ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದ

ಕೋಲಾರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು 

ಕೋಲಾರವು(Kolar) ಚಿನ್ನದ ಗಣಿ(Gold Mine)ಮತ್ತು ಹಾಲು ಉತ್ಪಾದನಾ ಉದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ.ಪವಿತ್ರವಾದ ಕ್ಷೇತ್ರಗಳು(Divine), ಟ್ರೆಕ್ಕಿಂಗ್ ಸ್ಥಳಗಳನ್ನೂ(Trekking )ನೆಲೆಗೊಂಡಿರುವ ಜಿಲ್ಲೆ ಇಲ್ಲಿನ

ಕೋಲಾರಮ್ಮ ದೇವಾಲಯ(Kolaramma Temple) ಮತ್ತು ಅಂತರಗಂಗೆ ದೇವಾಲಯಗಳು(Antaragange Temple) ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ದೇವಾಲಯವಾಗಿದೆ. ಈ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಕೋಟಿಲಿಂಗೇಶ್ವರ ದೇವಸ್ಥಾನ(Kotilingeshwara Temple)

ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ (Bangarpet)12 ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ(Kammasandra) ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.

108 ಅಡಿಗಳ ಬೃಹತ್ ಶಿವಲಿಂಗ(Shiva Statue )ಹಾಗೂ 32 ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು (Basavanna) ಹೊಂದಿದೆ. ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಖ್ಯಾತಿ ಪಡೆದಿದೆ.

Best places to visit in Kolar 

Kotilingeshwara Temple

ಅಂತರಗಂಗೆ (Antaragange)

ಕೋಲಾರ ಜಿಲ್ಲೆ ಹಲವು ಪುಣ್ಯಕ್ಷೇತ್ರಗಳ ನಾಡು. ದಕ್ಷಿಣಕಾಶಿ (Dakshina Kashi)) ಪ್ರಖ್ಯಾತವಾದ ಅಂತರಗಂಗೆ(Antaragange) ಇಲ್ಲಿರುವ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು.

ಕೋಲಾರದಿಂದ 4 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯಲಾಗುವ ಬೆಟ್ಟಶ್ರೇಣಿಯೇ ಅಂತರಗಂಗೆ.

ಅಂತರಗಂಗೆ ಹೆಸರೇ ಹೇಳುವಂತೆ ಅಂತರ್ಮುಖಿಯಾದ ಗಂಗೆ(Gange) ಹರಿವ ಕ್ಷೇತ್ರ.ಇದು ಸಮುದ್ರ ಮಟ್ಟದಿಂದ (Sea Level)ಸುಮಾರು 1712 ಮೀಟರ್‌ ಎತ್ತರದಲ್ಲಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಹತ್ತು ಪ್ರಸಿದ್ಧ ತಾಣಗಳಿವು.

ಇಲ್ಲಿನ ಪರ್ವತಗಳೊಂದಿಗೆ ಸಾಹಸ ಚಟುವಟಿಕೆ ಕೈಗೊಳ್ಳಲು ಇಷ್ಟ ಪಡುವವರಾಗಿದ್ದರೆ. ಅಂತರಗಂಗೆ ಟ್ರೆಕ್ಕಿಂಗ್  (Antaragange Trekking)ಸೂಕ್ತ ಎಂದೇ ಹೇಳಬಹುದು.

Best places to visit in Kolar 

Antaragange

ನೀವು ಪರ್ವತ ಆರೋಹಿಯಾಗಿದ್ದರೆ, ಇಲ್ಲಿ ರಾಕ್ ಕ್ಲೈಂಬಿಂಗ್, ಟ್ರೆಕ್ಕಿಂಗ್ ಮತ್ತು ಗುಪ್ತ ಗುಹೆಗಳ ಪರಿಶೋಧನೆಯನ್ನು  ಕೈಗೊಳ್ಳಬಹುದು.

ಕೋಲಾರಮ್ಮ ದೇವಸ್ಥಾನ(Kolaramma Temple)

ಗಂಗರ (Ganga)ರಾಜಧಾನಿಯಾಗಿದ್ದ ಕೋಲಾರ ನಗರದಲ್ಲಿ ಕಲೆ, ಸಂಸ್ಕೃತಿಗಳ ಸಾಕಾರರೂಪ ತಳೆದ ಸ್ಮಾರಕಗಳಿದ್ದು, ನಗರದ ಪೂರ್ವಕ್ಕೆ ಇರುವ ಕೋಲಾರಮ್ಮ ದೇವಾಲಯ ಶಿಲ್ಪ ಕಲೆಯು ಉತ್ತಮ ಉದಾಹರಣೆ.

