ವಿಂಗಡಿಸದ

ಶೀಘ್ರದಲ್ಲೇ ಕೇರಳ – ದುಬೈ ಸಂಪರ್ಕಿಸುವ ಕ್ರೂಸ್ ಸೇವೆ ಆರಂಭ

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇರಳ ಸರ್ಕಾರವು ಮುಂದಾಗಿದೆ. ಇದು ಬೇಪೋರ್-ಕೊಚ್ಚಿ-ದುಬೈಗಳ (Beypore-Kochi-Dubai) ನಡುವೆ ಕ್ರೂಸ್ ಸೇವೆಗೆ (Cruise Service) ಅನುಮತಿಯನ್ನು ನೀಡಿದೆ.

ಶೀಘ್ರದಲ್ಲೇ ಈ ಸೇವೆ ಪ್ರಾರಂಭಗೊಳ್ಳಲಿದ್ದು, ಅನಿವಾಸಿ ಭಾರತೀಯ ಪ್ರಯಾಣಿಕರ ನಿರಂತರ ಬೇಡಿಕೆಯ ಮೇರೆಗೆ ಇದಕ್ಕೆ ಅನುಮೋದನೆಯನ್ನು ನೀಡಲಾಗಿತು.

Kerala to launch Beypore-Kochi-Dubai Cruise Service

ಸೇವೆಯನ್ನು ಆರಂಭಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು ಈ ಕುರಿತು ಕೇಂದ್ರ ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಅವರು ಕೂಡಾ ಇದರ ಅದೇ ಕುರಿತು ಮಾತನಾಡಿದ್ದಾರೆ.

ಈ ಸೇವೆಯು ವಿದೇಶದಲ್ಲಿ ವಾಸಿಸುವ ಅನಿವಾಸಿ ಕೇರಳಿಗರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ವಿಮಾನ ದರಕ್ಕೆ ಪರ್ಯಾಯವೂ ಕೂಡಾ ಇದಾಗಲಿದೆ. ಡಿಸೆಂಬರ್‌ನ ಶಾಲಾ ವಿರಾಮದ ಮೊದಲು ಇದು ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಮಾರ್ಗವು ಯಾವುದೇ ವಿಮಾನ ದರದ ಮೂರನೇ ಒಂದು ಭಾಗದಷ್ಟು ವೆಚ್ಚವನ್ನು ಹೊಂದಿದೆ. ಕ್ರೂಸ್ ನ ಏಕಮುಖ ಟಿಕೆಟ್‌ ನ ಬೆಲೆ ಸುಮಾರು INR 10,000 (Dh 442) – INR 15,000 (Dh 663). ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ 200 ಕೆಜಿಯಷ್ಟು ಸಾಮಾನುಗಳನ್ನು ಇದರಲ್ಲಿ ಸಾಗಿಸಬಹುದು.

ಕಾರ್ಗೋ ಕಂಪನಿಗಳ ಸಹಯೋಗದೊಂದಿಗೆ, ನೌಕೆಯು 1,250 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಮಿಂಟ್ ವರದಿಯ ಪ್ರಕಾರ, ಹಡಗು ತನ್ನ ಗಮ್ಯಸ್ಥಾನವನ್ನು ತಲುಪಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ.

ಭಾರತೀಯ ಅಸೋಸಿಯೇಶನ್ ಶಾರ್ಜಾದ ಅಧ್ಯಕ್ಷ ವೈ ಎ ರಹೀಮ್ ಅವರು “ಯುಎಇಯಲ್ಲಿರುವ (UAE) ಭಾರತೀಯ ವಲಸಿಗರಿಗೆ ಅತಿಯಾದ ವಿಮಾನಯಾನ ಶುಲ್ಕವನ್ನು ನಿಗ್ರಹಿಸುವ ಉಪಕ್ರಮವಾಗಿ ಈ ಸೇವೆಯು ಆರಂಭಗೊಳ್ಳುತ್ತಿದೆ.

ಕ್ರೂಸ್ ಸೇವೆಯು ಆರಂಭದಲ್ಲಿ ಕೊಚ್ಚಿ ಮತ್ತು ಬೇಪೋರ್ (Beypore) ಅನ್ನು ಗುರಿಯಾಗಿಸಿಕೊಂಡಿದೆ. ನಂತರ ಪೈಪ್‌ಲೈನ್‌ನ ಮೂಲಕ ವಿಝಿಂಜಮ್‌ಗೆ ವಿಸ್ತರಿಸಲು ಯೋಜಿಸಲಾಗಿದೆ.” ಎಂದು ತಿಳಿಸಿದ್ದಾರೆ.

ಕೊಚ್ಚಿ-ದುಬೈ ಮಾರ್ಗಕ್ಕಾಗಿ ನಿರ್ದಿಷ್ಟವಾಗಿ ಗೊತ್ತುಪಡಿಸಿದ ಸಂಪೂರ್ಣ ಸುಸಜ್ಜಿತ ಹಡಗನ್ನು ಬಳಸಿಕೊಳ್ಳಲಾಗುತ್ತದೆ. ಕೊಚ್ಚಿಯಲ್ಲಿ ಬೇರೆ ರಾಜ್ಯಕ್ಕಾಗಿ ನಿರ್ಮಿಸಲಾದ ಹಡಗನ್ನು ಈಗ ಕೇರಳ ಗಲ್ಫ್ ಸೇವೆಗಾಗಿ (Gulf Service) ಮರುರೂಪಿಸಲಾಗಿದೆ.

ಗಗನಕ್ಕೇರುತ್ತಿರುವ ವಿಮಾನ ದರಗಳಿಂದ ವಲಸಿಗರಿಗೆ ಮುಕ್ತಿ ನೀಡಲು ಸರ್ಕಾರವು ಕಡಿಮೆ ವೆಚ್ಚದ ಈ ಕ್ರೂಸ್ ಸೇವೆಯನ್ನು ಆರಂಭಗೊಳಿಸುತ್ತಿದ್ದು, ಮೂರು ದಿನಗಳ ಕಾಲ ಪ್ರಯಾಣಿಕರು ಅತ್ಯಂತ ಸುಂದರ ಸಮುದ್ರದ ಸೌಂದರ್ಯವನ್ನು ಅನುಭವಿಸುವುದರಲ್ಲಿ ಸಂಶಯವಿಲ್ಲ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button