ಆಹಾರ ವಿಹಾರವಿಂಗಡಿಸದಸ್ಮರಣೀಯ ಜಾಗ

ಸ್ಥಳೀಯ ವಿಶೇಷತೆಗಳಿಂದ ಈ ಜಿಲ್ಲೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ

ಭಾಗ -1

ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳಿವೆ. ಪ್ರತಿಯೊಂದು ಜಿಲ್ಲೆಯನ್ನು ಆಡಳಿತ ಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇನ್ನು ಇದರ ಜೊತೆಗೆ ನಮ್ಮ ರಾಜ್ಯದ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳನ್ನು ಆಯಾ ಜಿಲ್ಲೆಗಳ ವಿಶೇಷತೆಯ ಮೇಲೆ ಕರೆಯುತ್ತಾರೆ.

ಕಲ್ಪತರ ನಾಡು

ತುಮಕೂರು ಜಿಲ್ಲೆಯನ್ನು ಕಲ್ಪತರ ನಾಡು ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ತೆಂಗು ಮತ್ತು ರಾಗಿಯನ್ನು ಈ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಅತಿ ಹೆಚ್ಚು ತೆಂಗು ಬರೆಯುವ ಕಾರಣಕ್ಕೆ ತುಮಕೂರು ಜಿಲ್ಲೆಯನ್ನು ಕಲ್ಪತರ ನಾಡು ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

Coconut

ತೊಗರಿ ಕಣಜ

ಕಲ್ಯಾಣ ಕರ್ನಾಟಕದ ಕಲಬುರ್ಗಿ( kalburgi)ಜಿಲ್ಲೆಯನ್ನು ತೊಗರಿ ಕಣಜ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಕಾರಣಕ್ಕೆ ಈ ಜಿಲ್ಲೆಯನ್ನು ಕರೆಯಲಾಗುತ್ತದೆ.

Dal

ಕಾಫಿ ನಾಡು

ಕಾಫಿ ಅಂದ್ರೆ ಚಿಕ್ಕಮಗಳೂರು (Chikmagalur )ಅಂತಲೇ ಬಹುತೇಕರ ಬಾಯಿಯಲ್ಲಿ ಬರುತ್ತದೆ. ಚಿಕ್ಕಮಗಳೂರು ಜಿಲ್ಲೆ ಕಾಫಿ ನಾಡು ಅಂತಲೇ ಖ್ಯಾತಿಯನ್ನು ಪಡೆದಿದೆ. ಹಲವು ಪುಣ್ಯ ಪ್ರಸಿದ್ಧ ದೇವಸ್ಥಾನಗಳು ,ಪ್ರವಾಸಿ ತಾಣಗಳು ಇರುವ ಈ ಜಿಲ್ಲೆಯಲ್ಲಿ ನೀವು ಎಲ್ಲೆ ಹೋದರೂ ಕಾಫಿ ತೋಟಗಳು ನಿಮ್ಮ ಕಣ್ಣುಗಳನ್ನು ತಂಪುಗೊಳಿಸುತ್ತದೆ.

Coffe estate

ಬೆಣ್ಣೆ ನಗರಿ

ಆಹಾರದ ಕಾರಣಕ್ಕೆ ದಾವಣಗೆರೆ (Davangere )ಜಿಲ್ಲೆ ಮತ್ತೊಂದು ಹೆಸರಿಂದ ಜನಜನಿತವಾಗಿದೆ. ದಾವಣಗೆರೆಯಲ್ಲಿ ಬೆಣ್ಣೆದೋಸೆ ಸಖತ್ ಫೇಮಸ್. ಅಲ್ಲದೆ ಬೇರೆ ಯಾವ ಕಡೆಗಳಲ್ಲಿ ನಿಮಗೆ ಬೆಣ್ಣೆ ದೋಸೆ ಟೇಸ್ಟ್ ಮಾಡೋಕೆ ಸಿಕ್ಕರೂ ಕೂಡ ಅದು ದಾವಣಗೆರೆ ಜಿಲ್ಲೆಯ ರುಚಿ ನೀಡಲ್ಲ ಅನ್ನೋದು ದೋಸೆ ಪ್ರಿಯರ ಮಾತು. ಈ ಕಾರಣಕ್ಕೆ ಈ ಜಿಲ್ಲೆಯಲ್ಲಿ ಬೆಣ್ಣೆ ನಗರಿ ಎನ್ನುವ ಹೆಸರಿಂದ ಕರೆಯುತ್ತಾರೆ.

