ತುಂಬಿದ ಮನೆದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದ

ಚಾಮರಾಜನಗರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಚಾಮರಾಜನಗರ(Chamarajanagar)ದಕ್ಷಿಣ ಕರ್ನಾಟಕದಲ್ಲಿರುವ(South Karnataka)ಒಂದು ಜಿಲ್ಲೆ. ಮೊದಲಿಗೆ ಮೈಸೂರು(Mysore) ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ.1997 ರಲ್ಲಿ ಮೈಸೂರು ಜಿಲ್ಲೆಯಿಂದ ವಿಭಜಿಸಿ ಚಾಮರಾಜನಗರವನ್ನು ಜಿಲ್ಲೆಯಾಗಿ ಪರಿವರ್ತಿಸಲಾಯಿತು . ಈ ಚಾಮರಾಜನಗರವನ್ನು ಮೊದಲು ಶ್ರೀ ಅರಿಕೊಟ್ಟಾರ(Arikottar) ಎಂದು ಕರೆಯಲಾಗುತ್ತಿತ್ತು. ಮೈಸೂರಿನ ಒಡೆಯರ್ ರಾಜ ಚಾಮರಾಜ ಒಡೆಯರ್(Chamaraj Odeyar) ಇಲ್ಲಿ ಹುಟ್ಟಿದರು ಮತ್ತು ಈ ಸ್ಥಳವನ್ನು ಅವರ ನಂತರ ಮರುನಾಮಕರಣ ಮಾಡಲಾಯಿತು.

ಮಲೆ ಮಹದೇಶ್ವರ ಬೆಟ್ಟ(Male Mahadeshwara Hills)

ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು (Hunsur)ತಾಲೂಕಿನಲ್ಲಿರುವ ಒಂದು ಯಾತ್ರಾಸ್ಥಳ. ಇದು ಮೈಸೂರುನಿಂದ ಸುಮಾರು 150 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ. ಶ್ರೀ ಪುರುಷ ಮಹಾದೇಶ್ವರನ ಪ್ರಾಚೀನ ಮತ್ತು ಪವಿತ್ರ ದೇವಾಲಯ ಅತ್ಯಂತ ಜನಪ್ರಿಯ ಶೈವ(Shiva)ಯಾತ್ರಾ ಕೇಂದ್ರ ಮತ್ತು ಅತ್ಯಂತ ಶಕ್ತಿಶಾಲಿ ಶಿವ ದೇವಸ್ಥಾನ. ಇದು ಕರ್ನಾಟಕ(Karnataka)ಮತ್ತು ತಮಿಳುನಾಡು ರಾಜ್ಯಗಳಿಂದ(TamilNadu)ಲಕ್ಷಾಂತರ ಯಾತ್ರಿಗಳನ್ನು ಸೆಳೆಯುತ್ತದೆ.

Beautiful Places to visit in Chamarajanagar

ಭರಚುಕ್ಕಿ ಜಲಪಾತ(Barachukki Falls)

ಭರಚುಕ್ಕಿ ಜಲಪಾತದ ಸುತ್ತಲೂ ಸುಂದರವಾದ ದೃಶ್ಯವಾಳಿಗಳಿಂದ ಆವೃತ್ತವಾಗಿದೆ. ಇದೊಂದು ಆಕರ್ಷಕವಾದ ಜಲಪಾತವಾಗಿದ್ದು, ನೀರು ಬಂಡೆಗಳ ಮೇಲೆ ಅಪ್ಪಳಿಸುವ ದೃಶ್ಯವು ರೋಮಾಂಚಕಾರಿ ಅನ್ನಿಸುತ್ತದೆ. ಸುಮಾರು 69 ಮೀಟರ್ ಎತ್ತರದಿಂದ ಧರೆಗೆ ಇಳಿಯುವ ಅಪೂರ್ವವಾದ ದೃಶ್ಯವನ್ನು ಕಂಡೇ ಆನಂದಿಸಬೇಕು. ಮಳೆಗಾಲದಲ್ಲಿ(Rainy Season) ಮೈದುಂಬಿ ಹರಿಯುವ ಜಲಪಾತದ ದೃಶ್ಯವು ಅದ್ಭುತವಾಗಿರುತ್ತದೆ.ಮುಖ್ಯವಾಗಿ ಭರಚುಕ್ಕಿ ಮತ್ತು ಗಗನಚುಕ್ಕಿ (Gaganachukki Falls)ಜಲಪಾತಗಳನ್ನು ಶಿವನ ಸಮುದ್ರ(Shivanasamudra)ಜಲಪಾತ ಎಂದು ಕರೆಯುತ್ತಾರೆ.

