ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಂಡರ್ ಬಾಕ್ಸ್ವಿಂಗಡಿಸದಸ್ಫೂರ್ತಿ ಗಾಥೆ

ಪಯಣ ಒಟ್ಟುಗೂಡಿಸಿದ ಅಪರೂಪದ ಜೋಡಿ ಸುನೀಲ್, ಚಂದನಾ: ಕಡಿಮೆ ಹಣದಲ್ಲಿ ಊರು ಸುತ್ತುವ ಮಾದರಿ ಪಯಣಿಗರು

#ಯುಗಾದಿ ವಿಶೇಷ ಬರಹ

ಹುಬ್ಬಳ್ಳಿಯ ಉತ್ಸಾಹಿ ಹುಡುಗ ಸುನೀಲ್ ಪಾಟೀಲ್, ಕೋಲಾರದ ಲವಲವಿಕೆಯ ಹುಡುಗಿ ಚಂದನಾ ರಾವ್ ಒಂದೇ ವೇಳೆಯಲ್ಲಿ ಪ್ರತ್ಯೇಕವಾಗಿ ಹಂಪಿಗೆ ಸೋಲೋ ಟ್ರಾವೆಲ್ ಮಾಡುತ್ತಾರೆ. ಅಲ್ಲಿ ಯಾವುದೋ ಒಂದು ಗಳಿಗೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗುತ್ತಾರೆ. ಹಾಗೆ ಶುರುವಾಗಿದ್ದು ಈ ಕತೆ. ಪ್ರಯಾಣವೊಂದು ಎರಡು ಜೀವಗಳನ್ನು, ಎರಡು ಕುಟುಂಬಗಳನ್ನು ಬೆಸೆದ ಅಪರೂಪದ ಕತೆ ಇದು. ಅತಿ ಕಡಿಮೆ ಹಣದಲ್ಲಿ ನಾಡು, ರಾಜ್ಯ ಸುತ್ತಾಡುವ ಈ ಜೋಡಿಯ ಕತೆ ಓದಲು ನೀವು ಮರೆಯಬಾರದು.

 • ಸುಜಯ್. ಪಿ.
Pre Wedding Travellers 
Chandana Rao Sunil Patil Travelories
Chandana and Sunil

ಪಯಣವೇ ಬದುಕೆಂದುಕೊಂಡಿರುವ ಹುಡುಗ, ಕನಸುಗಳ ಮೂಟೆ ಹೊತ್ತಿರುವ ಹುಡುಗಿ, ಇಬ್ಬರೂ ಹುಟ್ಟು ಪ್ರವಾಸಿಗರು. ಇಬ್ಬರೂ ಒಂಟಿ ಪಯಣಿಗರಾಗಿ ಪ್ರವಾಸಿ ತಾಣವೊಂದರಲ್ಲಿ ಭೇಟಿಯಾಗುತ್ತಾರೆ, ಪರಸ್ಪರ ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ, ಮದುವೆಯಾಗುತ್ತಾರೆ, ಖುಷಿಯಿಂದ ಬದುಕುತ್ತಿದ್ದಾರೆ.

ಯಾವುದೋ ಕಾದಂಬರಿ ಅಥವಾ ಸಿನಿಮಾದ ಕಥೆ ಅಂತ ಅನಿಸುತ್ತಿದೆಯಾ? 

ಈ ಕಥೆಯಂತ, ಕನಸಿನಂತ ಚಂದದ ಬದುಕನ್ನು ಬದುತ್ತಿರುವವರು ಸುನಿಲ್ ಪಾಟೀಲ್ ಮತ್ತು ಚಂದನಾ ರಾವ್. 

ಇವರ ಕುತೂಹಲಕಾರಿ ಕಥೆಯನ್ನು ಇವರಿಬ್ಬರಿಂದಲೂ ಕೇಳಿ ನಾನಂತೂ ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟೆ. ಇನ್ನು ಕಥೆ ಹೇಳೋದು ನನಗೆ ಇನ್ನೂ ಖುಷಿ ಕೊಡೋ ಸಂಗತಿ ಆಗಿರೋದ್ರಿಂದ ಸುನಿಲ್ ಚಂದನಾ ಕಥೆ ಹೇಳುತ್ತೇನೆ ಕೇಳಿ. 

