ವಿಂಗಡಿಸದ

ಯುನೆಸ್ಕೋದ ಸೃಜನಶೀಲ ನಗರಗಳ ಪಟ್ಟಿಗೆ ಸೇರಿದ ಭಾರತದ “ಗ್ವಾಲಿಯರ್” ಮತ್ತು “ಕೋಝಿಕ್ಕೋಡ್”

ವಿಶ್ವ ನಗರಗಳ ದಿನದ ಪ್ರಯುಕ್ತ ಅ.31 ರಂದು ಯುನೆಸ್ಕೋ ಭಾರತದ ನಗರಗಳಾದ “ಗ್ವಾಲಿಯರ್” ಮತ್ತು “ಕೋಝಿಕ್ಕೋಡ್” ಅನ್ನು ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ (UCCN) ಗೆ ಸೇರಿಸಿದೆ.

ಉಜ್ವಲಾ ವಿ ಯು

ಯುನೆಸ್ಕೋಯಿಂದ ಒಟ್ಟು 55 ಹೊಸ ಸೃಜನಶೀಲ ನಗರಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅವುಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ‘ಸಂಗೀತ” ವಿಭಾಗದಲ್ಲಿ, ಮತ್ತು ಕೇರಳದ ಕೋಝಿಕ್ಕೋಡ್ ‘ಸಾಹಿತ್ಯ’ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Kozhikode, “City Of Literature”

ರೋಮಾಂಚಕ ಸಾಹಿತ್ಯ ಸಂಸ್ಕೃತಿಗೆ ಹೆಸರುವಾಸಿಯಾದ ಕೋಝಿಕೋಡ್ (Kozhikode) ನಗರವು ‘ಸಾಹಿತ್ಯ ನಗರ’ (City of Literature) ಎಂಬ ವಿಶಿಷ್ಟ ಬಿರುದನ್ನು ಗಳಿಸುವ ಮೂಲಕ ಈ ಪಟ್ಟಿಯನ್ನು ಸೇರಿದ ಭಾರತದ ಮೊದಲ ನಗರವಾಗಿ ಹೊರಹೊಮ್ಮಿದೆ.

ಗ್ವಾಲಿಯರ್ (Gwalior), ಪ್ರಸಿದ್ಧ ಸಂಗೀತಗಾರ ತಾನ್ಸೆನ್‌ ರು ಜಗತ್ತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಯುನೆಸ್ಕೋದಿಂದ “ಸಂಗೀತದ ನಗರ” (City of Music) ಎಂಬ ಪ್ರತಿಷ್ಠಿತ ಬಿರುದನ್ನು ನೀಡಿದೆ. ಈ ಗೌರವವು ನಗರದ ಶ್ರೀಮಂತ ಸಂಗೀತ ಪರಂಪರೆಗೆ ಸಂದ ಗೌರವವಾಗಿದೆ.

Gwalior, ” City Of Music”

ತಮ್ಮ ನಗರಾಭಿವೃದ್ಧಿಗಾಗಿ ಕಾರ್ಯತಂತ್ರದ ಭಾಗವಾಗಿ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬಳಸುತ್ತಿರುವ ಈ ನಗರಗಳು ಅವುಗಳ ಬದ್ಧತೆಗಾಗಿ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್‌ಗೆ ಸೇರ್ಪಡೆಯಾಗಿವೆ ಮತ್ತು ಮಾನವ-ಕೇಂದ್ರಿತ ನಗರ ಯೋಜನೆಯಲ್ಲಿ ನವೀನವಾದ ಅಭ್ಯಾಸಗಳನ್ನು ಪ್ರದರ್ಶಿಸುತ್ತವೆ. ಎಂದು ವಿಶ್ವ ಸಂಸ್ಥೆಯು ಹೇಳಿಕೆ ನೀಡಿದೆ.

“ನಮ್ಮ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್‌ನಲ್ಲಿರುವ ಸೃಜನಶೀಲ ನಗರಗಳು ತನ್ನ ಸಂಸ್ಕೃತಿಯಿಂದಾಗಿ ಪ್ರವಾಸೋದ್ಯಮವನ್ನು ಹೆಚ್ಚಿಸುವಲ್ಲಿ ಮತ್ತು ಸೃಜನಶೀಲತೆಯಿಂದಾಗಿ ನಗರದ ಸ್ಥಿತಿಸ್ಥಾಪಕತ್ವ ಮತ್ತು ಅಭಿವೃದ್ಧಿಗೆ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿವೆ” ಎಂದು ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

Kozhikode, “City Of Literature”

ನವೆಂಬರ್ 1 ರಂದು, ಪ್ರಧಾನಿ ನರೇಂದ್ರ ಮೋದಿಯವರು X ನಲ್ಲಿ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ,ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಭಾರತಕ್ಕೆ ಅಪಾರ ಹೆಮ್ಮೆಯನ್ನು ವ್ಯಕ್ತಪಡಿಸುವ ಮೂಲಕ ಈ ನಗರಗಳು ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಬೆಳೆಸಲು ದೃಢವಾದ ಸಮರ್ಪಣೆಯನ್ನು ಪ್ರದರ್ಶಿಸಿವೆ ಎಂದು ಅವರು ಒತ್ತಿ ಹೇಳಿದರು.

Gwalior, ” City Of Music”

ಗ್ವಾಲಿಯರ್ ಮತ್ತು ಕೋಝಿಕ್ಕೋಡ್ ಸೇರ್ಪಡೆಯೊಂದಿಗೆ, ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ ಈಗ 100 ಕ್ಕೂ ಹೆಚ್ಚು ದೇಶಗಳಲ್ಲಿ 350 ಸೃಜನಶೀಲ ನಗರಗಳನ್ನು ಒಳಗೊಂಡಿದೆ. ಕರಕುಶಲ ಮತ್ತು ಜಾನಪದ ಕಲೆಗಾಗಿ “ಬುಖಾರಾ”, ಮಾಧ್ಯಮ ಕಲೆಗಾಗಿ “ಕಾಸಾಬ್ಲಾಂಕಾ”, ಚಲನಚಿತ್ರಕ್ಕಾಗಿ “ಕಠ್ಮಂಡು” ಮತ್ತು ಸಾಹಿತ್ಯಕ್ಕಾಗಿ “ರಿಯೊ ಡಿ ಜನೈರೊ” ನಗರಗಳು ಸೃಜನಶೀಲ ನಗರಗಳ ಪಟ್ಟಿಗೆ ಸೇರಿದ ಇತರ ಕೆಲವು ನಗರಿಯಾಗಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button