Moreವಿಂಗಡಿಸದ

ಫ್ರಾನ್ಸ್ ನಲ್ಲಿ UPI ಪಾವತಿ ಆರಂಭ; ಭಾರತೀಯರಿಗೆ ಸಿಹಿ ಸುದ್ದಿ

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭೇಟಿ ನೀಡಿದ ಕೆಲವು ದಿನಗಳಲ್ಲೇ ಫ್ರಾನ್ಸ್‌ ತನ್ನ ದೇಶದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ (UPI) ಮೂಲಕ ಪಾವತಿಗೆ ಅನುಮತಿ ನೀಡಿದೆ.

ಯುಪಿಐ ಪಾವತಿ ಕುರಿತಾದ ಮೊದಲ ಪ್ರಯೋಗ ಐಫೆಲ್ ಟವರ್ ಮೂಲಕ ಆರಂಭಗೊಳ್ಳಲಿದೆ. ಇನ್ನು ಮುಂದೆ ಭಾರತೀಯ ಪ್ರವಾಸಿಗರು ಐಫೆಲ್‌ ಟವರ್‌ ಟಿಕೆಟ್ ಖರೀದಿ ಮಾಡುವಾಗ ಯುಪಿಐ ಪಾವತಿ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ.

ಭಾರತದ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಮತ್ತು ಫ್ರಾನ್ಸ್‌ನ ಲೈರಾ ಕಂಪನಿಯು ಈ ಒಪ್ಪಂದ ಮಾಡಿಕೊಂಡಿದೆ.

ಇದರಿಂದಾಗಿ ಭಾರತೀಯ ಪ್ರವಾಸಿಗರು ಟಿಕೆಟ್‌ ಖರೀದಿ ಮಾಡುವಾಗ ತಮ್ಮ ಯುಪಿಐ ಐಡಿ ಅಥವ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಬುಕ್‌ ಮಾಡಬಹುದಾಗಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಶುಕ್ರವಾರ ತಿಳಿಸಿದೆ.

ಪ್ರತೀ ವರ್ಷ ಅತಿ ಹೆಚ್ಚು ಭಾರತೀಯ ಪ್ರವಾಸಿಗರು ಐಫೆಲ್ ಟವರ್ ಅನ್ನು ಭೇಟಿ ನೀಡುವುದರಿಂದ ಈ ಪ್ರಕಟಣೆಯು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ.

ಐಫೆಲ್ ಟವರ್ ಗೆ ಬುಕಿಂಗ್ ಹೇಗೆ?

ಐಫೆಲ್‌ ಟವರ್‌ ವೆಬ್‌ಸೈಟ್‌ನಲ್ಲಿ ಭೇಟಿಗಾಗಿ ಟಿಕೆಟ್‌ ಬುಕ್‌ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಸಲ್ಲಿಸಿದ ನಂತರ ಪಾವತಿ ಪುಟ ತೆರೆದುಕೊಳ್ಳುತ್ತಿದೆ.

ಈ ವೇಳೆ ಯುಪಿಐ ಆಯ್ಕೆ ಮಾಡಿಕೊಂಡು, ಯುಪಿಐ ಐಡಿ ಅಥವಾ ಕ್ಯೂಆರ್‌ ಕೋಡ್‌ ನ ಮೂಲಕ ಬುಕಿಂಗ್ ಮಾಡಬಹುದಾಗಿದೆ.

ಈ ಯೋಜನೆಯ ಮೂಲಕ ಫ್ರಾನ್ಸ್‌ ಯುಪಿಐ ಅನ್ನು ಸ್ವೀಕರಿಸಿದ ಮೊದಲ ಯುರೋಪಿಯನ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಫ್ರಾನ್ಸ್ ಪಾತ್ರವಾಗಿದೆ.

ಐಫೆಲ್ ಟವರ್ ಟಿಕೆಟ್‌ ಖರೀದಿಯು UPI ನ ಮೊದಲ ಹಂತದ ಪ್ರಯೋಗವಾಗಿದ್ದು, ನಂತರ ಇದು ಪ್ರವಾಸೋದ್ಯಮ ಮತ್ತು ಹಣಕಾಸು ವಲಯದಲ್ಲಿ ಇತರೆ ವ್ಯಾಪಾರಗಳಿಗೆ ವಿಸ್ತರಿಸಲಾಗುವುದು ಎಂದು NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಹೇಳಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button