ ತನ್ನದೇ ಆದ ನಿಯಮ ಸಂಯೋಜನೆ ಉಂಟು. ಅದು ತನ್ನನ್ನು ತಾನೆ ಹೆಣೆದುಕೊಳ್ಳುವ ಶಕ್ತಿ ಮತ್ತು ಪ್ರಾಯೋಜಕತ್ವವನ್ನು ಹೊಂದಿದೆ. ಇದೇ, ಲಾಕ್ ಡೌನ್ ಸಮಯದಲ್ಲಿ ಜನರೆಲ್ಲ ಚಿಕ್ಕ ವೈರಾಣುವಿಗೆ ಅಂಜಿ ಮನೆಯಲ್ಲಿ ಕೂತಾಗ, ರಸ್ತೆಯಲ್ಲಿ ಗಜಿಬಿಜಿ ಎನ್ನುವ ವಾಹನಗಳೆಲ್ಲ ಬರಿದಾಗಿ ಗೇಟಿನ ಒಳಗಡೆ ತೆಪ್ಪಗೆ ಕುಳಿತಾಗ ಪರಿಸರದಲ್ಲಿ ಆದ ಬದಲಾವಣೆಗಳನ್ನೆಲ್ಲ ನಾವು ಈಗಾಗಲೇ ಕಂಡು ಸಂತೋಷಿಸಿದ್ದೇವೆ. 

ಪ್ರಕೃತಿಯ ಸೌಂದರ್ಯವನ್ನು ಕಂಡು ನಿಬ್ಬೆರಗಾಗಿ, ಮನಃಪೂರ್ವಕವಾಗಿ ಅನುಭವಿಸುವ ಮನಃಸ್ಥಿತಿ ಉಳ್ಳವರು ನಾವೆಲ್ಲ. ಇನ್ನು ಅದೇ ರೀತಿ ಮುಂದುವರೆಸಿ, ಬರೀ ಅಗತ್ಯವಿದ್ದಾಗ ಮಾತ್ರ ವಾಹನಗಳನ್ನು ಬಳಸಿ, ಉಳಿದ ದಿನ ಸಾರ್ವಜನಿಕ ಸಾರಿಗೆಗಳನ್ನು ಬಳಸಿದರೆ ನಮ್ಮ ಕೈ-ಕಾಲುಗಳೇನು ಸವೆಯುವುದಿಲ್ಲ ಎಂಬುದು ನಮಗೆ ತಿಳಿದಿರುವ ವಿಷಯ.

ಪರಿಸರದಲ್ಲಿ ಆದ ಬದಲಾವಣೆಗಳಾದರೂ ಏನು?

ಬರಿದಾದ ರಸ್ತೆಯೆಲ್ಲೆಡೆ, ವನಮಹೋತ್ಸವದ ಹಬ್ಬದಂತೆ ಗಿಡಗಳೆಲ್ಲ ತಮ್ಮ ಎಲೆ-ಹೂವುಗಳನ್ನು ಧರೆಗೆ ಉರುಳಿಸಿ ತಮ್ಮ ನೈಜ ಬಣ್ಣವನ್ನು ಪ್ರಸ್ತುತಪಡಿಸಿದವು. ಬರೀ ಗಿಡ ಮರಗಳಷ್ಟೇ ಅಲ್ಲದೇ, ಬರೀ ಕಾಡಿಗೇ ಹೋದರಷ್ಟೇ ಕಾಣುವಂತಹ ಪ್ರಾಣಿಗಳೆಲ್ಲ ಇದ್ದಕ್ಕಿದ್ದಂತೆ ಮಾನವನ ಸುಳಿವೇ ಇಲ್ಲದಂತೆ ಮನೆಯ ಕೆಳಗೆ ಬಂದು ಮನುಷ್ಯನ ಇರುವಿಕೆಯನ್ನು ಖಚಿತಪಡಿಸಿಕೊಂಡು ತಮ್ಮ ತವರಿಗೆ ಮರಳಿದ ಉದಾಹರಣೆಗಳು ಸಾಕಷ್ಟಿವೆ.