ಕೋಲಾರದ ಹುಡುಗಿ

ಪ್ರಯಾಣಗಳು ಸುತ್ತಲಿನ ಪ್ರಕೃತಿಯ ಅಂದವನ್ನು ನಮಗೆ ಅರ್ಥೈಸುವ ಜೊತೆಗೆ ಪ್ರತೀ ಬಾರಿಯೂ ಹೊಸತೇನಾದರೂ ಕಲಿಸುತ್ತದೆ. ಕೆಲವೊಮ್ಮೆ ಏನನ್ನೋ ಮರೆಯೋಕೆ, ಇನ್ನೇನನ್ನೋ ನೆನಪಿಸೋದಕ್ಕೆ, ಇನ್ನು ಕೆಲವೊಮ್ಮೆ ಕಾರಣವೇ ಇಲ್ಲದೆ ಪ್ರವಾಸ ಹೋಗಬೇಕು.

ಪರಿಚಯವೇ ಜನರನ್ನೂ ಕೂಡಾ ನಮಗೆ ಹತ್ತಿರವಾಗಿಸುವುದು ಪ್ರಯಾಣಗಳೇ. ಇಂತಹುದೇ ಒಂದು ಪಯಣದಲ್ಲಿ ಪರಿಚಿತರಾದ ಇಬ್ಬರು ಅಪರಿಚಿತರ ಕಥೆಯಿದು. 

Chandana Rao Travelories
Chandana Rao

 ಚಂದನಾ, ಬೆಂಗಳೂರಿನ ಕೋಲಾರದವರು.(Bangalore, Kolar) ಮಧ್ಯಮ ವರ್ಗದ ಹುಡುಗಿ. ಕೋಲಾರದ ಚಿನ್ನದಷ್ಟೇ ಹೊಳೆಯುವ ಕನಸುಗಳ ಹೊತ್ತುಕೊಂಡಿದ್ದವರು. ಪ್ರಯಾಣದ ಬಗ್ಗೆ ಅತೀವ ಆಸೆ. ಚಂದನಾ ಅಜ್ಜ ಭಾರತೀಯ ಸೇನೆಯಲ್ಲಿ ಆಫೀಸರ್ ಆಗಿದ್ದರಿಂದ ಭಾರತವೆಲ್ಲಾ ಸುತ್ತಿದ್ದವರು. ಅಜ್ಜ ಹೇಳುವ ದೂರದೂರಿನ ಕಥೆಗಳನೆಲ್ಲಾ ಕೇಳುತ್ತಲೇ ಬೆಳೆದ ಚಂದನಾ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಕುಟುಂಬದ ಜೊತೆ ಪ್ರವಾಸ ಹೋಗುತ್ತಿದ್ದರು.

ಬದುಕಿನಲ್ಲಿ ಹೊಸತನಗಳಿಗೆ ತೆರೆದುಕೊಳ್ಳುವುದು ಅಗತ್ಯ ಮತ್ತು ಕೆಲವೊಮ್ಮೆ ಅನಿವಾರ್ಯ. ಒಂಟಿ ಪಯಣ (Solo travelling) ಅನ್ನುವುದು ಕೂಡಾ ಅಂತಹ ಹೊಸತನದ ಹುಡುಕಾಟವೇ ಆಗಿದೆ.

2016ರ ಮೇ ತಿಂಗಳು, ಚಂದನಾ ತನ್ನ ಗಳಿಕೆಯ ಉಳಿತಾಯದ ಹಣದಲ್ಲಿ ಕರ್ನಾಟಕದ ಪ್ರವಾಸಿ ತಾಣಗಳ ಕಿರೀಟದಂತಿರುವ ಹಂಪಿಗೆ(Hampi) ತನ್ನ ಮೊದಲ ಒಂಟಿ ಪ್ರಯಾಣಕ್ಕೆ ಹೊರಡುತ್ತಾರೆ. ಅಂದು ರಾತ್ರಿ ಬೆಂಗಳೂರಿನಿಂದ ಹೊಸಪೇಟೆಯ(Hospet) ಬಸ್ಸು ಹತ್ತುತ್ತಾರೆ.

