ಭಾರತಕ್ಕೂ ಬಂತು ಗೂಗಲ್ ವ್ಯಾಲೆಟ್
ಗೂಗಲ್(Google)ಈ ಡಿಜಿಟಲ್ ವ್ಯಾಲೆಟ್ (Digital Wallet)ಅಪ್ಲಿಕೇಶನ್ ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ(America) ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇದೀಗ ಭಾರತಕ್ಕೂ(India)ಕಾಲಿಟ್ಟಿದೆ.
ಪ್ರೈವೇಟ್ ಡಿಜಿಟಲ್ ವ್ಯಾಲೆಟ್( Private digital wallet)ಆಗಿದ್ದು ಬಳಕೆದಾರರು ತಮ್ಮ ಎಲ್ಲ ಅಗತ್ಯಗಳನ್ನು ಒಂದೇ ಸ್ಥಳದಲ್ಲಿ ಸುಲಭವಾಗಿ ಪಡೆಯಲು ಅನುಮತಿಸುತ್ತದೆ. ಈ ಕುರಿತಾದ ವಿವರ ಇಲ್ಲಿದೆ.
ಅಪ್ಲಿಕೇಶನ್(Application)ಅನ್ನು ಎಲ್ಲಾ (Android) ಬಳಕೆದಾರರಿಗೆ (Google Play Store) ಮೂಲಕ ಡೌನ್ ಲೋಡ್(Download)ಮಾಡಿಕೊಳ್ಳಬಹುದಾಗಿದೆ ಈ ಮೂಲಕ ಗೂಗಲ್ ವ್ಯಾಲೆಟ್ ನ ಲಾಭಗಳನ್ನು ಮತ್ತು ವೈಶಿಷ್ಟ್ಯಗಳನ್ನು ಅನುಭವಿಸಬಹುದಾಗಿದೆ.
ಬುಧವಾರದಿಂದಲೇ ಈ ಡಿಜಿಟಲ್ ಅಪ್ಲಿಕೇಶನ್ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದೆ, ಆದರೆ ಗೂಗಲ್ ಪೇಗೂ(Google Pay) ಇದಕ್ಕೂ ನಂಟಿಲ್ಲ. ಗೂಗಲ್ ಪೇ ಪೇಮೆಂಟ್ ಆ್ಯಪ್ ಆದರೆ, ವ್ಯಾಲೆಟ್ ನಾನ್ ಪೇಎಂಟ್(Non Payment)ಬಳಕೆದಾರರಿಗೆ.
ಈ ತಂತ್ರಜ್ಞಾನವನ್ನು ಭದ್ರತೆ(Security )ಮತ್ತು ಗೌಪ್ಯತೆ(Privacy)ತಳಹದಿಯ ಮೇಲೆ ಪ್ರಾರಂಭಿಸಲಾಗಿದೆ. ಇದು ಗ್ರಾಹಕರಿಗೆ ಸುರತಕ್ಷತೆ,ಮುಕ್ತತೆ ಮತ್ತು ಗೌಪ್ಯತೆನ್ನು ಒದಗಿಸುತ್ತದೆ’ ಎಂದು ಕಂಪನಿ ಹೇಳಿದೆ.
ಆದಾಗ್ಯೂ, ವ್ಯಾಲೆಟ್ ಜಾಗತಿಕವಾಗಿ ಕ್ರೆಡಿಟ್ (Credit)ಮತ್ತು ಡೆಬಿಟ್(Debit)ಕಾರ್ಡ್‌ಗಳನ್ನು ಬೆಂಬಲಿಸುತ್ತದೆ, ಅದರ ಭಾರತದ ಆವೃತ್ತಿಯು ಅವುಗಳನ್ನು ಬೆಂಬಲಿಸುವುದಿಲ್ಲ.
ಬಳಕೆದಾರರಿಗೆ Google Play Store ಮೂಲಕ ಡೌನ್ ಲೋಡ್(Download)ಮಾಡಿಕೊಳ್ಳಬಹುದಾಗಿದೆ ಈ ಮೂಲಕ ಗೂಗಲ್ ವ್ಯಾಲೆಟ್ ನ ಲಾಭಗಳನ್ನು ಮತ್ತು ವೈಶಿಷ್ಟ್ಯಗಳನ್ನು ಅನುಭವಿಸಬಹುದಾಗಿದೆ.
ಭಾರತದಲ್ಲಿ ಈಗ ಇಂಡಿಗೋ(Indigo), ಏರ್ ಇಂಡಿಯಾ,(Air India)ಫ್ಲಿಪ್‌ಕಾರ್ಟ್(Flipkart), ಪಿವಿಆರ್(PVR), ಐನಾಕ್ಸ್(Inox), ಕೊಚ್ಚಿ ಮೆಟ್ರೋ (Kochi Metro)ಸೇರಿ 20 ಬ್ರಾಂಡ್‌ಗಳ ಜತೆ ಇದು ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಈ ಗೂಗಲ್ ವ್ಯಾಲೆಟ್ ಒಟ್ಟು 80 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೂಗಲ್ (Google)ಶೀಘ್ರದಲ್ಲೇ ಭವಿಷ್ಯದಲ್ಲಿ ಪಾವತಿ ಮತ್ತು ಪಾವತಿ ರಹಿತ ವ್ಯವಸ್ಥೆಯನ್ನು ಎರಡನ್ನೂ ಒಂದೇ ಆ್ಯಪ್ನಲ್ಲಿ ತರುವ ಪ್ರಯತ್ನ ಮಾಡಲಿದೆ.
