Site icon Kannada.Travel

70 ಮೀ ಎತ್ತರದ ಕಟ್ಟಡದಲ್ಲಿ ಭಾರತದ ಬಾವುಟ ಪ್ರದರ್ಶಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದ ಪೋರ್ಚುಗಲ್

ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಪೋರ್ಚುಗಲ್ ದೇಶ ತನ್ನ ಪ್ರಮುಖ ಭಾಗವಾದ ಲಿಸ್ಬನ್ ನಗರದ ಎಪ್ಪತ್ತು ಮೀ ಎತ್ತರದ ಕಟ್ಟಡದಲ್ಲಿ ಭಾರತ ದೇಶದ ಬಾವುಟ ಪ್ರದರ್ಶಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪೋರ್ಚುಗಲ್ ದೇಶ ಹೇಳಿಕೊಂಡಿದೆ. ಪೋರ್ಚುಗಲ್ ನ ಈ ನಡೆ ಹೃದಯಸ್ಪರ್ಶಿಯಾಗಿದೆ.

ಕೊರೋನಾದಿಂದಾಗಿ ಭಾರತ ಒದ್ದಾಡುತ್ತಿದೆ. ಅನೇಕ ಸಮಸ್ಯೆಗಳಿಂದ ಜನ ಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಇಂಥಾ ಹೊತ್ತಲ್ಲಿ ಭಾರತೀಯರ ಧೈರ್ಯ, ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಪೋರ್ಚುಗಲ್ ದೇಶ ಮಾಡಿದೆ. 

ಕೋರೋನಾ ರೋಗದಿಂದ, ರೋಗದ ಭಯ ಹುಟ್ಟಿಸುವ ಭೀಕರ ಸಾಂಕ್ರಮಿಕತೆಗೆ ಸಮಸ್ತ ದೇಶವೇ ನರಳುತ್ತಿರುವಾಗ ದೂರದ ಪೋರ್ಚುಗಲ್(portugal) ದೇಶದಲ್ಲಿ ಭಾರತೀಯರೆಲ್ಲರೂ ಹೆಮ್ಮೆ ಪಡುವ ಸಂಗತಿಯೊಂದು ಜರುಗಿದೆ. ಪೋರ್ಚುಗಲ್ ದೇಶದ ಈ ನಡೆ ಭಾರತೀಯರೆಲ್ಲರಿಗೂ ಖುಷಿ ಕೊಡುವಂತಿದೆ.

ಸದ್ಯ ದೇಶದಲ್ಲಿ ಹರಡುತ್ತಿರುವ ಕೊರೋನಾ ಸಾಂಕ್ರಾಮಿಕ ಸ್ಥಿತಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಪೋರ್ಚುಗಲ್ ತನ್ನ ಸಾಂಪ್ರದಾಯಿಕ ಪ್ರಖ್ಯಾತ ಕಟ್ಟಡವಾದ ಪ್ಯಾಕೋಸ್ ಡೊ ಕಾನ್ಸೆಲ್ಹೋವನ್ನು(Pacos do Concelho) ಭಾರತೀಯ ತ್ರಿವರ್ಣ ಧ್ವಜದ ಛಾಯೆಗಳಲ್ಲಿ ಬೆಳಗಿಸಿತು. 

ಹಾರಿತೋ ಹಾರಿತು ಭಾರತದ ಬಾವುಟ

ಭಾರತಕ್ಕೆ ತಮ್ಮ ಬೆಂಬಲ ಮತ್ತು ಭರವಸೆಯ ಸಂದೇಶವನ್ನು ತೋರಿಸಲು ವಿಸಿಟ್ ಪೋರ್ಚುಗಲ್ (Visit Portugal) ಈ ವಿಧಾನವನ್ನು ಕೈಗೊಂಡಿದೆ. ಲಿಸ್ಬನ್ ನಗರದ ಹೃದಯಭಾಗದಲ್ಲಿ ಸ್ಥಾಪಿಸಲಾದ ಈ 70 ಮೀಟರ್ ಎತ್ತರದ ಕಟ್ಟಡವು ಅದರ ಕ್ಯಾರಿಲ್ಲನ್ ಗಡಿಯಾರಕ್ಕೆ ಹೆಸರುವಾಸಿಯಾಗಿದೆ.

ಉತ್ತರ ಪೋರ್ಚುಗಲ್‌ನ ಪೋರ್ಟೊ(porto) ನಗರದಲ್ಲಿ ಕಳೆದ ವಾರ ಮೇ ತಿಂಗಳಲ್ಲಿ ಪಲಾಶಿಯೊ ಡಿ ಕ್ರಿಸ್ಟಲ್‌ನಲ್ಲಿ (Palacio de Cristal) ಇಯು-ಇಂಡಿಯಾ ಲೀಡರ್ ಹೈಬ್ರಿಡ್ ಸಭೆಯನ್ನು ಆಯೋಜಿಸಿತ್ತು.

