ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ಬೆಂಗಳೂರಿನಿಂದ(Bangalore)ಚಿಕ್ಕಬಳ್ಳಾಪುರ (Chikkaballapur)ಕೇವಲ 62 ಕಿ.ಮೀ ದೂರದಲ್ಲಿದೆ. ಮುಂಚೆ ಕೋಲಾರ (Kolar)ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು 23 ಆಗಸ್ಟ್(August)2007 ರಂದು ಅಸ್ತಿತ್ವಕ್ಕೆ ಬಂದಿತು. ಈ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು.

ನಂದಿ ಬೆಟ್ಟ (Nandi Hills)

ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ (North)ನಂದಿಬೆಟ್ಟವಿದೆ. ಈ ಬೆಟ್ಟವನ್ನು ಹಿಂದೆ ನಂದಿದುರ್ಗ (Nandi Durga)ಎಂದು ಕರೆಯುತ್ತಿದ್ದರು. ನಂದಿಬೆಟ್ಟವು ಸಮುದ್ರ ಮಟ್ಟದಿಂದ 1478 ಮೀ ಮೇಲೆ ಮೇಲಿದೆ. ಈ ಗಿರಿಧಾಮದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ (Tipu Sultan Summer Palace)ಇದ್ದು, ಅವನು ಮತ್ತು ಅವನ ತಂದೆ ಹೈದರ್ ಅಲಿ(Haider Ali)ಇಲ್ಲಿ ಅವಳಿ ಕೋಟೆಗಳು ನಿರ್ಮಿಸಿರುತ್ತಾರೆ.

ಈ ಪ್ರದೇಶದ ಹಿತಕರ ವಾತಾವರಣದಿಂದ ಆಕರ್ಷಿತರಾಗಿದ್ದ ಬ್ರಿಟಿಷ್ (British) ಅಧಿಕಾರಿಗಳು ಇಲ್ಲಿ ವಿಶಾಲವಾದ ಬಂಗಲೆಗಳು, ಉದ್ಯಾನವನಗಳನ್ನು ನಿರ್ಮಿಸಿದ್ದಾರೆ.

ಟಿಪ್ಪುಡ್ರಾಪ್ (Tippu Drop)

ನಂದಿ ಬೆಟ್ಟದ ನೈಋತ್ಯ ಭಾಗದಲ್ಲಿರುವ ಒಂದು ಕಡಿದಾದ ಆಳವಾದ ಸ್ಥಳವನ್ನು ಟಿಪ್ಪು ಡ್ರಾಪ್ ಎಂದು ಹೆಸರಿಸಲಾಗಿದೆ. ಟಿಪ್ಪುವಿನ ಆಳ್ವಿಕೆಯಲ್ಲಿ ಮರಣ ದಂಡನೆಗೂಳಗಾದ ಖೈದಿಗಳನ್ನು(Prisoner)ಈ ಜಾಗದಿಂದ ತಳ್ಳಿ ಸಾಯಿಸುತ್ತಿದ್ದರು. ಅಂದಿನ ಕೈದಿ ಅಪರಾಧಿಗಳನ್ನು ನಂದಿಗಿರಿಧಾಮಕ್ಕೆ ತಂದು ದುರ್ಗಮ ಬಂಡೆಯಲ್ಲಿ ತಳ್ಳಿ ಕೊಲ್ಲಲಾಗುತ್ತಿತ್ತು. ಇದ್ರಿಂದ ಈ ಸ್ಥಳಕ್ಕೆ ಟಿಪ್ಪು ಡ್ರಾಪ್ ಎಂದು ಹೆಸರು ಬಂದಿದೆ.

ವಿವೇಕಾನಂದ ಜಲಪಾತ (Vivekananda Falls)

ಚಿಕ್ಕಬಳ್ಳಾಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ವಿವೇಕಾನಂದ ಜಲಪಾತ ಮಳೆಗಾಲದಲ್ಲಿ(Rainy Season) ಮೈದುಂಬಿಕೊಂಡು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಲಪಾತದಿಂದ 1 ಕಿ.ಮೀ ದೂರದಲ್ಲಿ ನಡೆದುಕೊಂಡು ಹೋಗಬೇಕು. ಒಳಗೆ ವಾಹನಗಳನ್ನು ತೆಗೆದುಕೊಂಡು ಹೋಗಲು ಅಸಾಧ್ಯವಾಗಿದೆ.

