ಡಿಸೆಂಬರ್ ನಲ್ಲಿ ನೀವು ಈ ಜಾಗಗಳಿಗೆ ಪ್ರವಾಸ ಹೊರಡಬಹುದು.
ನೋಡ ನೋಡುತ್ತಿದ್ದಂತೆ 2023 ಮುಗಿಯುತ್ತಾ ಬಂತು. ಈ ವರ್ಷದ ಕೊನೆ ತಿಂಗಳಿಗೆ ಕಾಲಿಟ್ಟಿದ್ದೇವೆ. ಅದರ ಜೊತೆಗೆ ಚುಮು ಚುಮು ಚಳಿ ಕೂಡ ಜೋರಾಗಿದೆ. ಹೀಗಾಗಿ ಈ ಮಧ್ಯೆ ಎಲ್ಲಾದರೂ ಟ್ರಿಪ್ ಹೋಗುವ, ಎಂಜಾಯ್ ಮಾಡ್ಕೊಂಡು ಬರೋಣ ಅಂತ ಯೋಚನೆಯಲ್ಲಿ ಇರುವವರು ಸಾಧ್ಯವಾದರೆ ಈ ಜಾಗಗಳಿಗೆ ಒಮ್ಮೆ ಸುತ್ತು ಹಾಕಿ ಬನ್ನಿ.
ಗೋವಾ (Goa)
ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಗೋವಾ ಚಳಿಗಾಲದ ಪ್ರವಾಸಕ್ಕೆ ಅತ್ಯುತ್ತಮ ಆಯ್ಕೆ. ಆದರೆ ವರ್ಷದ ಕೊನೆ ಆಗಿರುವ ಕಾರಣಕ್ಕೆ ಈ ಪ್ರವಾಸ ಕೊಂಚ ದುಬಾರಿ ಕೂಡ ಹೌದು. ಆದರೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವವರು ಹೆಚ್ಚಾಗಿ ಗೋವಾ ರಾಜ್ಯದತ್ತವೆ ಮುಖ ಮಾಡುತ್ತಾರೆ. ಇಲ್ಲಿನ ಬೀಚ್ ಗಳು ಹೆಚ್ಚಿಗೆ ಜನರನ್ನು ಸೆಳೆಯುತ್ತದೆ.
ಪುದುಚೇರಿ (Pondicherry)
ತಮಿಳುನಾಡು ರಾಜ್ಯದ ಪುದುಚೇರಿ ಅಥವಾ ಪಾಂಡಿಚೇರಿ ಗೋವಾದಂತೆ ಬಹಳ ಜನಪ್ರಿಯ ತಾಣ. ಇಲ್ಲಿ ಫ್ರೆಂಚ್ ಮತ್ತು ಭಾರತೀಯ ಸಂಸ್ಕೃತಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಫ್ರೆಂಚ್-ಶೈಲಿಯ ಮನೆಗಳು, ಚರ್ಚ್‌ಗಳು. ಪುದುಚೇರಿಯ ಕಡಲತೀರಗಳಲ್ಲಿ ನೀವು ಸಖತ್ ಏಂಜಾಯ್ ಮಾಡಬಹುದು.
ಹಿಮಾಚಲ ಪ್ರದೇಶ(Himachal Pradesh)
ಹಿಮಾಚಲ ಪ್ರದೇಶಕ್ಕೆ ನೀವು ಡಿಸೆಂಬರ್ ಟ್ರಿಪ್ ಪ್ಲಾನ್ ಮಾಡಬಹುದು. ಹಿಮದಿಂದ ಕೂಡಿದ ಶಿಖರಗಳು, ಕಾಟೇಜ್‌ಗಳು, ಫೈರ್ ಪ್ಲೇಸ್ ಇರುವ ಸ್ಥಳದಲ್ಲಿ ನೀವು ಕ್ರಿಸ್‌ಮಸ್ ಆಚರಣೆಗೆ ಸೂಕ್ತ ಸ್ಥಳಗಳಾಗಿವೆ. ಈ ರಾಜ್ಯದಲ್ಲಿ ನೀವು ಶಿಮ್ಲಾ(Shimla) ಗೆ ಹೋಗಿ ಬರಬಹುದು. ಇದರ ಜೊತೆಗೆ ಬಹುತೇಕ ಪ್ರವಾಸಿಗರ ನೆಚ್ಚಿನ ತಾಣ ಮನಾಲಿಗೆ (Manali )ಹೋಗಿ ಬರಬಹುದು.
