ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಲಕ್ಷ ದ್ವೀಪಕ್ಕೆ ಹೋಗುವ ಪ್ಲ್ಯಾನ್ ಇದ್ಯಾ? ಹಾಗಾದರೆ ಈ ತಾಣಗಳಿಗೆ ತಪ್ಪದೇ ಭೇಟಿ ನೀಡಿ

ಭಾರತದ ಪ್ರಮುಖ ತಾಣಗಳಲ್ಲಿ ಒಂದಾಗಿರುವ “ಲಕ್ಷದ್ವೀಪ” ವು ಅತ್ಯಂತ ಸುಂದರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ತಾಣವಾಗಿವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾಲ್ಡೀವ್ಸ್‌ ವಿವಾದದ ನಂತರ ಜನರ ಚಿತ್ತ ಲಕ್ಷದ್ವೀಪದ ಕಡೆಗೆ ಹರಿದಿದೆ.

ವಿಶ್ವದ ಅತ್ಯಂತ ಅದ್ಭುತವಾದ ಉಷ್ಣವಲಯದ ದ್ವೀಪಗಳಲ್ಲಿ ಲಕ್ಷ ದ್ವೀಪವೂ ಒಂದಾಗಿದೆ. 4,200 ಚ.ಕಿ.ಮೀ. ಸಮುದ್ರ ಸಂಪತ್ತಿನಿಂದ ಸಮೃದ್ಧವಾಗಿರುವ ಈ ದ್ವೀಪವು 32 ಚದರ ಕಿ.ಮೀ ಪ್ರದೇಶದಲ್ಲಿ 36 ದ್ವೀಪಸಮೂಹವನ್ನು ಒಳಗೊಂಡಿದೆ.

ಹವಳದ ಬಂಡೆಗಳಿಗೆ ಪ್ರಸಿದ್ಧವಾಗಿರುವ ಲಕ್ಷ ದ್ವೀಪವು (Lakshadweep) ಹೇರಳವಾಗಿರುವ ಸಮುದ್ರ ಜೀವಿಗಳಿಗೆ ಆಸರೆ ಆಗಿದೆ. ಒಟ್ಟಿನಲ್ಲಿ ಪ್ರಕೃತಿಯ ಶ್ರೇಷ್ಠ ಕೊಡುಗೆಗಳಲ್ಲಿ ಲಕ್ಷ ದ್ವೀಪವೂ ಒಂದೆನಿಸಿದೆ.

ಇಲ್ಲಿ ಒಟ್ಟು 36 ದ್ವೀಪಗಳಿದ್ದರೂ ಇವುಗಳಲ್ಲಿ 10 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಭಾರತದ ಈ ಚಿಕ್ಕ ಕೇಂದ್ರಾಡಳಿತ ಪ್ರದೇಶವು ಕೇರಳದ ಕೊಚ್ಚಿಯಿಂದ ಸುಮಾರು 200-400 ಕಿ.ಮೀ ದೂರದಲ್ಲಿದೆ.

ಲಕ್ಷ ದ್ವೀಪಕ್ಕೆ ಭೇಟಿ ನೀಡಿದಾಗ ಭೇಟಿ ನೀಡಬೇಕಾದ ಐದು ದ್ವೀಪಗಳಿವು.

1.ಅಗಟ್ಟಿ ದ್ವೀಪಗಳು (Agatti Islands)

ವಿಮಾನಯಾನದ ಮೂಲಕ ನೀವು ಲಕ್ಷ ದ್ವೀಪಕ್ಕೆ ಭೇಟಿ ನೀಡುತ್ತಿದ್ದರೆ, ಮೊದಲು ಇಳಿಯುವುದು ಅಗಟ್ಟಿ ದ್ವೀಪದಲ್ಲಿ. ಈ ದ್ವೀಪದಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳನ್ನು ಒಳಗೊಂಡ ರೆಸ್ಟೋರೆಂಟ್ ಗಳು, ಹೋಟೇಲ್ ಗಳು ಇವೆ.

ಇಲ್ಲಿಯ ಮೀನೂಟ ಪ್ರಸಿದ್ಧವಾಗಿದ್ದ, ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ. ನೀವು ಈ ದ್ವೀಪದಲ್ಲಿರುವ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಬಹುದು.

2. ಕವರಟ್ಟಿ ದ್ವೀಪ: (Kavaratti Island)

3.93 ಚದರ ಕಿಲೋಮೀಟರ್‌ಗಳಷ್ಟು ಹರಡಿರುವ ಈ ದ್ವೀಪವು ಲಕ್ಷದ್ವೀಪದ ರಾಜಧಾನಿಯಾಗಿದೆ. ಐವತ್ತೆರಡು ಮಸೀದಿಗಳು ದ್ವೀಪದಾದ್ಯಂತ ಹರಡಿಕೊಂಡಿವೆ, ಉಜ್ರಾ ಮಸೀದಿ ಅತ್ಯಂತ ಸುಂದರವಾದ ಮಸೀದಿಯಾಗಿದೆ.

ಸಮುದ್ರ ಜೀವಿಗಳ ಕುರಿತು ಉತ್ಸಾಹಿಗಳಾಗಿದ್ದರೆ, ಇಲ್ಲಿಯ ಸಮುದ್ರದ ಅಕ್ವೇರಿಯಂಗೆ ಭೇಟಿ ನೀಡಬಹುದು. ಇಲ್ಲಿಯ ದೋಣಿ ವಿಹಾರ ಅತ್ಯಂತ ವಿಶಿಷ್ಟವಾಗಿದೆ.