Chandana Rao Travelories
Chandana Rao

ಪಯಣವೊಂದಕ್ಕೆ ಕಾರಣಗಳು ಹಲವಾರಿರುತ್ತದೆ. ಆದರೆ ಗುರಿ ಮಾತ್ರ ನೆಮ್ಮದಿ, ಖುಷಿ, ಹೊಸತನದ ಹುಡುಕಾಟ ಅಷ್ಟೇ ಆಗಿರುತ್ತದೆ. ಒಂಟಿ ಪಯಣ ಎಲ್ಲರಿಗೂ ಅಷ್ಟು ಸುಲಭವಲ್ಲ. ಅದೂ ಹುಡುಗಿಯಾಗಿ ಚಂದನಾ ಅಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದರು. 

ನೀವು ಇದನ್ನು ಇಷ್ಟಪಡಬಹುದು: ಕೋಲಾರದ ಹುಡುಗಿ ಮೊದಲ ಬಾರಿ ಉತ್ತರ ಕರ್ನಾಟಕ ನೋಡಿದ ಕತೆ: ಚಂದನಾ ರಾವ್ ಬರೆದ ಒಂದೂರಿನ ಕಥನ

ಹುಬ್ಬಳ್ಳಿಯಿಂದ ಹೊರಟ ಹುಡುಗ

ಈ ಕಥೆಗೆ ಹೊಸತೊಂದು ತಿರುವು ಬರುವು ಈಗ, ಚಂದನಾ ಹಂಪಿಗೆ ಹೊರಟ ಅದೇ ದಿನ ಹುಬ್ಬಳ್ಳಿಯಿಂದ(Hubli) ಹೊಸಪೇಟೆಗೆ ಹೊರಟ ಬಸ್ಸೊಂದರಲ್ಲಿ ಒಂಟಿ ಪಯಣಿಗನೊಬ್ಬ ಬಸ್ಸು ಹತ್ತಿರುತ್ತಾರೆ. ಅವರ ಗುರಿಯೂ ಹಂಪಿಯೇ ಆಗಿರುತ್ತದೆ. ಅದು ಮತ್ಯಾರೂ ಅಲ್ಲ, ಸುನಿಲ್ ಪಾಟೀಲ್. 

ಈ ಪಯಣ ಒಬ್ಬರಿಗೊಬ್ಬರು ಪರಸ್ಪರ ಪರಿಚಯವೇ ಈ ಇಬ್ಬರೂ ಅಪರಿಚಿತರ ಬದುಕನ್ನೇ ಬದಲಿಸಿಬಿಡಹುದು ಅನ್ನುವ ಸಣ್ಣ ಸುಳಿವೂ ಇಲ್ಲದೆ ಶುರುವಾಗಿತ್ತು ಇಬ್ಬರ ಒಂಟಿ ಯಾತ್ರೆ. 

Sunil Patil Travelories
Sunil S Patil

 ಸುನಿಲ್, ಚಂದನಾ ಮೊದಲ ಭೇಟಿ ನಡೆದದ್ದು ಮುಂಜಾನೆ ಹೊಸಪೇಟೆಯಿಂದ ಹಂಪಿಗೆ ಹೋಗೋ ಬಸ್ಸಲ್ಲಿ.

ಸಾಮಾನ್ಯವಾಗಿ ಟ್ರಾವೆಲರ್ಸ್‌‌ಳಿಗೆ ಸಿಕ್ಕಸಿಕ್ಕವರನ್ನೆಲ್ಲಾ ಮಾತಾಡಿಸುವ ಹುಚ್ಚು ಜಾಸ್ತಿಯೇ ಇರುತ್ತದೆ. ಅದೂ ಇಬ್ಬರೂ ಟ್ರಾವೆಲರ್ ಗಳು ಸಿಕ್ಕರಂತೂ ಮಾತಿಗೆ ಬರವೆಲ್ಲಿ? ಇನ್ನೊಂದು ಮಾತಲ್ಲಿ ಹೇಳುವುದಾದರೆ ಇವರದ್ದು ‘ಬಸ್ನೇ ಬನಾದಿ ಜೋಡಿ’. ಬಸ್ಸಲ್ಲಿ ಸಿಕ್ಕ ಈ ಇಬ್ಬರನ್ನು ಬದುಕಿನುದ್ದಕ್ಕೂ ಜೊತೆಗಾಗಿ ನಡೆಯುವಂತೆ ಮಾಡಿದ್ದು ‘ಟ್ರಾವೆಲ್’ ಅನ್ನುವ ಅಚ್ಚರಿ. 

