ವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಹವಾಮಾನದ ಪರಿಣಾಮ; ಹಿಮನದಿ ಕಳೆದುಕೊಂಡ ವೆನೆಜುವೆಲಾ

ವೆನೆಜುವೆಲಾ(Venezuela)  ದಕ್ಷಿಣ ಅಮೆರಿಕ (South America) ಉತ್ತರ ಭಾಗದಲ್ಲಿರುವ ಕೆರಿಬ್ಬಿಯನ್ ಸಮುದ್ರದ ಕರಾವಳಿ(Caribbean Coastal Sea) ದೇಶ. ಇದರ ದಕ್ಷಿಣಕ್ಕೆ ಬ್ರೆಜಿಲ್(Brazil), ಪೂರ್ವಕ್ಕೆ ಗಯಾನ(Guyana), ಮತ್ತು ಪಶ್ಚಿಮಕ್ಕೆ ಕೊಲಂಬಿಯಾ(Colombia)ದೇಶಗಳಿವೆ. ಒಂದು ಕಾಲದಲ್ಲಿ ಹಿಮ ನದಿಗಳಿಂದ ಕಂಗೊಳಿಸುತ್ತಿದ್ದ ಈ ದೇಶ ಸದ್ಯ ಪ್ರಾಕೃತಿಕ ವಿಪತ್ತಿನಲ್ಲಿದೆ. ಏಕೈಕ ಹಿಮನದಿ ಕೂಡ ಕಣ್ಮರೆಯ ಅಂಚಿನಲ್ಲಿದೆ.

ವೆನೆಜುವೆಲಾ ಹವಾಮಾನ(Environment )ಬದಲಾವಣೆಯ ವಿರುದ್ಧದ ಯುದ್ಧದಲ್ಲಿ ಕಠೋರ ಮೈಲಿಗಲ್ಲನ್ನು ತಲುಪಿದೆ. ಅದರ ಕೊನೆಯ ಹಿಮನದಿಯ(Glaciers)ಕಣ್ಮರೆಯಾಗುತ್ತಿದೆ, ಅದರ ಎಲ್ಲಾ ಐಸ್ ರಚನೆಗಳ ಸಂಪೂರ್ಣ ಕರಗುವಿಕೆಗೆ ಸಾಕ್ಷಿಯಾದ ಮೊದಲ ರಾಷ್ಟ್ರವಾಗಿದೆ. 1910 ರಲ್ಲಿ, ವೆನೆಜುವೆಲಾ ಆರು ಹಿಮನದಿಗಳಿಗೆ ನೆಲೆಯಾಗಿ ಕಾರ್ಯನಿರ್ವಹಿಸಿತು, ಇದು ಪ್ರಭಾವಶಾಲಿ 1,000 ಚದರ ಕಿಲೋಮೀಟರ್ಗಳನ್ನು ಒಳಗೊಂಡಿದೆ. ಆದರೆ ಇದೀಗ ಹೆಪ್ಪುಗಟ್ಟಿ ಕಣ್ಮರೆಯಾಗಿದೆ.

Venezuela becomes first country to lose all of its glaciers

ವೆನೆಜುವೆಲಾ (Venezuela) ಅಪಾಯ ಮಟ್ಟಕ್ಕೆ ಬಂದು ನಿಂತಿದೆ. 2011 ರಲ್ಲೇ 5 ಹಿಮನದಿಗಳನ್ನು (Glaciers) ಕಳೆದುಕೊಂಡಿದ್ದ ವೆನೆಜುವೆಲಾಗೆ ಇದೀಗ ಉಳಿದಿರುವ ಏಕೈಕ ಹಿಮನದಿಯೂ ಕೊನೆಯ ಹಂತಕ್ಕೆ ಬಂದಿದ್ದು, ಕಣ್ಮುಂದೆಯೇ ಕರಗಿ ಹೋಗುತ್ತಿದೆ. ಹೀಗಾಗಿ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡು ಜಗತ್ತಿನ ಮೊದಲ ದೇಶ ಎಂಬ ಅಪಕೀರ್ತಿಗೆ ವೆನೆಜುವೆಲಾ (Venezuela Glaciers) ಪಾತ್ರವಾಗುತ್ತಿದೆ.

