ತುಂಬಿದ ಮನೆನಡಿಗೆ ನಮ್ಮ ಖುಷಿಗೆಮ್ಯಾಜಿಕ್ ತಾಣಗಳುವಿಂಗಡಿಸದ

ಮಳೆಗಾಲದಲ್ಲಿ ನೋಡಬಹುದಾದ ರಾಜ್ಯದ ತಾಣಗಳಿವು

ಇನ್ನೇನು ಮಳೆಗಾಲ(Rainy Season)ಬಂತು. ಹಸಿರಿನ ಸಿರಿ ಜೊತೆ ಜಿಟಿ ಜಿಟಿ ಮಳೆ ಚುಮು ಚುಮು ಚಳಿಯ ಜೊತೆಗೆ ಒಂದೊಳ್ಳೆ ಜಾಗಕ್ಕೆ ಹೋಗಬೇಕು ಅಂತ ಬಯಸುವರು ರಾಜ್ಯದ(Karnataka )ಈ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ

ಜೋಗ ಜಲಪಾತ(Jog Falls)

Best Monsoon places in Karnataka

ಕರ್ನಾಟಕದಲ್ಲಿ ಮಾನ್ಸೂನಲ್ಲಿ (Monsoon)ನೋಡಲೇಬೇಕಾದ ಪ್ರಮುಖ ತಾಣಗಳ ಪೈಕಿ ಜೋಗ ಫಾಲ್ಸ್ ಕೂಡ ಒಂದು. ರಾಜ್ಯದಲ್ಲಿ ಜಲಪಾತಗಳಲ್ಲೇ ಇದು ಅತ್ಯಂತ ಆಕರ್ಷಣೀಯ ತಾಣ. ಜೋಗ ಜಲಪಾತ ಭಾರತದಲ್ಲೇ (India)ಎರಡನೇ ಅತಿ ಎತ್ತರದ ಜಲಪಾತ. ಜೋಗ್ ಮಳೆಗಾಲದಲ್ಲಿ ಭೋರ್ಗರೆಯುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೆ.ಶಿವಮೊಗ್ಗ(Shivamogga)ಜಿಲ್ಲೆಯಲ್ಲಿದೆ.

ಮಡಿಕೇರಿ(Madikeri)

Best Monsoon places in Karnataka

ಮಳೆಗಾಲದಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಮಂಜಿನ ನಗರಿ (City of Fog) ಮಡಿಕೇರಿ ಹೇಳಿ ಮಾಡಿಸಿದಂತಿದೆ. ಸುಂದರವಾದ ಪಶ್ಚಿಮ ಘಟ್ಟಗಳಿಂದ ಸುತ್ತುವರಿದಿರುವ ಮಡಿಕೇರಿಯನ್ನು ನೋಡಲು ಮಳೆಗಾಲದಲ್ಲಿ ಮಾತ್ರವಲ್ಲದೇ ಇಡೀ ವರ್ಷ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಕೊಡಗು(Kodagu)

ಆಗುಂಬೆ(Agumbe)

ದಟ್ಟವಾದ ಕಾಡುಗಳು ಹಾಗೂ ಪ್ರಕೃತಿಯ ಸೌಂದರ್ಯವನ್ನು ತುಂಬಿಕೊಂಡಿರುವ ತಾಣ ಆಗುಂಬೆ. ಮಾನ್ಸೂನ್ ವೇಳೆ ಪ್ರವಾಸಿಗರಿಗೆ (Tourist)ಇದು ಅದ್ಭುತವಾದ ಅನುಭವವನ್ನು ನೀಡಲಿದೆ. ಇಲ್ಲಿ ಸಮೀಪದಲ್ಲಿ ನೀವು ಆಗುಂಬೆ ಸನ್‌ಸೆಟ್ ವೀವ್(Sunset View), ಬರ್ಕಾನ ಜಲಪಾತ(Barkana Falls), ಗೋಪಾಲಕೃಷ್ಣ ದೇವಸ್ಥಾನ(Gopalakrishna Temple), ಅಬ್ಬಿ ಜಲಪಾತ(Abbi Falls), ಜೋಗಿ ಗುಂಡಿ (Joga) ನೋಡಬಹುದು.

Best Monsoon places in Karnataka

ಗೋಕರ್ಣ (Gokarna)

