ಡಿಜಿ ಯಾತ್ರಾ ಅಪ್ಲಿಕೇಶನ್ ಬಳಕೆಯಲ್ಲಿ ದೆಹಲಿ, ಬೆಂಗಳೂರು ನಂ.1
2022ರ ಡಿಸೆಂಬರ್‌ನಲ್ಲಿ(December )ಪ್ರಾರಂಭ ಮಾಡಲಾಗಿದ್ದ ಡಿಜಿ ಯಾತ್ರಾ(Digi Yatra)ಅಪ್ಲಿಕೇಶನ್ ಅನ್ನು ಬೆಂಗಳೂರು(Bengaluru) ಮತ್ತು ದೆಹಲಿಯ(Delhi) ಪ್ರಯಾಣಿಕರು ಅಭೂತಪೂರ್ವವಾಗಿ ಅಳವಡಿಸಿಕೊಂಡಿದ್ದಾರೆ. ಇದರ ಮೂಲಕ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.
ಬೆಂಗಳೂರು ಮತ್ತು ದೆಹಲಿ ಪ್ರಯಾಣಿಕರು ಡಿಜಿ-ಯಾತ್ರಾ ಅಪ್ಲಿಕೇಶನ್‌ನ ಲಾಭವನ್ನು ಬಳಸಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಗಮನಾರ್ಹ ಸಂಖ್ಯೆಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಸುಗಮಗೊಳಿಸಿದ್ದಾರೆ.
ಡಿಸೆಂಬರ್ 2022 ರಲ್ಲಿ ಪರಿಚಯಿಸಲಾದ ಈ ನವೀನ ಫೇಸ್-ಸ್ಕ್ಯಾನ್ (Face Scan) ಬಯೋಮೆಟ್ರಿಕ್ (Biometric) ತಂತ್ರಜ್ಞಾನವನ್ನು ಈಗಾಗಲೇ ಈ ಎರಡು ನಗರದ ಜನ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ.
ಅಷ್ಟಕ್ಕೂ ಈ ಡಿಜಿ ಯಾತ್ರಾ ಏನು ಅನ್ನೋದನ್ನು ನೋಡುವುದಾದರೆ
ಡಿಜಿ ಯಾತ್ರಾ (DigiYatra)ಅಪ್ಲಿಕೇಶನ್ ಆಂಡ್ರಾಯ್ಡ್ ಮೊಬೈಲ್‌ಗಳಿಗೆ ಲಭ್ಯವಿದ್ದು, ವಿಮಾನ ಪ್ರಯಾಣಿಕರು ತಮ್ಮ ಮಾಹಿತಿಗಳನ್ನು ಆಧಾರ್ ಮೂಲಕ ಅಪ್ ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು.
ಆಗ ಡಿಜಿ ಯಾತ್ರಾ ಐಡಿ ಸಿಗಲಿದ್ದು, ಇದನ್ನು ಬಳಸಿಕೊಂಡು ಏರ್‌ಪೋರ್ಟ್‌ಗಳಲ್ಲಿ ಇ-ಎಂಟ್ರಿ ಪಡೆಯಬಹುದಾಗಿದೆ. ಡಿಜಿ ಯಾತ್ರಾದಲ್ಲಿ ಪ್ರಯಾಣಿಕರ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಮೂಲಕ ಪ್ರಯಾಣಿಕರೇ ಸ್ವತಃ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿಕೊಂಡು, ಫೇಸ್ ರೆಕಗ್ನೈಸೇಶನ್ ಸಿಸ್ಟಂ(ಎಫ್‌ಆರ್‌ಎಸ್) ಮೂಲಕ ನೇರ ಪ್ರವೇಶ ಪಡೆಯಬಹುದು
ಏನಿದು ಡಿಜಿ ಯಾತ್ರಾ?
ವಿಮಾನ ನಿಲ್ದಾಣಗಳಲ್ಲಿ ಯಾರ ಸಂಪರ್ಕವೂ ಇಲ್ಲದೇ ದಾಖಲೆಗಳ ಪರಿಶೀಲನೆಗಳ ಪ್ರಕ್ರಿಯೆಗಳನ್ನು ಸ್ವಯಂ ಆಗಿ ಮಾಡಿಕೊಳ್ಳುವುದನ್ನು ರೂಪಿಸಿರುವ ಅಪ್ಲಿಕೇಶನ್‌ಗೆ ಡಿಜಿ ಯಾತ್ರಾ ಎಂದು ಕರೆಯಲಾಗುತ್ತಿದೆ.
ಕಾರ‍್ಯ ನಿರ್ವಹಣೆ ಹೇಗೆ?
ವೈಯಕ್ತಿಕವಾಗಿ ಡಿಜಿಟಲ್ (Digital) ಸೌಲಭ್ಯಗಳ ಮೂಲಕ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಇಲ್ಲಿ ಯಾವ ಕಾಗದಪತ್ರಗಳ ವಿನಿಮಯವೂ ಇರುವುದಿಲ್ಲ.
ಎಲ್ಲವೂ ಆ್ಯಪ್ ಮೂಲಕ ನಡೆಯುತ್ತದೆ. ಜತೆಗೆ, ಫೇಸ್ ರೆಕಗ್ನೈಸೇಶನ್ ಸಿಸ್ಟಂ(ಎಫ್‌ಆರ್‌ಎಸ್) ಮೂಲಕದ ದಾಖಲೆ ಪರಿಶೀಲನೆಯ ಸೌಕರ್ಯವೂ ಇರಲಿದೆ.
