ಈಶಾನ್ಯ ಶರ್ಮ ಯುವ ಛಾಯಾಗ್ರಾಹಕ. ಮೂಲತಃ ಸಾಗರದವರು. ಕಾಡಿನ ಮಧ್ಯದಲ್ಲಿನ ಮನೆಯಲ್ಲಿ ಕಳೆದ ಬಾಲ್ಯ, ಚಿಕ್ಕ ವಯಸ್ಸಿನಲ್ಲಿ ಕಾಡಿನ ಬಗ್ಗೆ ಮೂಡಿದ ಕುತೂಹಲ ಅದಕ್ಕೆ ಜೊತೆಯಾದ ಕ್ಯಾನನ್ ಕ್ಯಾಮೆರಾ. ಕಾಡು, ಕ್ಯಾಮೆರಾದ ಒಡನಾಟ ಇಂದು ಪ್ರಸಿದ್ಧ ಛಾಯಾಗ್ರಾಹಕರಾಗಲು ಕಾರಣ. ಇದು ಯುವ ಛಾಯಾಗ್ರಾಹಕ ಈಶಾನ್ಯ ಶರ್ಮರ ಸಾಧನೆಯ ಕಥೆ.
ಮಹಾಲಕ್ಷ್ಮಿ ದೇವಾಡಿಗ
ಹವ್ಯಾಸವನ್ನು ವೃತ್ತಿಯಾಗಿಸಿಕೊಂಡು, ಅದರ ಜೊತೆ ಸ್ನೇಹ ಬೆಳೆಸಿಕೊಂಡು ಗುರಿ ಸಾಧಿಸುವ ಮಂದಿ ಅಪರೂಪ. ಅಂತಹ ಅಪರೂಪದ ಜನರಲ್ಲಿ ಈಶಾನ್ಯ ಶರ್ಮ ಒಬ್ಬರು . 1999ರಲ್ಲಿ ಪ್ರಕೃತಿ ಮಡಿಲಿನ ಸಾಗರದಲ್ಲಿ ಜನಿಸಿದರು. ಕಾಡಿನ ಮಧ್ಯೆ ಮನೆ ಇದ್ದ ಕಾರಣ ಹೆಚ್ಚಿನ ಕಾಡಿನ ಜೊತೆ ಕಳೆದಿದ್ದರು. ಈ ಒಡನಾಟ ಛಾಯಾಗ್ರಾಹಣ ಕ್ಷೇತ್ರದಲ್ಲಿ ಗುರುತಿಸಲು ಕಾರಣ.
ಕಾಡಿನ ಮಧ್ಯೆ ಕಳೆದ ಬಾಲ್ಯ
ತಂದೆ ಆಯುರ್ವೇದಿಕ್ ವೈದ್ಯರು,ಪರಿಸರ ಪ್ರೇಮಿ. ಕಾಡಿಗೆ ಬರುತ್ತಿದ್ದ ಬೋಟನಿಕ್ ವಿದ್ಯಾರ್ಥಿಗಳ ಜೊತೆ ಹೋಗಿ ಅವರ ಸಂಶೋಧನೆಗಳಲ್ಲಿ ತಾವು ಕೂಡ ಭಾಗಿಯಾಗಿ ಅದರಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡರು. ತಮ್ಮ ಸುತ್ತಮುತ್ತ ಇರುವ ಜೀವಿಗಳನ್ನು ನೋಡುತ್ತಾ ಬೆಳೆದು ಬಂದರು.
