ದೂರ ತೀರ ಯಾನವಿಂಗಡಿಸದ

15 ಸಾವಿರವಿದ್ದರೆ ಸಾಕು ಈ ದೇಶಗಳಿಗೆ ವಿಮಾನದಲ್ಲಿ ಹೋಗಬಹುದು

ವಿಮಾನ ಪ್ರಯಾಣ ಎಲ್ಲರಿಗೂ ಇಷ್ಟ. ಆದರೆ ದುಬಾರಿ ಎನ್ನುವುದು ಕೊಂಚ ಕಷ್ಟವೇ. ಹಣಕಾಸಿನ ಲೆಕ್ಕಾಚಾರವೇ ಹೆಚ್ಚಿನ ಖರ್ಚು ಹಾಕುತ್ತಾರೆ. ಆದರೆ ಒಂದು ವೇಳೆ ನೀವು ಟ್ರಿಪ್(Trip) ಹೋಗೋರು ಆಗಿದ್ರೆ , ಏಪ್ರಿಲ್(April),ಮೇ(May) ನಲ್ಲಿ ಪ್ರವಾಸಕ್ಕೆ ಹೋಗ್ತಿರಿ ಅಂತಂದ್ರೆ ಈ ದೇಶಗಳಿಗೆ ಅಂದಾಜು 15 ಸಾವಿರ ಖರ್ಚಿನಲ್ಲಿ ಹೋಗಿ ಬರಬಹುದು.

ಮಲೇಷಿಯಾ (Malaysia)

Malaysia skyscanner.pxf.io/DKLYbo

ಮಲೇಷಿಯಾ ಗೆ ನೀವು ನೇರ ವಿಮಾನ ಪ್ರಯಾಣದಲ್ಲಿ ಹೋಗಬೇಕು ಅಂದ್ರೆ 15 ಸಾವಿರದ ಒಳಗೆ ಹಣವಿದ್ದರೆ ಸಾಕು. ನಿಮಗೆ ಮಲೇಷಿಯಾ ಗೆ ಫ್ಲೈಟ್ ಟಿಕೆಟ್ ಸುಮಾರು 13,800 ರೂಪಾಯಿಗಳಷ್ಟು ಇರುತ್ತದೆ.

ಥೈಲ್ಯಾಂಡ್(Thailand)

Thailand skyscanner.pxf.io/DKLYbo

ನೆರೆಯ ದೇಶ ಥೈಲ್ಯಾಂಡ್ ಗೆ ಅತಿ ಕಡಿಮೆ ವೆಚ್ಚದಲ್ಲಿ ನೀವು ಹೋಗಿ ಪರ್ವತಗಳ ನಾಡಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಬರಬಹುದು. ಇಲ್ಲಿ ನಿಮಗೆ ಅಂದಾಜು 17 ಸಾವಿರದಷ್ಟು ಹಣ ಫ್ಲೈಟ್ ಟಿಕೆಟ್ ಗೆ ತಗಲುತ್ತದೆ.

ಮಾಲ್ಡೀವ್ಸ್ (Maldives)

Maldives skyscanner.pxf.io/DKLYbo

ದೀಪ ರಾಷ್ಟ್ರ ಮಾಲ್ಡೀವ್ಸ್ ಒಂದು ಕಾಲದಲ್ಲಿ ಹೆಚ್ಚಿನ ಸಂಖ್ಯೆ ಭಾರತೀಯರು ಭೀತಿ ನೋಡುತ್ತಿದ್ದ ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಉಂಟಾದ ರಾಜತಾಂತ್ರಿಕ ಬಿಕ್ಕಟ್ಟು, ಇಲ್ಲಿನ ಪ್ರವಾಸೋದ್ಯಮದ ಮೇಲೆಯೂ ಪರಿಣಾಮ ಬೀರಿತ್ತು. ಆದರೆ ನೀವು ಈ ದೇಶಕ್ಕೆ ಹೋಗಬೇಕು ಅಂದ್ರೆ ಒಂದು ಮಾರ್ಗದ ವಿಮಾನ ದರ 17 ಸಾವಿರ ತಗಲುತ್ತದೆ.

ಬ್ಯಾರಿನ್(Bahrain)

Bahrain skyscanner.pxf.io/DKLYbo

ಬ್ಯಾರಿನ್ ಗೆ ಕೂಡ ನೀವು ಕಡಿಮೆ ವೆಚ್ಚದಲ್ಲಿ ಹೋಗಬಹುದು. ಒಂದು ವೇಳೆ ನೀವು ಬ್ಯಾರೀನ್ ಗೆ ಹೋಗುತ್ತೀರಿ ಅಂತಾದ್ರೆ ನೇರ ವಿಮಾನ ಮಾರ್ಗದ ವೆಚ್ಚ 17,800 ರೂಪಾಯಿಗಳಷ್ಟು ಇರುತ್ತದೆ.

ಕುವೈತ್ (Kuwait)

Kuwait skyscanner.pxf.io/DKLYbo

ಕುವೈತ್ 20 ಸಾವಿರದ ವಿಮಾನ ಟಿಕೆಟ್ ನಲ್ಲಿ ಕುವೈತ್ ಗೆ ಹೋಗಿ ಬರಬಹುದು. ಈ ದೇಶದಲ್ಲಿಯೂ ಹೆಚ್ಚಿನ ಸಂಖ್ಯೆಯ ಭಾರತೀಯರು ನೆಲೆಸಿದ್ದಾರೆ.