ಸುನಿಲ್, ಚಂದನಾರನ್ನು ಹಂಪಿಯಲ್ಲಿ ಭೇಟಿಯಾಗುವ ಹೊತ್ತಿಗೆ ಉದ್ಯೋಗವನ್ನು ತೊರೆದು ಫುಲ್ ಟೈಮ್ ಟ್ರಾವೆಲರ್(Traveller) ಆಗಿದ್ದರು. ಸುನಿಲ್ ಟ್ರಾವೆಲ್ ಹಿಸ್ಟರಿಯಲ್ಲಿ ಮೊದಲು ಬರುವುದು ಗೆಳೆಯನ ಜೊತೆಗೂಡಿ ಹೋದ ಇಂಡೋನೇಷ್ಯಾ(Indonesia) ಪ್ರವಾಸ.

Sunil Patil Travelories
Sunil S Patil

ಸುನಿಲ್ ಇಂಡೋನೇಷ್ಯಾದಿಂದ ಹಿಂತಿರುಗಿದ ಮೇಲೆ ಆ ಹೊಸ ಊರು, ಜನರು, ಹೊಸ ಗಾಳಿ, ನೀರು, ಇವೆಲ್ಲ ಕೊಟ್ಟ ಇದುವರೆಗೆ ತಿಳಿದಿರದ ಹೊಸ ಅನುಭವಕ್ಕೆ ಮಾರುಹೋಗಿಬಿಟ್ಟರು. ಪ್ರವಾಸದ ಸೆಳೆತವನ್ನು ಅವರ ಮಾತಲ್ಲೇ ಹೇಳುವುದಾದರೆ, “ಏನ್ ಗುರೂ ಇದು, ಈ ರೀತಿ ಕಿಕ್ ಕೊಡ್ತಾ ಇದೆಯಲ್ಲ…” ಅಂತ ಅನಿಸತೊಡಗಿತ್ತು.

ಅಲ್ಲಿಂದ ಪ್ರತೀ ಬಿಡುವುವಿನಲ್ಲಿ ಸುತ್ತಾಡೋದಷ್ಟೇ ಸುನಿಲ್ ಕೆಲಸ ಆಗಿತ್ತು. ಹಂಪಿ, ಗೋಕರ್ಣ, ಸಿರಸಿ, ಕುಮಟಾ, ಹೀಗೆ ಪ್ರತೀ ವೀಕೆಂಡ್ ಒಂದೊಂದು ಊರಲ್ಲಿರುತ್ತಿದ್ದರು. 

ಅದು ಅಣ್ಣಾ ಹಜಾರೆಯ ಪ್ರತಿಭಟನೆ ನಡೆಯುತಿದ್ದ ಕಾಲ ಸುಖಾಸುಮ್ಮನೆ ಅಣ್ಣಾ ಹಜಾರೆಯ ಊರು ಮಹಾರಾಷ್ಟ್ರದ ರಾಲೇಗನ್ ಸಿದ್ದಿಗೆ ಹೋಗಿ ಅಣ್ಣಾ ಜೊತೆ ಎರಡು ದಿನ ಇದ್ದು ಬಂದರು. ಅಹಮದಾಬಾದ್ ಹೋದರು. 

May be an image of 1 person
Sela Pass, Arunachal Pradesh

ಭಾರತದ ಸೆವೆನ್ ಸಿಸ್ಟರ್ಸ್ ಎಂದು ಕರೆಯಲ್ಪಡುವ ಅರುಣಾಚಲ ಪ್ರದೇಶ,(Arunachal pradesh) ಅಸ್ಸಾಂ(Assam), ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಇಷ್ಟೂ ರಾಜ್ಯಗಳಲ್ಲಿ ನಲವತ್ತೈದು ದಿನ ಇದ್ದು ಬಂದರು. 

ಥೈಲ್ಯಾಂಡ್ ದೇಶಕ್ಕೆ ಒಂಟಿ ಪ್ರವಾಸ ಹೋಗಿಬಂದರು. ಒಟ್ಟಾರೆ ಪಯಣ, ಪ್ರವಾಸ ಅನ್ನೋ ಹುಳ ಸುನಿಲ್ ಅವರೊಳಗೆ ಹೋಗಿಬಿಟ್ಟಿತ್ತು.

