Moreವಿಂಗಡಿಸದಸಂಸ್ಕೃತಿ, ಪರಂಪರೆ

ಅರುಣಾಚಲ ಪ್ರದೇಶ ರಾಜ್ಯದ ಕೆಲವು ಕುತೂಹಲಕಾರಿ ಸಂಗತಿಗಳು:

ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅರುಣಾಚಲ ಪ್ರದೇಶ ಅತ್ಯಂತ ಸುಂದರ ಮತ್ತು ನೈಸರ್ಗಿಕ ಭೂದೃಶ್ಯಗಳಿಗೆ ಹೆಸರುವಾಸಿಯಾದ ರಾಜ್ಯ.

ಈ ರಾಜ್ಯದ ಭಾಗಗಳು ಹಿಂದೆ ಬ್ರಿಟಿಷರ ವಸಾಹತು ಸಮಯದಲ್ಲಿ, ಅಸ್ಸಾಂನ ಭಾಗವಾಗಿದ್ದವು. ಮತ್ತು ಈ ಭಾಗಗಳನ್ನು NEFA (North East Frontier Agency) ಎಂದು ಕರೆಯಲಾಗುತ್ತಿತ್ತು.

1962 ರಲ್ಲಿ ನಡೆದ ಭಾರತ-ಚೀನಾ ಯುದ್ಧದ ನಂತರ, 1987 ರ ಫೆಬ್ರವರಿ 20 ರಂದು ಅರುಣಾಚಲ ಪ್ರದೇಶ ಸ್ವತಂತ್ರ ರಾಜ್ಯವಾಗಿ ಹೊರಹೊಮ್ಮಿತು. ಈ ದಿನವನ್ನು ರಾಜ್ಯದಲ್ಲಿ ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನವಾಗಿ (Arunachal Pradesh Statehood Day) ಆಚರಿಸಲಾಗುತ್ತದೆ.

ಅರುಣಾಚಲ ಪ್ರದೇಶ (Arunachal Pradesh) ರಾಜ್ಯದ ಕುರಿತಾದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

●”ಭಾರತದ ಏಕೈಕ ಪ್ರಮಾಣೀಕೃತ ಸಾವಯವ ಕಿವಿ ಹಣ್ಣು” (Kiwi Fruit) ಇರುವುದು ಅರುಣಾಚಲ ಪ್ರದೇಶದ ಝಿರೋ ವ್ಯಾಲಿ ಫಾರ್ಮ್ಸ್‌ನಲ್ಲಿದೆ.

● “ಬುಗುನ್ ಲಿಯೊಸಿಚ್ಲಾ” ( Bugun liocichla) ನಂತಹ ತೀವ್ರ ಅಳಿವಿನಂಚಿನಲ್ಲಿರುವ ಜಾತಿಗಳಿಗೆ ನೆಲೆಯಾಗಿದೆ.

●ಭಾರತದ “ಏಕೈಕ ಆರ್ಕಿಡ್ ಅಭಯಾರಣ್ಯ” (Orchid Sanctuary) ಇರುವುದು ಅರುಣಾಚಲ ಪ್ರದೇಶದ “ಸೆಸ್ಸಾ” ದಲ್ಲಿ.

●ಅರುಣಾಚಲ ಪ್ರದೇಶ “26 ಪ್ರಮುಖ ಬುಡಕಟ್ಟುಗಳು ಮತ್ತು 100 ಕ್ಕೂ ಹೆಚ್ಚು ಉಪ ಬುಡಕಟ್ಟುಗಳು ಸಮುದಾಯಕ್ಕೆ” ನೆಲೆಯಾಗಿದೆ.

●83,743 ಚದರ ಕಿಲೋಮೀಟರ್ ವಿಸ್ತೀರ್ಣ ಮತ್ತು 82 ಪ್ರತಿಶತದಷ್ಟು ನಿತ್ಯಹರಿದ್ವರ್ಣ ಅರಣ್ಯವನ್ನು ಹೊಂದಿರುವ ಅತಿದೊಡ್ಡ ಈಶಾನ್ಯ ರಾಜ್ಯ.