ಗಾಜಿನ ದೋಣಿ ಸವಾರಿಯ ಮೂಲಕ ನೀರೊಳಗಿನ ಜೀವನವನ್ನು ಆನಂದಿಸಬಹುದು. ಕಯಾಕಿಂಗ್, ಸ್ಕೂಬಾ ಡೈವಿಂಗ್ ಇನ್ನಿತರ ಸಾಹಸ ಕ್ರೀಡೆಗಳಿಗೆ ಪ್ರಶಸ್ತ ಸ್ಥಳವಾಗಿದೆ.

3. ಬಂಗಾರಂ ದ್ವೀಪ: (Bangaram Island)

ಈ ದ್ವೀಪವು ಸಣ್ಣ ಕಣ್ಣೀರ ಹನಿ ಆಕಾರದ ದ್ವೀಪವಾಗಿದ್ದು, ಅಗಟ್ಟಿ ಮತ್ತು ಕವರಟ್ಟಿಗೆ ಬಹಳ ಹತ್ತಿರದಲ್ಲಿದೆ. ಈ ದ್ವೀಪದಲ್ಲಿರುವ ಪ್ರವಾಸಿ ತಂಗುದಾಣಗಳು ಆಧುನಿಕ ಜೀವನ ಒತ್ತಡದಿಂದ ವಿರಾಮ ಪಡೆಯಲು ಸಹಾಯಕವಾಗಿದೆ.

ಅದ್ಭುತವಾದ ಸೂರ್ಯೋದಯ ಹಾಗು ಸೂರ್ಯಾಸ್ತವು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ತಿನ್ನಕರ ಮತ್ತು ಪರಾಲಿ ಎಂಬ ಎರಡು ಸಣ್ಣ ದ್ವೀಪಗಳು ಈ ದ್ವೀಪದ ಬಳಿ ಇದ್ದು ಇಲ್ಲಿಗೂ ಭೇಟಿ ನೀಡಬಹುದು.

4. ಕದ್ಮತ್ ದ್ವೀಪ: (Kadmat Island)

ಪ್ರಕಾಶಮಾನವಾದ ಹವಳದ ಬಂಡೆಗಳಿಂದ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ತಾಣ ಕದ್ಮತ್. ಜಲ ಕ್ರೀಡೆಗಳಿಗೆ ಸೂಕ್ತವಾದ ತಾಣ. ಕದ್ಮತ್ ಭಾರತದ ಅತ್ಯಂತ ಸುಂದರವಾದ ಡೈವಿಂಗ್ ತಾಣಗಳಲ್ಲಿ ಒಂದು.

20-50 ಮೀಟರ್ ಆಳದಲ್ಲಿ ಹೊಳೆಯುವ ಬಂಡೆಗಳು, ಶಾರ್ಕ್‌ಗಳು ಮತ್ತು ವಿವಿಧ ಜಾತಿಯ ಮೀನುಗಳ ಜೊತೆಗೆ ಇನ್ನೂ ಅನೇಕ ಸಮುದ್ರ ಜೀವಿಗಳನ್ನು ವೀಕ್ಷಿಸಬಹುದು.

5. ಮಿನಿಕಾಯ್ ದ್ವೀಪ: (Minicoy Island)

ಲಕ್ಷದ್ವೀಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದ್ವೀಪ. ಇದು 11 ಹಳ್ಳಿಗಳ ಸಮೂಹವನ್ನು ಹೊಂದಿದ್ದು, ಪ್ರತಿ ಹಳ್ಳಿಯೂ ಒಂದು ಹಳ್ಳಿಯ ಮನೆಯನ್ನು ಸುಂದರವಾಗಿ ಅಲಂಕಾರಿಕವಾಗಿ ನಿರ್ಮಿಸಲಾಗಿದೆ.

ಮಿನಿಕಾಯ್ ತನ್ನ ಸಂಪ್ರದಾಯದ “ಲಾವಾ” ನೃತ್ಯ ಕ್ಕೆ ಹೆಸರುವಾಸಿಯಾಗಿದೆ. ಇದನ್ನು ಹಬ್ಬದ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. “ಜಹಾಧೋನಿ” ಎಂಬ ವರ್ಣರಂಜಿತ ರೇಸ್ ದೋಣಿಗಳು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.

6. ಕಲ್ಪೇನಿ ದ್ವೀಪ (Kalpeni Island):

ಕಲ್ಪೇನಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಪೂರ್ವ ಮತ್ತು ಆಗ್ನೇಯ ತೀರದಲ್ಲಿರುವ ಹವಳದ ಅವಶೇಷಗಳ ಬೃಹತ್ ಚಂಡಮಾರುತದ ದಂಡೆ. ಕಲ್ಪೇನಿಯು ದ್ವೀಪದ ಉತ್ತರದ ತುದಿಯಲ್ಲಿ ಟಿಪ್ ಬೀಚ್ ಎಂದು ಕರೆಯಲ್ಪಡುವ ಬೀಚ್ ಅನ್ನು ಹೊಂದಿದೆ.

ಅಲ್ಲಿ ಸ್ನಾರ್ಕ್ಲಿಂಗ್, ಸಮುದ್ರ ಸ್ನಾನ ಮತ್ತು ಕಯಾಕಿಂಗ್ ನಂತಹ ಸಾಹಸ ಕ್ರೀಡೆಗಳನ್ನು ಮಾಡಬಹುದು. ಕಡಲತೀರದ ಬಳಿ ಸಮುದ್ರದಲ್ಲಿ ಹವಳದ ಬಂಡೆಗಳಿರುವುದರಿಂದ, ನೀರು ಆಳವಿಲ್ಲದೇ ಶಾಂತವಾಗಿದ್ದು, ಕಡಲತೀರದ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button