ಈ ನಡುವೆ ಸುನಿಲ್ ಮತ್ತು ಅವರ ಗೆಳೆಯ ಸೇರಿ ಹೊರದೇಶಗಳಲ್ಲಿ ಟ್ರಾವೆಲ್ ಶೋ ನಡೆಸುವ ಬಗ್ಗೆ ಪ್ಲಾನ್ ಯೋಚಿಸಿದ್ದರು. 

ಹೀಗೆ ಕೆಲವು ಗೊಂದಲಗಳೊಂದಿಗೆ ಸುನಿಲ್ ಲೈಫ್ ನಡೆಯತ್ತಾ ಇರುತ್ತದೆ. ಆ ಸಮಯದಲ್ಲೇ ಸುನಿಲ್ ಹಂಪಿಗೆ ಹೊರಟಿದ್ದು. 

No photo description available.

ಟ್ರಾವೆಲರ್ಸ್‌‌ಗಳಿಗೆ ಕೆಲವೊಂದು ತಾಣಗಳು ತುಂಬಾನೇ ಎನರ್ಜಿ ಕೊಡುವ ಸ್ಥಳಗಳಾಗಿರುತ್ತದೆ, ಇದು ಅಚ್ಚರಿ ಅನಿಸಿದರೂ ಸತ್ಯ. ಆ ಸ್ಥಳದಲ್ಲಿ ಕಳೆಯುವ ಕೆಲವು ನಿಮಿಷಗಳು ಅವರ ಬದುಕಿಗೆ ಹೊಸ ಹುರುಪು ನೀಡಬಲ್ಲದು. ಸುನಿಲ್ ಅವರಿಗೆ ಹಂಪಿ ಈ ರೀತಿಯ ಎನರ್ಜಿ ಬೂಸ್ಟರ್‌.

ಚಂದನಾ ಭೇಟಿ ನಡೆದ ಸಮಯದಲ್ಲಿ ಸುನಿಲ್ ಅವರದ್ದು ಹಂಪಿಗೆ ಹತ್ತನೇ ಬಾರಿಯ ಒಂಟಿ ಪಯಣವಾಗಿತ್ತು. 

ಮಂಗಗಳ ಜೊತೆ ನಡೆದ ಜಗಳ 

ಬೆಳಿಗ್ಗೆ ಹಂಪಿ ತಲುಪಿದ ಇಬ್ಬರು ಮೊದಲು ಹೋಗಿದ್ದು ಮಾತಂಗ ಬೆಟ್ಟ. ಅಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡರು.

ಬೆಟ್ಟ ಏರಿದ ಮೇಲೆ ಚಂದನಾ ಅದೇನೋ ಕಾರಣಕ್ಕೆ ಸ್ವಲ್ಪ ಕೆಳಗಿಳಿದವರು ಮತ್ತೆ ಮೇಲೇರಿದಾಗ ಅವರ ಬ್ಯಾಗ್, ಕ್ಯಾಮರಾ, ಪೆನ್ ಡ್ರೈವ್, ಇವೆಲ್ಲವೂ ಮಂಗಗಳ ಕೈಯಲ್ಲಿದೆ. ಸುನಿಲ್ ಭಯ ಬಿದ್ದು ದೂರ ನಿಂತುಕೊಂಡಿದ್ದಾರೆ‌. ತಕ್ಷಣ ಚಂದನಾ ಅವರು ಹತ್ತಿರದಲ್ಲಿದ್ದ ತೆಂಗಿನ ಗರಿಯೊಂದನ್ನು ಎತ್ತಿಕೊಂಡು ಮಂಗಗಳನ್ನು ಓಡಿಸಿ ತನ್ನ ವಸ್ತುಗಳನೆಲ್ಲಾ ಮಂಗನ ಕೈಯಿಂದ ಕಸಿದುಕೊಂಡರಂತೆ. ಹಳ್ಳಿ ಹುಡುಗಿಯಾದ ಚಂದನಾ ಪಾಲಿಗೆ ಮಂಗ ಓಡಿಸೋದು ಹುಟ್ಟುತ್ತಲೇ ಬಂದಿರುವ ವಿದ್ಯೆ. ಸುನಿಲ್ ಅವರು ಈ ತರಹದ ರಗಡ್ ಹುಡುಗಿಯನ್ನು ಅದೇ ಮೊದಲು ನೋಡುತ್ತಿರುವುದು. ಚಂದನಾ ಅವರೂ ಅಷ್ಟೇ ಮಂಗಗಳಿಗೆ ಈ ಪರಿಯಾಗಿ ಹೆದರಿಕೊಳ್ಳುವ ಹುಡುಗನ್ನ ನೋಡಿದ್ದು ಅದು ಮೊದಲು.

