ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಬೆಂಗಳೂರು ಗ್ರಾಮಾಂತರ(Bangalore Rural)ಜಿಲ್ಲೆಯ ಪ್ರವಾಸಿ ತಾಣಗಳು(Tourist Place)ಬೆಂಗಳೂರು ನಗರದಿಂದ(Bangalore City)60 ಕಿ.ಮೀ.ಗಿಂತ ಕಡಿಮೆ ದೂರದಲ್ಲೇ ಇದೆ. ಇಲ್ಲಿ ಪ್ರವಾಸಿತಾಣಗಳಿಗೆ ಬೆಂಗಳೂರು ನಗರದಿಂದ ಅನೇಕರು ಚಾರಣಕ್ಕೆ,(Trekking) ದೇವರ ದರ್ಶನಕ್ಕೆ ಬರುತ್ತಾರೆ. ಹಾಗಿದ್ರೆ ಈ ಜಿಲ್ಲೆಗಳಲ್ಲಿ ನೋಡಬಹುದಾದ ತಾಣಗಳ ಮಾಹಿತಿ ಇಲ್ಲಿದೆ.

ಟಿಪ್ಪುವಿನ ಜನ್ಮ ಸ್ಥಳ(Tipu Birth Place)

1750ರಲ್ಲಿ ಟಿಪ್ಪುಸುಲ್ತಾನ್ ದೇವನಹಳ್ಳಿಯಲ್ಲಿ(Tipu Sultan)ಜನಿಸಿದರು. ಟಿಪ್ಪುವಿನ ಜನ್ಮ ಸ್ಥಳವು ದೇವನಹಳ್ಳಿಯ ಕೋಟೆಗೆ (Devanahalli Fort)ಬಹಳ ಸಮೀಪದಲ್ಲಿ ಇದೆ. ಟಿಪ್ಪುಸುಲ್ತಾನ್ ಹಾಗೂ ಹೈದರಾಲಿ(Haider Ali) ಇಬ್ಬರೂ ವಾಸವಿದ್ದ ವಾಸಸ್ಥಳ ಇಂದಿಗೂ ದೇವನಹಳ್ಳಿಯಲ್ಲಿ ಇದೆ. ಟಿಪ್ಪುಸುಲ್ತಾನ್ ಮತ್ತು ಹೈದರಾಲಿ ರವರ ನ್ಯಾಯಾಲಯದಲ್ಲಿ ಉನ್ನತ ದರ್ಜೆಯ ಅಧಿಕೃತ ಅಧಿಕಾರಿಯಾಗಿದ್ದ ದಿವಾನ್ ಪೂರ್ಣಯ್ಯನವರ ಮನೆಯು ಕೋಟೆಯೊಳಗೊಡೆ ಇದೆ.

Must see tourist places in Bangalore Rural

ಶಿವಗಂಗೆ (Shivagange)

ಸಾಹಸ ಮತ್ತು ಭಕ್ತಿಯ ಕೇಂದ್ರ. ಸುಮಾರು 804.8 ಮೀಟರ್ ಅಥವಾ 2640.3 ಅಡಿ ಎತ್ತರವಿರುವ ಸುಂದರ ಪರ್ವತ ಶಿಖರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‍ಪೇಟೆಯಿಂದ (Dobbaspet)7 ಕಿ.ಮೀ ದೂರದಲ್ಲಿದೆ. ದೂರದಿಂದ ಬೆಟ್ಟವು ಶಿವಲಿಂಗದ ಆಕಾರದಲ್ಲಿ ಕಾಣುತ್ತದೆ. ಶಿವಲಿಂಗವು(Shivalinga) ಶಿವನ(Shiva) ಒಂದು ರೂಪವಾಗಿದೆ.

Must see tourist places in Bangalore Rural

ಬೆಟ್ಟದ ಮೇಲಿರು ಅನೇಕ ಜಲತಾಣಗಳನ್ನು ಪವಿತ್ರ ಗಂಗಾನದಿ (Ganga)ಎಂದು ನಂಬುತ್ತಾರೆ ಇದರ ಪರಿಣಾಮವಾಗಿ, ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ. ನಂದಿ ಕಲ್ಲಿನ ಕೆತ್ತನೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಈ ಸ್ಥಳವನ್ನು ದಕ್ಷಿಣ ಕಾಶಿ ಅಥವಾ ದಕ್ಷಿಣ ಭಾರತದ ಕಾಶಿ ಎಂದು ಕರೆಯಲ್ಪಡುತ್ತದೆ.