ಹವಾಮಾನ ಬದಲಾವಣೆಯ (Climate Change) ಪರಿಣಾಮವಾಗಿ ಈ ದೇಶದ ಕೊನೆಯ ಹಿಮನದಿಯೂ ಅಳಿವಿನಂಚಿಗೆ ಬಂದಿದೆ. ಲಾ ಕರೋನಾ ಎಂದು (La Corona Glacier) ಕರೆಯಲಾಗುವ ಹಂಬೋಲ್ಡ್ ಹಿಮನದಿ (Humboldt Glacier) ಉಳಿವಿಗಾಗಿ ಹೋರಾಡುವ ಸ್ಥಿತಿಗೆ ಬಂದಿದೆ. ಹೆಪ್ಪುಗಟ್ಟಿರುವ ಹಿಮಗಡ್ಡೆಗಳು ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿವೆ. ಇದನ್ನು ಐಸ್ ಕ್ಷೇತ್ರ ಅಂತ ಮರು ವ್ಯಾಖ್ಯಾನ ಮಾಡಲಾಗುತ್ತಿದೆ.

ಕಣ್ಮರೆಯಾಗುವ ಸ್ಥಿತಿಗೆ ತಲುಪಿರುವ ಲಾ ಕರೋನಾ (La Corona Glacier)ಹಿಮನದಿ 4.5 ಚದರ ಕಿಲೋಮೀಟರ್ (1.7 ಚದರ ಮೈಲುಗಳು) ವರೆಗೆ ಹರಡಿತ್ತು. ಆದರೆ ಈಗ 0.02 ಚದರ ಕಿಲೋ ಮೀಟರ್ (2 ಹೆಕ್ಟೇರ್‌) ಗಿಂತ ಕಡಿಮೆಯಾಗಿದೆ. ಇದು ಒಂದು ಹಿಮನದಿಯ ಕನಿಷ್ಠ ಗಾತ್ರದ ಅವಶ್ಯಕತೆಗಿಂತ ಕಡಿಮೆಯಾಗಿದೆ.

Venezuela becomes first country to lose all of its glaciers

“ವೆನೆಜುವೆಲಾದಲ್ಲಿ (Venezuela), ಹಿಮನದಿಗಳು ಅಸ್ತಿತ್ವದಲ್ಲಿಲ್ಲ” ಎಂದು ಆಂಡಿಸ್ ವಿಶ್ವವಿದ್ಯಾಲಯದ (ULA) ಪ್ರೊಫೆಸರ್ ಜೂಲಿಯೊ ಸೀಸರ್ ಸೆಂಟೆನೊ(Professor Julio Cesar Centeno) ಹೇಳಿದ್ದಾರೆ. ಅದರ ಮೂಲ ಗಾತ್ರದ ಕೇವಲ 0.4 ಪ್ರತಿಶತ ಮಾತ್ರ ಉಳಿದಿದೆ ಎಂದು ಅವರು ವಿಷಾದಿಸಿದರು.

ಕಳೆದ 5 ವರ್ಷಗಳಲ್ಲಿ ನಡೆಸಿರುವ ಸಂಶೋಧನೆಯ ಪ್ರಕಾರ, ವೆನೆಜುವೆಲಾದಲ್ಲಿ 1953 ರಿಂದ 2019ರ ವರೆಗೆ ಶೇಕಡಾ 98 ರಷ್ಟು ಹಿಮನದಿಯ ಕುಸಿತವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. 1998ರ ನಂತರ ಐಸ್ ಕರಗುವಿಕೆ (Ice Meiting) ವೇಗವನ್ನು ಪಡೆದುಕೊಂಡಿದೆ. 2016 ರಿಂದ ವರ್ಷಕ್ಕೆ 17 ರಷ್ಟು ಗರಿಷ್ಠ ಮಟ್ಟದಲ್ಲಿ ಕುಸಿತವಾಗಿದೆ. ವೆನೆಜುವೆಲಾ (Venezuela) ಅಪಾಯ ಮಟ್ಟಕ್ಕೆ (Danger level) ಬಂದು ನಿಂತಿದೆ.

2011 ರಲ್ಲೇ 5 ಹಿಮನದಿಗಳನ್ನು (Glaciers) ಕಳೆದುಕೊಂಡಿದ್ದ ವೆನೆಜುವೆಲಾಗೆ ಇದೀಗ ಉಳಿದಿರುವ ಏಕೈಕ ಹಿಮನದಿಯೂ ಕೊನೆಯ ಹಂತಕ್ಕೆ ಬಂದಿದ್ದು, ಕಣ್ಮುಂದೆಯೇ ಕರಗಿ ಹೋಗುತ್ತಿದೆ. ಹೀಗಾಗಿ ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡು ಜಗತ್ತಿನ ಮೊದಲ ದೇಶ ಎಂಬ ಅಪಕೀರ್ತಿಗೆ ವೆನೆಜುವೆಲಾ (Venezuela Glaciers) ಪಾತ್ರವಾಗುತ್ತಿದೆ.

Venezuela becomes first country to lose all of its glaciers

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button