Chandana Rao Sunil Patil Travelories
First Selfie

ಇಬ್ಬರೂ ಇಂದಿಗೂ ಆ ಫಟನೆ ನೆನಪಿಸಿಕೊಂಡು ನಗುತ್ತಾರೆ. 

*ಹಂಪಿ ಟು ಕಾಂಬೋಡಿಯಾ* 

ಹಂಪಿಯಿಂದ ಬಂದ ನಂತರವೂ ಜೋಡಿ ಸಂಪರ್ಕದಲ್ಲಿರುತ್ತಾರೆ‌. ಅವರ ನಡುವೆ ನಡೆಯುವ ಮಾತುಕತೆಗಳಲ್ಲಿ ಹೆಚ್ಚಿನ ವಿಷಯ ಪ್ರಯಾಣ, ಪ್ರವಾಸ ಇವಿಷ್ಟೇ ಆಗಿರುತಿತ್ತು. ಈ ಮಧ್ಯೆ ಸುನಿಲ್ ಮತ್ತು ಗೆಳೆಯನ ಜೊತೆಗೂಡಿ ಕಾಂಬೋಡಿಯಾದಲ್ಲಿ ಟ್ರಾವೆಲ್ ಶೋ ನೆಡಸುವ ಬಗ್ಗೆ ಮಾತುಕತೆ ನಡೆಯುತ್ತಿರುತ್ತದೆ. ಶೋ ಇನ್ನೂ ಕಳೆಗಟ್ಟಲು ಗರ್ಲ್ ಟ್ರಾವೆಲರ್ ಒಬ್ಬರ ಅವಶ್ಯಕತೆ ಇರುತ್ತದೆ. ಆಗ ಸುನಿಲ್ ಜೊತೆ ಮತ್ತೆ ಜೊತೆಯಾದವರು ಚಂದನಾ. ಜಗತ್ತಿನ ಅತಿದೊಡ್ಡ ದೇವಾಲಯ ಸಂಕೀರ್ಣವಾದ ಕಾಂಬೋಡಿಯಾದ ಅಂಗೋರ್ ವಾಟ್ ನೋಡುವ ಮಹದಾಸೆ ಹೊಂದಿದ್ದ ಚಂದನಾ, ಕಾಂಬೋಡಿಯಾದಲ್ಲಿ ಸುನಿಲ್ ಮತ್ತು ಅವರ ಗೆಳೆಯ ನಡೆಸಿದ ಟ್ರಾವೆಲ್ ಶೋನಲ್ಲಿ ಏಳುದಿನಗಳ ಕಾಲ ಜೊತೆಯಾದರು.

Angkor Wat Temple, Cambodia Travelories Chandana and Sunil
Angkor Wat Temple, Cambodia

ಮುಂದಿನ ಮೂರು ವರ್ಷಗಳ ಕಾಲ ಈ ಜೋಡಿ ಭಾರತದ ಹಲವಾರು ಪ್ರವಾಸಿ ತಾಣಗಳನ್ನು ಸುತ್ತಾಡುತ್ತಾರೆ. ಗುಜರಾತಿನ ರಣ್ ಆಫ್ ಕಛ್ ಅದರಲ್ಲಿ ಪ್ರಮುಖವಾದುದು. ಗುಜರಾತಿನಲ್ಲಿ ಇವರು ಹನ್ನೆರಡು ದಿನಗಳನ್ನು ಎರಡುವರೆ ಸಾವಿರದಲ್ಲಿ ಕಳೆದಿದ್ದು ಇವರ ಬಜೆಟ್ ಟ್ರಾವೆಲ್ಗೆ ಅತ್ಯುತ್ತಮ ಉದಾಹರಣೆಗೆ. 

