ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಲಡಾಕ್ ನಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ರಸ್ತೆ

ಭಾರತದ ಇದೀಗ ವಿಶ್ವದಲ್ಲಿಯೇ ಅತಿ ಎತ್ತರದ ರಸ್ತೆ ನಿರ್ಮಾಣ ಮಾಡುವುದರ ಮೂಲಕ ಮತ್ತೊಮ್ಮೆ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಜಮ್ಮು-ಕಾಶ್ಮೀರದ ಪೂರ್ವ ಲಡಾಖ್‌ನ ಉಮ್ಲಿಂಗ್ಲಾ ಪಾಸ್‌ನಲ್ಲಿ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ ವಿಶ್ವದ ಅತಿ ಎತ್ತರದ ರಸ್ತೆಯನ್ನು ನಿರ್ಮಿಸಿದ್ದು, ವಿಶ್ವದಲ್ಲೇ ಅತಿ ಎತ್ತರದ ಮೋಟಾರು ವಾಹನ ಸಂಚರಿಸಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

  • ಮಧುರಾ ಎಲ್ ಭಟ್

ಜಮ್ಮು-ಕಾಶ್ಮೀರದ ಪೂರ್ವ ಲಡಾಖ್‌ನ ಉಮ್ಲಿಂಗ್ಲಾ ಪಾಸ್‌ನಲ್ಲಿಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ ವಿಶ್ವದ ಅತಿ ಎತ್ತರದ ರಸ್ತೆಯನ್ನು 19,300 ಅಡಿ ಎತ್ತರದಲ್ಲಿ ನಿರ್ಮಿಸಿದ್ದು ಈ ಮೂಲಕ ಎತ್ತರದ ರಸ್ತೆ ನಿರ್ಮಾಣದಲ್ಲಿ ಜಾಗತಿಕ ದಾಖಲೆಯನ್ನು ಸೃಷ್ಟಿಸಿದೆ ಮತ್ತು ವಿಶ್ವದಲ್ಲೇ ಅತಿ ಎತ್ತರದ ಮೋಟಾರು ವಾಹನ ಸಂಚರಿಸಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Umling La Ladak Eastern Ladakh Worlds Highest Motorable Road Border Roads Organization

18,953 ಅಡಿಗಳಷ್ಟು ಎತ್ತರದ ಜ್ವಾಲಾಮುಖಿ ಉಟುರುಂಕು ಬಳಿ ಇರುವ ರಸ್ತೆಯ ಬೊಲಿವಿಯಾದ ದಾಖಲೆಯನ್ನು ಈ ದಾಖಲೆ ಮುರಿದಿದೆ .ಆದರೆ ಇದರ ನಿರ್ಮಾಣದ ಸಮಯದಲ್ಲಿ ಕಠಿಣ ಭೂಪ್ರದೇಶ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಹಿಡಿತ ಮತ್ತು ಸ್ಥಿತಿಸ್ಥಾಪಕತ್ವದಿಂದಾಗಿ ಬಿ ಆರ್ ಒ ಈ ಸಾಧನೆ ಮಾಡಿದೆ ಎಂದೂ ರಕ್ಷಣಾ ಸಚಿವಾಲಯ ತಿಳಿಸಿದೆ.

ನೀವು ಇದನ್ನು ಇಷ್ಟ ಪಡಬಹುದು: ಬೆಂಗಳೂರಿನಲ್ಲಿ ಭಾರತದ ಪ್ರಥಮ ಸುರಂಗ ಅಕ್ವೇರಿಯಂ

ಉಮ್ಲಿಂಗ್ಲಾ ಪಾಸ್‌ ಮೂಲಕ ಹಾದುಹೋಗುವ 52 ಕಿಮೀ ಉದ್ದದ ಡಾಂಬರ್ ರಸ್ತೆ ಪೂರ್ವ ಲಡಾಖ್‌ನ ಚುಮಾರ್ ಸೆಕ್ಟರ್‌ನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಮತ್ತು 86 ಕಿ.ಮೀ. ಉದ್ದದ ರಸ್ತೆಯು ಲೇಹ್‌ನಿಂದ 230 ಕಿ.ಮೀ. ದೂರದ ಚಿಸುಮ್ಲೆ ಹಾಗೂ ಡೆಮ್ಚೋಕ್‌ ಎಂಬ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿದ್ದು, ಈ ಹಳ್ಳಿಗಳು ಭಾರತ-ಚೀನಾ ಪೂರ್ವ ಗಡಿ ಬಳಿ ಇವೆ ಎಂದು ಬಿಆರ್‌ಒ ವಕ್ತಾರರು ತಿಳಿಸಿದ್ದಾರೆ.

Umling La Ladak Eastern Ladakh Worlds Highest Motorable Road Border Roads Organization

ಇನ್ನೂ ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಮೈನಸ್‌ 10-20 ತಾಪಮಾನವಿದ್ದರೆ, ಚಳಿಗಾಲದಲ್ಲಿ ಮೈನಸ್‌ 40ಕ್ಕಿಳಿಯುತ್ತದೆ. ಆಮ್ಲಜನಕದ ಪ್ರಮಾಣ ಕೂಡಾ ಸಾಮಾನ್ಯ ಪ್ರದೇಶಗಳಿಗಿಂತ ಶೇ.50ರಷ್ಟು ಕಡಿಮೆ ಇರುತ್ತದೆ. 

ಇನ್ನೂ ಲಡಾಖ್‌ನಲ್ಲಿರುವ ಈ ರಸ್ತೆಯು ಯಾವೆಲ್ಲ ರಸ್ತೆಗಳಿಗಿಂತ ಎತ್ತರದಲ್ಲಿದೆ ಎಂದು ನೋಡುವುದಾದರೆಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗಳಿಗಿಂತ ಹೆಚ್ಚಿನ ಎತ್ತರದಲ್ಲಿದೆ, ನೇಪಾಳದಲ್ಲಿನ ದಕ್ಷಿಣ ಬೇಸ್ ಕ್ಯಾಂಪ್ 17,598 ಅಡಿ ಎತ್ತರದಲ್ಲಿದೆ. ಸಿಯಾಚಿನ್ ಗ್ಲೇಸಿಯರ್‌ಗಿಂತ ಹೆಚ್ಚು ಎತ್ತರದಲ್ಲಿದೆ. ಸಿಯಾಚಿನ್‌ 17,700 ಅಡಿ ಎತ್ತರದಲ್ಲಿದ್ದರೆ, ಲೇಹ್‌ನ ಖರ್ದುಂಗ್ ಲಾ ಪಾಸ್ 17,582 ಅಡಿ ಎತ್ತರದಲ್ಲಿದೆ.

Umling La Ladak Eastern Ladakh Worlds Highest Motorable Road Border Roads Organization

ಹೀಗೆ ಲಡಾಖ್‌ನಲ್ಲಿ ನಿರ್ಮಾಣವಾದ ಈ ರಸ್ತೆಯು ವಿಶ್ವದಲ್ಲಿಯೇ ದಾಖಲೆ ಬರೆಯುವುದರ ಮೂಲಕ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button