ಇವರ ದಾರಿಯೇ ಡಿಫರೆಂಟುಕಾರು ಟೂರುವಿಂಗಡಿಸದ

ರಾಮ್ ಕಿಶನ್ ಬರೆದ ಕುಮಾರ ಪರ್ವತ ಟ್ರೆಕ್ಕಿಂಗ್ ಸ್ಟೋರಿ

ಎಲ್ಲರಿಗೂ ಟ್ರೆಕ್ಕಿಂಗ್ ಮಾಡಬೇಕು ಎನ್ನುವ ಆಸೆ ಸಹಜ. ಆದರೆ ಅದು ಅಷ್ಟೊಂದು ಸುಲಭವಲ್ಲ.  ಟ್ರೆಕ್ಕಿಂಗ್ ಹಾದಿಯಲ್ಲಿ ತೊಂದರೆ ,ಪರದಾಟ ,ನಿರಾಸೆ ಎಲ್ಲವೂ ಇರುತ್ತದೆ. ಆದರೆ ಪರದಾಟ ನಡುವೆ ಸಾಗುವ ಟ್ರೆಕ್ಕಿಂಗ್ ಪಯಣ ಒಂದು ರೀತಿ ಮನಸ್ಸಿಗೆ ಖುಷಿ. ಅಂತಹದೇ ಒಂದು ಟ್ರೆಕ್ಕಿಂಗ್ ಕಥೆಯಿದು. ಉಜಿರೆಯ ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿ ಬರೆದ ಕುಮಾರ ಪರ್ವತ ಟ್ರೆಕ್ಕಿಂಗ್ ಸ್ಟೋರಿ. – ರಾಮ್ ಕಿಶನ್ ಕೆ.ವಿ


ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಡ್ಲೆ ಬೇಳೆ ಪಾಯಸದ ಊಟ ಉಂಡು ಕುಮಾರ ಪರ್ವತದೆಡೆಗೆ ಚಾರಣ ಆರಂಭಿಸಿದಾಗ ಮಧ್ಯಾಹ್ನ ಗಂಟೆ ೧.೩೦. ಸ್ವಲ್ಪ ದೂರ ನಡೆದದ್ದಷ್ಟೆ, ಪಾಯಸದ ಊಟ ಸ್ವಲ್ಪ ಹೆಚ್ಚೇ ಆಯ್ತೇನೋ ಅನ್ನೋ ಅಭಿಪ್ರಾಯ ನಮ್ಮೆಲ್ಲರದ್ದಾಗಿತ್ತು. ೫ಕಿ.ಮೀ ಸಾಗಿ ಗಿರಿಗದ್ದೆ ಭಟ್ರ ಮನೆ ತಲುಪುವಷ್ಟರಲ್ಲಿ ಎಲ್ಲರ ಮಾತೂ ಒಂದೆ, ದೇವಸ್ಥಾನದಲ್ಲಿ ಊಟ ಮಾಡದೇ ಇದ್ರೆ ಖಂಡಿತ ಇಷ್ಟು ದೂರ ನಡೆದು ಬರೋದಕ್ಕೆ ಇನ್ನೂ ಕಷ್ಟ ಆಗ್ತಿತ್ತು.