ಲಂಬಕೋನಾಕೃತಿಯ ವಾಸ್ತು ಶಿಲ್ಪವನ್ನು ಹೊಂದಿರುವ ಜೋಡಿ ಮಂದಿರಗಳಿಂದ ಕೂಡಿದ ಸಾವಿರ ವರ್ಷಗಳ ಹಿಂದಿನ ಈ ಅಲಯಕ್ಕೆ ಒಂದೇ ಮುಖಮಂಟಪವಿರುವುದು ವೈಶಿಷ್ಟ್ಯ.

ಉತ್ತರ ದೇವಮಂದಿರದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಶಕ್ತಿ ಸ್ವರೂಪಿಣಿ ಚಾಮುಂಡೇಶ್ವರಿ(Chamundeshwari), ನಗರಾಧೀದೇವತೆ ಕೋಲಾರಮ್ಮ ಆಗಿದ್ದಾಳೆ. 

Best places to visit in Kolar 

Kolaramma Temple

ಕೆಜಿಎಫ್(KGF)

ಕೆ.ಜಿ.ಎಫ್ ಎಂದು ಕರೆಯಲಾಗುವ ಗೋಲ್ಡ್‌ ಫೀಲ್ಡ್ಸ್‌(Gold Fileds) ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದೆ. ಕೋಲಾರದ ಈ ಗೋಲ್ಡ್‌ ಫೀಲ್ಡ್ಸ್‌ ಭಾರತದ ಅತ್ಯಂತ ಪ್ರಮುಖವಾದ ಚಿನ್ನದ ಗಣಿಗಳಲ್ಲಿ ಒಂದಾಗಿ ಖ್ಯಾತಿಯನ್ನು ಗಳಿಸಿತು. ಅಲ್ಲದೆ, ವಿಶ್ವದ ಎರಡನೇ ಆಳವಾದ ಚಿನ್ನದ ಗಣಿ ಎಂದು ನಂಬಲಾಗಿದೆ.

Best places to visit in Kolar 

Little England KGF

ಈ ಪ್ರದೇಶದಲ್ಲಿ ಬ್ರಿಟಿಷ್‌(British )ಶೈಲಿಯ ಬಂಗಲೆಗಳಿವೆ. ಇವುಗಳನ್ನು ‘ಲಿಟಲ್‌ ಇಂಗ್ಲೆಂಡ್‌’(Little England)ಎಂದು ಕರೆಯಲಾಗುತ್ತದೆ. ಗಣಿಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲ. ಆದರೆ ಈ ಪ್ರದೇಶದಲ್ಲಿನ ಅನೇಕ ಬ್ರಿಟಿಷ್‌ ಬಂಗಲೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ

ಕುರುಡುಮಲೆ(Kurudumale)

ಕುರುಡುಮಲೆ ಕೋಲಾರ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಊರು. ಮುಳಬಾಗಿಲಿನಿಂದ(Mulbagil )ಅಂದಾಜು ೭ ಕಿ. ಮೀ ದೂರದಲ್ಲಿರುವ ಈ ಊರು, ಚೋಳ ರಾಜನ(Chola) ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನ.

ಮಹಾಗಣಪತಿ ದೇವಾಲಯವಿದೆ. ವಿಜಯನಗರ(Vijayanagara )ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಗರ್ಭಗೃಹ, ಎರಡು ಅರ್ಧ ಮಂಟಪಗಳು ಮತ್ತು ದೊಡ್ಡ ನವರಂಗವಿದೆ.

ಈ ದೇವಾಲಯವು ಸುಮಾರು 8.5 ಅಡಿ ಎತ್ತರದ ಕಪ್ಪು ಕಲ್ಲಿನ ದೊಡ್ಡ ಭಗವಾನ್ ಗಣಪತಿ ಪ್ರತಿಮೆಯನ್ನು ಹೊಂದಿದೆ . ಇತ್ತಿಚಿನ ದಿನಗಳಲ್ಲಿ ಹಲವು ರಾಜಕೀಯ ನಾಯಕರಿಗೆ ಕುರುಡುಮಲೆ ಅದೃಷ್ಟದ ದೇವರು ಎನ್ನುವ ಕಾರಣಕ್ಕೆ  ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

Best places to visit in Kolar 

Kurudumale

ವಿ.ಸೂ: ಒಂದು ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳು ಇರುತ್ತವೆ. ಅದರಲ್ಲಿ ಕೆಲವು ತಾಣಗಳ ಬಗ್ಗೆ ನಿಮಗೆ ನೀಡಿದ್ದೇವೆ . ನಿಮ್ಮ ಜಿಲ್ಲೆಯಲ್ಲಿ ಅಂತಹ ಅಪರೂಪ ಜಾಗದ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button