ಶ್ರೀಲಂಕಾ(Sri Lanka)

Sri Lanka skyscanner.pxf.io/DKLYbo

ಶ್ರೀಲಂಕಾ ಅತಿ ಅಗ್ಗದ ಪ್ರವಾಸಿ ತಾಣಗಳಲ್ಲಿ ಒಂದು. ಭಾರತದ ನೆರೆಯ ದೇಶವಿದು. ಇಲ್ಲಿ ನೀವು ನೋಡುವುದಕ್ಕೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳು ಕೂಡ ಇದೆ. ಒಂದು ವೇಳೆ ನೀವು ನೇರ ವಿಮಾನ ಮಾರ್ಗದ ಮೂಲಕ ಶ್ರೀಲಂಕಾಗೆ ಹೋಗುತ್ತೀರಿ ಅಂತಂದ್ರೆ 20 ರಿಂದ 21 ಸಾವಿರವಿದ್ದರೂ ಸಾಕು.

ನೀವು ಇದನ್ನು ಇಷ್ಟ ಪಡಬಹುದು: ಲಕ್ಷಕ್ಕಿಂತ ಕಡಿಮೆ ಫ್ಲೈಟ್ ಟಿಕೆಟ್‌ಗಳನ್ನು ಹೊಂದಿರುವ ಜನಪ್ರಿಯ ತಾಣಗಳು

ನೇಪಾಳ(Nepal)

Nepal skyscanner.pxf.io/DKLYbo

ಭಾರತದ ಉತ್ತರದ ದೇಶ. ಹಿಮಾಲಯದ ತಪ್ಪಲಿನಲ್ಲಿರುವ ಈ ದೇಶಕ್ಕೆ ನೀವು 25 ಸಾವಿರದ ಒಳಗಡೆ ಹಣವಿದ್ದರೆ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ನೇಪಾಳಕ್ಕೆ ಹೋಗಬೇಕು ಅಂತಿದ್ರೆ 23 ಸಾವಿರವಿದ್ದರೆ ಸಾಕು.

ಸಿಂಗಾಪುರ(Singapore)

Singapore  skyscanner.pxf.io/DKLYbo

ಭಾರತೀಯ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿಂಗಾಪುರಕ್ಕೆ ಕೂಡ 25 ಸಾವಿರ ಹಣವಿದ್ದರೆ ನೀವು ಫ್ಲೈಟ್ ಟಿಕೆಟ್ ಮಾಡಿಕೊಳ್ಳಬಹುದು. ಎಲ್ಲ ಕಾಲಕ್ಕೂ ಎಲ್ಲರಿಗೂ ಹಿತವೆನಿಸುವ ಈ ಜಾಗ ಭಾರತೀಯ ಪ್ರವಾಸಿಗರ ಬಕೆಟ್ ಲಿಸ್ಟ್ ನಲ್ಲಿರುವ ತಾಣಗಳಲ್ಲಿ ಒಂದು.

ಒಮನ್(Oman)

Oman skyscanner.pxf.io/DKLYbo

ಒಮನ್ ದೇಶದಲ್ಲಿಯೂ ಹೆಚ್ಚಿನ ಸಂಖ್ಯೆಯ ಭಾರತೀಯರು ಇದ್ದಾರೆ. ಹೀಗಾಗಿ ಈ ದೇಶಕ್ಕೆ ಆಗಾಗ ಭಾರತೀಯರು ಓಡಾಟವನ್ನು ನಡೆಸುತ್ತಿರುತ್ತಾರೆ. ನೀವು ಓಮನ್ ಗೆ ಹೋಗಬೇಕು ಅಂತಂದ್ರೆ ಅಂದಾಜು 25 ರಿಂದ 26 ಸಾವಿರದ ಒಳಗೆ ಇದ್ದರೆ ಸಾಕು.

ಯುಎಇ(UAE)

Dubai skyscanner.pxf.io/DKLYbo

ಹೆಚ್ಚಿನ ಸಂಖ್ಯೆಯ ಭಾರತೀಯರು ನೆಲೆಸಿರುವ ಜಾಗದಲ್ಲಿ ದುಬೈ ಅಥವಾ ಯುಎಇ ಕೂಡ ಒಂದು. ಇಲ್ಲಿಗೂ ಕೂಡ ನೀವು ವಿಮಾನ ದರಕ್ಕೆ 30 ಸಾವಿರದ ಒಳಗೆ ಟಿಕೆಟ್ ಬುಕ್ ಮಾಡಬಹುದು. ನಿಮಗೆ ವಿಮಾನದಲ್ಲಿ ನೇರ ವಿಮಾನ ಮಾರ್ಗದಲ್ಲಿ ಹೋಗಬೇಕು ಅಂದ್ರೆ ಸುಮಾರು 27.5 ಸಾವಿರ ಹಣವಿದ್ರೆ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಮುಂದುವರೆದ ಲೇಖನದಲ್ಲಿ 80 ಸಾವಿರದ ಒಳಗಿನ ವಿಮಾನ ದರ ಹೊಂದಿರುವ ಕೆಲ ದೇಶಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button