ಪೂರ್ವತಯಾರಿಯೊಂದಿಗೆ ನಮ್ಮ ೫ ಜನರ ತಂಡ ಕುಮಾರಪರ್ವತ ಚಾರಣ ಆರಂಭಿಸಿದೆವು. ಚಾರಣದ ಕುರಿತು ಮಾಹಿತಿಯಿದ್ದರೂ ಹಾದಿಯ ಕಠಿಣತೆಯ ಕಲ್ಪನೆ ಇದ್ದಿರಲಿಲ್ಲ. ಟೆಂಟ್ ಕೊಂಡೊಯ್ಯುವುದು ಬೇಡ, ರಾತ್ರಿಗೆ ಗಿರಿಗದ್ದೆ ಭಟ್ರ ಮನೆಯಲ್ಲಿ ಬಿಢಾರ ಎಂದು ನಿಶ್ಚಯಿಸಿ, ನಾವೈದು ಮಂದಿ ಬರುತ್ತೇವೆ ಎಂದು ಫೋನ್ ಮೂಲಕ ತಿಳಿಸಿದೆ. ಆ ಕಡೆಯಿಂದ ಭಟ್ರು ಸರಿ ಬನ್ನಿ… ಸಂತೋಷ, ಈಗಾಗ್ಲೆ ಬರ್ತೇವೆ ಹೇಳಿದವರು ತುಂಬ ಜನ ಇದ್ದಾರೆ, ಎಷ್ಟು ಜನ ಬರ್ತಾರೋ ಗೊತ್ತಿಲ್ಲ, ಎಡ್ಜಸ್ಟ್ ಮಾಡುವ ಎಂಬ ಉತ್ತರ…ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತದ ಚಾರಣ ೧೩ ಕಿ.ಮೀ.ಗಳಷ್ಟು. ಆರಂಭದಲ್ಲಿ ಹತ್ತಿ ಇಳಿಯುತ್ತಾ ಸಾಗುವ ದಾರಿ. ಎರಡೂ ಬದಿ ಕಾಡು. ಸಮಯ ಸಂಜೆಯ ಕಡೆ ಸಾಗುತ್ತಿತ್ತು.

ನಮ್ಮ ನಡಿಗೆ ಗಿರಿಗದ್ದೆ ಭಟ್ರ ಮನೆ ಕಡೆಗೆ. 


ಗಿರಿಗದ್ದೆ ಮನೆಗೆ ೬ಕಿ.ಮೀ. ಚಾರಣ. ಅಯ್ಯೋ, ಇನ್ನೆಷ್ಟು ದೂರ, ಸ್ವಲ್ಪ ಹೊತ್ತು ಕುಳಿತುಕೊಳ್ಳುವ, ಸ್ವಲ್ಪ ನೀರು ಕೊಡು… ಹೀಗೆ, ಆರಂಭದಲ್ಲಿದ್ದ ನಡಿಗೆಯ ವೇಗ ಕುಂಠುತ್ತಾ ಸಾಗಿತು. ದಾರಿಯುದ್ದಕ್ಕೂ ಆವರಿಸಿರುವುದು ಮೌನ. ಕರ್ಕಶ ಶಬ್ದಗಳಿಲ್ಲ. ಹಕ್ಕಿಗಳ ಕೂಗು ಮಾತ್ರ. ಸಂಜೆಯಾಗುತ್ತಿದ್ದಂತೆ ಸಣ್ಣಗೆ ಅಳುಕು. ಕತ್ತಲೂ ಬೇಗನೆ ಆವರಿಸಿ ಬಿಡುತ್ತದೆ. ದಟ್ಟವಾದ ಅರಣ್ಯವಾದ್ದರಿಂದ ಸೂರ್ಯನ ಕಿರಣ ನೆಲಕ್ಕೆ ತಾಕದ ಹಾಗೆ ಎತ್ತರದ ಮರಗಳು ಬೇಧಸಿತ್ತು. ಈ ವೇಳೆ ರಕ್ತ ಹೀರುವ ಜಿಗಣೆಗಳ ಪರಿಚಯ ಆಗಿಬಿಟ್ಟರೆ, ಸಂತೃಪ್ತಿಯಾಗುವಷ್ಟು ರಕ್ತ ಕುಡಿದು ಬಿಡುತ್ತದೆ. 


