ಕಾರು ಟೂರುದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ,(Kempegowda International Airport)ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೆ(Electric Airport Taxis)ಚಾಲನೆ ನೀಡಲಾಗಿದೆ.

ಎರಡು ಬಣ್ಣದ ಟ್ಯಾಕ್ಸಿಗಳಲ್ಲಿ ಒಂದು ಗುಲಾಬಿ(Pink )ಟ್ಯಾಕ್ಸಿಯು ವಿಶೇಷವಾಗಿ ಮಹಿಳೆಯರಿಗಾಗಿಯೇ(Women )ಮೀಸಲಿಡಲಾಗಿದೆ. ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ(Female driver)ಚಲಾಯಿಸಲಿದ್ದಾರೆ.

ಈ ನೂತನ EV ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರು ಸುಲಭವಾಗಿ ಬುಕ್ ಮಾಡಬಹುದು. ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಲ್ಲಿ(Terminal)ಹಾಗೂ ಬಳಕೆದಾರ ಸ್ನೇಹಿ BLR ಪಲ್ಸ್ ಮೊಬೈಲ್ ಅಪ್ಲಿಕೇಶನ್ (Mobile Application)ಮೂಲಕವೂ ಬುಕ್‌ ಮಾಡಬಹುದು.

ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿಇನ್ನು, ಮರುವಿನ್ಯಾಸಗೊಳಿಸಲಾದ EV ಟ್ಯಾಕ್ಸಿಗಳು ತಿಳಿನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣ ಈ ಎರಡು ವಿಶಿಷ್ಟ ಬಣ್ಣಗಳಲ್ಲಿ ಇರಲಿವೆ.

ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್‌ ಟ್ಯಾಕ್ಸಿಗಳು(Electrical Taxi)ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ.

ನೀವು ಇದನ್ನೂ ಇಷ್ಟ ಪಡಬಹುದು:ದುಬೈನಲ್ಲಿ ಏರ್ ಟ್ಯಾಕ್ಸಿ ಬಿಡುಗಡೆ; 10 ನಿಮಿಷಗಳಲ್ಲಿ ನಗರದೊಳಗೆ ಎಲ್ಲಿ ಬೇಕಾದರೂ ತಲುಪಿ!

:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಹದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು (Electric Airport Taxi) ಪರಿಚಯಿಸಲಾಗಿದೆ.

ವಿಶ್ವ ಪರಿಸರ ದಿನಾಚರಣೆ(World Environment Day)ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಲಾಗಿದೆ.

ಏರ್‌ಪೋರ್ಟ್‌ನಲ್ಲಿ ಪರಿಸರಯುಕ್ತ ವಾತಾವರಣ ನಿರ್ಮಾಣ ಮಾಡಲು ಈ ಪರಿಸರ ದಿನದಂದೇ ಬಹುತೇಕ ಇಂಧನಯುಕ್ತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಟ್ಯಾಕ್ಸಿಗಳಾಗಿ(Electrical Taxi)ಪರಿವರ್ತಿಸಲಾಗಿದೆ.

ಇದೀಗ 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳು ಸೇರಿದಂತೆ ಶೇ.50 ಟ್ಯಾಕ್ಸಿಗಳು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ ಎಂದರು.

.ತುರ್ತು ಸಂಪರ್ಕಕ್ಕೆ ಪಿಂಕ್‌ ಕಾರ್ಡ್‌(Pink Card)ಇನ್ನು, ಪ್ರತಿ ಪ್ರಯಾಣಿಕರಿಗೆ(Passenger )ಡ್ಯೂಟಿ ಮ್ಯಾನೇಜರ್(Duty Manager), ಸ್ಥಳೀಯ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ “ಪಿಂಕ್ ಕಾರ್ಡ್” ಅನ್ನು ಸಹ ಒದಗಿಸಲಾಗುತ್ತದೆ.

ಇದರಿಂದ ಸುರಕ್ಷತಾ(Safety )ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು EV ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ.

ಹೀಗಾಗಿ BLR ಏರ್‌ಪೋರ್ಟ್‌ನಲ್ಲಿರುವ ಎಲ್ಲಾ ವಾಹನಗಳನ್ನು ಸಮರ್ಥನೀಯ ಆಯ್ಕೆಗಳಿಗೆ ಪರಿವರ್ತಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ BIAL ಹೊಂದಾಣಿಕೆಯನ್ನು ಮುಂದುವರೆಸಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button