ನೀವುಇದನ್ನುಇಷ್ಟಪಡಬಹುದು: ಮಾಫಿಯಾ ಎದುರು ಹಾಕಿಕೊಂಡು ಪರಿಸರ ರಕ್ಷಿಸಿ ಅಂತಾರಾಷ್ಟ್ರೀಯ ರೇಂಜರ್ ಪ್ರಶಸ್ತಿ ಪಡೆದ ಸಾಹಸಿ ಸತೀಶ್

World Environment Day Nature  Covid-19 Pandemic Lockdown

ಇನ್ನು ಪಕ್ಷಿ-ಪ್ರಪಂಚದಲ್ಲಿ, ವಿರಳಾತಿ ವಿರಳವಾದ ಪಕ್ಷಿ ಪ್ರಬೇಧಗಳು, ತಮ್ಮ ಮೋಹಕ ಬಣ್ಣಗಳನ್ನು ನಮ್ಮ ಊರಿನ ಕೆರೆಗಳಿಗೆಲ್ಲ ಸಿಂಪಡಿಸಿ ಕಣ್ಣುಗಳನ್ನು ಪಾವನ ಮಾಡಿದವು. ಇಷ್ಟು ದಿನ, ಬರೀ ಹೊಗೆಯನ್ನೇ ಕುಡಿದು ಬೇಸರಗೊಂಡಿದ್ದ  ಹಿಮಾಲಯದ ಪರ್ವತಗಳು ಗಾಳಿಯಲ್ಲಿ ಕಲ್ಮಶವೇ ಇಲ್ಲವೆಂಬಂತೆ ದೂರದೂರಿನವರೆಗೂ ತಮ್ಮ ಬೆಳ್ಳಂಬೆಳ್ಳದಾದ ಗಗನಚುಂಬಿ ದೇಹವನ್ನು ಅಲ್ಲಿಂದಲೇ ನಮಗೆ ದರ್ಶನ ನೀಡಿ ಮನಕ್ಕೆ ಮುದವನ್ನು ಕೊಟ್ಟ ಸಂದರ್ಭ ಈಗಾಗಲೇ ನಮ್ಮ ಕಣ್ಣಿಗೆ ಕಟ್ಟಿದ ಹಾಗಿದೆ. ಇವೆಲ್ಲ ಅದ್ಭುತ ಘಟನೆಗಳು ಬರಿಯ ೩ ತಿಂಗಳ ಲಾಕ್ ಡೌನಿನ ಪರಿಣಾಮಗಳು. 

ಮಹಾನಗರ ಉಸಿರಾಡುತ್ತಿದೆ 

ಕಿವಿಯಲ್ಲಿ ದಿನವಿಡೀ ಗಿಜಗುಡುವ ವಾಹನಗಳ ಕಾಟವೇ ಇಲ್ಲದೇ ಬೆಂಗಳೂರು ಮಹಾನಗರ ತಾನೇ ಸೃಷ್ಟಿಸಿಕೊಂಡ ಮಾಯಾವಿ ಲೋಕದಲ್ಲಿ ಮಾನವನ ಹಂಗಿಲ್ಲದೇ ಪರಿಸರದ ನೈಜತೆ ಮತ್ತು ಪ್ರಕೃತಿಯ ಸೊಗಡನ್ನು ಅದರದ್ದೇ ವೈಭವಕ್ಕೆ ಕರೆದೊಯ್ದಿತ್ತು. ಉದ್ಯಾನಗಳ ನಗರದಲ್ಲಿ, ಜನರೇನೋ ವೈರಾಣುವಿನ ಕಾಟಕ್ಕೆ ಬೇಸತ್ತು ಅನಿವಾರ್ಯ ಕಾರಣಕ್ಕೆ ಊರನ್ನೇ ಬಿಟ್ಟು ಹೋದ ಸಂದರ್ಭದಲ್ಲಿ ಮಹಾನಗರದಲ್ಲಿರುವ ರಸ್ತೆಗಳೆಲ್ಲ ಮದುವಣಗಿತ್ತಿಯಂತೆ ವೈಭವೀಕೃತವಾಗಿ ಸಿಂಗಾರಗೊಂಡು ನಮಗೆಲ್ಲ ಮೋಡಿ ಮಾಡಿ, ಪ್ರಾಣಿಗಳ ಆಗಮನಕ್ಕೆ ಖುಷಿಪಟ್ಟವೋ ಏನೋ!