೨ಕಿ.ಮೀ ನಷ್ಟು ನಡಿಗೆ ಮುಕ್ತಾಯವಾಗುತ್ತಿದ್ದಂತೆ ದಟ್ಟವಾಗಿ ಹಬ್ಬಿರುವ ಹುಲ್ಲುಗಾವಲಿನ ದರ್ಶನವಾಯಿತು. ನಮಗೆಲ್ಲರಿಗೂ ಹೇಳಲಾಗದ ಸಂತಸ. ಕುಂಠುತ್ತಾ ಸಾಗಿ ಬಂದಿದ್ದೆವು. ಇನ್ನು ಸ್ವಲ್ಪ ದೂರ ನಡೆದರೆ ಭಟ್ರ ಮನೆ ಸಿಗುತ್ತದೆ ಎಂಬುವ ಖುಷಿ ಮತ್ತೆ ನಡೆಯಲು ಪ್ರೋತ್ಸಾಹಿಸುತ್ತಿತ್ತು. ನವೆಂಬರ್ ಕೊನೆಯಲ್ಲಿ ಚಾರಣ ಕೈಗೊಂಡ ಕಾರಣ ಬಿಸಿಲಿರಲಿಲ್ಲ, ಮಳೆ ಬರುತ್ತಿತ್ತು. ಹೀಗಾಗಿ ಮಳೆಯಲ್ಲಿ ನೆನೆಯುವ ಸೋಜಿಗವೂ ನಮ್ಮದಾಯಿತು.

ದಾರಿ ಸಾಗುತ್ತಿದ್ದಂತೆ ಗಿರಿಗದ್ದೆ ಸಮೀಪಿಸಿತು. ಈ ನಡುವೆ ಭಟ್ರ ಮನೆಯ ದನಕರುಗಳು ಹಸಿರು ಹುಲ್ಲುಗಾಲಿನಲ್ಲಿ ಮೇಯುವ ದೃಶ್ಯವನ್ನು ನೋಡುವುದೇ ಚಂದ. ದೂರದಲ್ಲಿ ಅಡಿಕೆ ತೋಟ ಕಾಣುವಾಗ ಭಟ್ರ ಸಾಹಸ ಜೀವನದ ಬಗ್ಗೆ ಮಾತು ಆರಂಭವಾಯಿತು. ಗಿರಿಗದ್ದೆ ಪ್ರದೇಶ ಸುಂದರವಾಗಿದೆ. ಸುತ್ತಲೂ ವಿಶಾಲವಾಗಿ ಬೆಟ್ಟಗುಡ್ಡಗಳು ಕಾಣುತ್ತವೆ. ಇಲ್ಲಿ ನಿಂತು ಸೂರ್ಯಾಸ್ತ ನೋಡುವುದಂತು ಎರಡೂ ಕಣ್ಣುಗಳಿಗೆ ಹಬ್ಬ. ಹೀಗಾಗಿ ಸಾಕಷ್ಟು ಜನ ಚಾರಣ ಗರು ಮೌನವಾಗಿ ಸೂರ್ಯಾಸ್ತವನ್ನು ನೋಡುತ್ತಾ, ಹತ್ತಿ ಬಂದ ದಣ ವನ್ನು ಮರೆತು ಬಿಡುತ್ತಾರೆ.

ಸಂಜೆ ೬ಗಂಟೆಯ ಸುಮಾರಿಗೆ ಗಿರಿಗದ್ದೆ ಭಟ್ರ ಮನೆ ತಲುಪಿದೆವು. ದೂರದಿಂದ ಮನೆಯ ಮಹಡಿ ಕಾಣುತ್ತಿದ್ದಂತೆ ಎಲ್ಲಿಲ್ಲದ ಸಂಭ್ರಮ. ಅಬ್ಬಾ, ಅಂತೂ ತಲುಪಿಬಿಟ್ಟೆವು ಎಂಬ ನಿರಾಳ ಭಾವದಿಂದ ಮನೆಯತ್ತ ಸಾಗಿದೆವು. ಅಂದು ಭಟ್ರ ಮನೆ ಪ್ರವೇಶಿಸುತ್ತಿದ್ದಂತೆ ಇಡೀ

