ವಿಂಗಡಿಸದವಿಸ್ಮಯ ವಿಶ್ವ

ಕೀಟಗಳ ಸಂರಕ್ಷಣೆಗಾಗಿ “ಕೀಟಗಳ ಕೆಫೆ” ತೆರೆದಿದೆ ಪ್ರಸಿದ್ಧ ಸಸ್ಯೋದ್ಯಾನ “ಲಾಲ್ ಬಾಗ್”, ಏನಿದರ ವಿಶೇಷತೆ?

ಬೆಂಗಳೂರಿನ ಜನಪ್ರಿಯ ಉದ್ಯಾನವಾದ ಲಾಲ್‌ಬಾಗ್‌ (lalbagh) ನಲ್ಲಿ ತೋಟಗಾರಿಕೆ ಇಲಾಖೆಯು ವಿಶೇಷವಾದ ಕೀಟಗಳ ಕೆಫೆ (Insect’s Cafe) ಯನ್ನು ಪ್ರಾರಂಭಿಸಿದೆ. ಈ ಕೆಫೆಯನ್ನು ವಿವಿಧ ರೀತಿಯ ಕೀಟಗಳನ್ನು ಸಂರಕ್ಷಿಸಲು ಮತ್ತು ಅವುಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.

ಉಜ್ವಲಾ.ವಿ.ಯು.

ಈ ಕೆಫೆಯನ್ನು ವಿಭಿನ್ನ ಇಂಡಿಯಾ ಫೌಂಡೇಶನ್‌ನ ಸಹಯೋಗದೊಂದಿಗೆ,ಸಿಎಸ್‌ಆರ್ ಉಪಕ್ರಮದ ಭಾಗವಾಗಿ ರಚಿಸಲಾಗಿದೆ. ನಗರೀಕರಣ ಮತ್ತು ಕಾಂಕ್ರೀಟ್ ಕಾಡಿನ ವಿಸ್ತರಣೆಯಿಂದಾಗಿ ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿರುವ ಕೀಟಗಳಿಗೆ ಆಶ್ರಯವನ್ನು ನೀಡುವ ಮತ್ತು ಸಂತಾನೋತ್ಪತ್ತಿಯ ನೆಲೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

Lalbagh botanical garden

ಮರದ ಚೌಕಟ್ಟುಗಳಿಂದ ನಿರ್ಮಿಸಲಾಗಿರುವ ಈ ಕೆಫೆಯಲ್ಲಿ ಕೀಟಗಳ ಜೀವವೈವಿಧ್ಯತೆಯ ಆಧಾರದ ಮೇಲೆ ಹಲವಾರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತೀ ವಿಭಾಗವನ್ನು ಮುನ್ನಚರಿಕೆಯಿಂದ ಸಣ್ಣ, ಮಧ್ಯಮ ಗಾತ್ರದ ಹುಲ್ಲುಗಳು, ಮರದ ತುಂಡು, ಗಿಡಗಳ ಕಡ್ಡಿಗಳು ಉಪಯೋಗಿಸಿ ಕೀಟಗಳ ವಾತಾವರಣಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ.

ಕೆಫೆಯು ಒಣ ಮರವನ್ನು ಕೊರೆಯುವ, ನೆಲದಡಿಯಲ್ಲಿ ವಾಸಿಸುವ, ನೆಲವನ್ನು ಅಗೆಯುವ, ಕೀಟಗಳ ಪ್ರಭೇದಗಳನ್ನು ಒಳಗೊಂಡಿದೆ. ನಂದಿ ಹಿಲ್ಸ್, ಕಬ್ಬನ್ ಪಾರ್ಕ್, ಕೃಷ್ಣರಾಜೇಂದ್ರ ಗಿರಿಧಾಮ ಮತ್ತು ಕೆಮ್ಮನಗುಂಡಿಯಲ್ಲಿ ಈ ರೀತಿಯ ಹತ್ತು ಹಲವು ಕೀಟಗಳ ಕೆಫೆಗಳನ್ನು ತೆರೆಯುವ ಯೋಜನೆಯ ಕುರಿತು ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್ ಹೇಳಿಕೊಂಡಿದ್ದಾರೆ.

New Insect’s cafe at Lalbagh

ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ಬಂದಿರುವ ಈ ಉಪಕ್ರಮವು ವಿವಿಧ ಅರಣ್ಯ ಪ್ರದೇಶಗಳಲ್ಲಿಯೂ ಸ್ಥಾಪಿಸುವ ಪರಿಕಲ್ಪನೆಯನ್ನು ಹೊಂದಿದೆ ಮತ್ತು ಸಾರ್ವಜನಿಕರಿಗೆ ಕೀಟ ಕೆಫೆಗಳನ್ನು ಪರಿಚಯಿಸುವ ಮತ್ತು ಜನರೂ ಸಹ ಹಿತ್ತಲಿನಲ್ಲಿ ಇಂತಹ ಆವಾಸಸ್ಥಾನಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವ ಉದ್ದೇಶವನ್ನು ಕೂಡಾ ಈ ಕೆಫೆ ಹೊಂದಿದೆ.

ಪರಾಗಸ್ಪರ್ಶ ಮತ್ತು ವಿವಿಧ ಪರಿಸರ ವ್ಯವಸ್ಥೆಯ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ “ಕೀಟಗಳು”ಇತ್ತೀಚಿನ ದಿನಗಳಲ್ಲಿ ಅವನತಿಯನ್ನು ಹೊಂದುತ್ತಿರುವುದು ದುಃಖದ ಸಂಗತಿ. ಸ್ಥಳೀಯ ಕೀಟಗಳನ್ನು ಮತ್ತು ಸ್ಥಳೀಯ ಸಸ್ಯಗಳನ್ನು ರಕ್ಷಿಸುವ ಇಂತಹ ಉಪಕ್ರಮಗಳು ಇನ್ನಷ್ಟು ಬರಲಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟ್ರಾವೆಲ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button