ವಿಂಗಡಿಸದಸಂಸ್ಕೃತಿ, ಪರಂಪರೆ

ಕನ್ನಡ ಪ್ರಾದೇಶಿಕ ಭಾಷೆಗಳ ಸೊಗಡು ಅದೆಷ್ಟು ಚೆಂದ..!

ಪ್ರದೇಶದಿಂದ ಪ್ರದೇಶಕ್ಕೆ ನಾವು ಭಾಷಾ ವೈವಿಧ್ಯತೆಯನ್ನು ಕಾಣುತ್ತೇವೆ. ಮಾತೃ ಭಾಷೆ ಒಂದೇ ಆದರೂ ಅವುಗಳಲ್ಲಿರುವ ಪ್ರಾದೇಶಿಕ ಸೊಗಡು ಭಿನ್ನ. ನಮ್ಮ ಕನ್ನಡ ಭಾಷೆಯಲ್ಲಿಯೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದಂತೆ ಅಲ್ಲಿನ ಜನರಾಡುವ ಭಾಷೆಯಲ್ಲಿ ಆ ಭಾಗದ ಭಿನ್ನತೆಯನ್ನು ಕಾಣುತ್ತೇವೆ. ಈ ಕುರಿತಾದ ಬರಹ ಇಲ್ಲಿದೆ.

ಹವ್ಯಕ ಕನ್ನಡ

ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಉತ್ತರ ಕನ್ನಡ (Uttara Kannada), ಕೊಡಗು (Kodagu) ಮತ್ತು ಶಿವಮೊಗ್ಗ (Shivamogga) ಜಿಲ್ಲೆಗಳಲ್ಲಿ ನೆಲೆಸಿರುವ ಹವ್ಯಕ ಬ್ರಾಹ್ಮಣರು ಹೆಚ್ಚಾಗಿ ಈ ʼಹವ್ಯಕ ಕನ್ನಡʼ ಭಾಷೆಯನ್ನು ಮಾತನಾಡುತ್ತಾರೆ.

Halakki kannada

ಹಾಲಕ್ಕಿ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ, ಭಟ್ಕಳ, ಕಾರವಾರ, ಅಂಕೋಲಾ ಭಾಗಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ಮಾತನಾಡುವ ಭಾಷೆಯಿದು.

ಅರೆಭಾಷೆ

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಒಕ್ಕಲಿಗರು ಅಂದರೆ ಗೌಡರ ಮನೆ ಭಾಷೆ ಅರೆಭಾಷೆ. ಸಂಪಾಜೆಯಿಂದ ಶುರುವಾಗಿ, ಪಂಜ- ಸುಬ್ರಹ್ಮಣ್ಯದವರೆಗೂ ಅರೆಭಾಷಿಕ ಗೌಡರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಅರೆ ಭಾಷೆ ಮಾತನಾಡುವ ಹೆಚ್ಚಿನ ಜನರಿದ್ದಾರೆ. ವಿಶೇಷ ಅಂದ್ರೆ ಅರೆಭಾಷೆಗೊಂದು ಸಾಹಿತ್ಯ ಅಕಾಡೆಮಿಯೂ ಇದೆ.

Kannada

ದೀವರ ಕನ್ನಡ

ʼದೀವರʼ ಎಂಬ ಸಮುದಾಯದವರು ಮಾತನಾಡುವ ಕನ್ನಡ ಭಾಷೆಯಿದು. ಸೊರಬ, ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ದೀವರ ಸಮುದಾಯದವರು ವಾಸಿಸುತ್ತಾರೆ. ಉತ್ತರ ಕನ್ನಡದಲ್ಲಿ ಇವರನ್ನು ನಾಯಕರು ಅಥವಾ ನಾಮಧಾರಿಗಳು ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವರು ಎಂದು ಕರೆಯಲಾಗುತ್ತದೆ.

ಕೋಟ ಕನ್ನಡ

ಕೋಟ ಬ್ರಾಹ್ಮಣರ ಆಡುನುಡಿಯನ್ನು ʼಕೋಟ ಕನ್ನಡʼ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಈ ಭಾಗದಲ್ಲಿ ಕುಂದ ಕನ್ನಡದ ಸೊಬಗು ಕೂಡ ಇದೆ.

ನೀವು ಇದನ್ನು ಇಷ್ಟ ಪಡಬಹುದು:ಸ್ಥಳೀಯ ವಿಶೇಷತೆಗಳಿಂದ ಈ ಜಿಲ್ಲೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ

ಕುಂದ ಕನ್ನಡ

ಉಡುಪಿ ಜಿಲ್ಲೆಯಲ್ಲೇ ಇರುವ ಕುಂದಾಪುರ, ಬೈಂದೂರು, ಬ್ರಹ್ಮಾವರ ಜನರು ಮಾತನಾಡುವ ಕನ್ನಡವನ್ನು ʼಕುಂದಾಪ್ರ ಕನ್ನಡʼ ಅಥವಾ ʼಕುಂದ ಕನ್ನಡʼ ಎಂದು ಕರೆಯಲಾಗುತ್ತದೆ. ಅತಿ ಕಡಿಮೆ ಒತ್ತಕ್ಷರಗಳನ್ನು ಕುಂದ ಕನ್ನಡದಲ್ಲಿ ಬಳಸಲಾಗುತ್ತದೆ. ಅಲ್ಲದೆ ಭಾಷೆಗಳನ್ನು ಸಂಕ್ಷಿಪ್ತ ಗೊಳಿಸಿ ಮಾತನಾಡುವುದೇ ಈ ಭಾಷೆಯ ವಿಶೇಷ.

ನಾಡೋರ ಕನ್ನಡ

ಉತ್ತರಕನ್ನಡದಲ್ಲಿ ವಾಸವಾಗಿರುವ ʼನಾಡವರುʼ ಮಾತನಾಡುವ ಕನ್ನಡ ನಾಡೋರ ಕನ್ನಡ. ಕೃಷಿ ಇವರು ಅಂಕೋಲಾ, ಕುಮಟದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.

ಕೋಟೆ ಕನ್ನಡ

ಕೋಟೆ ಕ್ಷತ್ರಿಯರು ಮಾತನಾಡುವ ಕನ್ನಡವೇ ʼಕೋಟೆ ಕನ್ನಡ’. ಕಾಸರಗೋಡು, ಪೊಳಲಿ, ಚಂದ್ರಗಿರಿ, ಪನಿಯಾಲ, ಬೇಕಲ, ಚಿತ್ತಾರಿ ಪ್ರದೇಶಗಳಲ್ಲಿ ಈ ಭಾಷೆ ಹೆಚ್ಚು ಕಂಡು ಬರುತ್ತದೆ. ವೆಂಕಟಪ್ಪ ನಾಯಕ ಮತ್ತು ಶಿವಪ್ಪ ನಾಯಕರ ಕೋಟೆಗಳನ್ನು ಕಾಯುವುದು ಇವರ ಮುಖ್ಯ ಕಾಯಕವಾಗಿತ್ತು. ಹೀಗಾಗಿ ಇವರಿಗೆ ಕೋಟೆ ಕ್ಷತ್ರಿಯರು ಎಂಬ ಕರೆಯುತ್ತಾರೆ.

ಕುರುಬ ಕನ್ನಡ

ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಆದಿವಾಸಿ ಜನಾಂಗದವರು ಈ ಭಾಷೆಯನ್ನಾಡುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button