ದೂರ ತೀರ ಯಾನವಿಂಗಡಿಸದವಿಸ್ಮಯ ವಿಶ್ವ

ಭಾರತ ಸೇರಿದಂತೆ 7 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ

ಪ್ರಾಯೋಗಿಕ ಯೋಜನೆ (Pilot project)ಯ ಅಂಗವಾಗಿ, ಭಾರತ, ಚೀನಾ, ರಷ್ಯಾ ಸೇರಿದಂತೆ ಏಳು ದೇಶಗಳಿಗೆ ಮಾರ್ಚ್ 31, 2024ರವರೆಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ.

ಉಜ್ವಲಾ ವಿ.ಯು.

ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಈ ಘೋಷಣೆ ಮಾಡಿದ್ದಾರೆ. ಅವರು “ಪ್ರಾಯೋಗಿಕ ಯೋಜನೆ ಅಡಿಯಲ್ಲಿ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ ದೇಶಗಳಿಗೆ ಮಾರ್ಚ್ 31, 2024ರವರೆಗೆ ವೀಸಾ ಮುಕ್ತ ಪ್ರವೇಶವನ್ನು ಜಾರಿಗೆ ತರಲು ಕ್ಯಾಬಿನೆಟ್ ಅನುಮೋದಿಸಿದೆ” ಎಂದು ತಿಳಿಸಿದ್ದಾರೆ.

Sri Lankan Cabinet Approves Free Tourist Visas For Visitors to seven countries including India

ಕಳೆದ ವಾರವಷ್ಟೇ, ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಕ್ಯಾಬಿನೆಟ್ ಸಭೆನಲ್ಲಿ ಶ್ರೀಲಂಕಾಗೆ ಪ್ರವಾಸಕ್ಕಾಗಿ ಬರುವ ಐದು ದೇಶಗಳಿಗೆ ವೀಸಾ ಮುಕ್ತ (Visa Free entry) ಪ್ರವೇಶವನ್ನು ನೀಡಬೇಕೆಂದು ಪ್ರಸ್ತಾಪಿಸುವ ಕ್ಯಾಬಿನೆಟ್ ಪೇಪರ್ ನ್ನು ಮಂಡಿಸಿತ್ತು ತದನಂತರ ಅ.24 ರಂದು ಏಳು ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಹೆಚ್ಚಿನ ಹಣದುಬ್ಬರ, ಆರ್ಥಿಕತೆಯ ಕುಸಿತವನ್ನು ಅನುಭವಿಸುತ್ತಿರುವ ಈ ದ್ವೀಪ ರಾಷ್ಟ್ರವು ಆರ್ಥಿಕತೆಯ ಸುಧಾರಣೆಗಾಗಿ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ.

Srilanka Tourism

ಸೆಪ್ಟೆಂಬರನಲ್ಲಿ 30,000ಕ್ಕೂ ಅಧಿಕ ಭಾರತೀಯ ಪ್ರವಾಸಿಗರು ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. ಒಟ್ಟು 26% ಪ್ರವಾಸಿಗರು ಭಾರತೀಯರಾಗಿರುವ ಮೂಲಕ ಶ್ರೀಲಂಕಾಗೆ ಅತಿ ಹೆಚ್ಚು ಭೇಟಿ ನೀಡುವ ದೇಶ ಭಾರತವಾಗಿದೆ. ನಂತರ ಚೀನಾ ಎರಡನೇ ಸ್ಥಾನವನ್ನು ಹೊಂದಿದ್ದು, 8,000 ಚೀನಾ ಪ್ರವಾಸಿಗರು ಶ್ರೀಲಂಕಾಗೆ ಭೇಟಿ ನೀಡಿರುತ್ತಾರೆ ಎಂದು PTI ಸುದ್ದಿ ವಾಹಿನಿ ವರದಿ ನೀಡಿದೆ.

ಕ್ಯಾಬಿನೆಟ್ ಮುಂದಿನ ದಿನಗಳಲ್ಲಿ ಶ್ರೀಲಂಕಾದ ಹಲವು ಪ್ರವಾಸಿ ತಾಣಗಳಲ್ಲಿ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಕೂಡಾ ಹೊಂದಿದೆ.

ನೀವು ಇದನ್ನೂ ಇಷ್ಟಪಡಬಹುದು: ಭಾರತೀಯ ಪಾಸ್ ಪೋರ್ಟ್ ಶ್ರೇಣಿ ಸುಧಾರಿಸಿರುವ ಕಾರಣ 57 ದೇಶಗಳಿಗೆ ಪ್ರವೇಶ ಮುಕ್ತ

ವೀಸಾ-ಮುಕ್ತ ಪ್ರವೇಶ ಮತ್ತು ಇ-ಟಿಕೆಟಿಂಗ್ (E- Ticketing) ವ್ಯವಸ್ಥೆಯು ಪ್ರವಾಸಿಗರಿಗೆ ವೀಸಾಗಳನ್ನು ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯವನ್ನು ಉಳಿಸುತ್ತದೆ ಮತ್ತು ಶ್ರೀಲಂಕಾದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಆರ್ಥಿಕತೆಯ ಸುಧಾರಣೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟ್ರಾವೆಲ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button