೨ಕಿ.ಮೀ ನಷ್ಟು ನಡಿಗೆ ಮುಕ್ತಾಯವಾಗುತ್ತಿದ್ದಂತೆ ದಟ್ಟವಾಗಿ ಹಬ್ಬಿರುವ ಹುಲ್ಲುಗಾವಲಿನ ದರ್ಶನವಾಯಿತು. ನಮಗೆಲ್ಲರಿಗೂ ಹೇಳಲಾಗದ ಸಂತಸ. ಕುಂಠುತ್ತಾ ಸಾಗಿ ಬಂದಿದ್ದೆವು. ಇನ್ನು ಸ್ವಲ್ಪ ದೂರ ನಡೆದರೆ ಭಟ್ರ ಮನೆ ಸಿಗುತ್ತದೆ ಎಂಬುವ ಖುಷಿ ಮತ್ತೆ ನಡೆಯಲು ಪ್ರೋತ್ಸಾಹಿಸುತ್ತಿತ್ತು. ನವೆಂಬರ್ ಕೊನೆಯಲ್ಲಿ ಚಾರಣ ಕೈಗೊಂಡ ಕಾರಣ ಬಿಸಿಲಿರಲಿಲ್ಲ, ಮಳೆ ಬರುತ್ತಿತ್ತು. ಹೀಗಾಗಿ ಮಳೆಯಲ್ಲಿ ನೆನೆಯುವ ಸೋಜಿಗವೂ ನಮ್ಮದಾಯಿತು.


ಕುಮಾರ ಪರ್ವತ ತಲೆ ಮೇಲೆ ಹೊತ್ತ ಭಾವ

 ಗಿರಿಗದ್ದೆ ಭಟ್ರ ಮನೆ ಪ್ರವೇಶ ಮಾಡುತ್ತಿದ್ದಂತೆ ಇಡೀ ಕುಮಾರ ಪರ್ವತವನ್ನೇ ತಲೆ ಮೇಲೆ ಹೊತ್ತ ಅನುಭವ. ಒಂದು ಕ್ಷಣ ಗೊಂದಲ ಮಯ. ಅತ್ತ ಮಳೆ ಬೇರೆ ಬರುತ್ತಲೇ ಇತ್ತು. ರೈನ್‌ಕೋಟ್ ಹಾಕಿದ್ದರೂ ತಲೆಯಿಂದ ಕಾಲಿನವರೆಗೂ ಒದ್ದೆ. ಅಯ್ಯೋ ಯಾಕಾದ್ರೂ ಬಂದೆವೂ?, ಬೆಚ್ಚಗೆ ಮನೆಯಲ್ಲಿ ಇರಬಹುದಿತ್ತು ಎಂಬ ಆಲೋಚನೆ ಒಂದೇ ಕ್ಷಣದಲ್ಲಿ ನಮ್ಮ ೫ ಜನರ ತಲೆಯಲ್ಲೂ ಬಂದಿತ್ತು. ಆದರೆ ಯಾರೊಬ್ಬರೂ ವ್ಯಕ್ತಪಡಿಸಲಿಲ್ಲವಷ್ಟೆ..!!

ಕಾರಣ ಅದಾಗಲೇ ೬ಕಿ.ಮೀ ಸಾಗಿಯಾಗಿತ್ತು. ಕತ್ತಲಾದ್ದರಿಂದ ಮತ್ತೆ ಮನೆ ಸೇರುವ ಅವಕಾಶ ಇರಲಿಲ್ಲ. ನಮ್ಮೆಲ್ಲರನ್ನ ಚಿಂತೆಗೀಡು ಮಾಡಿದ್ದು ಗಿರಿಗದ್ದೆ ಭಟ್ಟರ ಮನೆ ಪ್ರವೇಶಿಸಿದಾಗಿನ ಸನ್ನಿವೇಶ.

