ವಿಂಗಡಿಸದ

ಜ.6 ರಿಂದ ಅಯೋಧ್ಯೆಯಲ್ಲಿ “ಇಂಡಿಗೋ” ವಿಮಾನಗಳ ಹಾರಾಟ

ತನ್ನ ದೇಶೀಯ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ, ಭಾರತದ ಅತಿದೊಡ್ಡ ಬಜೆಟ್ ವಿಮಾನಯಾನ ಸಂಸ್ಥೆಯಾದ “ಇಂಡಿಗೋ”(IndiGo) ಜ.06 ರಿಂದ ಅಯೋಧ್ಯಾ ವಿಮಾನ ನಿಲ್ದಾಣದಲ್ಲಿ ಹಾರಾಟವನ್ನು ಆರಂಭಿಸಲಿದೆ.

ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (AYJ) ಕಾರ್ಯನಿರ್ವಹಿಸುವ “ಮೊದಲ ವಾಹಕ” ಇದಾಗಿದೆ.

ಭಾರತದ ಅತಿದೊಡ್ಡ ಹಾಗೂ ಕಡಿಮೆ ವೆಚ್ಚದ ವಾಹಕ, IndiGo, ಅಯೋಧ್ಯೆಯನ್ನು ತಮ್ಮ 86 ನೇ ದೇಶೀಯ ಮತ್ತು 118 ನೇ ಒಟ್ಟಾರೆ ತಾಣಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಮುಖ್ಯಸ್ಥ ವಿನಯ್ ಮಲ್ಹೋತ್ರಾ ಅವರು ಘೋಷಿಸಿದರು.

ಉದ್ಘಾಟನಾ ವಿಮಾನವು ಡಿಸೆಂಬರ್ 30 ರಂದು ದೆಹಲಿಯಿಂದ ಅಯೋಧ್ಯೆಗೆ ಬಂದು ಇಳಿಯಲಿದೆ. ನಂತರ ಇದರ ಕಾರ್ಯಾಚರಣೆಯು ಜ.6 ರಿಂದ ದೆಹಲಿ ಹಾಗೂ ಜ.11 ರಿಂದ ಅಹಮದಾಬಾದ್ ನಿಂದ ಆರಂಭಗೊಳ್ಳುತ್ತದೆ. ಈ ವಿಮಾನಯಾನವು ಈ ಕೆಳಗಿನ ವೇಳಾಪಟ್ಟಿಯನ್ನು ಹೊಂದಿರುತ್ತದೆ.

ಆರಂಭದಲ್ಲಿ, ಇಂಡಿಗೋ ಅಯೋಧ್ಯೆ (Ayodhya) ಮತ್ತು ಎರಡು ಪ್ರಮುಖ ನಗರಗಳಾದ ದೆಹಲಿ (Delhi) ಮತ್ತು ಅಹಮದಾಬಾದ್ (Ahmedabad) ನಡುವೆ ಮಾತ್ರ ನೇರ ಸಂಪರ್ಕವನ್ನು ಸ್ಥಾಪಿಸುತ್ತಿದೆ.

ಈ ಮಾರ್ಗದಲ್ಲಿ ಮತ್ತಷ್ಟು ಸೇವೆಗಳ ವಿಸ್ತರಣೆಯ ಯೋಜನೆಯ ಕುರಿತು ಇಂಡಿಗೋ ಏರ್ಲೈನ್ ​​(IndiGo Airlines) ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಉದ್ಯಮಿಗಳು ಭವಿಷ್ಯದಲ್ಲಿ ಏರ್ಲೈನ್ಸ್ ಇನ್ನಷ್ಟು ಮಾರ್ಗಗಳಲ್ಲಿ ಸಂಪರ್ಕ ಸಾಧಿಸಬಹುದೆಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಇತ್ತೀಚಿನ ಬೆಳವಣಿಗೆಯ ಬಗ್ಗೆ ಅತ್ಯಂತ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಅಯೋಧ್ಯೆಯ ತಮ್ಮ ಏರ್ಲೈನ್ಸ್ ನ ಸ್ಥಾಪನೆಯು ಮಹತ್ವದ ನಿರ್ಧಾರವಾಗಿದೆ ಎಂಬುದು ಅವರ ಅಭಿಪ್ರಾಯ.

ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಕ್ತಾಯದ ಹಂತದಲ್ಲಿದೆ. ಇದರ 6,500-ಚದರ ಮೀಟರ್ ಟರ್ಮಿನಲ್ ಕಟ್ಟಡವು ದಟ್ಟಣೆಯ ಸಮಯದಲ್ಲಿ 300 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ಪ್ರತಿ ವರ್ಷ 600,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಜನವರಿ 2024 ರಲ್ಲಿ ಉದ್ಘಾಟನೆಗೊಳ್ಳಲಿರುವ ಅಯೋಧ್ಯಾ ರಾಮ ಮಂದಿರವನ್ನು (Ayodhya Ram Mandir) ವೀಕ್ಷಿಸಲು ಬರುವ ಪ್ರವಾಸಿಗರಿಗೆ “ಇಂಡಿಗೋ ಏರ್ಲೈನ್ಸ್” ನ ಈ ಬೆಳವಣಿಗೆಯು ತುಂಬಾ ಉಪಕಾರಿಯಾಗಲಿದೆ.

ಅಯೋಧ್ಯೆಯಲ್ಲಿ ಇಂಡಿಗೋದ ಕಾರ್ಯತಂತ್ರದ ವಿಸ್ತರಣೆಯು ವಿಮಾನಯಾನಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ತಾಣವನ್ನು ಅನ್ವೇಷಿಸಲು ಬಯಸುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎಂದು ಮಲ್ಹೋತ್ರಾ ಅವರು ತಿಳಿಸಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button