ವಂಡರ್ ಬಾಕ್ಸ್ವಿಂಗಡಿಸದ

ವಿದೇಶ ಪ್ರಯಾಣ ಮಾಡುತ್ತಿದ್ದೀರಾ? ನಿಮ್ಮ RT-PCR ವರದಿಯಲ್ಲಿ QR code ಇದ್ಯಾ ಚೆಕ್ ಮಾಡಿ

ಮೇ 22ರಿಂದಲೇ ಹೊಸ ನಿಯಮ ಜಾರಿ

ಜಗತ್ತು ನಿಂತಲ್ಲೇ ನಿಂತು ಬಿಟ್ಟ ಭಾವ ಈಗೀಗ ಆವರಿಸಿಕೊಳ್ಳುತ್ತಿದೆ. ಆದರೆ ಜಗತ್ತು ನಿಲ್ಲುವುದಿಲ್ಲ. ಬದುಕೂ ನಿಲ್ಲುವುದಿಲ್ಲ. ಮುಂದೆ ಸಾಗಲೇಬೇಕು. ಈಗ ಕೊರೋನಾ ಇದೆ. ನಾಳೆಯೇ ನೀವು ಭಾರತದಿಂದ ಬೇರೆ ದೇಶಕ್ಕೆ ಹೋಗಬೇಕಾಗಿ ಬರಬಹುದು. ಆಗ RT-PCR ಕೋರೋನಾ ಪರೀಕ್ಷೆಯ ಸರ್ಟಿಫಿಕೇಟ್ ಬೇಕು. ಅದರಲ್ಲಿ ಕಡ್ಡಾಯವಾಗಿ ಏನೇನಿರಬೇಕು?

–      ಆದಿತ್ಯ ಯಲಿಗಾರ

ವಿಶ್ವದಾದ್ಯಂತ ಹರಡಿದ ಕೋರೋನಾ ರೋಗದ ಸಾಂಕ್ರಾಮಿಕತೆಯ ಕಾರಣ ಸಂಪೂರ್ಣ ಪ್ರವಾಸೋದ್ಯಮ(Tourism) ಸ್ತಬ್ದಗೊಂಡಿದೆ. ಕೋವಿಡ್-19(Covid-19) ರೋಗವನ್ನು ತಡೆಯಲು, ಪ್ರಯಾಣಿಕರಲ್ಲಿ ಸುರಕ್ಷತೆಯನ್ನ ಕಾಪಾಡಲು ಕೆಲ ದೇಶಗಳು ಕಟ್ಟುನಿಟ್ಟಿನ ನಿಯಾಮಾವಳಿಗಳನ್ನ ಹೊರಡಿಸಿವೆ.

RT- PCR Test

ಯಾವಾಗ ಎಲ್ಲರೂ ಮುಕ್ತವಾಗಿ ದೇಶದಿಂದ ದೇಶಕ್ಕೆ ಮುಕ್ತವಾಗಿ ಹೋಗಬಹುದು ಎಂದು ಕಾಯುವ ದಿನಗಳು ಬಂದಿವೆ. ಇಂಥಾ ಹೊತ್ತಲ್ಲೇ ಭಾರತ ದೇಶದಿಂದ ವಿದೇಶಕ್ಕೆ ಹೊರಡುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ 19 ನೆಗೆಟಿವ್ ವರದಿ ಹೊಂದಿರುವ ನಿಯಮ ಬಂದಿದೆ. ಆ ನಿಯಮದಲ್ಲಿ ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ಅಂಶ ಒಂದಿದೆ.

ನಿಮ್ಮ RT-PCR ವರದಿಯಲ್ಲಿ QR code ಉಂಟಾ?

ಭಾರತದಿಂದ ಬೇರೆ ದೇಶಕ್ಕೆ ಪ್ರಯಾಣಿಸುವರಿಗೆ ನಾಗರಿಕ ವಿಮಾನಯಾನ ಸಚಿವಾಲಯ(ministry of civil Aviation sates) ಹೊಸ ನಿಯಮವೊಂದನ್ನ ಹೊರಡಿಸಿದೆ. ಆ ಪ್ರಕಾರ ನೀವು ಮೇ 22ರ ನಂತರ ಭಾರತದಿಂದ ಹೊರಹೋಗುತ್ತಿದ್ದರೆ ಒಂದು ಅಂಶ ಗಮನದಲ್ಲಿ ಇಡಬೇಕು

ನೀವುಇದನ್ನುಇಷ್ಟಪಡಬಹುದು: ವಿದೇಶಕ್ಕೆ ಹೋಗುವವರೇ ಗಮನಿಸಿ, ನಿಮಗಿನ್ನು ವ್ಯಾಕ್ಸಿನ್ ಪಾಸ್ ಪೋರ್ಟ್ ಬೇಕಾಗಬಹುದು