ಔಲಿ, (Auli Uttarakhand)
ಉತ್ತರಾಖಂಡ ರಾಜ್ಯದ ಔಲಿ ಅತ್ಯದ್ಭುತವಾದ ಪ್ರವಾಸಿ ತಾಣವಾಗಿದ್ದು, ಹಿಮದಿಂದ ಆವೃತವಾದ ಪ್ರಶಾಂತವಾದ ಶಿಖರವನ್ನು ಕಣ್ತುಂಬಿಕೊಳ್ಳಬಹುದು. ಟ್ರೆಕ್ಕಿಂಗ್ ಮಾಡಲು ಬಯಸುವವರು ತಪ್ಪದೇ ಈ ಸುಂದರವಾದ ಸ್ಥಳದಲ್ಲಿ ಸ್ನೇಹಿತರೊಂದಿಗೆ ತೆರಳಬಹುದು.ಏಷ್ಯಾದ ಅತಿ ಉದ್ದದ ಕೇಬಲ್ ಕಾರ್ ಅನ್ನು ಇಲ್ಲಿ ನೀವು ಸವಾರಿ ಮಾಡಬಹುದು. ಇಲ್ಲಿ ಮುಖ್ಯವಾಗಿ ನಂದಾ ದೇವಿ, ಹಾಥಿ ಪರ್ವತ, ಕಾಮೆಟ್, ತ್ರಿಶೂಲ್ ಮತ್ತು ಮನ ಪರ್ವತಕ್ಕೆ ಭೇಟಿ ನೀಡಬಹುದು.
ಕೇರಳ(Kerala)
ದೇವರ ನಾಡು ಕೇರಳ ಈಗ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ. ಕೇರಳದ ಹಿನ್ನೀರಿನ ಪ್ರದೇಶ, ಬೋಟ್ ಹೌಸ್, ಆಯುರ್ವೇದ ಚಿಕಿತ್ಸಾ ಕೇಂದ್ರಗಳು, ಕೊವಲಂ ಬೀಚ್, ಅಲೆಪ್ಪಿ, ಕುಮಾರಕೊಂ ಸೌಂದರ್ಯ, ರೆಸಾರ್ಟ್‌ಗಳಲ್ಲಿ ಉಳಿದುಕೋಂಡು ನಿಮ್ಮ ಟ್ರಿಪ್ ಎಂಜಾಯ್ ಮಾಡಬಹುದು.
ವಾರಣಾಸಿ(Varanasi)
ಇದು ಭಾರತದ ಆಧ್ಯಾತ್ಮದ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. ಈ ಜಾಗದಲ್ಲಿ ಜನರ ಧಾರ್ಮಿಕ ಭವಾನೆಗಳನ್ನ ಸಂತೃಪ್ತಿ ಮಾಡುವ ಹಲವು ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಇನ್ನು ದೇಶದ ಪ್ರಾಚೀನ ಸಂಪ್ರದಾಯಗಳ ಆಕರ್ಷಣೆಗಳ ತವರು ವಾರಣಾಸಿ.. ಆಕರ್ಷಕ ಗಂಗಾ ಆರತಿ, ದೇವಾಲಯಗಳ ದರ್ಶನ ನಿಮ್ಮನ್ನು ಪುನೀತರನ್ನಾಗಿ ಮಾಡುತ್ತದೆ.
ಅಂಡಮಾನ್ ಮತ್ತು ನಿಕೋಬಾರ್ (Andaman and Nicobar Islands)
ಇದು ಗೋವಾ, ಪುದುಚೇರಿಯಂತೆ ಬಹಳ ಜನಪ್ರಿಯವಾಗುತ್ತಿರುವ ಪ್ರವಾಸಿ ಸ್ಥಳ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರವಾಸ ಮಾಡಲು ಇತ್ತೀಚೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇಲ್ಲಿನ ಪ್ರವಾಸ ನಿಮಗೆ ನಿರಾಶೆಗೊಳಿಸುವುದಿಲ್ಲ . ಸುಂದರವಾದ ದ್ವೀಪಗಳು, ಮರಳಿನ ಕಡಲತೀರಗಳು ಮತ್ತು ಹಚ್ಚ ಹಸಿರಿನ ಉಷ್ಣವಲಯದ ಕಾಡುಗಳಿಗೆ ಹೆಸರುವಾಸಿಯಾಗಿದೆ.
ಅಂಡಮಾನ್ನ ಸ್ವರಾಜ್ ಮತ್ತು ಶಾಹೀದ್ ದ್ವೀಪಗಳು ಜಲಕ್ರೀಡೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ನೀವು ಅನ್ವೇಷಿಸಲು ಹಾಗು ಸಾಹಸ ಚಟುವಟಿಕೆಗಳನ್ನು ಆನಂದಿಸಲು ಸಾಕಷ್ಟು ಆಯ್ಕೆಗಳಿರುತ್ತವೆ. ಶಾಂತವಾದ ಸ್ಥಳದಲ್ಲಿ ಸಮಯ ಕಳೆಯುವುದಕ್ಕೆ ಬರುವವರಿಗೆ ಇದೊಂದು ಇದೊಂದು ಪರ್ಫೇಕ್ಟ್ ಆಯ್ಕೆ .
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.