ಚಾರಣಿಗರ ದಂಡು

ನಮ್ಮಂತೆ ಚಾರಣ ಕೈಗೊಂಡು ಬಂದ ಅನೇಕ ತಂಡಗಳು ನಮ್ಮಿಂದ ಮೊದಲೇ ಬಂದು ನೆಲೆಯೂರಿದ್ದರು. ಮನೆಯ ಚಾವಡಿಯಿಂದ ಹಿಡಿದು, ಒಳಗಿನ ಕೋಣೆಯವರೆಗೂ ಚಾರಣ ಗರು ತುಂಬಿ ಹೋಗಿದ್ದರು. ಬಹುತೇಕರಿಗೆ ಅದಾಗಲೇ ಅರ್ಧ ನಿದ್ದೆ ಆಗಿತ್ತು. ನಮ್ಮಂತೆ ಅನೇಕರು ರಾತ್ರಿ ನಿದ್ರಿಸಲು ಜಾಗಕ್ಕಾಗಿ ಮನೆಯ ಅಂಗಳದಲ್ಲಿ ನಿಂತಿದ್ದರು. ಅಲ್ಲೇ ಎಲ್ಲಾದರು ಕುಳಿತುಕೊಳ್ಳೋಣವೆಂದರೆ ಇಕ್ಕೆಲಗಳ ಜಾಗವೆಲ್ಲಾ ಚಾರಣಗರ ಬ್ಯಾಗ್‌ಗಳಿಂದ ತುಂಬಿ ಹೋಗಿತ್ತು. ಈ ನಡುವೆ ಸುರಿಯುತ್ತಿದ್ದ ಮಳೆಯಂತು ನಮ್ಮನ್ನು ಹೈರಾಣಾಗಿಸಿತ್ತು. ಜೊತೆಗೆ ಸುಸ್ತು ಮತ್ತು ಹಸಿವು.

ಸಮಯ ಕಳೆದು ಹೋಗುತ್ತಿತ್ತು. ರಾತ್ರಿ ಉಳಿದುಕೊಳ್ಳಲು ಏನಾದರೊಂದು ವ್ಯವಸ್ಥೆಯಾಗಬೇಕಿತ್ತು. ಫೋನ್‌ನಲ್ಲಿ ಭಟ್ರು ಭರವಸೆ ಕೊಟ್ಟಿದ್ದರು, ಉಳಿದುಕೊಳ್ಬಹುದಪ್ಪಾ… ಇದೇ ಧೈರ್ಯ. ಸೀದ ಭಟ್ರ ಬಳಿ ಹೋಗಿ, ರಾತ್ರಿ ಉಳ್ಕೊಳ್ಳಿಕೆ ಜಾಗ….ಅಂದೆ. ನಗುತ್ತಾ, ಇರೀ ಏನಾದ್ರೊಂದು ವ್ಯವಸ್ಥೆ ಆಗ್ತದೆ ಹೇಳುವ ಪುನರಾವರ್ತಿತ ಮಾತು. ಈ ವೇಳೆ ಭಟ್ರ ಸಹೋದರೊಬ್ಬರು ಆಡಿದ ಮಾತು ಮತ್ತೆ ನಮ್ಮನ್ನ ಚಿಂತೆಗೀಡು ಮಾಡಿತು. ಊಟ ಎಲ್ಲ ಆಗುವಾಗ ಗಂಟೆ ೧೧ ಕಳಿತದೆ. ನಂತ್ರ ಸ್ವಲ್ಪ ಹೊತ್ತು ಮಾತಾಡಿ. ಆವಾಗ ಬೆಳಗ್ಗೆ ಆಗ್ತದೆ. ೪ಗಂಟೆಗೆ ಮತ್ತೆ ಚಾರಣ ಹೊರಟ್ರಾಯ್ತು… ಅಂದ್ರು. ಅಷ್ಟರಲ್ಲಿ ಮತ್ತದೇ ಚಿಂತೆ, ರಾತ್ರಿ ನಿದ್ರಿಸುವುದೆಲ್ಲಿ? ಸಮಯ ಕಳೆಯುತ್ತಿದ್ದಂತೆ ಭಟ್ಟರ ಜೊತೆಗಿನ ಮಾತು ಆಪ್ತತೆಯ ಕಡೆಗೆ ಸಾಗಿತು. 