Benne Dosa

ಕುಂದಾ ನಗರಿ

ಗಡಿ ಜಿಲ್ಲೆ ಬೆಳಗಾವಿಯನ್ನು (Belgavi )ಕುಂದಾ ನಗರಿ ಎಂದು ಕರೆಯುತ್ತಾರೆ. ಇಲ್ಲಿ ಕುಂದಾ ಬಹಳ ಪ್ರಸಿದ್ದಿ. ಹಾಲಿನ ಕೋವ ಮತ್ತು ಸಕ್ಕರೆ ಬಳಸಿ ಮಾಡುವ ಸಿಹಿ ಪದಾರ್ಥ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಬೇಕರಿಯಲ್ಲು ಈ ಕುಂದಾ ಸಿಗುತ್ತದೆ. ಈ ಕಾರಣದಿಂದ ಈ ಜಿಲ್ಲೆ ಕುಂದಾ ನಗರಿ ಅಂತ ಖ್ಯಾತಿ ಪಡೆದಿದೆ.

Kunda

ಕಡಲ ನಗರಿ

ಕರಾವಳಿ ಜಿಲ್ಲೆಗಳನ್ನು ಹೆಚ್ಚಾಗಿ ಕಡಲ ನಗರಿ ಎಂದು ಕರೆಯುತ್ತಾರೆ. ಅದರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡಲ ನಗರಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಕಣ್ಣು ಹಾಯಿಸಿದ ಕಡೆಗಳೆಲ್ಲ ಕಾಣ ಸಿಗುವ ವಿಶಾಲ ಸಮುದ್ರಗಳು ಈ ಜಿಲ್ಲೆಗಳ ಮೆರುಗನ್ನು ಹೆಚ್ಚಿಸಿವೆ. ಪಣಂಬೂರು, ತಣ್ಣೀರು ಬಾವಿ ಸೇರಿದಂತೆ ಹಲವು ಕಡಲ ಕಿನಾರೆಗಳು ಇಲ್ಲಿವೆ.

ನೀವು ಇದನ್ನು ಇಷ್ಟ ಪಡಬಹುದು:ಕೀಟಗಳ ಸಂರಕ್ಷಣೆಗಾಗಿ “ಕೀಟಗಳ ಕೆಫೆ” ತೆರೆದಿದೆ ಪ್ರಸಿದ್ಧ ಸಸ್ಯೋದ್ಯಾನ “ಲಾಲ್ ಬಾಗ್”, ಏನಿದರ ವಿಶೇಷತೆ?

ಕೃಷ್ಣ ನಗರಿ

ಉಡುಪಿ (Udupi )ಜಿಲ್ಲೆಯಲ್ಲಿ ಕೃಷ್ಣ ಮಠ ಹಾಗೂ ಅಷ್ಟ ಮಠಗಳು ಇರುವ ಕಾರಣಕ್ಕೆ ಈ ಜಿಲ್ಲೆಯನ್ನು ಕೃಷ್ಣನ ನಗರಿ ಎನ್ನುವ ಹೆಸರಿಂದ ಕರೆಯುತ್ತಾರೆ. ಉಡುಪಿ ಕೃಷ್ಣನನ್ನು ಕಣ್ತುಂಬಿಕೊಳ್ಳುವುದಕ್ಕೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ.

KRISHNA MATA

ಉದ್ಯಾನವನ ನಗರಿ

ಸಿಲಿಕಾನ್ ಸಿಟಿ ,ರಾಜ್ಯ ರಾಜಧಾನಿ ಅಂತೆಲ್ಲ ಕರೆಯಲ್ಪಡುವ ಕೆಂಪೇಗೌಡ ಕಟ್ಟಿದ ನಾಡನ್ನು ಉದ್ಯಾನವನ ನಗರಿ ಅಂತಲೂ ಕರೆಯುತ್ತಾರೆ. ಹೀಗೆ ಕರೆಯುವುದಕ್ಕೆ ಕಾರಣ ಕೂಡ ಇದೆ. ಟಬೂಬಿಯಾ ರೋಸಿಯಾ ,ಜಕರಂಡ,ಟಬೂಬಿಯಾ ಅರ್ಜೆಂಟೀನಾ, ಗುಲ್ಮೊಹರ್‌, ರೈನ್ ಟ್ರಿ ಮಠದ ಕಾರಣಕ್ಕೆ ಡಿಪ್ರೆಶನ್ ಈ ಹೆಸರು ಬಂದಿದ್ದೆ ಎನ್ನಲಾಗುತ್ತದೆ.

Garden City

ಇವಿಷ್ಟೆ ಅಲ್ಲ ನಮ್ಮ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಿಗೆ ಇರುವ ವಿಶೇಷ ಹೆಸರುಗಳ ಬಗ್ಗೆ ಮಾಹಿತಿ ಕೊಡ್ತೀವಿ ಮುಂದಿನ ಲೇಖನದಲ್ಲಿ ನಿರೀಕ್ಷಿಸಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button