ಪ್ರವೇಶ:
ಏರ್‌ಪೋರ್ಟ್‌ನಲ್ಲಿ’ಡಿಜಿ ಯಾತ್ರಾ’ದಲ್ಲಿ ನೋಂದಣಿ ಪಡೆದವರಿಗೆ ಪ್ರತ್ಯೇಕ ಇ-ಎಂಟ್ರಿ ಗೇಟ್‌ಗಳನ್ನು (E-entry Gate) ತೆರೆಯಲಾಗಿದ್ದು, ಇಲ್ಲಿರುವ ಬೋರ್ಡ್‌ನ ಮುಂದೆ ಸ್ಕ್ಯಾನ್ ಮಾಡುವ ಮೂಲಕ ನಿಲ್ದಾಣ ಪ್ರವೇಶಿಸಬಹುದು. ಬೋರ್ಡಿಂಗ್ ಪಾಸ್‌ಗಳನ್ನು ಪ್ರತ್ಯೇಕ ಪಡೆಯಬೇಕಿಲ್ಲ.
ಭಾರತದ ತಾಂತ್ರಿಕ ಪ್ರಗತಿಯ ಪುರಾವೆ ಎನಿಸಿಕೊಂಡಿರುವ ರೀತಿಯಲ್ಲಿ ಅಭಿವೃದ್ಧಿಯಾಗಿರುವ ಡಿಜಿ-ಯಾತ್ರಾ ಅಪ್ಲಿಕೇಶನ್, ದೇಶಾದ್ಯಂತ ಲಕ್ಷಾಂತರ ಜನರ ಪ್ರಯಾಣದ ದಿನಚರಿಯಲ್ಲಿ ವ್ಯಾಪಕ ಪ್ರಶಂಸೆ ಗಳಿಸಿದೆ.
ಭಾರತದಾದ್ಯಂತ 13 ವಿಮಾನ ನಿಲ್ದಾಣಗಳಲ್ಲಿ ಪ್ರಸ್ತುತ ಇದು ಲಭ್ಯವಿದೆ. ಡಿಜಿ-ಯಾತ್ರಾ ಅಪ್ಲಿಕೇಶನ್ ಸ್ಥಿರವಾಗಿ ಜನರ ನಡುವೆ ಪ್ರಚಾರವಾಗುತ್ತಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳ ಪ್ರಕಾರ, ದೆಹಲಿ ಮತ್ತು ಬೆಂಗಳೂರಿನಲ್ಲಿ ಅತಿಹೆಚ್ಚು ಡಿಜಿ-ಯಾತ್ರಾ ಬಳಕೆದಾರರನ್ನು ಹೊಂದಿವೆ.
ಅಪ್ಲಿಕೇಶನ್‌ನ ಜನಪ್ರಿಯತೆ ಹಾಗೂ ಇದು ಜನರ ಉಪಯೋಗಕ್ಕೆ ಪರಿಣಾಮಕಾರಿಗಯಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ.
ಆರಂಭದಲ್ಲಿ ಡಿಸೆಂಬರ್ 2022 ರಲ್ಲಿ ದೆಹಲಿ, ಬೆಂಗಳೂರು ಮತ್ತು ವಾರಣಾಸಿಯಲ್ಲಿ ಇದನ್ನು ಪ್ರಾರಂಭ ಮಾಡಲಾಗಿತ್ತು.
ಡಿಜಿ-ಯಾತ್ರಾ ಅಪ್ಲಿಕೇಶನ್‌ನ (Digi Yatra Application) ವ್ಯಾಪ್ತಿಯು ವಿಜಯವಾಡ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆಯಲ್ಲಿ 2023ರ ಏಪ್ರಿಲ್‌ನಲ್ಲಿ ವಿಸ್ತರಣೆ ಮಾಡಲಾಗಿತ್ತು.
ಮುಂಬೈ ವಿಮಾನ ನಿಲ್ದಾಣವು ಆಗಸ್ಟ್ 2023 ರಲ್ಲಿ ಟರ್ಮಿನಲ್ 2 ನಲ್ಲಿ ಮಾತ್ರ ಈ ಅಪ್ಲಿಕೇಶನ್‌ಗೆ ಅವಕಾಶ ನೀಡಿದೆ.
ಫೆಬ್ರವರಿ 11ರಂದು ಮುಂಬೈ T2 ನಲ್ಲಿ ಸುಮಾರು 3 ಲಕ್ಷ ಬಳಕೆದಾರರನ್ನು ಡಿಜಿ ಯಾತ್ರಾ ದಾಖಲೆ ಮಾಡಿದೆ.
ಮೊದಲ ವರ್ಷದ ಕೊನೆಯಲ್ಲಿ ಅಚ್ಚರಿ ಎನ್ನುವಂತೆ 1.1 ಕೋಟಿ ಪ್ರಯಾಣಿಕರು ಭಾರತದಾದ್ಯಂತ ಡಿಜಿ-ಯಾತ್ರಾ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದಾರೆ, ವಿಮಾನ ನಿಲ್ದಾಣಗಳ ಮೂಲಕ ಇದು ನೀಡುವ ತಡೆರಹಿತ ಪ್ರಯಾಣದ ಅನುಭವವನ್ನು ಆನಂದಿಸಿದ್ದಾರೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.