 ಅಪರಿಚಿತರಿಂದ ತುಂಬಿದ್ದರೂ, ಇದು ನಮ್ಮದೇ ಮನೆಯೇನೋ ಎಂಬ ಭಾವನೆ ಬಂತು. ಹೀಗಾಗಿ ಸ್ವಲ್ಪ ಧೈರ್ಯದಿಂದ ಒಳಗೆ ಅಡಿಗೆ ಕೋಣೆಯ ಪ್ರವೇಶವಾಯಿತು. ಮೂರು ಒಲೆಗಳ ಮೇಲೆ ದೊಡ್ಡಗಾತ್ರದ ಪಾತ್ರೆಯಲ್ಲಿ ರಾತ್ರೆಯ ಊಟಕ್ಕೆ ಅನ್ನ, ಸಾರು, ಸಾಂಬಾರು ಬೇಯುತ್ತಿತ್ತು. ಧಗಧಗನೆ ಉರಿಯುತ್ತಿದ್ದ ಬೆಂಕಿ ಕಂಡಾಗ ಎಲ್ಲಿಲ್ಲದ ಸಂಭ್ರಮ. ಮಳೆಯಲ್ಲಿ ನೆನೆದು ಬಂದಿದ್ದ ನಮಗೆ ಮೈಬಿಸಿ ಮಾಡಿಕೊಳ್ಳಲು ಸಾಧ್ಯವಾಯಿತು.

ಇಷ್ಟಾದರೂ ನಿದ್ರಿಸುವುದೆಲ್ಲಿ ಎಂಬ ಚಿಂತೆ ಮಾತ್ರ ಕಡಿಮೆಯಾಗಿಲ್ಲ. ಹೊತ್ತೊತ್ತಿಗೆ ಭಟ್ರ ಬಳಿ ಹೋಗಿ ಪ್ರಶ್ನೆ ಮರು ಪ್ರಶ್ನೆಯಾಗುತ್ತಿತ್ತು. ಎಲೆ ಅಡಿಕೆ ಜಗಿಯುತ್ತಾ ನಗುವುದೇ ಅವರ ಉತ್ತರ. ಈ ನಡುವೆ ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಅಲ್ಲೇ ಪಕ್ಕದಲ್ಲಿ ಪಾತ್ರೆಯೊಳಗಿದ್ದ ಮಧ್ಯಾಹ್ನದ ಪೂಜೆಯ ನೈವೇದ್ಯ ನಮ್ಮ ಆಹಾರವಾಗಿ ಹೋಯಿತು. ಗಟ್ಟಿ ಪಾಯಸ ಕಾಲಿಯಾದ್ದು ಭಟ್ಟರ ಗಮನಕ್ಕೆ ಬರಲೇ ಇಲ್ಲ. ಹಸಿವು ನಿಂತಿತು, ಸ್ವಲ್ಪ ಸುಧಾರಿಸಿಕೊಂಡೆವು. ಆದರೂ ನಮ್ಮ ಚಿಂತೆ ರಾತ್ರಿ ನಿದ್ರಿಸುವುದೆಲ್ಲಿ ಎಂಬುವುದು.

