ಆಹಾರ ವಿಹಾರಕಾರು ಟೂರುವಿಂಗಡಿಸದ

ಕರ್ನಾಟಕದಲ್ಲಿ ನೋಡಬಹುದಾದ ಶಿವನ ಮಂದಿರಗಳು

ಹಿಂದೂ ಧರ್ಮದಲ್ಲಿ ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ ಹಾಗಾಗಿ ಶಿವನನ್ನು (Lord Shiva)ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗಿದೆ.

ಕರ್ನಾಟಕ ಕೂಡ ಹಲವಾರು ಶಿವನ ದೇವಾಲಯಗಳನ್ನು ಒಳಗೊಂಡಿದೆ.ಅವುಗಳಲ್ಲಿ ಪ್ರಸಿದ್ಧ ಪಡೆದ ಮಂದಿರದ ಬಗ್ಗೆ ಮಾಹಿತಿ ಇಲ್ಲಿದೆ.

ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ(Mahabaleshwar Temple, Gokarna)

ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾದ ಗೋಕರ್ಣದ( Gokarna) ಮಹಾಬಲೇಶ್ವರ ದೇವಾಲಯವು ಇರುವುದು ಉತ್ತರ ಕನ್ನಡ(Uttara Kannada)ಜಿಲ್ಲೆಯಲ್ಲಿ.

Mahabaleshwar Temple, Gokarna

ಶಾಸ್ತ್ರೀಯ ದ್ರಾವಿಡ ಶೈಲಿಯ(Dravid style)ವಾಸ್ತುಶಿಲ್ಪದಲ್ಲಿ ರಚಿಸಲ್ಪಟ್ಟ ಈ ದೇವಾಲಯವು ಕನ್ನಡಿಗರ ಧಾರ್ಮಿಕ ತೀರ್ಥಯಾತ್ರೆಯಾಗಿದೆ. ಈ ದೇವಾಲಯವು ಆತ್ಮಲಿಂಗವನ್ನು ಹೊಂದಿದೆ.

ಮುರ್ಡೇಶ್ವರ, ಭಟ್ಕಳ (Murdeshwar, Bhatkal)

ವಿಶ್ವದ ಎರಡನೇ ಅತೀ ಎತ್ತರದ ಶಿವನ ವಿಗ್ರಹವನ್ನು ಹೊಂದಿದೆ ಎಂಬ ಹೆಗ್ಗಳಿಕೆ ಪಾತ್ರವಾದ ಮುರ್ಡೇಶ್ವರವು(Murdeshwar )ಉತ್ತರ ಕನ್ನಡ ಜಿಲ್ಲೆಯಲ್ಲಿದೆ(Uttara Kannada)

Murdeshwar, Bhatkal

ಈ ದೇವಾಲಯವು ತನ್ನ ಮೂರು ಕಡೆ ಇಂದ ಅರಬ್ಬೀ ಸಮುದ್ರದ ನೀರಿನಿಂದ ಆವೃತವಾಗಿದ್ದು,ಕಂದುಕ ಬೆಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ,ಇಲ್ಲಿ ಅತೀ ಎತ್ತರದ ಗೋಪುರವನ್ನು ನೋಡಬಹುದಾಗಿದೆ.

ಕೋಟಿಲಿಂಗೇಶ್ವರ ದೇವಸ್ಥಾನ (Kotilingeshwara Temple)

ಕೋಟಿಲಿಂಗೇಶ್ವರ ದೇವಸ್ಥಾನವು ಕರ್ನಾಟಕದ ಕೋಲಾರ( Kolar) ಜಿಲ್ಲೆಯ ಕಮ್ಮಸಂದ್ರ ( Kammasandra)ಎನ್ನುವ ಗ್ರಾಮದಲ್ಲಿದೆ.

Lord Shiva temples in Karnataka

ಕಮ್ಮಸಂದ್ರ ಎನ್ನುವ ಪುಟ್ಟ ಗ್ರಾಮದಲ್ಲಿರುವ ಈ ದೇವಾಲಯವು ಪ್ರಪಂಚದಲ್ಲೇ ಅತಿ ದೊಡ್ಡ ಲಿಂಗವನ್ನು ಹೊಂದಿರುವ ಶಿವ ದೇವಾಲಯವಾಗಿದೆ. ಇಲ್ಲಿ 108 ಅಡಿ ಎತ್ತರದ ಬೃಹತ್ ಶಿವ ಲಿಂಗವನ್ನು ಮತ್ತು 35 ಅಡಿ ಎತ್ತರದ ನಂದಿ ವಿಗ್ರಹವನ್ನು ನೋಡಬಹುದಾಗಿದೆ.

ಶ್ರೀಕಂಠೇಶ್ವರ ದೇವಸ್ಥಾನ, ನಂಜನಗೂಡು(Srikanteshwara Temple, Nanjangud)

ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಕಂಠೇಶ್ವರ ದೇವಾಲಯ ಇರುವುದು ಸಾಂಸ್ಕೃತಿಕ ನಗರವಾದ ಮೈಸೂರಿನ( Mysuru)ಕಪಿಲಾ(Kapila)ನದಿಯ ಬಲದಂಡೆಯಲ್ಲಿರುವ ನಂಜನಗೂಡು ಪಟ್ಟಣದಲ್ಲಿ.

Lord Shiva temples in Karnataka

ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ(Dravid style )ನಿರ್ಮಿಸಲಾಗಿದೆ.ನಂಜನಗೂಡನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ ಮತ್ತು ಶ್ರೀಕಂಠೇಶ್ವರ ದೇವರು ಇಲ್ಲಿನ ಪುರಾತನ ದೇವಾಲಯವಾಗಿದೆ.

ಮಧುಕೇಶ್ವರ ದೇವಸ್ಥಾನ, ಬನವಾಸಿ (Banavasi Madhukeshwara Temple)

ಬನವಾಸಿಯು ಕದಂಬರ(Kadamba) ರಾಜಧಾನಿಯಾಗಿತ್ತು.ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ಶಿವ ದೇವಾಲಯವು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ.

Banavasi Madhukeshwara, Lord Shiva temples in Karnataka

ಶಿವ ದೇವಾಲಯದಲ್ಲಿ ನಂದಿ ಬುಲ್ ಪ್ರತಿಮೆಯೂ ಇದೆ. ಇಲ್ಲಿರುವ 7 ಅಡಿ ಎತ್ತರದ ಏಕಶಿಲೆಯ ನಂದಿಯು, ಅದರ ಎಡಗಣ್ಣು ಶಿವನನ್ನು (Shiva) ಮತ್ತು ಬಲಗಣ್ಣು ಪಾರ್ವತಿ(Parvathi) ದೇವಿಯ ಕಡೆಗೆ ನೋಡುತ್ತಿರುವಂತೆ ತೋರುವ ರೀತಿಯಲ್ಲಿ ನೆಲೆಗೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button