ನೀವುಇದನ್ನುಇಷ್ಟಪಡಬಹುದು: ನಾಲ್ಕು ಖಂಡಗಳ ಅತಿ ಎತ್ತರದ ಶಿಖರಗಳನ್ನೇರಿ ದೇಶದ ಧ್ವಜ ನೆಟ್ಟ ಕನ್ನಡ ನಾಡಿನ ಹೆಮ್ಮೆಯ ದೇಶಪ್ರೇಮಿ ನಂದಿತಾ ನಾಗನಗೌಡರ್

ಭಾರತದ ವಿಸಿಟ್‌ ಪೋರ್ಚುಗಲ್‌ನ ನಿರ್ದೇಶಕಿ ಕ್ಲೌಡಿಯಾ ಮಾಟಿಯಾಸ್, “ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಈ ಸವಾಲಿನ ಸಮಯದಲ್ಲಿ ಪೋರ್ಚುಗಲ್ ತನ್ನ ಒಗ್ಗಟ್ಟನ್ನು ಮತ್ತು ಭರವಸೆ ತುಂಬಿದ ಶಕ್ತಿಯ ಸಂದೇಶವನ್ನು ಎಲ್ಲಾ ಭಾರತೀಯರಿಗೆ ವ್ಯಕ್ತಪಡಿಸುತ್ತದೆ. ಪೋರ್ಟೊದಲ್ಲಿ ಭಾರತೀಯ ತ್ರಿವರ್ಣ ಧ್ವಜದ ಮುಖಾಂತರ ಪ್ರಕಾಶಮಾನವಾದ ಹೆಗ್ಗುರುತನ್ನು ಬೆಳಗಿಸುವ ಮೂಲಕ ನಾವು ವೇಗದ ಚೇತರಿಕೆಯ ಶುಭಾಶಯಗಳನ್ನು ಭಾರತಕ್ಕೆ ಕಳುಹಿಸುತ್ತಿದ್ದೇವೆ ”ಎಂದು ಹೇಳಿದರು.

ಪಾರಂಪರಿಕ ನಗರಗಳಲ್ಲಿ ಒಂದು

ವಿಶ್ವದ ಪಾರಂಪರಿಕ ನಗರಗಳಲ್ಲಿ ಒಂದಾದ, ಪೋರ್ಟೊ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಗತಕಾಲದ ಲೂಯಿಸ್ ಸೇತುವೆ (Luís I bridge), ಕ್ಯಾಥೆಡ್ರಲ್ (the cathedral) ಮತ್ತು ಸಾವೊ ಫ್ರಾನ್ಸಿಸ್ಕೊ ​​ಚರ್ಚ್ (Church of São Francisco) ಸೇರಿದಂತೆ ಕೆಲವು ಐತಿಹಾಸಿಕ ಸ್ಮಾರಕಗಳಿಗೆ ಈ ನಗರ ನೆಲೆಯಾಗಿದೆ.

ಪೋರ್ಚುಗಲ್ ದೇಶದ ಕರಾವಳಿ ಭಾಗದಲ್ಲಿರುವ ಈ ನಗರವು ಐತಿಹಾಸಿಕತೆಗೆ ಮತ್ತು ವೈನ್(Wine) ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಬೀದಿಗಳಲ್ಲಿ ವ್ಯಾಪಾರಿಗಳ ಮನೆಗಳು ಮತ್ತು ಕೆಫೆಗಳ ಜೊತೆಗೆ ಸಣ್ಣ ಗುಮ್ಮಟಗಳು ಕಾಣಸಿಗುತ್ತವೆ. 19 ನೇ ಶತಮಾನದ ಪ್ಯಾಲೆಸಿಯೊ ಡಿ ಬೊಲ್ಸಾ (ಅರಮನೆ)(Palácio de Bolsa) ಯನ್ನು ಯುರೋಪಿಯನ್ ಹೂಡಿಕೆದಾರರನ್ನು ಮೆಚ್ಚಿಸಲು ನಿರ್ಮಿಸಲಾಗಿದೆ.

ಈ ನಗರವು ಲೆಲ್ಲೊ ಎಂಬ ವಿಶ್ವದ ಅತ್ಯಂತ ಹಳೆಯ ಪುಸ್ತಕ ಮಳಿಗೆಗೆ ಹೆಸರುವಾಸಿಯಾಗಿದೆ. ಇದೇ ಪುಸ್ತಕದಂಗಡಿಯೇ ಜಾಗತಿಕವಾಗಿ ಪ್ರಸಿದ್ಧವಾದ ಹ್ಯಾರಿ ಪಾಟರ್(Harry Potter) ಸರಣಿಯ ಲೇಖಕಿ ಜೆ.ಕೆ. ರೌಲಿಂಗ್(J.K. Rowling) ಅವರಿಗೆ ಸ್ಫೂರ್ತಿ ತುಂಬಿತ್ತು. ಅದೇ ಸ್ಫೂರ್ತಿಯಿಂದಲೇ ಅವರು ಇಡೀ ಜಗತ್ತು ಗುರುತಿಸುವಷ್ಟರ ಮಟ್ಟಿಗೆ ಬೆಳೆದಿದ್ದು ನಿಜಕ್ಕೂ ಖುಷಿಕೊಡುವ ಸಂಗತಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Exit mobile version