ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಅರೇಬಿಯನ್‌ ಸಮುದ್ರ(Arabian Sea)ಮತ್ತು ಪಶ್ಚಿಮ ಘಟ್ಟಗಳ(Western Ghats)ನಡುವೆ ನೆಲೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ(Dakshina Kannada)ಕಡಲತೀರಗಳು, ದೇವಾಲಯಗಳು, ವಾಸ್ತುಶಿಲ್ಪವುಳ್ಳ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ಜಿಲ್ಲೆಯಲ್ಲಿ ನೋಡುವುದಕ್ಕೆ ಸಾಕಷ್ಟು ತಾಣಗಳಿವೆ ಅದರಲ್ಲಿ ಕೆಲವು ಜಾಗದ ಮಾಹಿತಿ ಇಲ್ಲಿದೆ.

ಕುಮಾರ ಪರ್ವತ ಚಾರಣ(Kumara Parvatha Trekking)

ಪುಷ್ಪಗಿರಿ ಚಾರಣ (Pushpagiri Trek)ಎಂದೂ ಕರೆಯಲ್ಪಡುವ ಕುಮಾರ ಪರ್ವತ ಚಾರಣ (25-28 ಕಿ.ಮೀ ದೂರದಲ್ಲಿ ಸಾಗುತ್ತದೆ. ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಟ್ರೆಕ್ಕಿಂಗ್ ಸಮಯದಲ್ಲಿ ತಲುಪಿದ ಗರಿಷ್ಠ ಎತ್ತರವು ಸರಾಸರಿ ಸೀಲ್ ಮಟ್ಟದಿಂದ(Sea Level)ಸುಮಾರು 1700 ಮೀಟರ್ ಇರುತ್ತದೆ. ಮೇಲಿನಿಂದ ನೋಡಲು ಸುಂದರವಾದ ದೈತ್ಯ ಬಂಡೆಗಳು ಅದರ ಜೊತೆ ತಂಪಾದ ಗಾಳಿ ಮಂಜು ಇವೆಲ್ಲವೂ ಸಹ ನಮ್ಮ ಚಾರಣ ಪಯಣವನ್ನು ಸಾರ್ಥಕಗೊಳಿಸುತ್ತದೆ.

Must visit places in Dakshina Kannada

ಪಿಲಿಕುಳ ನಿಸರ್ಗಧಾಮ(Pilikula Biological Park)

ಗುರುಪುರ ನದಿಯ(Gurupura River)ದಡದಲ್ಲಿರುವ ಪ್ರವಾಸೋದ್ಯಮ ಉದ್ಯಾನವನ. 370 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಪರಿಸರ ವಲಯವು ಜೈವಿಕ ಉದ್ಯಾನ, ಪಾರಂಪರಿಕ ಗ್ರಾಮ, ಕುಶಲಕರ್ಮಿಗಳ ಗ್ರಾಮ, ಗಾಲ್ಫ್ ಕೋರ್ಸ್, ಮನೋರಂಜನಾ ಉದ್ಯಾನವನ, ಸರೋವರ ಉದ್ಯಾನ, ಅರ್ಬೊರೇಟಂ ಮತ್ತು ವಿಜ್ಞಾನ ಕೇಂದ್ರವನ್ನು ಹೊಂದಿದೆ. ಇತ್ತೀಚೆಗೆ ತೆರೆಯಲಾದ 3D ತಾರಾಲಯವು ಏಷ್ಯಾದ ಮೊದಲನೆಯದು.

Must visit places in Dakshina Kannada

ಬೇಂದ್ರೆ ತೀರ್ಥಾ (Bendre Theertha)

ಪುತ್ತೂರು(Puttur)ಬೇಂದ್ರೆ ತೀರ್ಥಾ ಸೀರೆಹೊಳೆ (Sirehole)ನದಿಯ ದಡದಲ್ಲಿರುವ ಒಂದು ಸುಂದರವಾದ ತಾಣ. ಇದು ಕರ್ನಾಟಕದ ಏಕೈಕ ನೈಸರ್ಗಿಕ ಬಿಸಿನೀರಿನ (Natural Hot Spring) ಬುಗ್ಗೆಯಾಗಿದ್ದು ರೋಗ ನಿವಾರಣಾ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

Must visit places in Dakshina Kannada

ಜಮಾಲಾಬಾದ್ ಕೋಟೆ (Jamalabad Fort)

