ಕರ್ನಾಟಕದ ತಿರುಪತಿ ಎಂಬ ಹೆಗ್ಗಳಿಕೆ ಹೊಂದಿದೆ ಮಂಜುಗುಣಿ
ಕರ್ನಾಟಕದ ( Karnataka )ಉತ್ತರ ಕನ್ನಡ ( Uttara Kannada )ಜಿಲ್ಲೆಯು ಪೃಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಜಿಲ್ಲೆಯಲ್ಲಿ ಹಲವಾರು ಧಾರ್ಮಿಕ ಸ್ಥಳಗಳಿದ್ದು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಅಂಥಹ ಸ್ಥಳಗಳಲ್ಲಿ ಶಿರಸಿಯ(Sirsi) ಮುಂಜುಗುಣಿ ದೇವಸ್ಥಾನ ಕೂಡ ಒಂದು.
ಕರ್ನಾಟಕದ ತಿರುಪತಿ ಎಂದು ಕರೆಯಲ್ಪಡುವ ಮಂಜುಗುಣಿ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಊರು. ಶಿರಸಿಯಿಂದ 26ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ( Venkataramana and Padmavati temple )ಪ್ರಸಿದ್ಧವಾಗಿದೆ.. ಹೆಸರೇ ಸೂಚಿಸುವ ಹಾಗೆ ಚಳಿಗಾಲದಲ್ಲಿ ದಟ್ಟವಾದ ಮಂಜು ಮುಸುಕಿರುವುದರಿಂದ ಈ “ಮಂಜುಗುಣಿ”(Manjuguni) ಎಂದು ಕರೆಯಲಾಗುವುದೆಂದೂ ಹೇಳಲಾಗುತ್ತದೆ.
ಸುಮಾರು 9ನೇ ಶತಮಾನದಲ್ಲಿ ತಿರುಮಲ ಯೋಗಿಗಳು ತಿರುಪತಿಯಿಂದ ತೀರ್ಥಯಾತ್ರೆಗೆ ಹೊರಡುತ್ತಾರೆ. ಈಗಿನ ಮಂಜುಗುಣಿಯಿಂದ ೮ ಕಿಮೀ ದೂರದಲ್ಲಿರುವ ಗಿಳಿಲಗುಂಡಿ ಊರಿನ ಕೊಳದ ಬಳಿ ತಪಸ್ಸು ಮಾಡಲು ಆರಂಭಿಸುತ್ತಾರೆ. ಆ ಸಮಯದಲ್ಲಿ, ಶಂಖ-ಚಕ್ರ-ಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನವಾಯಿತು. ಅದನ್ನು ತಂದು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಇದು ಈ ಸ್ಥಳದ ಪುರಾಣವಾಗಿದೆ. ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವವು ಇಲ್ಲಿನ ಬಹುಮುಖ್ಯ ವಾರ್ಷಿಕ ಉತ್ಸವವಾಗಿದೆ.
ಅಂದು ಶ್ರೀ ವೆಂಕಟೇಶ ತಿರುಮಲದಿಂದ ಇಲ್ಲಿ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಇದೆ. ದೇವಸ್ಥಾನದಲ್ಲಿ ಅಪರೂಪದ ಸಾಲಿಗ್ರಾಮವನ್ನು ನೋಡಬಹುದು. ವಿಶಾಲವಾದ ರಥಬೀದಿ ಮತ್ತು ಬೃಹತ್ ಗಾತ್ರದ ಮರದ ರಥ ಹೆಚ್ಚಿನ ಆಕರ್ಷಣೆಯಾಗಿದೆ. ವಾತಾವರಣವು ಶಾಂತವಾಗಿದ್ದು ಪ್ರತಿನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ.