ನೀವುಇದನ್ನುಇಷ್ಟಪಡಬಹುದು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಪಯಣ ಮಾಡಿದ ಅಪರೂಪದ ಟ್ರಾವೆಲರ್ ಕುಮಾರ್ ಶಾ

ದೇವರ ಕೋಣೆಯ ಪಕ್ಕದಲ್ಲಿ ಕುಳಿತುಕೊಳ್ಳಲು ಸ್ವಲ್ಪ ಜಾಗ ಲಭಿಸಿತು. ಕೈಬಿಸಿ ಮಾಡಿಕೊಂಡು ಸ್ವಲ್ಪ ಹರಟುತ್ತಾ ಕುಳಿತೆವು. ನಡೆದುಕೊಂಡು ಬಂದ ಹಾದಿ, ಅನುಭವಿಸಿದ ಒದ್ದಾಟ, ದಾರಿ ಮಧ್ಯೆ ಸುಸ್ತಾದ ಬಗೆ, ಒದ್ದಾಟಗಳ ಬಗೆಗೆಲ್ಲಾ ತಮಾಷೆಯ ತಮಾಷೆಯ ಮಾತುಗಳನ್ನಾಡಿಕೊಂಡು ಸಮಯ ಕಳೆದೆವು. ಅಷ್ಟರಲ್ಲಿ ಊಟ ರೆಡಿ ಎಂಬ ಮಾತು ಮತ್ತೆ ಕಿವಿ ನೆಟ್ಟಗೆ ಮಾಡಿತು. ಮಲಗಿದ್ದ ಚಾರಣ ಗರೆಲ್ಲ ಬಂದು ಸರತಿ ಸಾಲಿನಲ್ಲಿ ನಿಂತು ಬಿಟ್ಟರು. ಬಿಸಿಬಿಸಿ ಊಟ ಹೊಟ್ಟೆಯೊಳಗೆ ಸೇರಿತು. ನಡೆದು ಬಂದ ದಣ ವೆಲ್ಲಾ ಒಂದು ಕ್ಷಣ ಮಾಯವಾಗಿ ಬಿಟ್ಟಿತು.

ಊಟ ಆಗುತ್ತಿದ್ದಂತೆ ಮಲಗಿದ್ದವರೆಲ್ಲ ಬ್ಯಾಗ್ ಎತ್ತಿಕೊಂಡು ಹೊರ ನಡೆದರು. ಮೊದಲೇ ಹಾಕಿದ್ದ ಟೆಂಟಿನೊಳಗೆ ಸೇರಿಕೊಂಡುಬಿಟ್ಟರು. ನಿಂತು ನೋಡುತ್ತಿದ್ದ ನಮಗೆಲ್ಲ ಆಶ್ಚರ್ಯ… ಮನಸ್ಸಿನೊಳಗೆ ಸಂತಸ. ಕಾರಣ ವಿಸ್ತಾರವಾದ ಜಗುಲಿ ಖಾಲಿಯಾಯಿತು. ಹಿಂದು ಮುಂದು ನೋಡದೆ ಅಲ್ಲೇ ಇದ್ದ ಚಾಪೆ ಹಾಸಿ ನಮಗೆ ಬೇಕಾದಷ್ಟು ಜಾಗ ಆಕ್ರಮಿಸಿಕೊಂಡೆವು. ಬ್ಯಾಗ್ ಬದಿಗಿರಿಸಿ, ಜೀರುಂಡೆಯನ್ನು ಶಪಿಸುತ್ತಾ ನಿದ್ರೆಗೆ ಜಾರಿದೆವು.