Beautiful Places to visit in Chamarajanagar

ಬಿಳಿಗಿರಿ ರಂಗನ ಬೆಟ್ಟ (ಬಿಆರ್ ಹಿಲ್ಸ್)(BR Hills)

ಕರ್ನಾಟಕದ (Karnataka)ಪ್ರಮುಖ ಗಿರಿಧಾಮಗಳಲ್ಲೊಂದಾಗಿದ್ದು ಬೆಂಗಳೂರಿನ (Bangalore)ಆಗ್ನೇಯಕ್ಕೆ ಸುಮಾರು 175 ಕಿ.ಮೀ. ದೂರದಲ್ಲಿ ಕರ್ನಾಟಕ ತಮಿಳುನಾಡು ಗಡಿಯಲ್ಲಿದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ(Biligiriranga Hills Tiger Reserve Forest)ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ. ಪ್ರವಾಸಿ ಆಕರ್ಷಣೆಗಳು.

Beautiful Places to visit in Chamarajanagar

ನೀವು ಇದನ್ನು ಓದಬಹುದು :ಕೊಡಗು ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಹೊಗೆನಕಲ್ಲು ಜಲಪಾತ (Hogenakkal Falls)

ಹೊಗೆನಕಲ್ಲು ಜಲಪಾತವು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜಲಪಾತವಾಗಿದೆ. ಕಾವೇರಿ ನದಿ (Kaveri River)ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುತ್ತಿದ್ದಂತೆ ದೈತ್ಯ ಬಂಡೆಗಳ ಮೇಲೆ ಧುಮುಕಿ ಕಣ್ಮನ ತಣಿಸುವ ಸುಂದರ ಜಲಪಾತ ಸೃಷ್ಟಿಸುತ್ತಾಳೆ.

Beautiful Places to visit in Chamarajanagar

ಬಂಡೀಪುರ(Bandipur)

ಬಂಡೀಪುರ ರಾಷ್ಟ್ರೀಯ ಉದ್ಯಾನ(Bandipur National park)ಮತ್ತು ಹುಲಿ ಮೀಸಲು ಭಾರತದಲ್ಲಿ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಾಡು ಪ್ರಾಣಿಗಳಲ್ಲಿ ಹುಲಿಗಳು(Tiger), ಕಾಡು ನಾಯಿಗಳು, ಕಾಡುಹಂದಿ, ಆನೆಗಳು(Elephant), ಕರಡಿಗಳು, ಜಿಂಕೆಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆಗಳು, ಕಡವೆಗಳು , ಮತ್ತು ವಿವಿಧ ರೀತಿಯ ಜಿಂಕೆಗಳು ಸೇರಿವೆ. ಅರಣ್ಯ ಸಫಾರಿಗಳನ್ನು ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ನಡೆಸುತ್ತದೆ.

Beautiful Places to visit in Chamarajanagar

ಹಿಮವದ್ ಗೋಪಾಲಸ್ವಾಮಿ ಬೆಟ್ಟ (Himavad Gopal Swami Hills)

ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅತಿ ಎತ್ತರದ ಶಿಖರ. ಗುಂಡ್ಲುಪೇಟೆ(Gundlupet) ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 14 ನೇ ಶತಮಾನದಲ್ಲಿ ಅಗಸ್ತ್ಯ ಋಷಿ(Agastya )ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಭಗವಾನ್ ಕೃಷ್ಣ(Krishna)(ವೇಣುಗೋಪಾಲ ಸ್ವಾಮಿ) ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುತ್ತಾನೆ.

Beautiful Places to visit in Chamarajanagar

ಒಂದು ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳು ಇರುತ್ತವೆ. ಅದರಲ್ಲಿ ಕೆಲವು ತಾಣಗಳ ಬಗ್ಗೆ ನಿಮಗೆ ನೀಡಿದ್ದೇವೆ . ನಿಮ್ಮ ಜಿಲ್ಲೆಯಲ್ಲಿ ಅಂತಹ ಅಪರೂಪ ಜಾಗದ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button