ಘಾಟಿ ಸುಬ್ರಮಣ್ಯ(Ghati Subramanya)

.ಘಾಟಿ ಸುಬ್ರಮಣ್ಯ ಪುರಾತನ ಹಿಂದೂ ದೇವಾಲಯವಾಗಿದ್ದು, ಈ ದೇವಾಲಯವು ದೊಡ್ಡಬಳ್ಳಾಪುರ (Doddaballapur)ತಾಲ್ಲೂಕಿನ ತೂಬಗೆರೆಯ (Tubagere)ಬಳಿ ಇದೆ. ಇದು ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ ಸುಬ್ರಮಣ್ಯನು(Subramanya)ನರಸಿಂಹನೊಂದಿಗೆ(Narasimha) ಕಂಡುಬರುವುದು ವಿಶೇಷ.

Must see tourist places in Bangalore Rural

ಪುರಾಣದ ಪ್ರಕಾರ ಎರಡು ವಿಗ್ರಹಗಳು ಭೂಮಿಯಿಂದ ಹೊರಹೊಮ್ಮಿದೆ ಎಂದು ನಂಬಲಾಗಿದೆ. ದಕ್ಷಿಣ ಭಾರತದಲ್ಲಿ ನಾಗ ಪೂಜೆಗೆ(Naga Pooja) ಈ ದೇವಾಲಯವು ಪ್ರಮುಖ ಕೇಂದ್ರವಾಗಿದೆ. ಬ್ರಹ್ಮ ರಥೋತ್ಸವವು ಇಲ್ಲಿನ ಮತ್ತೊಂದು ಪ್ರಮುಖ ಉತ್ಸವವಾಗಿದೆ. ಘಾಟಿ ಸುಬ್ರಮಣ್ಯ 600 ವರ್ಷಗಳಿಗೂ ಹೆಚ್ಚು ಕಾಲ ಇತಿಹಾಸವನ್ನು ಹೊಂದಿದೆ.

ನೀವು ಇದನ್ನು ಇಷ್ಟ ಪಡಬಹುದು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ದೇವನಹಳ್ಳಿ ಕೋಟೆ (Devanahalli Fort)

ದೇವನಹಳ್ಳಿ ಕೋಟೆಯನ್ನು 1501ರಲ್ಲಿ ಮಲ್ಲಭೈರ ಗೌಡ ನಿರ್ಮಿಸಿದ(Mallabhaira gowda)). ದೇವನಹಳ್ಳಿ ಕೋಟೆಯನ್ನು ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಕ್ರಮಿಸಿಕೊಂಡರು. ಕೋಟೆ ವಠಾರದಲ್ಲಿ ದೊಡ್ಡ ಗೋಡೆಗಳು, ಬುರುಜುಗಳು ಮತ್ತು ಟಿಪ್ಪು ಸುಲ್ತಾನರ ಸ್ಮಾರಕವಿದೆ.

Must see tourist places in Bangalore Rural

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport)

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು (ಕೆಐಎಬಿ) ಕರ್ನಾಟಕದ ಹೆಬ್ಬಾಗಿಲು. ದೆಹಲಿ(Delhi)ಮತ್ತು ಮುಂಬೈ (Mumbai)ನಂತರ ಬೆಂಗಳೂರಿನ ವಿಮಾನ ನಿಲ್ದಾಣ ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಮತ್ತು ಅಂತರರಾಷ್ಟ್ರೀಯ ತಾಣಗಳಿಗೆ ನೇರ ವಿಮಾನಯಾನ ಹೊಂದಿದೆ. 37 ವಿವಿಧ ವಿಮಾನಯಾನ ಸಂಸ್ಥೆಗಳು ವಿಮಾನಯಾನ ಸೇವೆಗಳನ್ನು ನಿರ್ವಹಿಸುತ್ತವೆ.

Must see tourist places in Bangalore Rural

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button