ಈ ಹಿಂದೆ ನರಸಿಂಹ ಅಂಗಡಿ(Narasimha Angadi)ಎಂದು ಕರೆಯಲಾಗುತ್ತಿತ್ತು, ದಕ್ಷಿಣ ಕೆನರಾ ಜಿಲ್ಲೆಯ ಬೆಳ್ತಂಗಡಿ (Belthangady)ತಾಲ್ಲೂಕಿನ ಜಮಾಲಾಬಾದ್ 18 ನೇ ಶತಮಾನದ ಕೋಟೆಗೆ ಹೆಸರುವಾಸಿಯಾಗಿದೆ. ಹಳೆಯ ಹೊಯ್ಸಳ (Hoysala)ಕೋಟೆಯ ಅವಶೇಷಗಳ ಮೇಲೆ ಜಮಾಲಾಬಾದ್ ಕೋಟೆಯನ್ನು ನಿರ್ಮಿಸಲಾಗಿದೆ. ಮೈಸೂರು ದೊರೆ ಟಿಪ್ಪು ಸುಲ್ತಾನ್(Tipu Sultan) 1974 ರಲ್ಲಿ ಕೋಟೆಯನ್ನು ನಿರ್ಮಿಸಿ ಅದಕ್ಕೆ ಅವರ ತಾಯಿ ಜಮಾಲ್ಬೀ ಹೆಸರಿಟ್ಟರು.

Must visit places in Dakshina Kannada

ಕುದ್ರೋಳಿ ಗೋಕರ್ಣನಾಥ ದೇವಸ್ಥಾನ (Kudroli Gokarnanatheshwara Temple)

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಶಿವನಿಗೆ(Shiva) ಅರ್ಪಿಸಲಾಗಿದೆ . ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು(Narayana Guru)ನಿರ್ಮಿಸಿದ್ದಾರೆ. ಈ ದೇವಾಲಯವನ್ನು ಚೋಳ (Chola)ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಪ್ರವೇಶದ್ವಾರದಲ್ಲಿ ನಂದಿಯ(Nandi) ಬೃಹತ್ ಪ್ರತಿಮೆ ನಿಂತಿದೆ.

Must visit places in Dakshina Kannada

ನೀವು ಇದನ್ನೂ ಇಷ್ಟ ಪಡಬಹುದು:ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಕುದುರೆಗಳು ಎಳೆದ ರಥದ ಪ್ರತಿಮೆಯೂ ಇದೆ, ಇದು ಮಹಾಭಾರತದಿಂದ ಶ್ರೀಕೃಷ್ಣ(Shri Krishna)ಮತ್ತು ಅರ್ಜುನನ (Arjuna)ದೃಶ್ಯವನ್ನು ಅನೇಕ ಬಣ್ಣಗಳಲ್ಲಿ ಚಿತ್ರಿಸುತ್ತದೆ. ಈ ದೇವಾಲಯದಲ್ಲಿ ಆಚರಿಸುವ ಎರಡು ದೊಡ್ಡ ಹಬ್ಬಗಳು ನವರಾತ್ರಿ(Navaratri) ಮತ್ತು ಶಿವರಾತ್ರಿ(Shivaratri).

ದುರ್ಗಾ ಪರಮೇಶ್ವರಿ ದೇವಸ್ಥಾನ, ಕಟೀಲು (Durgaparameshwari Temple, Kateel)

ಕಟೀಲಿನಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನವು(Durga Parameshwari Temple) ನಂದಿನಿ ನದಿಯ(Nandini River) ದ್ವೀಪದಲ್ಲಿದೆ. ದುರ್ಗಾ ಪರಮೇಶ್ವರಿ ದೇವಿಗೆ ಅರ್ಪಿತವಾದ ಈ ದೇವಾಲಯವು ಉದ್ಭವ ಮೂರ್ತಿ ರೂಪದಲ್ಲಿದೆ. ದೇವಾಲಯದ ಸ್ತಂಭಗಳಲ್ಲಿ ಸುಂದರವಾದ ಶಿಲ್ಪಗಳಿವೆ.

Must visit places in Dakshina Kannada

ಧರ್ಮಸ್ಥಳ (Dharmasthala)

ಮಂಜುನಾಥ (Manjunatha Temple)ದೇವಾಲಯವು ಪ್ರಮುಖ ಶೈವರ (Shiva)ಕೇಂದ್ರವಾಗಿದ್ದು, ಇದು ಮಧ್ವ(Maduva) ವೈಷ್ಣವ(Vaishnava) ಪುರೋಹಿತರನ್ನು ಹೊಂದಿದೆ ಮತ್ತು ಇದನ್ನು ಜೈನ ಕುಟುಂಬವಾದ ಹೆಗ್ಗಡೆಯವರು(Heggade) ನಿರ್ವಹಿಸುತ್ತಾರೆ. ಜೈನ ಪ್ರಭಾವವನ್ನು ದೇವಾಲಯದ ಬಳಿಯ ಬೆಟ್ಟದ ಮೇಲಿರುವ 39 ಅಡಿ ಭಗವಾನ್ ವಿಗ್ರಹದಲ್ಲಿ ಕಾಣಬಹುದು.

Must visit places in Dakshina Kannada

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ(Kukke Subramanya Temple)

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ(Sullia )ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ (Shamuka )ನಾಗ(Naga) ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.

Must visit places in Dakshina Kannada

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button