●ಸಾವಿರ ವರ್ಷಗಳ ಹಳೆಯ “ಮೊನ್ ಶುಗು” (Mon Shugu) ಕಾಗದ ತಯಾರಿಕಾ ಮಾದರಿಗೆ ನೆಲೆಯಾಗಿದೆ.

● ಅರುಣಾಚಲ ಪ್ರದೇಶದ 1240 ಮೀಟರ್ ಎತ್ತರದಲ್ಲಿರುವ ರಾಜ್ಯದ ಡಾಂಗ್ ಕಣಿವೆಯು (Dong Valley) ಪ್ರತೀ ದಿನ “ದೇಶದ ಮೊದಲ ಸೂರ್ಯೋದಯ”ಕ್ಕೆ ಸಾಕ್ಷಿಯಾಗುತ್ತದೆ.

● ಭಾರತದ ಅತ್ಯಂತ ದೊಡ್ಡ ಮಠವಾದ ತವಾಂಗ್ ಮಠ (Tawang Temple) ಇರುವುದು ಈ ರಾಜ್ಯದಲ್ಲಿ.

● ಈ ರಾಜ್ಯವನ್ನು ಸಸ್ಯಶಾಸ್ತ್ರದ ಸ್ವರ್ಗ ಎಂದು ಕರೆಯಲಾಗುತ್ತದೆ. ಇದು ಸುಮಾರು 200 ಕ್ಕೂ ಅಧಿಕ ವಿವಿಧ ಜಾತಿ ಸಸ್ಯಗಳು ಮತ್ತು ವೈವಿಧ್ಯಮಯ ಸಸ್ತನಿಗಳಿಗೆ ನೆಲೆಯಾಗಿದೆ.

● ಅರುಣಾಚಲ ಪ್ರದೇಶದ ಲೋಹಿತ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಧೋಲಾ ಸಾದಿಯಾ ಸೇತುವೆಯು ಭಾರತದ ಅತಿ ಉದ್ದದ ಸಂಪರ್ಕ ಸೇತುವೆಯಾಗಿದೆ.

● ಭಾರತದ ಪುರಾಣ ಇತಿಹಾಸಗಳಲ್ಲಿಯೂ ಅರುಣಾಚಲ ಪ್ರದೇಶದ ಉಲ್ಲೇಖ ಕಂಡು ಬಂದಿದೆ. ರಾಮಾಯಣ, ಮಹಾಭಾರತ ಮತ್ತು ಕಾಳಿಕಾ ಪುರಾಣದಲ್ಲಿ ಈ ರಾಜ್ಯದ ಉಲ್ಲೇಖವಿದೆ.

ಅರುಣಾಚಲ ಪ್ರದೇಶದ ಲೋಹಿತ್‌ನಲ್ಲಿ (Lohit) ಹಿಂದೂಗಳ ಯಾತ್ರಾಸ್ಥಳವಾದ “ಪರಶುರಾಮ ಕುಂಡ್” (Parashuram Kund) ಭಗವಾನ್ ಪರಶುರಾಮನು ಕ್ಷತ್ರಿಯರನ್ನು ಕೊಂದ ನಂತರ ಈ ನೀರಿನಲ್ಲಿ ತನ್ನ ಪಾಪಗಳನ್ನು ತೊಳೆದುಕೊಂಡನು ಎಂಬ ನಂಬಿಕೆ ಇದೆ.

ಅರುಣಾಚಲ ಪ್ರದೇಶ ಒಂದು ಚಂದದ ರಾಜ್ಯ. ಇಲ್ಲಿ ನೋಡಲು ಹಲವಾರು ಐತಿಹಾಸಿಕ, ಧಾರ್ಮಿಕ ನೆಲೆಗಳಿವೆ. ನೀವೂ ಪ್ರವಾಸ ಪ್ರಿಯರಾದರೆ ಈ ರಾಜ್ಯಕ್ಕೊಮ್ಮೆ ಭೇಟಿ ನೀಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button