ಮಳೆಗಾಲದಲ್ಲಿ ಬೀಚ್(Beach) ನೋಡಬೇಕೆಂದು ಪ್ಲಾನ್ ಮಾಡಿದ್ದರೆ ಅದಕ್ಕೆ ಗೋಕರ್ಣ ಉತ್ತಮ ಸ್ಥಳ ಎನ್ನಬಹುದು. ಆದರೆ ಎಲ್ಲಾ ಋತುಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಮಳೆಗಾಲದಲ್ಲಂತೂ ಹಚ್ಚ ಹಸಿರಿನ ಸೌಂದರ್ಯ, ಜಲಪಾತಗಳನ್ನು ಆನಂದಿಸಲು ಬೆಸ್ಟ್ ತಾಣ. ಇದರ ಜೊತೆಗೆ ನೀವು ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ(Mahabaleshwara Temple )ದೇವಸ್ಥಾನವನ್ನು ಕೂಡ ಕಣ್ತುಂಬಿಕೊಳ್ಳಬಹುದು. ಗೋಕರ್ಣದಲ್ಲಿ ನೀವು ನಿರ್ವಾಣ ಬೀಚ್(Nirvana Beach), ಭದ್ರಕಾಳಿ ದೇವಸ್ಥಾನ,(Bhadrakali Temple)ಓಂ ಬೀಚ್(Om Beach), ಪಾರಡೈಸ್ ಬೀಚ್(Paradise Beach) ನೋಡಬಹುದು.

Best Monsoon places in Karnataka

ನೀವು ಇದನ್ನೂ ಇಷ್ಟ ಪಡಬಹುದು:ಬೇಸಿಗೆಯಲ್ಲಿ ನಿಮ್ಮ ಕಣ್ಮನ ಸೆಳೆಯುವ ದಕ್ಷಿಣ ಭಾರತದ ಅತ್ಯಂತ ಪ್ರಶಾಂತ ಸ್ಥಳಗಳು

ಸಕಲೇಶಪುರ(Sakleshpur)

ರಾಜ್ಯದ ಸಣ್ಣ ಮತ್ತು ಚೆಂದದ ಗಿರಿಧಾಮಗಳಲ್ಲಿ(Hills)ಸಕಲೇಶಪುರವು ಒಂದು. ಕಾಫಿ ಹಾಗು ಚಹಾದ ತೋಟಗಳು ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಸಕಲೇಶಪುರದ ಕಡೆಗೆ ಹೋಗುವುದಾದರೆ ಮಂಜರಾಬಾದ್‌ ಕೋಟೆಗೆ (Muzarabad Fort)ನೀವು ಹೋಗಬೇಕು. ಕೋಟೆಯು ಸಕಲೇಶಪುರದಿಂದ ಕೇವಲ 6 ಕಿಮೀ ದೂರದಲ್ಲಿದೆ. ನಕ್ಷತ್ರಾಕಾರದ ಈ ಕೋಟೆಯನ್ನು ಟಿಪ್ಪು ಸುಲ್ತಾನ್ 1785 ರಿಂದ 1792 ರ ನಡುವೆ ನಿರ್ಮಾಣ ಮಾಡಿದರು.ಹಾಸನ(Hassan)ಜಿಲ್ಲೆಯಲ್ಲಿದೆ.

Best Monsoon places in Karnataka

ನಂದಿ ಬೆಟ್ಟ(Nandi Hills)

ಬೆಂಗಳೂರಿನ(Bangalore)ಸಮೀಪದಲ್ಲಿ ಇರುವವರಿಗೆ ಟ್ರೆಕ್ಕಿಂಗ್(Trekking )ಹಾಗೂ ಟಿಪ್ಪು ಸುಲ್ತಾನನ ಕೋಟೆಯನ್ನು(Tipu Sultan Fort)ಅನ್ವೇಷಿಸಲು, ರಜೆಯಲ್ಲಿ ಪ್ರಕೃತಿಯನ್ನು ಸವಿಯಲು ನಂದಿ ಬೆಟ್ಟ ಹೇಳಿ ಮಾಡಿಸಿದಂತ ತಾಣ. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನಂದಿ ಬೆಟ್ಟಕ್ಕೆ ಭೇಟಿ ನೀಡುವ ಸಮಯವಾಗಿದೆ.

Best Monsoon places in Karnataka

ಶಿವನಸಮುದ್ರ(Shivanasamudra)

ಕರ್ನಾಟಕದ(Karnataka) ಹೃದಯ ಭಾಗದಲ್ಲಿರುವ ಮತ್ತೊಂದು ಆಕರ್ಷಣೀಯ ತಾಣವೆಂದರೆ ಅದು ಶಿವನಸಮುದ್ರ ಜಲಪಾತ. ಇಲ್ಲಿನ ಗಗನಚುಕ್ಕಿ(Gaganachikki) ಮತ್ತು ಬರಚುಕ್ಕಿ(Barachukki) ಫಾಲ್ಸ್ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತವೆ. ಸಮೀಪದಲ್ಲಿ ನೀವು ಮೈಸೂರು(Mysore), ಸೋಮನಾಥಪುರ,(Somenathpura)ತಲಕಾಡು, (Talkadu)ಶಿಂಷಾ ಅಣೆಕ್ಟಟು(Shimsha dam), ಕಾವೇರಿ ನದಿ,{Kaveri River) ನೋಡಬಹುದು.

Best Monsoon places in Karnataka

(ಇನ್ನೂ ಹೆಚ್ಚಿನ , ಅಪರೂಪದ ಹಾಗು ಅತಿ ಸುಂದರ ತಾಣಗಳಿದ್ದರೆ ಈ ಕುರಿತಾದ ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಳ್ಳಿ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button