ನೀವು ಇದನ್ನು ಓದಬಹುದು : ಸೊಕ್ಕಿದ್ರೆ ಯಾಣಕ್ಕೆ ಹೋಗು, ರೊಕ್ಕ ಇದ್ರೆ ಗೋಕರ್ಣಕ್ಕೆ ಹೋಗು; ಪವಿತ್ರಾ ಕೆ. ಎಂ. ಬರೆದ ಯಾಣ ಸುತ್ತಿದ ಕಥೆ
ಶಿರಸಿಯಿಂದ 35 ಕಿಲೋಮೀಟರ್ ದೂರದಲ್ಲಿರುವ 381 ಅಡಿ ಎತ್ತರದಿಂದ (Hight)ನೆಲಕ್ಕೆ ದುಮುಕುವ ಉಂಚಳ್ಳಿ ಜಲಪಾತವು ( Unchalli falls)ಅತ್ಯಂತ ರಮಣೀಯವಾಗಿದೆ. ಈ ಜಲಪಾತವು ಜೋರಾಗಿ ಶಬ್ದ ಮಾಡುವುದರಿಂದ ಕೆಪ್ಪ ಜಲಪಾತ ಎಂದೂ ಕರೆಯುತ್ತಾರೆ.1845 ರಲ್ಲಿ ಜಲಪಾತವನ್ನು ಕಂಡುಹಿಡಿದ ಬ್ರಿಟಿಷ್ ಸರ್ಕಾರದ( British Government )ಜಿಲ್ಲಾಧಿಕಾರಿ ಜೆಡಿ ಲುಶಿಂಗ್ಟನ್ ಅವರ ಹೆಸರನ್ನು ಈ ಜಲಪಾತಕ್ಕೆ ಇಡಲಾಗಿದೆ.
ಜಲಪಾತವನ್ನು ತಲುಪುವ ಮಾರ್ಗ (How to reach)
ಉಂಚಳ್ಳಿ ಜಲಪಾತವು ಬೆಂಗಳೂರಿನಿಂದ(Bengaluru )440 ಕಿಮೀ ಮತ್ತು ಮಂಗಳೂರಿನಿಂದ 260 ಕಿಮೀ ದೂರದಲ್ಲಿದೆ. ಹೆಗ್ಗರಣೆ ಹತ್ತಿರದ ಗ್ರಾಮ (ಜಲಪಾತದಿಂದ 5 ಕಿಮೀ) ಮತ್ತು ಸಿರ್ಸಿ(Sirsi) (ಜಲಪಾತದಿಂದ 35 ಕಿಮೀ) ಹತ್ತಿರದ ಪಟ್ಟಣವಾಗಿದೆ. ಹುಬ್ಬಳ್ಳಿ(Hunbali ಹತ್ತಿರದ ವಿಮಾನ ನಿಲ್ದಾಣವಾಗಿದೆ (140 ಕಿಮೀ). ಜಲಪಾತಗಳವರೆಗೆ 1 ಕಿ.ಮೀ ವರೆಗೆ ಮೋಟಾರು ರಸ್ತೆ ಅಸ್ತಿತ್ವದಲ್ಲಿದೆ ಮತ್ತು ಕೊನೆಯ ಕಿಲೋಮೀಟರ್ ಅನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ.
ಸಾಗರದ(Sagara )ಬಳಿಯ ತಾಳಗುಪ್ಪ(Talaguppa) ಮತ್ತು ಕುಮಟಾ(Kumata )ಹತ್ತಿರದ ರೈಲು ನಿಲ್ದಾಣಗಳಾಗಿವೆ, ಎರಡೂ ಜಲಪಾತದಿಂದ ಸುಮಾರು 60 ಕಿ.ಮೀ. ಕರ್ನಾಟಕದ ಪ್ರಮುಖ ಪಟ್ಟಣಗಳಿಂದ ಶಿರಸಿಯನ್ನು ತಲುಪಲು ನಿಯಮಿತ ಬಸ್ಸುಗಳು ಲಭ್ಯವಿವೆ. ಸಿರ್ಸಿಯಿಂದ ಉಂಚಳ್ಳಿ ಜಲಪಾತವನ್ನು ಬಾಡಿಗೆಗೆ ಟ್ಯಾಕ್ಸಿ ಮೂಲಕ ತಲುಪಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.