DCIM\100GOPRO\GOPR4091.JPG

ಮುಂಜಾನೆ ಟ್ರೆಕ್ಕಿಂಗ್ ಶುರು

ಬೆಳಗ್ಗಿನ ತಿಂಡಿಗೆ ಭಟ್ರ ಕೈಯ್ಯಿಂದ ಬಿಸಿಬಿಸಿ ಚಿತ್ರಾನ್ನ ರೆಡಿಯಾಯಿತು. ಸೇವಿಸಿ ಸ್ಕಂದಗಿರಿಯತ್ತ ನಮ್ಮ ನಡಿಗೆ ಮುಂದುವರೆಯಿತು. ಬೆಳಗ್ಗಿನ ಜಾವ ಆದ್ದರಿಂದ ಮಂಜು ಮುಸುಕಿದ ವಾತಾವರಣ. ಎಷ್ಟು ಬೆಟ್ಟ ಏರಿ ಇಳಿದರೂ ದಾರಿ ಕಡಿಮೆಯಾಗುವಂತೆ ಭಾಸವಾಗುತ್ತಿರಲಿಲ್ಲ. ಹೀಗಾಗಿ ಕಲ್ಲಿನ ಮಂಟಪದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಂಡೆವು. ಅಲ್ಲಿಂದ ಭತ್ತದ ರಾಶಿ ಎಂದು ಕರೆಯುವ ಪ್ರದೇಶವನ್ನು ನೋಡುತ್ತಾ ಶೇಷ ಪರ್ವತದತ್ತ ಸಾಗಿದೆವು. 

ಮತ್ತೆ ಬೆಟ್ಟ ಹತ್ತಿ ಇಳಿದು, ಕಾದು ದಾರಿಯಲ್ಲಿ ಸಾಗುತ್ತಾ ಕುಮಾರ ಪರ್ವತ ಶಿಖರದತ್ತ ಸಾಗಿದೆವು. ಸಣ್ಣ ಜಲಪಾತದ ಬದಿಯಿಂದ ಮೇಲೇರಿ ಮಧ್ಯಾಹ್ನ ೧ರ ಹೊತ್ತಿಗೆ ಕುಮಾರ ಪರ್ವತದ ತುತ್ತ ತುದಿ ತಲುಪಿದೆವು. ಇಲ್ಲಿ ಕಲ್ಲನ್ನೆಲ್ಲ ಜೋಡಿಸಿಕೊಂಡು ಸಣ್ಣ ಗುಡಿಯೊಂದು ನಿರ್ಮಾಣವಾಗಿದೆ. ಈ ಗುಡಿಯ ದರ್ಶನವಾಗುತ್ತಿದ್ದಂತೆ ನಮ್ಮ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ಸಾರ್ಥಕತೆಯ ಭಾವ. ಅಲ್ಲೇ ಪಕ್ಕದಲ್ಲಿ ಮರದಡಿಯಲ್ಲಿ ಕುಳಿತುಕೊಂಡು ಪ್ರಕೃತಿಯ ಸೊಬಗನ್ನು ಸಂಭ್ರಮಿಸಿಕೊoಡೆವು. ಕಾಣುವ ದಟ್ಟ ಅರಣ್ಯ, ಆಳ ಕಣ ವೆ, ಕೈಗೆ ಸಿಗುವ ಮೋಡ, ಹಸಿರ ಹುಲ್ಲುಗಾವಲು, ಮಳೆಯಲ್ಲಿ ನೆನಯುತ್ತಾ ಸಾಗಿದ ಅನುಭವ… ಎಲ್ಲದರ ಕುರಿತು ಮಾತು ಸಾಗಿತು. 

ವಿಶ್ರಾಂತಿಯ ಸಮಯ ಕಳೆಯುತ್ತಿದ್ದಂತೆ ಮತ್ತೆ ಇಳಿದು ಬರಲು ಆರಂಭಿಸಿದೆವು. ಒಂದೇ ಉಸಿರಿನಲ್ಲಿ ನಡೆಯುತ್ತಾ, ಇಷ್ಟವಾದ ಮತ್ತು ಕಷ್ಟವಾದ ಸೋಜಿಗದ ಕುಮಾರ ಪರ್ವತ ಚಾರಣವನ್ನು ಮೆಲುಕುಹಾಕುತ್ತಾ ಮನೆ ಕಡೆ ಸಾಗಿದೆವು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

One Comment

  1. ಟ್ರಕ್ಕಿಂಗ್ ಸ್ಟೋರಿ ಓದಿ ನಾನು ನಿಮ್ಮಜೊತೆ ಚಾರಣ ಮಾಡಿದ ಅನುಭವವಾಯಿತು, All the best

Leave a Reply

Your email address will not be published. Required fields are marked *

Back to top button