ದೂರ ತೀರ ಯಾನವಿಂಗಡಿಸದ

ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಹಡಗು ಪ್ರಯಾಣ; ಟಿಕೆಟ್ ಬಹು ಅಗ್ಗ

ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಹಡಗು ಪ್ರಯಾಣ; ಟಿಕೆಟ್ ಬಹು ಅಗ್ಗ

ಬಜೆಟ್‌ ಸ್ನೇಹಿ ವಿದೇಶ ಪ್ರವಾಸ ಮಾಡುವ ಮಂದಿಗೆ ಶ್ರೀಲಂಕಾ ಉತ್ತಮ ಆಯ್ಕೆ ಅಂತಲೇ ಹೇಳುತ್ತಾರೆ. ಸಾಮಾನ್ಯವಾಗಿ ಶ್ರೀಲಂಕಾಗೆ ಹೋಗುವವರು ವಿಮಾನದ ಮೂಲಕ ಹೋಗುತ್ತಾರೆ . ಸಂತೋಷದ ಸಂಗತಿ ಎಂದರೆ, ನೀವು ಶ್ರೀಲಂಕಾಗೆ ದೋಣಿಯಲ್ಲಿ ಅದರಲ್ಲೂ ಅಗ್ಗದ ದರದಲ್ಲಿ ಪ್ರಯಾಣಿಸಬಹುದು.

ಭಾರತ (India )ಮತ್ತು ಶ್ರೀಲಂಕಾ (Sri Lanka)ನಡುವಿನ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುವ ದೃಷ್ಟಿಯಿಂದ ಹಡಗು ಸೇವೆಯನ್ನು ಆರಂಭಿಸಲಾಗಿದೆ. ಈ ಮೂಲಕ ನೀವು ಕಡಿಮೆ ಸಮಯ ಮತ್ತು ಕಡಿಮೆ ಟಿಕೆಟ್ ಬೆಲೆಯಲ್ಲಿ ಶ್ರೀಲಂಕಾಕ್ಕೆ ತಲುಪಬಹುದಾಗಿದೆ. ಹಡಗಿನಲ್ಲಿ ತಮಿಳುನಾಡು ಮೂಲಕ ಸುಲಭವಾಗಿ ಶ್ರೀಲಂಕಾಗೆ ತಲುಪಬಹುದಾಗಿದೆ.

Ferry Service

ಈ ಪ್ರವಾಸವನ್ನು ಮತ್ತಷ್ಟು ಸುಲಭವಾಗಿಸಲು ಯಾತ್ರಾ ಹಡಗು ಸೇವೆಯು ಅಕ್ಟೋಬರ್ (October )2023ರ ಮೊದಲ ವಾರದಿಂದ ಪ್ರಾರಂಭಿಸಲಾಗಿದೆ. ಈ ಹಡಗು ಸೇವೆಯು ತಮಿಳುನಾಡಿನ ನಾಗಪಟ್ಟಣದಿಂದ ಶ್ರೀಲಂಕಾದ ಕಂಕಸಂತುರೈ ಗೆ ಇದೆ.

ನೀವು ಇದನ್ನು ಇಷ್ಟ ಪಡಬಹುದು: ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ಇನ್ಮುಂದೆ ವಿಸ್ಟಾಡೋಮ್ ಸಂಚಾರ

ತಮಿಳುನಾಡಿನ ನಾಗಪಟ್ಟಿಣಂ ಮತ್ತು ಶ್ರೀಲಂಕಾದ ಕಂಕೆಸಂತುರೈ ನಡುವೆ ಫೇರಿ ರೈಡ್ ನಡೆಯಲಿದೆ. ಈ ಫೇರಿ ರೈಡಿಂಗ್ ಸೇವೆಯನ್ನು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Shipping Corporation of India) ನಿರ್ವಹಿಸುತ್ತಿದೆ.

Tamilnadu

ಶ್ರೀಲಂಕಾಕ್ಕೆ ಹಡಗಿನ ಮೂಲಕ ಸುಮಾರು 110 ಕಿಮೀ ದೂರವನ್ನು ಒಳಗೊಂಡಿದೆ. ಇದು ಸುಮಾರು 3 ರಿಂದ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ .

ಈ ಸಮಯದಲ್ಲಿ ನೀವು ಮೋಜಿನ ಅನುಭವವನ್ನು ಪಡೆಯುತ್ತೀರಿ. ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸವು 1980 ರಲ್ಲಿ ನಿಲ್ಲಿಸಲಾಗಿತ್ತು. ಇದೀಗ 40 ದಶಕದ ನಂತರ ಈ ಬೋಟಿಂಗ್ ಸೇವೆ ಆರಂಭವಾಗಿದೆ.

ನಿರೀಕ್ಷಣಾ ಕೊಠಡಿಗಳು, ಕೆಫೆಟೇರಿಯಾ, ಟರ್ಮಿನಲ್‌ನಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದ್ದರಿಂದ ನೀವು ಈ ಹಡಗಿನಲ್ಲಿ ಆರಾಮದಾಯಕ ಪ್ರಯಾಣಿಸುವುದರೊಂದಿಗೆ ನಿಜಕ್ಕೂ ಮರೆಯಲಾಗದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

Sri lanka

ಸುರಕ್ಷತೆಯ ಹಡಗು ಪ್ರಯಾಣದ ಸುರಕ್ಷತೆಯ ಬಗ್ಗೆ ಯಾರು ಗೊಂದಲಕೊಳ್ಳಗಾಗಬೇಕಿಲ್ಲ. ಏಕೆಂದರೆ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದು 150 ಪ್ರಯಾಣಿಕರಿಗೆ ಸೂಕ್ತವಾಗಿದೆ.

ಒನ್ ವೇ ಟಿಕೆಟ್ ದರ ಸುಮಾರು 6 ಸಾವಿರ ದಿಂದ 7 ಸಾವಿರ ರೂ ಆದಾಗ್ಯೂ, ಹಡಗು ಟಿಕೆಟ್‌ನ ಅಂತಿಮ ಬೆಲೆಯನ್ನು ನಿರ್ವಾಹಕರು ನಿರ್ಧರಿಸುತ್ತಾರೆ. ಇದು ನೀವು ಆಯ್ಕೆ ಮಾಡುವ ದೋಣಿ ಪ್ರಯಾಣದ ಪ್ರಕಾರ, ವರ್ಗ, ಸಮಯ ಮುಂತಾದ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button