ಗೂಗಲ್ ವಾಲೆಟ್ ಅನ್ನು ರಕ್ಷಣೆ ಮತ್ತು ಖಾಸಗಿತನ ಅಧಾರದ ಮೇಲೆ ಅಭಿವೃದ್ಧಿ ಮಾಡಲಾಗಿದೆ. ಇದು ಬಳಕೆದಾರರಿಗೆ ಮುಕ್ತ, ಆಯ್ಕೆ ಮತ್ತು ಸುರಕ್ಷತೆ ಭರವಸೆ ನೀಡಲಿದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಪರಿಚಯಿಸಿರುವ ಈ ವ್ಯಾಲೆಟ್‌ನಿಂದ ಬೋರ್ಡಿಂಗ್ ಪಾಸ್(Boarding Pass), ಲಾಯಲ್ಟಿ ಕಾರ್ಡ್,(Loyalty Card)ಕಾರ್ಯಕ್ರಮಗಳ ಟಿಕೆಟ್(Event Ticket )
ಸಾರ್ವಜನಿಕ ಸಾರಿಗೆ ಪಾಸ್‌ಗಳು(Public Transport Pass)ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ. ಜೊತೆಗೆ ಗ್ರಾಹಕರ ದಾಖಲೆಗಳು ಕೂಡ ಭದ್ರವಾಗಿರಲಿದೆ.
ನೀವು ಇದನ್ನು ಇಷ್ಟ ಪಡಬಹುದು:ಡಿಜಿ ಯಾತ್ರಾ ಅಪ್ಲಿಕೇಶನ್ ಬಳಕೆಯಲ್ಲಿ ದೆಹಲಿ, ಬೆಂಗಳೂರು ನಂ.1
Google Pay ನಿಂದ Google Wallet ಹೇಗೆ ಭಿನ್ನವಾಗಿದೆ?
Google Wallet ವೆಬ್‌ಸೈಟ್‌ನಲ್ಲಿನ FAQ ಪ್ರಕಾರ, Google Wallet ಎಂಬುದು ‘ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್’ ಆಗಿದ್ದು, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳುವ ಪಾವತಿ ಕಾರ್ಡ್‌ಗಳು, ಪಾಸ್‌ಗಳು, ಟಿಕೆಟ್‌ಗಳು, ಕೀಗಳು ಅಥವಾ ID ಗಳಿಗೆ ತ್ವರಿತ ಪ್ರವೇಶವನ್ನು ಅನುಮತಿಸುತ್ತದೆ.
ಭಾರತದಲ್ಲಿ Google Wallet ಅನ್ನು ಹೇಗೆ ಬಳಸುವುದು?
ಗೂಗಲ್ ವಾಲೆಟ್ ಅಪ್ಲಿಕೇಶನ್ ಭಾರತದಲ್ಲಿನ ಎಲ್ಲಾ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ (SmartPhone)ಮೊದಲೇ ಸ್ಥಾಪಿಸಲ್ಪಡುತ್ತದೆ.
ಪಿಕ್ಸೆಲ್ ಅಲ್ಲದ ಬಳಕೆದಾರರು ಡಿಜಿಟಲ್ ವ್ಯಾಲೆಟ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ತಮ್ಮ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಅದನ್ನು ಬಳಸಲು ಪ್ಲೇ ಸ್ಟೋರ್‌ಗೆ ಹೋಗಬಹುದು.
ಆದಾಗ್ಯೂ, ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು ಗೂಗಲ್ ವಾಲೆಟ್ ಅಪ್ಲಿಕೇಶನ್ ಧರಿಸಬಹುದಾದ ವಸ್ತುಗಳಿಗೆ ಬರುವುದಿಲ್ಲ ಎಂದು ಹೇಳಿದೆ.
Google Wallet ನ ಇತಿಹಾಸ:
Google Pay ಅನ್ನು ರಚಿಸಲು 2018 ರಲ್ಲಿ Android Pay ಅಪ್ಲಿಕೇಶನ್‌ನೊಂದಿಗೆ ವಿಲೀನಗೊಳ್ಳುವ ಮೊದಲು Google Wallet ಅಪ್ಲಿಕೇಶನ್ ಅನ್ನು ಮೊದಲು 2011 ರಲ್ಲಿ ಪ್ರಾರಂಭಿಸಲಾಯಿತು.
ಆದಾಗ್ಯೂ, Google Tez ಎಂಬ UPI ಪಾವತಿಗಳಿಗಾಗಿ Google ಪ್ರತ್ಯೇಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು, ಅದನ್ನು ನಂತರ Google Pay ಎಂದು ಮರುನಾಮಕರಣ ಮಾಡಲಾಯಿತು.
ಮೂಲಭೂತವಾಗಿ, ಇದರರ್ಥ ಎರಡು Google Pay ಅಪ್ಲಿಕೇಶನ್‌ಗಳಿವೆ, ಒಂದು ಭಾರತಕ್ಕೆ ಮತ್ತು ಇನ್ನೊಂದು ಪ್ರಪಂಚದ ಉಳಿದ ಭಾಗಗಳಿಗೆ. ಆದಾಗ್ಯೂ, 2022 ರಲ್ಲಿ, ಗೂಗಲ್ ತನ್ನ ಜಾಗತಿಕ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಗೂಗಲ್ ವಾಲೆಟ್ ಎಂದು ಮರುನಾಮಕರಣ ಮಾಡಿದೆ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.