ಕೆಳದಿ ನಾಯಕರ ಭದ್ರಕೋಟೆಯಾಗಿತ್ತು ಕವಲೇದುರ್ಗ
ಕವಲೇದುರ್ಗ ಕೋಟೆಯು(Kavaledurga fort)ಕರ್ನಾಟಕದ ಶಿವಮೊಗ್ಗ( Shivamogga )ಜಿಲ್ಲೆಯಲ್ಲಿದೆ.ಇದೊಂದು ಇತಿಹಾಸ ಹೊಂದಿರುವ ಮತ್ತು ರಹಸ್ಯವಾದ ತಾಣವಾಗಿದೆ.
ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 1541 ಮೀಟರ್ ಎತ್ತರದಲ್ಲಿದೆ.ಕೋಟೆಯು ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ್ದು ಪಶ್ಚಿಮ ಘಟ್ಟಗಳಿಂದ ಆವೃತವಾಗಿದೆ.
ಈ ಕೋಟೆಯ ಬಳಿಯಲ್ಲಿ ವಿರೂಪಾಕ್ಷ(Virupaksha), ವಿಜಯ ವಿಠಲ( Vijaya vittala), ವೀರಭದ್ರ( Veerabhadra), ಮಲ್ಲಾರ( Mallara) ಮತ್ತು ಭುವನೇಶ್ವರಿಯ( Bhuvaneahwari)ಹಲವಾರು ದೇವಾಲಯಗಳು( Temples)ಕೋಟೆಯಲ್ಲಿವೆ.
ಅವಶೇಷಗಳು ಮತ್ತು ಹಳೆಯ ಅರಮನೆಯ ಜೊತೆಗೆ, ವೆಂಕಟಪ್ಪ ನಾಯಕನು ನಿರ್ಮಿಸಿದ ಮಸೀದಿಯನ್ನು ಸಹ ಇಲ್ಲಿ ಕಾಣಬಹುದು. ಪ್ರಭಾವಶಾಲಿ ರಚನೆಯಿಂದ ಕೂಡಿದ ಈ ಕೋಟೆಯು ಮೂರು ಸುತ್ತಿನ ಕಲ್ಲಿನ ಗೋಡೆ ಯಿಂದ ಕೂಡಿದೆ.
16 ನೇ ಶತಮಾನದಲ್ಲಿ ಕೆಳದಿ ನಾಯಕರ(Keladi nayaka)ಭದ್ರಕೋಟೆಯಾಗಿತ್ತು ಕವಲೆದುರ್ಗ ಕೋಟೆ.ಹಾಗೆಯೇ ಈ ಕೋಟೆಗೆ ಭುವನಗಿರಿ ಎನ್ನುವ ಹೆಸರು ಕೂಡ ಇದೆ..ಅರಮನೆ, ಸ್ನಾನಗೃಹಗಳು, ಕಾವಲು ಕೊಠಡಿಗಳು ಮತ್ತು ಆಯುಧ ಸಂಗ್ರಹದ ಮನೆಗಳ ಕೆಲವು ಅವಶೇಷಗಳನ್ನು ಹೊಂದಿದೆ.
ಕೋಟೆಯ ಮೇಲಿರುವ ಸಿಹಿನೀರಿನ ಕೊಳವು ಅತ್ಯುತ್ತಮ ಸ್ಥಿತಿಯಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ.ಈ ಕೋಟೆಯನ್ನು ಅಚ್ಚುಕಟ್ಟಾಗಿ ಗಟ್ಟಿಮುಟ್ಟಾಗಿ ನಿರ್ಮಿಸಲಾಗಿತ್ತು.ಗೋಡೆಗಳು 30 ರಿಂದ 40 ಅಡಿ ಎತ್ತರವಿದ್ದು, ಗ್ರಾನೈಟ್ ಬ್ಲಾಕ್ಗಳಿಂದ ಮಾಡಲ್ಪಟ್ಟಿರುವುದನ್ನು ನಾವು ಗಮನಿಸಬಹುದಾಗಿದೆ.
8 ಕಿಮೀ ಉದ್ದದ ಸುತ್ತಳತೆಯ ಹೆಗ್ಗಳಿಕೆಯನ್ನು ಹೊಂದಿರುವ ಈ ಕೋಟೆಯು ( Fort)ಕಾವಲು ಗೋಪುರಗಳು ಮತ್ತು ಎರಡು ರೀತಿಯ ರಕ್ಷಣೆಯನ್ನು( Defence )ಹೊಂದಿದೆ. ಇದಲ್ಲದೆ, ಪರ್ವತದಿಂದ ನೈಸರ್ಗಿಕವಾಗಿ( Natural )ಹರಿಯುವ ನೀರನ್ನು ಸಂಗ್ರಹಿಸಿ ಕೋಟೆಗೆ ಒದಗಿಸುವ ಹಲವಾರು ನೀರಿನ ಕಾಲುವೆಗಳೂ ಇವೆ.
ಇತ್ತೀಚಿನ ದಿನಗಳಲ್ಲಿ ಉತ್ಖನನಗಳನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ..ಇದರಿಂದಾಗಿ ಈಜುಕೊಳಗಳು( Swimming poll), ಮದ್ದುಗುಂಡುಗಳ ಮನೆ, ಜೈಲು(Jail), ಕುದುರೆ ಮತ್ತು ಆನೆ ಲಾಯಗಳು, ವರಾಂಡಾ, ಅಡುಗೆ ಕೋಣೆ, ಪೂಜಾ ಕೋಣೆ ಮತ್ತು ದರ್ಬಾರ್ ಹಾಲ್ ಇತ್ಯಾದಿಗಳು ಕಂಡುಬಂದಿದೆ.
ಈ ಕೋಟೆಯ ಮುಖ್ಯಾಂಶವೆಂದರೆ ಗದಾ ತೀರ್ಥ ಎಂಬ ಗುಹೆ( Gada Tirtha), ಇದರ ಪಕ್ಕದಲ್ಲಿ ಸಣ್ಣ ಕೊಳವನ್ನು ಹೊಂದಿರುವುದನ್ನು ಪ್ರವಾಸಿಗರು ಗಮನಿಸಬೇಕಾಗಿದೆ.
ಈ ಕೋಟೆಯ ಬಳಿ ಇನ್ನು ಹಲವಾರು ಪ್ರವಾಸಿತಾಣವನ್ನು ಗಮನಿಸಬಹುದು ಅವುಗಳೆಂದರೆ ಕವಿಶೈಲ( Kavi shaila)ಆಗುಂಬೆ(Agumbe), ಕುಂದಾದ್ರಿ ಬೆಟ್ಟಗಳು (Kundadri hill), ಗಾಜನೂರು ಅಣೆಕಟ್ಟು ( Gajanoor dam)ಮತ್ತು ಮಂಡಗದ್ದೆ ಪಕ್ಷಿಧಾಮ( Mandagadde )
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.