ನೀವು ಮಾಡಿಸಿಕೊಂಡ RT-PCR ಕೋರೋನಾ ಪರೀಕ್ಷೆಯ ನೆಗೆಟಿವ್ ವರದಿಯಲ್ಲಿ ಕ್ಯೂಆರ್ ಕೊಡ್ (QR code) ಇರುವುದು ಅತ್ಯಗತ್ಯ. ಕ್ಯೂಆರ್ ಕೋಡ್ ಇಲ್ಲದೆ ಹೊರಹೋಗುವ ಪ್ರಯಾಣಿಕರಿಗೆ ತಮ್ಮ ಅಂತರರಾಷ್ಟ್ರೀಯ ವಿಮಾನಗಳನ್ನು ಹತ್ತಲು ಅನುಮತಿ ನೀಡಲಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಹೊಸ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

QR code

ಭಾರತದಿಂದ ಅಂತರರಾಷ್ಟ್ರೀಯ ವಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಸಂಸ್ಥೆಗಳ(International Flights) ವಿಮಾನಗಳಿಗೆ ಈ ಷರತ್ತು ಅನ್ವಯಿಸುತ್ತದೆ. ಹಾಗಾಗಿ ಒಂದು ವೇಳೆ ನೀವು ವಿದೇಶ ಪ್ರಯಾಣ ಮಾಡುವುದೇ ಆದರೆ ನಿಮ್ಮ RT-PCR ವರದಿಯಲ್ಲಿ QR code ಇರುವಂತೆ ಮರೆಯದೇ ನೋಡಿಕೊಳ್ಳಿ.

ಅಂತಾರಾಷ್ಟ್ರೀಯ ವಿಮಾನಗಳಿಗೆ ಹೊಸ ನಿಯಮ

ವಿಮಾನ ನಿಲ್ದಾಣಗಳಲ್ಲಿ  ತಪ್ಪು ಮತ್ತು ಸುಳ್ಳು ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಗಳ ಬಳಕೆಯನ್ನು ತಡೆಯಲು ಮತ್ತು ಎಲ್ಲಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಮೂಲ ವರದಿಗೆ ಲಿಂಕ್ ಮಾಡುವ QR ಕೋಡ್ ಅನ್ನು ಕನಿಷ್ಠ ದೈಹಿಕ ಸಂಪರ್ಕ ಮತ್ತು ಸಾವಧಾನದಿಂದ ಪರಿಶೀಲನೆ ಮಾಡುತ್ತಾರೆ.

ಕೆಲ ರಾಷ್ಟಗಳು  ತಮ್ಮ ದೇಶಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ನೆಗೆಟಿವ್(Covid -ve) ವರದಿಯನ್ನು ಹೊಂದಿರಬೇಕೆಂಬ ಮಾರ್ಗಸೂಚಿಗಳನ್ನ ಹೊರಡಿಸಿವೆ. ಅಂತಹ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗಷ್ಟೆ ತಮ್ಮ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯ ಕ್ಯೂಆರ್ ಕೋಡ್ ಹೊಂದಿರಬೇಕೆಂಬ ನಿಯಮ ಅನ್ವಯಿಸುತ್ತದೆ ಎಂದು ಜ್ಞಾಪಕ ಪತ್ರವು ಸೂಚಿಸುತ್ತದೆ.

ಯುಎಇಗೆ ಕ್ಯೂಆರ್ ಕೋಡ್ ಕಡ್ಡಾಯ

ಈ ವರ್ಷದ ಆರಂಭದಲ್ಲಿ, ಮೆಟ್ರೊಪೊಲಿಸ್ ಇಂಡಿಯಾ(Metropolis India) ಮತ್ತು ಸಬರ್ಬನ್ ಡಯಾಗ್ನೋಸ್ಟಿಕ್ಸ್ (Suburban Diagnostics) ಸೇರಿದಂತೆ ಅನೇಕ ಪ್ರಮುಖ ರೋಗನಿರ್ಣಯ ಪ್ರಯೋಗಾಲಯಗಳು ಪರೀಕ್ಷೆಯಲ್ಲಿ ಕ್ಯೂಆರ್ ಸಂಕೇತಗಳನ್ನು ನೀಡಲು ಪ್ರಾರಂಭಿಸಿದವು.

ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ವರದಿ ತಕ್ಷಣ ಕಾಣಸಿಗುತ್ತದೆ. ಫೆಬ್ರವರಿಯಲ್ಲಿ, ದುಬೈನ(Dubai) ಆರೋಗ್ಯ ಅಧಿಕಾರಿಗಳು ಯುಎಇಗೆ(UAE) ತೆರಳುವ ಪ್ರಯಾಣಿಕರಿಗೆ ಕ್ಯೂಆರ್ ಕೋಡ್ ಕಡ್ಡಾಯಗೊಳಿಸಿದ್ದಾರೆ. ನೀವು ಭಾರತದಿಂದ ಹೊರಗೆ ವಿಮಾನದಲ್ಲಿ ಪಯಣಿಸುತ್ತಿದ್ದರೆ, ರೋಗನಿರ್ಣಯ ಕೇಂದ್ರದಲ್ಲಿ ಪರೀಕ್ಷೆ ಯನ್ನ ಖಚಿತಪಡಿಸಿಕೊಂಡು ಮತ್ತು ಬಂದ ವರದಿ ನೆಗೆಟಿವ್ ಆಗಿದ್ದಲ್ಲಿ  ವರದಿಯ QR ಕೋಡ್ ಅನ್ನು ಪಡೆಯಿರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button
Translate