ಚಿನ್ನದ ಅಂಬಾರಿ ಹೊತ್ತ ಅರ್ಜುನ ಇನ್ನಿಲ್ಲ
8 ಬಾರಿ ಚಿನ್ನದ ಅಂಬಾರಿ (Mysuru Dasara) ಹೊತ್ತಿದ್ದ ಅರ್ಜುನ ಆನೆ (Arjuna Elephant) ಇನ್ನಿಲ್ಲ. ಕಾಡಾನೆಗಳ ಜೊತೆಗಿನ ಕಾಳಗದಲ್ಲಿ ಪ್ರಾಣ ಬಿಟ್ಟಿದ್ದಾನೆ. ವಿಭಿನ್ನ ದೇಹ ಸಾಮರ್ಥ್ಯ ಹೊಂದಿದ್ದ ಅರ್ಜುನ ಬಲಶಾಲಿಯಾಗಿದ್ದನು.
ಅರ್ಜುನ ಕೋಪಕ್ಕೆ ಹೆಸರುವಾಸಿಯಾಗಿದ್ದ. ಆದರೆ ಅದೆಷ್ಟು ಕೋಪಿಷ್ಠನೋ, ಅಷ್ಟೇ ಸಾಧು ಜೀವಿ
, ತುಂಬಾ ಧೈರ್ಯವಂತ ಕೂಡ ಹೌದು. ಅರ್ಜುನ ಬಹು ತುಂಟ.. ಹೆಣ್ಣಾನೆಗಳು ಪಕ್ಕದಲ್ಲಿದ್ದರೆ ಶಾಂತ ಸ್ವಭಾವಿ ಅಂತೆ ಇರುಟ್ಟಿದ್ದ ಈತ ಅಭಿಮನ್ಯು, ಬಲರಾಮನನ್ನು ಕಂಡರೆ ಕೋಪಗೊಳ್ಳುತಿದ್ದನಂತೆ.
ಹಸಿವಾದಾಗೆಲ್ಲ ತನ್ನ ಕೊರಳಲ್ಲಿರುವ ಗಂಟೆ ಅಲುಗಾಡಿಸುತ್ತಿದ್ದ ಅರ್ಜುನ, ದಿನಕ್ಕೆ 3 ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದ. ಬರೋಬ್ಬರಿ 5,600 ಕೆಜಿ ತೂಗುತ್ತಿದ್ದ ಈತ 1960ರಲ್ಲಿ ಜನಿಸಿದ್ದ. 1990ರಲ್ಲಿ ಮೊದಲ ಬಾರಿ ದಸರಾದಲ್ಲಿ ಭಾಗಿಯಾಗಿದ್ದನು.
ದ್ರೋಣ ಆನೆ ಮರಣದ ಬಳಿಕ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನನ್ನ ದಸರಾದಿಂದ ಹೊರಗಿಡಲಾಗಿತ್ತು. ಮಾವುತನನ್ನೇ ಕೊಂದಿದ್ದ ಅರ್ಜುನನ್ನು ಉತ್ಸವದಿಂದ ಹೊರಗಿಡಲಾಗಿತ್ತು. ಆದರೆ ಬಲರಾಮನಿಗೆ ವಯಸ್ಸಾದ ಕಾರಣ ಮತ್ತೆ ಅಂಬಾರಿ ಹೊರುವ ಜವಾಬ್ದಾರಿ ಆತನ ಹೆಗಲಿಗೆ ಬಂದಿತ್ತು.
ನೀವು ಇದನ್ನು ಇಷ್ಟ ಪಡಬಹುದು: ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ಇನ್ಮುಂದೆ ವಿಸ್ಟಾಡೋಮ್ ಸಂಚಾರ
2012- 2019 ರವರೆಗೆ ಅಂಬಾರಿ ಹೊತ್ತಿದ್ದ ಅರ್ಜುನ, ಕೆಲ ವರ್ಷಗಳ ಹಿಂದೆ ಮದವೇರಿ ಬಳ್ಳೆ ಶಿಬಿರದಿಂದ ಪರಾರಿ ,4 ದಿನಗಳ ಬಳಿಕ ಕೇರಳ ಗಡಿಯಲ್ಲಿ ಪತ್ತೆಯಾಗಿದ್ದ ಸುದ್ದಿಯಾಗಿತ್ತು.
ಆದರೆ ರಾಜಗಾಂಭೀರ್ಯದಲ್ಲಿ ಸಾಗಿದ್ದ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ನಿಧನ ಹೊಂದಿದ್ದಾನೆ .
ಕಾಡಾನೆ ಕಾರ್ಯಾಚರಣೆಯಲ್ಲಿ ಮುಂದಿರುತ್ತಿದ್ದ ಅರ್ಜುನ, ಆಪರೇಷನ್ ತಂಡದ ನಾಯಕನಾಗಿ ಕೆಲಸ ಮಾಡ್ತಿದ್ದ. ಒಂದು ವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಿರಂತರ ಭಾಗಿಯಾಗಿದ್ದ.
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಏಕಾಏಕಿ ದಾಳಿ,ಅರ್ಜುನನನ್ನು ಮೂರು ಕಾಡಾನೆಗಳು ಸುತ್ತುವರಿಯುತ್ತಿದ್ದಂತೆ ಉಳಿದ ಆನೆಗಳು ಓಡಿ ಹೋಗಿವೆ. ಕಾರ್ಯಾಚರಣೆ ವೇಳೆ ಏಕಾಂಗಿಯಾಗಿ ಉಳಿದ ಅರ್ಜುನನಿಗೆ ಕಾಡಾನೆಗಳು ದಂತದಲ್ಲಿ ಚುಚ್ಚುತ್ತಿದ್ದಂತೆ ಸ್ಥಳದಲ್ಲೇ ಅರ್ಜುನ ಸಾವನ್ನಪ್ಪಿದ್ದಾನೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.