ಭೇಟಿಯಿಂದ ಹಿಡಿದು ಬದುಕಿದ ರೀತಿ ಎಲ್ಲವೂ ವಿಶೇಷವಾಗಿಯೇ ಇರುವ ಈ ಇಬ್ಬರ ಮದುವೇ ಕೂಡಾ ವಿಶೇಷವಾಗಿಯೇ ನಡೆಯಿತು.

Bhoga Nandishwara Temple Chandana Rao Sunil Patil Travelories
Bhoga Nandishwara Temple

ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯದ ಸುಂದರ ಆವರಣದಲ್ಲಿ ನಡೆದ ಮದುವೆಯ ಚಿತ್ರಗಳು ನೋಡಿದ ಎಂಥವರಿಗೂ ಹೀಗೆ ಮದುವೆಯಾಗಬೇಕು ಅಂತನಿಸದಿರದು.

ಚಂದನಾ ಮಾತಿನಲ್ಲಿ ಹೇಳುವುದಾದರೆ “ಸಿಂಪಲ್ ಮದುವೆ ಅಂದುಕೊಂಡು ದೇವಸ್ಥಾನದಲ್ಲಿ ಮದುವೆಯಾಗಲು ಹೊರಟರೆ ಲಕ್ಷ ಕೊಟ್ಟರೂ ಸಿಗದಂತ ಸೆಟ್ ರೀತಿಯ ದೇವಾಲಯದ ಹಿನ್ನಲೆಯಲ್ಲಿ ಮದುವೆ ನಡೆಯಿತು”. 

ಪಯಣದ ಸಮಯದಲ್ಲಿ ನಮ್ಮೊಳಗಿನ ನಿಜವಾದ ಮನುಷ್ಯ ಹೊರಬರುತ್ತಾನೆ ಅನ್ನುವುದು ಇವರ ಅನುಭವದ ಮಾತು. ಈ ಜೋಡಿ ಕೆಫೆ, ರೆಸ್ಟೋರೆಂಟ್ಗಳಲ್ಲಿ ಕೂತು ಮಾತಾಡಿದ್ದೇ ಇಲ್ಲ. ಮಾತುಕತೆಗಳೆಲ್ಲ ಪ್ರಯಾಣದ ದಾರಿಯಲ್ಲೇ. ಜೊತೆಗೂಡಿ ಮಾಡಿದ ಪಯಣದ ದಾರಿಯಲ್ಲಿ ಕುಡಿದ ಚಹಾ, ಕೆಫೆಯ ಕಾಫಿಗಿಂತ ಹೆಚ್ಚು ಆತ್ಮೀಯವಾದದ್ದು. 

Bhoga Nandishwara Temple Chandana Rao Sunil Patil Travelories

ಮದುವೆಯ ನಂತರವೂ ಇಬ್ಬರೂ ಒಂಟಿ ಪಯಣವನ್ನು ಬಿಟ್ಟಿಲ್ಲ ಈ ಜೋಡಿ. ಇಬ್ಬರಿಗೂ ಸಮಯ ಸಿಕ್ಕರೆ ಒಟ್ಟಿಗೆ ಪ್ರಯಾಣ, ಒಬ್ಬರಿಗೆ ಮಾತ್ರ ಸಮಯವಿದ್ದರೆ ಒಂಟಿ ಪಯಣ. ಇದು ಸುನಿಲ್ ಚಂದನಾ ಟ್ರಾವೆಲ್ ರೂಲ್. 

ಟ್ರಾವೆಲ್ ನಮ್ಮನ್ನು ಒಂದು ಮಾಡಿತು, ಮುಂದೆಯೂ ಟ್ರಾವೆಲ್ಲೇ ನಮ್ಮನ್ನು ಜೊತೆಯಾಗಿರಿಸುತ್ತದೆ ಅನ್ನುವುದು ಚಂದನಾ ಅವರ ಮನದ ಮಾತು‌.

ಬದುಕಲ್ಲಿ ಏನು ಚೇಂಜ್ ಆದರೂ ಟ್ರಾವೆಲ್ ಅನ್ನೋದು ಮಾತ್ರ ಚೇಂಜ್ ಆಗಲ್ಲ ಅನ್ನೋದು ಸುನಿಲ್ ಅವರ ಗಟ್ಟಿ ಮಾತು.