World Environment Day Nature  Covid-19 Pandemic Lockdown
ಚಿತ್ರಕೃಪೆ : ಮೋಹಿತ್ ಪೀರಾ

ಕೆರೆಗಳೆಲ್ಲ ತಮ್ಮ ಕೊಳೆಯನ್ನೆಲ್ಲ ತಾವೇ ತೊಳೆದುಕೊಂಡು, ಸ್ವಚ್ಛವಾಗಿ ಸ್ಫಟಿಕದಂತೆ ಹೊಳೆದು ಪಕ್ಷಿಗಳಿಗೆ ಕುಣಿದು ಕುಪ್ಪಳಿಸಿ, ತಮ್ಮ ಸಂಸಾರಕ್ಕೆ ಯಾವುದೇ ಅಡ್ಡಿ ಇಲ್ಲದಂತೆ, ತಮ್ಮಲ್ಲೇ ಒಂದು ದೊಡ್ಡದಾದ ಕಾಲನಿಯನ್ನೇ ಮಾಡಿದ ಹಾಗಿತ್ತು ಕೆರೆಗಳ ಪಾಡು.

ಕೊರೋನಾ ಸಂಕಷ್ಟಕ್ಕೆ ಮಣಿದು, ಬರಿಯ ಜೀವನಕ್ಕೇ ಪರದಾಡುವ ಜನರ ಜೀವನ ಈಗಾಗಲೇ ಅಸ್ತವ್ಯಸ್ತಗೊಂಡು ಸರಿಯಾದ ತಳಹದಿಗೆ ಬಂದು ಸೇರಲು ಸುಮಾರು ೨-೩ ವರ್ಷಗಳಾದರೂ ಬೇಕು. ಎಲ್ಲೋ ಓದಿದ ನೆನಪು – ಪ್ರಕೃತಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟಾಗ ಅದು ತನ್ನನ್ನು ತಾನೆ ನೈಜ ಸ್ಥಿತಿಗೆ ತಂದುಕೊಳ್ಳಲು ಪ್ರಯತ್ನಿಸುತ್ತದೆ.

World Environment Day Nature  Covid-19 Pandemic Lockdown

ಇನ್ನು ಈ ಗಿಡಗಳನ್ನೆಲ್ಲ ನೆಡುವುದು ಏಕೆ ಎಂದು ನೀವೆಲ್ಲ ಕೇಳಬಹುದು. ಪ್ರಕೃತಿಯಲ್ಲಾದ ಹಾನಿ-ನಷ್ಟಗಳನ್ನು ಸರಿದೂಗಿಸಲು ನಾವು ಪ್ರಯತ್ನಪಡಬೇಕಾದದ್ದು ಒಂದೇ – ಗಿಡಗಳನ್ನು ನೆಡದೇ ಇದ್ದರೂ ಪರವಾಗಿಲ್ಲ, ಇದ್ದ ಪರಿಸರವನ್ನು ಹಾಳು ಮಾಡದೇ ಅದರ ಪಾಡಿಗೆ ಅದನ್ನು ಬಿಟ್ಟರೆ, ಕಳೆದ ವರ್ಷ ಕಂಡ ಪರಿಸರದ ವೈಭವವನ್ನು ಮತ್ತೆ ಕಂಡು ನಿಬ್ಬೆರಗಾಗುವ ದಿನಗಳೇನು ದೂರವಿಲ್ಲ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

One Comment

  1. Very nice to hear from you Vinay, you have brought the Natures gift to our mankind and it’s contribution to human beings. Well it is said ” Nature is the Teacher “. We should respect and restore it’s treasure then only Human’s can survive, if we go against it, face the consequences !!!!

Leave a Reply

Your email address will not be published. Required fields are marked *

Back to top button
Translate