ನೀವು ಇದನ್ನು ಇಷ್ಟ ಪಡಬಹುದು:ಕಲ್ಪತರ ನಾಡಿನಲ್ಲಿ ಕಣ್ಮನ ಸೆಳೆಯುವ ತಾಣಗಳು

ಭೋಗ ನಂದೀಶ್ವರ ದೇವಾಲಯ (Bhoga Nandishwara Temple)

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಲ್ಲಿ ಇರುವ ಅತ್ಯಂತ ಪುರಾತನ ದೇವಾಲಯ. ಭಾರತದ ಪುರಾತತ್ತ್ವ ಇಲಾಖೆಯ ಪ್ರಕಾರ ಹಳೆಯ ಶಾಸನಗಳಲ್ಲಿ ಈ ಶಿವ ದೇವಾಲಯದ (Shiva Temple)ನಿರ್ಮಾಣದ ಉಲ್ಲೇಖವು ದೊರೆ ನೊಳಂಬಾಧಿರಾಜ(Nolamba King) ಮತ್ತು ರಾಷ್ಟ್ರಕೂಟ(Rashtrakuta) ದೊರೆ ಮೂರನೇ ಗೋವಿಂದನ (Govinda)ಕ್ರಿ.ಶ. 806 ರ ಶಾಸನಗಳಲ್ಲಿ, ಮತ್ತು ಸುಮಾರು ಕ್ರಿ.ಶ. 810ರ ಬಾಣ(Bana) ರಾಜವಂಶದ ಜಯತೇಜ (Jayateja)ಮತ್ತು ದತ್ತಿಯನ ತಾಮ್ರದ ಫಲಕಗಳಲ್ಲಿ ಇದೆ. ಈ ದೇವಾಲಯವು ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ.

ರಂಗನಾಥಸ್ವಾಮಿ ದೇವಸ್ಥಾನ (Ranganatha Swami Temple)

ಇದು 9ನೇ ಶತಮಾನದಷ್ಟು ಪುರಾತನ ದೇಗುಲ. ದಕ್ಷಿಣ ಭಾರತದ(South India)ಮೂರು ಪ್ರಮುಖ ರಂಗನಾಥ ಸ್ವಾಮಿ ದೇಗುಲಗಳ ಪೈಕಿ ಇದೂ ಒಂದು. ಮಕರ ಸಂಕ್ರಾಂತಿಯ(Makara Sankranti)ದಿನ ಇಲ್ಲಿ ದೇವರ ಪಾದಗಳಿಗೆ ನೇರವಾಗಿ ಸೂರ್ಯಕಿರಣ ಬೀಳುವುದು ವಿಶೇಷ

ಇಶಾ ಫೌಂಡೇಶನ್ (Isha Foundation)
ತಮಿಳುನಾಡಿನ(Tamil Nadu)ಕೊಯಮತ್ತೂರಿನಲ್ಲಿರುವಂತೆ(Coimbatore)ಶಿವನ ಪ್ರತಿಮೆಯನ್ನು ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ(Koranahalli Lingashetti)ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಆಗಿದೆ. ಶಿವರಾತ್ರಿ ,ರಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. 112 ಅಡಿ ಎತ್ತರದ ಶಿವನ ಮೂರ್ತಿ ಇಲ್ಲಿದೆ.

Isha Foundation

ಮುದ್ದೇನಹಳ್ಳಿ (Muddenahalli)

ಇಂಜಿನೀಯರ್, ರಾಜನೀತಿ ಮುತ್ಸದ್ದಿ ಮತ್ತು ಆಧುನಿಕ ಕರ್ನಾಟಕ ರಾಜ್ಯದ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯನವರ (Sir.M.Vishwesharaya) ಜನ್ಮಸ್ಥಳ. ಇವರ ಮನೆಯನ್ನು ವಸ್ತುಸಂಗ್ರಾಹಲಯವನ್ನಾಗಿ ರೂಪಿಸಿದ್ದು, ಪ್ರವಾಸಿಗರು ಭೇಟಿ ನೀಡಬಹುದು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.Related Articles

Leave a Reply

Your email address will not be published. Required fields are marked *

Back to top button