ಒಮ್ಮೆ ಏಳನೇ ತರಗತಿಯಲ್ಲಿರುವಾಗ ತಂದೆಯ ಸ್ನೇಹಿತರೊಬ್ಬರು ತಮಗೆ ಹಕ್ಕಿಗೂಡು ಬೇಕೆಂದು ಹೇಳಿದ್ದರು ನನ್ನ ಅಣ್ಣನ ಜೊತೆ ಸೇರಿ ಕಾಡನ್ನು ಸುತ್ತುವಾಗ ಕೋನಾರ್ಕ್ ಎಂಬ ಹಕ್ಕಿಯ ಛಾಯಾಚಿತ್ರ ತೆಗೆದು ಹಾಗೆ ಗೂಡನ್ನು ತಂದು ನೀಡಿದ ನಂತರ ಹಕ್ಕಿಯ ಫೋಟೋವನ್ನು ಗಮನಿಸಿದ ಖುಷಿಪಟ್ಟ ತಂದೆಯ ಸ್ನೇಹಿತರು ಮಾರನೆ ದಿನ ಬಂದು ಕ್ಯಾನನ್ ಕ್ಯಾಮೆರಾ ನೀಡಿ ಹೋದರು. ನಂತರದ ದಿನಗಳಲ್ಲಿ ಕಾಡಿಗೆ ಹೋಗುವಾಗ ಕ್ಯಾಮೆರಾವನ್ನು ಕೂಡ ತಮ್ಮ ತೆಗೆದುಕೊಂಡು ಹೋಗಿ ಸುತ್ತಮುತ್ತ ಇರುವ ಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸರಿ ಹಿಡಿಯಲು ಆರಂಭಿಸಿದೆ, ಎಂದು ಹೇಳುತ್ತಾರೆ.
ರಂಗಭೂಮಿಯಲ್ಲಿ ಆಸಕ್ತಿ
ಫೋಟೋಗ್ರಫಿ ಹವ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಕೂಡ ಆಸಕ್ತಿ ಹೊಂದಿದ್ದಾರೆ. ಹಲವಾರು ನಾಟಗಳಲ್ಲಿ ಅಭಿನಯಿಸಿದ್ದಾರೆ. ಸಿ ಸ್ಟಾಪ್ ಅನಿಮೇಶನ್ ಕಾಲೇಜ್ ಸೇರಿಕೊಂಡು ಅಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾಭ್ಯಾಸದ ಜೊತೆಗೆ ಫೋಟೋಗ್ರಾಫಿ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರಂತೆ. ಲಾಕ್ ಡೌನ್ ಬಳಿಕ ತಮ್ಮ ಊರಿಗೆ ಬಂದು ಮನೆಯಲ್ಲಿ ತಮ್ಮ ಕಲಿಕೆಯನ್ನು ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.
ಫೋಟೋಗ್ರಾಫಿಯಲ್ಲಿ ಇವರ ಹೆಸರು ಪ್ರಚಲಿತವಾಗಲು ಕಾರಣ 6-7 ವರ್ಷದ ಹಿಂದಿನ ಘಟನೆ.
ಒಮ್ಮೆ ಆಟವಾಡುತ್ತಿದ್ದಾಗ ಒಂದು ಹಾವು ಇನ್ನೊಂದು ಹಾವನ್ನು ನುಂಗುತ್ತಿದ್ದ ಫೋಟೋ ಸೆರೆ ಹಿಡಿದರಂತೆ. ನಂತರ ಆ ಫೋಟೋವನ್ನು ಒಂದೆರಡು ವರ್ಷದ ಹಿಂದೆ ಆತ್ಮೀಯರ ಸಲಹೆ ಮೇರೆಗೆ ಜಾಲತಾಣದಲ್ಲಿ ಹಂಚಿಕೊಂಡರು. ಫೋಟೋ ಡಿಸ್ಕವರಿ ಹಾಗೂ ಇನ್ನಿತರ ವೆಬ್ಸೈಟ್ಗಳಲ್ಲಿ ಪ್ರಶಂಸೆಯನ್ನು ಪಡೆದುಕೊಂಡಿತು. ಇದರಿಂದಲೇ ತನಗೆ ಇನ್ನೂ ಹೆಚ್ಚು ಫೋಟೋಗ್ರಾಫಿ ಬಗ್ಗೆ ಆಸಕ್ತಿ ಹಾಗೂ ಒಲವು ಮೂಡಿತು ಎಂದು ಈಶಾನ್ಯ ಶರ್ಮರ ಅಭಿಪ್ರಾಯ. ಇಂತಹ ದೃಶ್ಯಗಳು ತನಗೆ ಸರ್ವೇ ಸಾಮಾನ್ಯ, ಆಶ್ಚರ್ಯವೇನೂ ಇಲ್ಲ ಎನ್ನುವುದು ಈಶಾನ್ಯ ಶರ್ಮಾರ ಮಾತು. ಇವರು ತಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಕಳೆಯಲು ಇಷ್ಟಪಡುತ್ತಾರೆ.