Bhoga Nandishwara Temple Chandana Rao Sunil Patil Travelories

ನಮ್ಮ ಪಯಣ ಅನ್ನೋದು ನಮ್ಮ ಹುಟ್ಟಿನಿಂದಲೇ ಶುರುವಾಗುತ್ತದೆ ಅನ್ನುವ ಸುನಿಲ್, ಹುಟ್ಟಿನಿಂದ ಮಣ್ಣು ಸೇರುವವರೆಗಿನ ಪಯಣದಲ್ಲಿ ಯಾರನ್ನು ಭೇಟಿ ಆಗುತ್ತವೆ, ಏನು ಮಾಡುತ್ತೇವೆ, ಏನು ಪಡೆದುಕೊಳ್ಳುತ್ತೇವೆ ಅನ್ನುವುದನ್ನು ನಾವು ಬದುಕಲ್ಲಿ ಕಂಡುಕೊಳ್ಳಬೇಕಾಗಿದೆ ಅನ್ನುತ್ತಾರೆ. 

ಪ್ರವಾಸ ಹಾಗೇನೇ, ಕೆಲವೊಮ್ಮೆ ಏನನ್ನೋ ಮರೆಯೋಕೆ, ಇನ್ನೇನನ್ನೋ ನೆನಪಿಸೋದಕ್ಕೆ, ಇನ್ನು ಕೆಲವೊಮ್ಮೆ ಕಾರಣವೇ ಇಲ್ಲದೆ ಪ್ರವಾಸ ಹೋಗಬೇಕು.

ಯಾರಿಗೆ ಗೊತ್ತು ಅಲ್ಲೆಲ್ಲೋ ನಿಮ್ಮ ಬದುಕಿಗೆ ಜತೆಯಾಗುವವರು ಕಾಯುತ್ತಿರಬಹುದು.

Bhoga Nandishwara Temple Chandana Rao Sunil Patil Travelories

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

4 Comments

 1. Some lives are really inspiring …When solo travelling is still an impossible wish for someone , those experiences and word pictures makes the magic .

 2. hmm, ಯಾಕೋ ಕನ್ನಡ ಓದುವ ಮನಸಾಯ್ತು, ಈ story ಓದಿದ ಮೇಲೆ ತೃಪ್ತಿ ಆಯ್ತು. ದಿನಗಳೆದಂತೆ ಸುಜಯ್ ರವರ ಬರಹದ style ಮೋಡಿ ಮಾಡುತ್ತಿದೆ. ಇನ್ನೂ ಉಪಮಾಲಂಕರವನ್ನು ನಿಮ್ಮಷ್ಟು trendy ರೀತಿಯಲ್ಲಿ ಬಳಸಿದ ಯಾರನ್ನು ಇತ್ತೀಚೆಗೆ ನೋಡಿಲ್ಲ ಬಿಡಿ.

  ಅದಂತೂ ನಿಜಾನೆ, ಪ್ರವಾಸ ಕೆಲವನ್ನು ನೆನೆಯಲು, ಕೆಲವನ್ನು ಮರೆಯಲು, ಅದಲ್ಲದೇ ಪ್ರವಾಸ ನಮ್ಮನ್ನೇ ನಾವು ಅರಿಯಲು ಕೂಡಿ ಬರುವ ಸುಂದರ ಮಾರ್ಗ.
  ಸುನೀಲ್ ಅವರು ಹತ್ತು ಬಾರಿ ಹಂಪಿಗೆ ತೆರಳಿದ್ದು ಅಧ್ಬುತ, ನಾನು at least ಒಮ್ಮೆಯಾದರೂ ಹಂಪಿಗೆ ಬೇಟಿ ಕೊಡಬೇಕು. ಚಂದನ ರವರಿಗೆ ಇರುವ ದೈರ್ಯ ನಂಗೂ ಸ್ವಲ್ಪ ಇರ್ಲಿ.

  All The Best For More Stories ಸುಜಯ್

  1. ಪ್ರತಿಕ್ರಿಯೆಗಾಗಿ ಧನ್ಯವಾದಗಳು, ಖಂಡಿತವಾಗಿ ಹಂಪಿಗೆ ಭೇಟಿ ನೀಡಿ. ಒಮ್ಮೆ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುವ ಸಳೆತ ಇರುವ ಮಣ್ಣು ಅಲ್ಲಿಯದ್ದು.

Leave a Reply

Your email address will not be published. Required fields are marked *

Back to top button