Moreಕಾರು ಟೂರುವಿಂಗಡಿಸದ

ಶೀಘ್ರದಲ್ಲೇ ಮುಂಬೈನಲ್ಲಿ ಚಾಲಕ ರಹಿತ ಪಾಡ್ ಟ್ಯಾಕ್ಸಿಗಳು ಆರಂಭವಾಗಲಿದೆ;

ಟ್ರಾಫಿಕ್ ಅನ್ನು ತಡೆಯುವ ನಿಟ್ಟಿನಿಂದ, ಮುಂಬೈ ಶೀಘ್ರದಲ್ಲೇ ಬಾಂದ್ರಾ ಮತ್ತು ಕುರ್ಲಾ ನಡುವೆ ಪಾಡ್ ಟ್ಯಾಕ್ಸಿಗಳನ್ನು ಆರಂಭಿಸಲಿದೆ.

ಮುಂಬೈ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ಪಾಡ್ ಟ್ಯಾಕ್ಸಿ ಸೇವೆಯನ್ನು (Pod Taxi Service) ಆರಂಭಿಸಲು ಮಂಜೂರು ಮಾಡಿದೆ.

ಇದು ಮುಂಬೈನ ಇದೇ ಮೊದಲ ಗಮನಾರ್ಹ ಸೇವೆಯಾಗಲಿದೆ. ಈ ಯೋಜನೆಯು ಮುಂಬೈ ನಗರದ (Mumbai City) ಟ್ರಾಫಿಕ್ ದಟ್ಟಣೆಯನ್ನು (Traffic) ನಿಗ್ರಹಿಸುವ ಉದ್ದೇಶವನ್ನು ಹೊಂದಿದೆ.

ಮಹಾರಾಷ್ಟ್ರ ಸರ್ಕಾರವು ಇತ್ತೀಚಿಗೆ BKC ಮಾರುಕಟ್ಟೆ ಪ್ರದೇಶದಲ್ಲಿ ಪಾಡ್ ಟ್ಯಾಕ್ಸಿ ಯನ್ನು ಅನಾವರಣಗೊಳಿಸುವುದಾಗಿ ಘೋಷಿಸಿತು.

ವರದಿಯ ಪ್ರಕಾರ, ಬಾಂದ್ರಾ (Bandra) ಮತ್ತು ಕುರ್ಲಾ (Kurla) ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಮಾರ್ಗವು 8.8 ಕಿಮೀ ದೂರವಿದ್ದು, ಈ ಸ್ಥಳದಲ್ಲಿ ಪಾಡ್ ಟ್ಯಾಕ್ಸಿ ಸೇವೆಗೆ ಅನುಮೋದನೆ ನೀಡಲಾಗಿದೆ.

ಈ ಪಾಡ್ ಟ್ಯಾಕ್ಸಿಗಳು ಆರು ಜನ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮತ್ತು ಗಂಟೆಗೆ 40 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ.

ಎರಡು ಸ್ಥಳಗಳ ಸಂಪರ್ಕದ ಮಾರ್ಗದಲ್ಲಿ ಒಟ್ಟು 38 ನಿಲ್ದಾಣಗಳನ್ನು ಹೊಂದಿರುತ್ತವೆ. ಎರಡು ರೈಲು ನಿಲ್ದಾಣಗಳು ಮತ್ತು BKC ನಡುವೆ ಪ್ರಯಾಣದ ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.

ಒಟ್ಟಾರೆ ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಸಹಭಾಗಿತ್ವದಲ್ಲಿ ಇದು ಕಾರ್ಯಗತಗೊಳ್ಳಲಿದೆ. 2017 ರಲ್ಲಿ ಪ್ರತಿ ಕಿಮೀಗೆ 50 ಕೋಟಿ ಎಂದು ಅಂದಾಜಿಸಲಾಗಿತ್ತು, ಪ್ರಸ್ತುತ ಯೋಜಿತ ವೆಚ್ಚವು INR 1,018 ಕೋಟಿ ಎಂದು ಅಂದಾಜಿಸಲಾಗಿದೆ.

ಇದು 5,000 ಚದರ ಮೀ ವ್ಯಾಪ್ತಿಯ ಡಿಪೋವನ್ನು ಸ್ಥಾಪಿಸುವುದನ್ನು ಸಹ ಒಳಗೊಂಡಿದೆ. ಜನರಿಗೆ ವಿಧಿಸುವ ಟಿಕೆಟ್ ದರಗಳಂತಹ ಹೆಚ್ಚುವರಿ ವಿವರಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ.

ಕೆಲವು ಇತರ ದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಈ ಪಾಡ್ ಟ್ಯಾಕ್ಸಿಗಳು ಮುಂಬೈ ಇದೇ ಮೊದಲ ಬಾರಿಗೆ ಆರಂಭವಾಗಿದೆ.

3.5 ಮೀ ಉದ್ದ, 1.47 ಮೀ ಅಗಲ ಮತ್ತು 1.8 ಮೀ ಎತ್ತರದ ಪಾಡ್ ಟ್ಯಾಕ್ಸಿಗಳು ಸಾರ್ವಜನಿಕರಿಗೆ ಸಾರಿಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿದೆ.

ಪಾಡ್ ಟ್ಯಾಕ್ಸಿಗಳು ಸೀಮಿತ ಪ್ರಯಾಣಿಕರು ಅಥವಾ ಸರಕುಗಳಿಗಾಗಿ ವಿನ್ಯಾಸಗೊಳಿಸಲಾದ ಸಣ್ಣ, ಚಾಲಕರಹಿತ ವಾಹನಗಳನ್ನು ಬಳಸಿಕೊಂಡು ವಿಶಿಷ್ಟವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸೂಚಿಸುವುದರಿಂದ ಅಧಿಕೃತವಾಗಿ ಇದನ್ನು ಪರ್ಸನಲ್ ರಾಪಿಡ್ ಟ್ರಾನ್ಸಿಟ್ (PRT) ಎಂದು ಗುರುತಿಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button