ನೀವುಇದನ್ನುಇಷ್ಟಪಡಬಹುದು: ಫೋಟೋಗ್ರಫಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ ಕುಡ್ಲದ ಹುಡುಗ ಫೋಟೋಗ್ರಾಫರ್ ಅಪುಲ್ ಆಳ್ವ ಇರಾ
ಛಾಯಾಗ್ರಾಹಕರ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರು.
ಬೇರೆ ಊರಿಗೆ ವಿದ್ಯಾಭ್ಯಾಸಕ್ಕೆ ಹೋದರು ಕೂಡ ವಾರಕ್ಕೆ ಒಮ್ಮೆಯಾದರೂ ಮನೆಗೆ ಬಂದು ಕಾಡಿನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾ, ವನ್ಯ ಜೀವಿ ಛಾಯಾಗ್ರಹಣ ಮಾಡುತ್ತಾ ಸಮಯ ಕಳೆಯುತ್ತಾರೆ . ಇವರಿಗೆ 2021ರ ಯುವ ಛಾಯಾಗ್ರಾಹಕರ ಸಾಲಿನಲ್ಲಿ ಆಸ್ಕರಿ ಪ್ರಶಸ್ತಿ ಇತ್ತೀಚೆಗೆ ತಮ್ಮದಾಗಿಸಿಕೊಂಡಿದ್ದಾರೆ. ತ ಮ್ಮ ಸುತ್ತಮುತ್ತಲಿನ ಕಾಡಿನಲ್ಲಿರುವ ಜೀವಿಗಳ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಜಗತ್ತಿಗೆ ತೋರಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.
ಏಕಾಗ್ರತೆ ವಹಿಸಿ ಕೆಲಸ ಮಾಡಿದರೆ ಅದೆಷ್ಟೇ ಕಠಿಣವಾದರೂ ತಮ್ಮ ಕನಸನ್ನು ಈಡೇರಿಸಿ ಕೊಳ್ಳಬಹುದು . ಜಗತ್ತನ್ನು ಸುತ್ತುವ ಮೊದಲು ನಾವು ನಮ್ಮ ಹಿತ್ತಲಿನಿಂದ ಹಿಡಿದು ನಮ್ಮ ಸುತ್ತ ಇರುವ ವಿಷಯಗಳನ್ನು ಗಮನಿಸಬೇಕು. ಅದರ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ಇತರ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ನಾವು ಮಾಡೋ ಕೆಲಸದ ಬಗ್ಗೆ ನಿಮಗೆ ಪೂರ್ಣ ಪ್ರಮಾಣದ ಮಾಹಿತಿ ತಿಳಿದಿದ್ದರೆ ಒಳ್ಳೆಯದು ಎನ್ನುತ್ತಾರೆ.
ಛಾಯಾಗ್ರಹಣ ಮಾಡುವಾಗ ಇನ್ನೆಲ್ಲೋ ಹೋಗಿ ಫೋಟೋ ತೆಗೆಯುವ ಬದಲು ನಮ್ಮ ಸುತ್ತಮುತ್ತ ಇರುವ ನಮ್ಮ ಹಿತ್ತಲಿನಲ್ಲಿರುವ ವಿಷಯಗಳನ್ನು ಗಮನಿಸುತ್ತಾ ಅದನ್ನು ಸೆರೆಹಿಡಿದು ಮೊದಲು ಮಾಹಿತಿ ಸಂಗ್ರಹಿಸಬೇಕು. ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಎನ್ನುತ್ತಾರೆ. ಈಶಾನ್ಯ ಶರ್ಮಾರ ಸಾಧನೆಯ ಹಾದಿ ಮುಂದುವರೆಯಲಿ. ಇನ್ನಷ್ಟು ಪ್ರಶಸ್ತಿಗಳು ಇವರು ಮುಡಿಗೇರಲಿ ಎನ್ನುವುದು ನಮ್ಮೆಲ್ಲರ ಆಶಯ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.